Indian military: ಭಾರತದ ಮಿಲಿಟರಿ ಉತ್ಪಾದನೆ ಮತ್ತು ರಫ್ತು ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ

India's defence budget and production: ಭಾರತದ ಡಿಫೆನ್ಸ್ ಕ್ಷೇತ್ರದ ಉತ್ಪಾದನೆ 2024-25ರಲ್ಲಿ 1.46 ಲಕ್ಷ ಕೋಟಿ ರೂ ಇದೆ. ಇದು ಹೊಸ ದಾಖಲೆ ಮಟ್ಟ ಎನಿಸಿದೆ. 2047ಕ್ಕೆ ಇದು 8.8 ಲಕ್ಷ ಕೋಟಿ ರೂಗೆ ಏರಬಹುದು ಎಂದು ವರದಿಯೊಂದು ಹೇಳಿದೆ. ಡಿಫೆನ್ಸ್ ಕ್ಷೇತ್ರದಿಂದ ರಫ್ತು ಕೂಡ ಹೊಸ ಎತ್ತರಕ್ಕೆ ಹೋಗಿದೆ. 2047ಕ್ಕೆ ಭಾರತದ ಡಿಫೆನ್ಸ್ ವೆಚ್ಚ 31 ಲಕ್ಷ ಕೋಟಿ ರೂ ದಾಟುವ ನಿರೀಕ್ಷೆ ಇದೆ.

Indian military: ಭಾರತದ ಮಿಲಿಟರಿ ಉತ್ಪಾದನೆ ಮತ್ತು ರಫ್ತು ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ
ಮಿಲಿಟರಿ

Updated on: May 30, 2025 | 12:55 PM

ನವದೆಹಲಿ, ಮೇ 30: ಭಾರತದ ವಾರ್ಷಿಕ ಮಿಲಿಟರಿ ಉತ್ಪಾದನೆ 2024-25ರಲ್ಲಿ 1.46 ಲಕ್ಷ ಕೋಟಿ ರೂ ಮುಟ್ಟಿದೆ. ಹಿಂದಿನ ಹಣಕಾಸು ವರ್ಷದಲ್ಲಿ (2023-24) ಇದು 1.27 ಲಕ್ಷ ಕೋಟಿ ರೂ ಇತ್ತು. ಉತ್ಪಾದನೆ ಪ್ರಮಾಣ ಶೇ. 15ರಷ್ಟು ಹೆಚ್ಚಾಗಿದೆ. ಡಿಫೆನ್ಸ್ ಉತ್ಪಾದನೆಯಲ್ಲಿ (Defence production) 1.46 ಲಕ್ಷ ಕೋಟಿ ರೂ ಸಾರ್ವಕಾಲಿಕ ಗರಿಷ್ಠ ಮಟ್ಟ ಎನಿಸಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಮಾಹಿತಿ ನೀಡಿದ್ಧಾರೆ. ಹಾಗೆಯೇ, ರಕ್ಷಣಾ ಕ್ಷೇತ್ರದ ರಫ್ತು ಕೂಡ ಹೊಸ ದಾಖಲೆ ಬರೆದಿದೆ.

2023-24ರಲ್ಲಿ ಭಾರತದ ಮಿಲಿಟರಿ ರಫ್ತು 21,082 ಕೋಟಿ ರೂ ಇತ್ತು. ಅದು 2024-25ರಲ್ಲಿ 24,000 ಕೋಟಿ ರೂಗೆ ಏರಿದೆ. ಸಿಐಐ ವಾರ್ಷಿಕ ಬ್ಯುಸಿನೆಸ್ ಸಮಿಟ್​​​ನಲ್ಲಿ ಮಾತನಾಡುತ್ತಾ, ರಾಜನಾಥ್ ಸಿಂಗ್ ಈ ಮಾಹಿತಿಯನ್ನು ಹೊರಗೆಡವಿದ್ದಾರೆ.

ಇದನ್ನೂ ಓದಿ: ಅಚ್ಚರಿ ಹುಟ್ಟಿಸಿದ ಬಿಎಸ್ಸೆನ್ನೆಲ್; ಸತತ 2ನೇ ಬಾರಿ ಲಾಭ; 18 ವರ್ಷದಲ್ಲಿ ಇಂಥದ್ದು ಇದೇ ಮೊದಲು

ಇದನ್ನೂ ಓದಿ
18 ವರ್ಷ ಬಳಿಕ ಸತತ ಲಾಭ ಕಂಡ ಬಿಎಸ್ಸೆನ್ನೆಲ್
ಎಎಂಸಿಎ ಫೈಟರ್ ಜೆಟ್ ತಯಾರಿಕೆ: ಐತಿಹಾಸಿಕ ಹೆಜ್ಜೆ ಎಂದ ರಾಜನಾಥ್
ಐಫೋನ್ ರಫ್ತು; ಚೀನಾ ಹಿಂದಿಕ್ಕಿದ ಭಾರತ
ರಫ್ತಿಗೆ ಸಿದ್ಧವಾಗುತ್ತಿರುವ ಬುದ್ಧ ಅಕ್ಕಿ; ಏನಿದರ ವಿಶೇಷತೆ?

