Cleartrip acquisition by Flipkart: ಕ್ಲಿಯರ್​​ಟ್ರಿಪ್​ನಲ್ಲಿ ಶೇಕಡಾ 100ರಷ್ಟು ಷೇರಿನ ಪಾಲು ಖರೀದಿ ಘೋಷಿಸಿದ ಫ್ಲಿಪ್​ಕಾರ್ಟ್

|

Updated on: Apr 15, 2021 | 5:15 PM

ಫ್ಲಿಪ್​ಕಾರ್ಟ್ ಇ ಕಾಮರ್ಸ್ ಮಾರ್ಕೆಟ್​ಪ್ಲೇಸ್​ನಿಂದ ಕ್ಲಿಯರ್​ಟ್ರಿಪ್​ನಲ್ಲಿ ಶೇಕಡಾ 100ರಷ್ಟು ಷೇರು ಪಾಲಿನ ಪ್ರಸ್ತಾವಿತ ಖರೀದಿ ಬಗ್ಗೆ ಘೋಷಣೆ ಮಾಡಲಾಗಿದೆ. ಕ್ಲಿಯರ್​ಟ್ರಿಪ್ ಪ್ರತ್ಯೇಕ ಬ್ರ್ಯಾಂಡ್ ಆಗಿಯೇ ಮುಂದುವರಿಯಲಿದೆ.

Cleartrip acquisition by Flipkart: ಕ್ಲಿಯರ್​​ಟ್ರಿಪ್​ನಲ್ಲಿ ಶೇಕಡಾ 100ರಷ್ಟು ಷೇರಿನ ಪಾಲು ಖರೀದಿ ಘೋಷಿಸಿದ ಫ್ಲಿಪ್​ಕಾರ್ಟ್
ಫ್ಲಿಪ್​ಕಾರ್ಟ್​ನಿಂದ ಕ್ಲಿಯರ್​ಟ್ರಿಪ್ ಖರೀದಿ ಘೋಷಣೆ
Follow us on

ಪ್ರಮುಖ ಆನ್​ಲೈನ್ ಟ್ರಾವೆಲ್ ಟೆಕ್ನಾಲಜಿ ಕಂಪೆನಿ ಕ್ಲಿಯರ್​ಟ್ರಿಪ್ ಪ್ರಸ್ತಾವಿತ ಖರೀದಿ ಬಗ್ಗೆ ಏಪ್ರಿಲ್ 15, 2021ರಂದು ಭಾರತದ ದೇಶೀ ಇ- ಕಾಮರ್ಸ್ ಮಾರ್ಕೆಟ್​ಪ್ಲೇಸ್ ಫ್ಲಿಪ್​ಕಾರ್ಟ್ ಘೋಷಣೆ ಮಾಡಿದೆ. ಗ್ರಾಹಕರಿಗೆ ಡಿಜಿಟಲ್ ಕಾಮರ್ಸ್ ಆಫರ್ ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಕಂಪೆನಿಯ ಹೂಡಿಕೆ ಇನ್ನಷ್ಟು ವಿಸ್ತರಣೆ ಮಾಡುವುದಾಗಿ, ಕ್ಲಿಯರ್​​ಟ್ರಿಪ್​ನಲ್ಲಿ ಶೇಕಡಾ 100ರಷ್ಟು ಷೇರಿನ ಪಾಲು ಖರೀದಿ ಮಾಡುವುದಾಗಿ ಘೋಷಣೆ ಮಾಡಿದೆ. ಒಪ್ಪಂದದ ಷರತ್ತಿನ ಪ್ರಕಾರ, ಕ್ಲಿಯರ್​ಟ್ರಿಪ್ ಕಾರ್ಯನಿರ್ವಹಣೆಯನ್ನು ಫ್ಲಿಪ್​ಕಾರ್ಟ್ ಖರೀದಿಸಲಿದೆ. ಆದರೆ ಕ್ಲಿಯರ್​ಟ್ರಿಪ್ ಪ್ರತ್ಯೇಕ ಬ್ರ್ಯಾಂಡ್ ಆಗಿ ಕಾರ್ಯ ನಿರ್ವಹಿಸಲಿದೆ. ಗ್ರಾಹಕರಿಗೆ ಪ್ರವಾಸವನ್ನು ಸರಳ ಮಾಡುವ ಕಾರಣಕ್ಕೆ ಫ್ಲಿಪ್​ಕಾರ್ಟ್​ನಿಂದ ತಂತ್ರಜ್ಞಾನ ಅಭಿವೃದ್ಧಿ ಮಾಡಲಾಗುತ್ತದೆ ಹಾಗೂ ಎಲ್ಲ ಸಿಬ್ಬಂದಿಯನ್ನು ಹಾಗೇ ಉಳಿಸಿಕೊಳ್ಳಲಾಗುತ್ತದೆ.

