ಷೇರು ಮಾರುಕಟ್ಟೆ ಹೊಸ ದಾಖಲೆ ಮಟ್ಟಕ್ಕೆ; ಯಾಕಿಷ್ಟು ಜೋರಾಗಿದೆ ಈ ಬುಲ್​ರನ್? ಮೂರ್ಖರ ದಿನಕ್ಕೆ ಮಾತ್ರ ಸೀಮಿತವಾಗುತ್ತಾ ಈ ಓಟ?

|

Updated on: Apr 01, 2024 | 5:45 PM

Indian Stock Market On High In April 1st: ಷೇರು ಮಾರುಕಟ್ಟೆಯ ಪ್ರಮುಖ ಸೂಚ್ಯಂಕಗಳು ಏಪ್ರಿಲ್ 1ರಂದು ಹೊಸ ದಾಖಲೆಯ ಎತ್ತರಕ್ಕೆ ಏರಿವೆ. ಎನ್​ಎಸ್​ಇ ನಿಫ್ಟಿ50 ಸೂಚ್ಯಂಕ 22,462 ಅಂಕಗಳಲ್ಲಿ ಅಂತ್ಯವಾಗಿದೆ. ಬಿಎಸ್​ಇ ಸೆನ್ಸೆಕ್ಸ್ ಸೂಚ್ಯಂಕ 74,000 ಅಂಕಗಳ ಮಟ್ಟದಲ್ಲಿ ದಿನಾಂತ್ಯಗೊಳಿಸಿದೆ. ಬಿಎಸ್​ಇನಲ್ಲಿ ಸ್ಮಾಲ್ ಕ್ಯಾಪ್ ಇಂಡೆಕ್ಸ್ ಅದ್ಭುತ ಬೇಡಿಕೆ ಪಡೆದಿದೆ. ನಿಫ್ಟಿ ಬ್ಯಾಂಕ್ ಸೂಚ್ಯಂಕದಲ್ಲಿರುವ ಬಹುತೇಕ ಎಲ್ಲಾ ಬ್ಯಾಂಕಿಂಗ್ ಕಂಪನಿಗಳು ಉತ್ತಮ ಬೇಡಿಕೆ ಪಡೆದಿವೆ.

ಷೇರು ಮಾರುಕಟ್ಟೆ ಹೊಸ ದಾಖಲೆ ಮಟ್ಟಕ್ಕೆ; ಯಾಕಿಷ್ಟು ಜೋರಾಗಿದೆ ಈ ಬುಲ್​ರನ್? ಮೂರ್ಖರ ದಿನಕ್ಕೆ ಮಾತ್ರ ಸೀಮಿತವಾಗುತ್ತಾ ಈ ಓಟ?
ಷೇರು ಮಾರುಕಟ್ಟೆ
Follow us on

ನವದೆಹಲಿ, ಏಪ್ರಿಲ್ 1: ಕಳೆದ ವರ್ಷ ಅಮೋಘವಾಗಿ ಕೊಬ್ಬಿ ಬೆಳೆದಿರುವ ಭಾರತದ ಷೇರು ಮಾರುಕಟ್ಟೆ (Stock market) ಹೊಸ ಹಣಕಾಸು ವರ್ಷಾರಂಭದಲ್ಲಿ ಹೊಸ ಕಳೆ ಪಡೆದಿದೆ. ಹೊಸ ಹಣಕಾಸು ವರ್ಷದ ಮೊದಲ ದಿನವಾದ ಏಪ್ರಿಲ್ 1ರಂದು ಷೇರುಪೇಟೆಯ ಎಲ್ಲಾ ಸೂಚ್ಯಂಕಗಳು ಎತ್ತರಕ್ಕೆ ಏರಿವೆ. ಅದರಲ್ಲೂ ಪ್ರಮುಖ ಸೂಚ್ಯಂಕಗಳಾದ ಸೆನ್ಸೆಕ್ಸ್ (BSE sensex) ಮತ್ತು ನಿಫ್ಟಿ50 (NSE Nifty) ಹೊಸ ದಾಖಲೆಯ ಮಟ್ಟಕ್ಕೆ ಏರಿವೆ. ಜಾಗತಿಕವಾಗಿ ಷೇರುಪೇಟೆಯನ್ನು ಪ್ರಭಾವಿಸುವ ಬೆಳವಣಿಗೆಗಳು ಪ್ರಮುಖವಾಗಿ ಇಲ್ಲವಾದರೂ ಭಾರತದಲ್ಲಿ ಈ ಪರಿ ಬುಲ್ ರನ್ ಆಗುತ್ತಿರುವುದು ಕೆಲವರಿಗೆ ಅಚ್ಚರಿ ಎನಿಸಬಹುದು. ಷೇರು ಮಾರುಕಟ್ಟೆಯ ಈ ಪಾಸಿಟಿವ್ ಓಟಕ್ಕೆ ಪ್ರಬಲ ಕಾರಣಗಳಂತೂ ಇವೆ.