ಖಾಸಗಿ ವಲಯದ ಕೊಡುಗೆ ಗಣನೀಯ ಏರಿಕೆ

ಸರ್ಕಾರಿ ಸಂಸ್ಥೆಗಳಿಗೆ ಬಹುತೇಕ ಸೀಮಿತವಾಗಿದ್ದ ಡಿಫೆನ್ಸ್ ಉತ್ಪಾದನಾ ಕ್ಷೇತ್ರ ಇತ್ತೀಚೆಗೆ ಖಾಸಗಿ ವಲಯಕ್ಕೆ ಮುಕ್ತವಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಖಾಸಗಿ ಕ್ಷೇತ್ರದಿಂದ ಮಿಲಿಟರಿ ಉತ್ಪಾದನೆ ಹೆಚ್ಚಾಗುತ್ತಿದೆ. 2024-25ರಲ್ಲಿ ಖಾಸಗಿ ಸಂಸ್ಥೆಗಳಿಂದ 32,000 ಕೋಟಿ ರೂನಷ್ಟು ಡಿಫೆನ್ಸ್ ಪ್ರೊಡಕ್ಷನ್ ನಡೆದಿದೆ. ಇದು ಒಟ್ಟಾರೆ ಈ ಕ್ಷೇತ್ರದ ಉತ್ಪಾದನೆಯ ಶೇ.. 22ರಷ್ಟು ಎಂದು ಹೇಳಲಾಗುತ್ತಿದೆ. ಹಿಂದಿನ ಹಣಕಾಸು ವರ್ಷದಲ್ಲಿ ದೇಶದ ಒಟ್ಟಾರೆ ಡಿಫೆನ್ಸ್ ಪ್ರೊಡಕ್ಷನ್​​ನಲ್ಲಿ ಖಾಸಗಿ ಪಾಲು ಶೇ 20.8ರಷ್ಟಿತ್ತು.

ಐದು ಎಎಂಸಿಎ ಪ್ರೋಟೋಟೈಪ್ ತಯಾರಿಕೆಯಲ್ಲಿ ಖಾಸಗಿಯವರೂ ಭಾಗಿ

ಕೇಂದ್ರ ಸರ್ಕಾರವು ಐದನೆ ತಲೆಮಾರಿನ ಫೈಟರ್ ಜೆಟ್​​ಗಳನ್ನು ಸ್ವಂತವಾಗಿ ತಯಾರಿಸುವ ಎಎಂಸಿಎ ಪ್ರಾಜೆಕ್ಟ್ ಅನ್ನು ಕಾರ್ಯಗತಗೊಳಿಸುವ ಯೋಜನೆಗೆ ಹಸಿರು ನಿಶಾನೆ ನೀಡಿದೆ. ಇದರಲ್ಲಿ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳು ಪಾಲ್ಗೊಳ್ಳಲಿವೆ. ಇದರಡಿಯಲ್ಲಿ ಐದು ಫೈಟರ್ ಜೆಟ್​​ಗಳ ಪ್ರೋಟೋಟೈಪ್​​ಗಳನ್ನು ಅಭಿವೃದ್ಧಿಪಡಿಸಲಾಗಲಿದೆ. ಬಳಿಕ ಅವುಗಳ ತಯಾರಿಕೆ ಶುರುವಾಗುತ್ತದೆ ಎಂದು ಹೇಳಿದ್ದಾರೆ ರಾಜನಾಥ್ ಸಿಂಗ್.

ಇದನ್ನೂ ಓದಿ: ಮೇಕ್ ಇನ್ ಇಂಡಿಯಾ ಎಂಥದ್ದು ಎಂಬುದು ಆಪರೇಷನ್ ಸಿಂದೂರ್​​ನಿಂದ ಸಾಬೀತು: ರಾಜನಾಥ್ ಸಿಂಗ್

2047ಕ್ಕೆ ಭಾರತದ ಡಿಫೆನ್ಸ್ ಬಜೆಟ್ ಗಾತ್ರ 31 ಲಕ್ಷ ಕೋಟಿ ರೂ?

ಭಾರತದಲ್ಲಿ ಸದ್ಯ ರಕ್ಷಣಾ ಕ್ಷೇತ್ರ ಉತ್ಪಾದನೆ ವರ್ಷಕ್ಕೆ 1.46 ಲಕ್ಷ ಕೋಟಿ ರೂ ಇದೆ. ಇದು 2047ಕ್ಕೆ 8.8 ಲಕ್ಷ ಕೋಟಿ ರೂಗೆ ಏರಿಕೆ ಆಗುವ ನಿರೀಕ್ಷೆ ಇದೆ. ಹಾಗೆಯೇ, ರಕ್ಷಣಾ ಕ್ಷೇತ್ರದ ಬಜೆಟ್ 2025-26ರಲ್ಲಿ 6.81 ಲಕ್ಷ ಕೋಟಿ ರೂ ಇದೆ. ಇದು 2047ಕ್ಕೆ ಐದು ಪಟ್ಟು ಹೆಚ್ಚಾಗಿ 31.7 ಲಕ್ಷ ಕೋಟಿ ರೂ ತಲುಪಬಹುದು ಎಂದು ಸಿಐಐ ಮತ್ತು ಕೆಪಿಎಂಜಿ ಇಂಡಿಯ ಸಂಸ್ಥೆಗಳು ಜಂಟಿಯಾಗಿ ಬಿಡುಗಡೆ ಮಾಡಿರುವ ವರದಿಯೊಂದರಲ್ಲಿ ಅಂದಾಜು ಮಾಡಲಾಗಿದೆ.

ಸಿಐಐ ವಾರ್ಷಿಕ ಬ್ಯುಸಿನೆಸ್ ಸಮಿಟ್​​​ನಲ್ಲಿ ‘ಆತ್ಮನಿರ್ಭರ್, ಅಗ್ರಣಿ ಮತ್ತು ಅತುಲ್ಯ ಭಾರತ್ 2047’ ಹೆಸರಿನ ಈ ವರದಿಯನ್ನು ಬಿಡುಗಡೆ ಮಾಡಲಾಯಿತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