ಫ್ಲಿಪ್​ಕಾರ್ಟ್ ಸಮೂಹದ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ಮಾತನಾಡಿ, ಡಿಜಿಟಲ್ ಕಾಮರ್ಸ್ ಮೂಲಕ ಗ್ರಾಹಕರ ಅನುಭವವನ್ನು ಬದಲಾವಣೆ ಮಾಡುವುದಕ್ಕೆ ಫ್ಲಿಪ್​ಕಾರ್ಟ್ ಬದ್ಧವಾಗಿದೆ. ಹಲವು ಗ್ರಾಹಕರಿಗೆ ಪ್ರವಾಸಕ್ಕೆ ಪರ್ಯಾಯ ಹೆಸರೇ ಕ್ಲಿಯರ್​ಟ್ರಿಪ್. ನಾವು ವೈವಿಧ್ಯಪೂರ್ಣವಾಗಿದ್ದು, ಬೆಳವಣಿಗೆಯ ಹೊಸ ಸಾಧ್ಯತೆ ಕಡೆ ನೋಡುತ್ತಿದ್ದೇವೆ. ಈ ಹೂಡಿಕೆ ಮೂಲಕವಾಗಿ ನಮ್ಮ ಗ್ರಾಹಕರಿಗೆ ಅಗಾಧ ಪ್ರಮಾಣದ ಸೇವೆ ಒದಗಿಸಲು ಬಲಗೊಂಡಂತೆ ಆಗುತ್ತದೆ. ಕ್ಲಿಯರ್​ಟ್ರಿಪ್ ತಂಡವನ್ನು ಅವರ ಆಳವಾದ ಜ್ಞಾನ ಹಾಗೂ ತಾಂತ್ರಿಕ ಸಾಮರ್ಥ್ಯದೊಂದಿಗೆ ಫ್ಲಿಪ್​ಕಾರ್ಟ್ ಸಮೂಹಕ್ಕೆ ಸ್ವಾಗತಿಸುತ್ತೇವೆ. ನಾವ ಒಟ್ಟಾಗಿ ಗ್ರಾಹಕರಿಗೆ ಉತ್ತಮ ಮೌಲ್ಯ ಹಾಗೂ ಪ್ರಯಾಣದ ಅನುಭವ ಒದಗಿಸಲು ಎದುರು ನೋಡುತ್ತೇವೆ ಎಂದಿದ್ದಾರೆ.

ಕ್ಲಿಯರ್​ಟ್ರಿಪ್ ಸಹ- ಸಂಸ್ಥಾಪಕ ಮತ್ತು ಸಿಇಒ ಸ್ಟುವರ್ಟ್ ಕ್ರಿಗ್ಟನ್ ಮಾತನಾಡಿ, ನಮ್ಮ ಗ್ರಾಹಕರಿಗೆ ತಂತ್ರಜ್ಞಾನದ ಸಹಾಯದ ಮೂಲಕ ಪ್ರವಾಸ ಅನುಭವವನ್ನು ಸರಳಗೊಳಿಸುವಲ್ಲಿ ಕ್ಲಿಯರ್​ಟ್ರಿಪ್ ಮುಂಚೂಣಿಯಲ್ಲಿದೆ. ಈ ರೀತಿ ಪ್ರಾಡಕ್ಟ್ ಆಧಾರಿತ ಗಮನವು ಗ್ರಾಹಕರಿಗೆ ನಮ್ಮನ್ನು ಆದ್ಯತೆಯ ಪ್ರಯಾಣ ಸಹಭಾಗಿಗಳಾಗಿ ಮಾಡುತ್ತದೆ. ಫ್ಲಿಪ್​ಕಾರ್ಟ್ ಕುಟುಂಬದ ಭಾಗಿಗಳಾಗಿರುವುದಕ್ಕೆ ನಮಗೆ ಸಂತೋಷವಾಗಿದೆ. ಈಗಿನ ಸಹಭಾಗಿತ್ವದಿಂದ ನಮ್ಮ ಗ್ರಾಹಕರು ಮತ್ತು ಪ್ರವಾಸ ವಲಯದಲ್ಲಿ ಆಗುವ ಒಟ್ಟಾರೆ ಸಕಾರಾತ್ಮಕ ಬದಲಾವಣೆ ಬಗ್ಗೆ ಸಂಭ್ರಮದಿಂದ ಇದ್ದೇವೆ ಎಂದಿದ್ದಾರೆ.

ಅಂದಹಾಗೆ, ಫ್ಲಿಪ್​ಕಾರ್ಟ್ ಮತ್ತು ಕ್ಲಿಯರ್​ಟ್ರಿಪ್ ಮಧ್ಯದ ವ್ಯವಹಾರವು ನಿಯಂತ್ರಕರ ಅನುಮತಿ ಮೇಲೆ ಅವಲಂಬಿತವಾಗಿದೆ.

ಇದನ್ನೂ ಓದಿ: ಭಾರತದ ಈ ಇಬ್ಬರು ಶ್ರೀಮಂತರು ಒಂದೇ ದಿನದಲ್ಲಿ ಕಳೆದುಕೊಂಡಿದ್ದು ಕರ್ನಾಟಕ ಬಜೆಟ್ ಗಾತ್ರದ ಎರಡು ಪಟ್ಟಿನ ಮೊತ್ತ

(Flipkart announced 100% share purchase in Cleartrip on April 15, 2021.)