ಏಪ್ರಿಲ್ 1ರ ದಿನಾಂದ್ಯದಲ್ಲಿ ಪ್ರಮುಖ ಸೂಚ್ಯಂಕಗಳ ವೃದ್ಧಿ

  • ನಿಫ್ಟಿ50 ಸೂಚ್ಯಂಕ: 22,462 ಅಂಕ (ಶೇ. 0.61 ಹೆಚ್ಚಳ)
  • ಸೆನ್ಸೆಕ್ಸ್30 ಸೂಚ್ಯಂಕ: 74,014.55 ಅಂಕ (ಶೇ. 0.49 ಹೆಚ್ಚಳ)

ನಿಫ್ಟಿ ಬ್ಯಾಂಕಿಂಗ್ ಸೂಚ್ಯಂಕ ಗಣನೀಯವಾಗಿ ಹೆಚ್ಚಿದೆ. ಇಂಡಸ್ಇಂಡ್ ಬ್ಯಾಂಕ್ ಬಿಟ್ಟು ಉಳಿದೆಲ್ಲ ಲಿಸ್ಟೆಡ್ ಬ್ಯಾಂಕ್​ಗಳ ಷೇರುಗಳು ಪಾಸಿಟಿವ್ ಆಗಿವೆ. ಎನ್​ಎಸ್​ಇ ಮತ್ತು ಬಿಎಸ್​ಇ ಷೇರು ವಿನಿಮಯ ಕೇಂದ್ರಗಳ ಬಹುತೇಕ ಇತರ ಎಲ್ಲ ಸೂಚ್ಯಂಕಗಳು ಹಸಿರು ಬಣ್ಣದಲ್ಲೇ ಅಂತ್ಯಗೊಂಡಿರುವುದು ಗಮನಾರ್ಹ. ಬಿಎಸ್​ಇನ ಮಿಡ್​ಕ್ಯಾಪ್ ಇಂಡೆಕ್ಸ್ ಶೇ. 1.64ರಷ್ಟು ಹೆಚ್ಚಾದರೆ ಸ್ಮಾಲ್ ಕ್ಯಾಪ್ ಇಂಡೆಕ್ಸ್ ಅಂತೂ ಶೇ. 2.98ರಷ್ಟು ಜಂಪ್ ಮಾಡಿದೆ. ಬಿಎಸ್​ಇನಲ್ಲಿ ಲಿಸ್ಟ್ ಆಗಿರುವ ಎಲ್ಲಾ ಸಂಸ್ಥೆಗಳ ಒಟ್ಟು ಮಾರುಕಟ್ಟೆ ಬಂಡವಾಳ 6 ಲಕ್ಷ ಕೋಟಿ ರೂನಷ್ಟು ಹೆಚ್ಚಾಗಿದೆ. 387 ಲಕ್ಷ ಕೋಟಿ ರೂ ಇದ್ದ ಮಾರ್ಕೆಟ್ ಕ್ಯಾಪಿಟಲ್ 393.2 ಲಕ್ಷ ಕೋಟಿ ರೂಗೆ ಹೆಚ್ಚಾಗಿದೆ.

