Closing bell: ಸೆನ್ಸೆಕ್ಸ್ ಸೂಚ್ಯಂಕ 55 ಸಾವಿರ ಪಾಯಿಂಟ್ಸ್, ನಿಫ್ಟಿ 16500 ಪಾಯಿಂಟ್ಸ್ ಆಚೆ ಹೊಸ ಸಾರ್ವಕಾಲಿಕ ದಾಖಲೆ
ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿ ಹೊಸ ದಾಖಲೆ ಬರೆದಿವೆ.
ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಶುಕ್ರವಾರ (ಆಗಸ್ಟ್ 14, 2021) ಹೊಸ ಸಾರ್ವಕಾಲಿಕ ದಾಖಲೆ ಬರೆದಿದೆ. ಹಿಂದಿನ ದಿನವಾದ ಗುರುವಾರ 54,843.98 ಪಾಯಿಂಟ್ಸ್ನೊಂದಿಗೆ ಸೆನ್ಸೆಕ್ಸ್ ದಿನಾಂತ್ಯದ ವಹಿವಾಟು ಮುಗಿಸಿತ್ತು. ಶುಕ್ರವಾರ ಬೆಳಗ್ಗೆ 54,911.95 ಪಾಯಿಂಟ್ಸ್ನೊಂದಿಗೆ ವ್ಯವಹಾರ ಆರಂಭಿಸಿ, ಗರಿಷ್ಠ ಮಟ್ಟವಾದ 55,487.79 ಪಾಯಿಂಟ್ಸ್ನೊಂದಿಗೆ ಸಾರ್ವಕಾಲಿಕ ದಾಖಲೆ ಮಟ್ಟವನ್ನು ತಲುಪಿತು. ಇನ್ನು ದಿನಾಂತ್ಯಕ್ಕೆ 593.31 ಪಾಯಿಂಟ್ಸ್ ಏರಿಕೆ ದಾಖಲಿಸಿ, 55,437.29 ಪಾಯಿಂಟ್ಸ್ನೊಂದಿಗೆ ಸಾರ್ವಕಾಲಿಕ ದಾಖಲೆಯೊಂದಿಗೆ ವ್ಯವಹಾರ ಚುಕ್ತಾ ಮಾಡಿದೆ. ಇನ್ನು ನಿಫ್ಟಿ ಸೂಚ್ಯಂಕವು ಶುಕ್ರವಾರದ ದಿನದ ಕೊನೆಗೆ 16,364.40 ಪಾಯಿಂಟ್ಸ್ನೊಂದಿಗೆ ದಿನಾಂತ್ಯದ ವಹಿವಾಟು ಮುಗಿಸಿತ್ತು. ಈ ದಿನದ ವ್ಯವಹಾರ 16,385.70 ಪಾಯಿಂಟ್ಸ್ನೊಂದಿಗೆ ಶುರುವಾಗಿ, ದಿನದ ಗರಿಷ್ಠ ಮಟ್ಟ 16,543.60 ಪಾಯಿಂಟ್ಸ್ ತಲುಪಿ ಹೊಸ ದಾಖಲೆಗೆ ಕಾರಣವಾಯಿತು. ದಿನದ ಕೊನೆಗೆ 164.70 ಪಾಯಿಂಟ್ಸ್ ಮೇಲೇರಿ 16,529.10 ಪಾಯಿಂಟ್ಸ್ನೊಂದಿಗೆ ವ್ಯವಹಾರ ಮುಗಿಸಿತು.
ಈ ದಿನದ ವ್ಯವಹಾರದಲ್ಲಿ 1412 ಕಂಪೆನಿಯ ಷೇರುಗಳು ಮೇಲೇರಿದರೆ, 1583 ಕಂಪೆನಿಗಳ ಷೇರಿನ ಬೆಲೆ ಇಳಿಕೆ ಆಗಿದೆ. ಇನ್ನು 81 ಕಂಪೆನಿಯ ಷೇರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಸೆನ್ಸೆಕ್ಸ್ 50 ಸಾವಿರದಿಂದ 55 ಸಾವಿರ ಪಾಯಿಂಟ್ಸ್ ಮೇಲೇರಿದ್ದರಲ್ಲಿ ಬಿಎಸ್ಇ ಲೋಹದ ಸೂಚ್ಯಂಕವು ಶೇ 75ಕ್ಕಿಂತ ಹೆಚ್ಚು ಏರಿಕೆ ಕಂಡಿದೆ. ಇನ್ನು ಶುಕ್ರವಾರದಂದು ಫಾರ್ಮಾಸ್ಯುಟಿಕಲ್ಸ್ ಒಂದನ್ನು ಹೊರತುಪಡಿಸಿದಂತೆ ಇನ್ನೆಲ್ಲ ಸೂಚ್ಯಂಕವು ಗಳಿಕೆಯನ್ನು ಕಂಡವು. ಐಟಿ ಸೂಚ್ಯಂಕ ಶೇ 1ರಷ್ಟು ಹೆಚ್ಚಳ ಕಂಡಿತು.
ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್ ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಶೇ 4.29 ಟಿಸಿಎಸ್ ಶೇ 3.33 ಲಾರ್ಸನ್ ಶೇ 2.77 ಭಾರ್ತಿ ಏರ್ಟೆಲ್ ಶೇ 2.23 ಎಚ್ಸಿಎಲ್ ಟೆಕ್ ಶೇ 2.09
ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್ ಐಷರ್ ಮೋಟಾರ್ಸ್ ಶೇ -2.67 ಡಾ, ರೆಡ್ಡೀಸ್ ಲ್ಯಾಬ್ಸ್ ಶೇ -1.36 ಸಿಪ್ಲಾ ಶೇ -1.20 ಪವರ್ ಗ್ರಿಡ್ ಕಾರ್ಪೊರೇಷನ್ ಶೇ -1.20 ಬ್ರಿಟಾನಿಯಾ ಶೇ -1.14
ಇದನ್ನೂ ಓದಿ : Multibagger Stock: ಹೂಡಿಕೆದಾರರ 1 ಲಕ್ಷ ರೂಪಾಯಿ 3 ತಿಂಗಳಲ್ಲಿ 7.62 ಲಕ್ಷ ಮಾಡಿಕೊಟ್ಟಿದೆ ಈ ಷೇರು
(Indian Stock Market Index Sensex And Nifty Touched All Time High On August 13th 2021)
Published On - 4:49 pm, Fri, 13 August 21