Stock Market: ಷೇರು ಮಾರುಕಟ್ಟೆ ಸೋಮವಾರ ಕುಸಿತ; ಈ ಹಿನ್ನಡೆಗೆ ಏನು ಕಾರಣ?
Reason for fall of Indian stock market: ಭಾರತದ ಸೆನ್ಸೆಕ್ಸ್, ನಿಫ್ಟಿ ಸೂಚ್ಯಂಕಗಳು ಇವತ್ತು ಸೋಮವಾರ ಕುಸಿದಿವೆ. ನಿಫ್ಟಿ ಶೇ. 0.86, ಸೆನ್ಸೆಕ್ಸ್ ಶೇ. 0.71ರಷ್ಟು ಕುಸಿದಿವೆ. ಸತತ ಏಳೆಂದು ಮಾರುಕಟ್ಟೆ ದಿನಗಳು ವಿದೇಶೀ ಸಾಂಸ್ಥಿಕ ಹೂಡಿಕೆಗಳು ಭಾರತದಿಂದ ಹೊರಹೋಗಿವೆ. ರುಪಾಯಿ ದುರ್ಬಲಗೊಳ್ಳುತ್ತಿರುವುದು, ಕಚ್ಚಾ ತೈಲ ಬೆಲೆ ತುಸು ಏರಿರುವುದು ವಿದೇಶೀ ಹೂಡಿಕೆಗಳ ಹೊರಹರಿವಿಗೆ ಕಾರಣವಾಗಿರಬಹುದು.

ನವದೆಹಲಿ, ಡಿಸೆಂಬರ್ 8: ಭಾರತದ ಷೇರು ಮಾರುಕಟ್ಟೆ (stock market) ಇಂದು ಸೋಮವಾರ ಹಿನ್ನಡೆ ಕಂಡಿದೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನ ಸೆನ್ಸೆಕ್ಸ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನ ನಿಫ್ಟಿ ಸೇರಿದಂತೆ ಹಲವು ಸೂಚ್ಯಂಕಗಳು ನಷ್ಟ ಕಂಡಿವೆ. ನಿಫ್ಟಿ50 ಇಂಡೆಕ್ಸ್ ಇಂದು 225.90 ಅಂಕಗಳಷ್ಟು ಕುಸಿತ ಕಂಡು 26,000 ರ ಮಟ್ಟಕ್ಕಿಂತ ಕೆಳಗೆ ಇಳಿದಿದೆ. ಸೆನ್ಸೆಕ್ಸ್ ಶೇ. 0.71ರಷ್ಟು ಇಳಿಕೆ ಕಂಡು 85,102.69 ಮಟ್ಟದಲ್ಲಿ ದಿನಾಂತ್ಯಗೊಳಿಸಿದೆ. ಬಹುತೇಕ ಪ್ರಮುಖ ಷೇರುಗಳು ಇವತ್ತು ಕುಸಿತಗೊಂಡಿವೆ. ಷೇರು ಮಾರುಕಟ್ಟೆ ಕುಸಿಯಲು ಸಂಭಾವ್ಯ ಕಾರಣಗಳು ಮುಂದಿವೆ…
ವಿದೇಶೀ ಹೂಡಿಕೆಗಳ ಹೊರಹರಿವು
ಷೇರು ಮಾರುಕಟ್ಟೆಯಿಂದ ವಿದೇಶೀ ಸಾಂಸ್ಥಿಕ ಹೂಡಿಕೆದಾರರು ನಿರ್ಗಮಿಸುತ್ತಿರುವುದು ಮುಂದುವರಿಯುತ್ತಲೇ ಇದೆ. ಸತತ ಎಂಟು ಸೆಷನ್ಸ್ ಎಫ್ಐಐಗಳ ಹೊರಹರಿವು ಆಗಿದೆ.
ಇದನ್ನೂ ಓದಿ: ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡುವ ಮುನ್ನ ನೀವು ತಿಳಿಯಬೇಕಾದ ವಿವಿಧ ಶುಲ್ಕಗಳಿವು…
ದುರ್ಬಲ ರುಪಾಯಿ
ಡಾಲರ್ ಎದುರು ರುಪಾಯಿ ದಿನೇ ದಿನೇ ಮೌಲ್ಯ ಕುಸಿತ ಕಾಣುತ್ತಿರುವುದೂ ಕೂಡ ಮಾರುಕಟ್ಟೆಯಿಂದ ವಿದೇಶೀ ಹೂಡಿಕೆಗಳ ನಿರ್ಗಮನಕ್ಕೆ ಎಡೆ ಮಾಡಿಕೊಟ್ಟಿದೆ.
ಕಚ್ಚಾ ತೈಲ ಬೆಲೆ ಹೆಚ್ಚಳ
ಅಂತಾರಾಷ್ಟ್ರೀಯ ಕಚ್ಛಾ ತೈಲ ಬೆಲೆ ತುಸು ಏರಿಕೆ ಕಂಡಿದೆ. ಬ್ಯಾರಲ್ ತೈಲಕ್ಕೆ 63.83 ಡಾಲರ್ ಆಗಿದೆ. ಇದರಿಂದ ಭಾರತದ ಆಮದು ವೆಚ್ಚ ಹೆಚ್ಚಿ, ಅದರಿಂದ ಹಣದುಬ್ಬರ ಸ್ವಲ್ಪ ಏರಿಕೆ ಆಗುವ ಸಾಧ್ಯತೆ ಇದೆ. ಈ ಕಾರಣಕ್ಕೂ ವಿದೇಶೀ ಹೂಡಿಕೆಗಳಿಂದ ಹೊರಹರಿವು ಆಗುತ್ತಿರುವ ಸಾಧ್ಯತೆ ಇದೆ.
ಇದನ್ನೂ ಓದಿ: ಅಟಲ್ ಪೆನ್ಷನ್ ಯೋಜನೆ ಪಡೆದ 8 ಕೋಟಿ ಜನರು; ಏನಿದು ಪಿಂಚಣಿ ಸ್ಕೀಮ್? ಎಷ್ಟು ಸಿಗುತ್ತೆ ಲಾಭ?
ಪ್ರಮುಖ ಸೆಂಟ್ರಲ್ ಬ್ಯಾಂಕ್ಗಳ ಪಾಲಿಸಿ…
ಅಮೆರಿಕದ ಸೆಂಟ್ರಲ್ ಬ್ಯಾಂಕ್ ಆದ ಫೆಡರಲ್ ರಿಸರ್ವ್ನ ಎರಡು ದಿನದ ಸಭೆ ನಾಳೆ (ಡಿ. 9) ಮಂಗಳವಾರ ಆರಂಭವಾಗುತ್ತದೆ. ಬಡ್ಡಿದರ, ಹಣದುಬ್ಬರ, ನಿರುದ್ಯೋಗ, ಜಿಡಿಪಿ ಇತ್ಯಾದಿ ಬಗ್ಗೆ ಸೆಂಟ್ರಲ್ ಬ್ಯಾಂಕ್ ಅನಿಸಿಕೆ ಏನಿರಬಹುದು ಎನ್ನುವ ಕುತೂಹಲ ಇದೆ. ಮುನ್ನೆಚ್ಚರಿಕೆಯಾಗಿ ವಿದೇಶೀ ಹೂಡಿಕೆದಾರರು ಭಾರತದ ಮಾರುಕಟ್ಟೆಯಿಂದ ತಾತ್ಕಾಲಿಕವಾಗಿ ಹೊರಹೊರಟಿರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