ಇದನ್ನೂ ಓದಿ: ಕೆಲಸ ಬದಲಿಸಿದರೆ ಹಳೆಯ ಪಿಎಫ್ ಖಾತೆ ಬಗ್ಗೆ ಚಿಂತೆ ಬೇಡ; ತನ್ನಂತಾನೇ ಆಗುತ್ತೆ ಹಣ ವರ್ಗಾವಣೆ

ಭಾರತದ ಷೇರು ಮಾರುಕಟ್ಟೆಯ ಈ ಓಟಕ್ಕೆ ಏನು ಕಾರಣ?

  • ಭಾರತದ ಆರ್ಥಿಕತೆ ಬಗ್ಗೆ ಇರುವ ಸಕಾರಾತ್ಮಕ ನಿರೀಕ್ಷೆ
  • ಮುಂಬರುವ ತಿಂಗಳಲ್ಲಿ ಆರ್​ಬಿಐ ಬಡ್ಡಿದರ ಕಡಿತಗೊಳ್ಳುವ ನಿರೀಕ್ಷೆ
  • 2024ರ ಜನವರಿಯಿಂದ ಮಾರ್ಚ್​ವರೆಗೆ ಷೇರು ಮಾರುಕಟ್ಟೆಯಲ್ಲಿ ಆಗಿರುವ ಷೇರುಬೆಲೆಗಳ ಕೋರ್ಸ್ ಕರೆಕ್ಷನ್.
  • ಚುನಾವಣೆಯ ಹೊಸ್ತಿಲಲ್ಲಿ ಸ್ವಾಭಾವಿಕ ಏರಿಕೆ

ಮೇಲಿನ ಕೊನೆಯ ಪಾಯಿಂಟ್ ಕುತೂಹಲ ಮೂಡಿಸುತ್ತದೆ. ಐಸಿಐಸಿಐ ಡೈರೆಕ್ಟ್​ನ ವಿಶ್ಲೇಷಣೆ ಪ್ರಕಾರ ಸಾರ್ವತ್ರಿಕ ಚುನಾವಣೆ ವರ್ಷದಲ್ಲಿ ಏಪ್ರಿಲ್​ನಲ್ಲಿ ಷೇರು ಮಾರುಕಟ್ಟೆ ಸಕಾರಾತ್ಮಕವಾಗಿರುತ್ತದೆ. ಚುನಾವಣೆ ವರ್ಷದ ಮೊದಲ ಕ್ವಾರ್ಟರ್​ನಲ್ಲಿ ಬೆಲೆ ಸುಧಾರಣೆಗಳಾಗುತ್ತವೆ. ಬಳಿಕ ಏಪ್ರಿಲ್ 1ರಿಂದ ಚುನಾವಣೆ ಮುಗಿದು ಫಲಿತಾಂಶ ಪ್ರಕಟವಾಗುವವರೆಗೂ ಏರುಗತಿಯಲ್ಲಿ ಇರುತ್ತದೆ ಎಂದು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: ಆರ್ಥಿಕ ವರ್ಷದ ಮೊದಲ ದಿನವೇ ಗುಡ್​ ನ್ಯೂಸ್​: ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್​​ ಬೆಲೆ ಇಳಿಕೆ

ಅಂದರೆ, ಜೂನ್ ಮೊದಲ ವಾರದವರೆಗೂ ಷೇರು ಮಾರುಕಟ್ಟೆಯಲ್ಲಿ ಬುಲ್ ರನ್ ನಡೆಯುವುದನ್ನು ನಿರೀಕ್ಷಿಸಬಹುದು. ಹಿಂದಿನ ಎಲ್ಲಾ ಚುನಾವಣೆಗಳಲ್ಲಿ ಇದೇ ರೀತಿಯ ಟ್ರೆಂಡಿಂಗ್ ಇತ್ತು ಎನ್ನಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