High Streets: ಬೆಂಗಳೂರೇ ಬೆಸ್ಟ್..! ಭಾರತದ ಟಾಪ್-10 ಹೈ ಸ್ಟ್ರೀಟ್​ಗಳಲ್ಲಿ ಎಂಜಿ ರೋಡ್ ಸೇರಿ ಬೆಂಗಳೂರಿನ 4 ರಸ್ತೆಗಳು; ಏನಿದು ಹೈ ಸ್ಟ್ರೀಟ್ ಎಂದರೆ?

|

Updated on: May 10, 2023 | 4:45 PM

Knight Frank Survey of 30 Indian High Streets: ಭಾರತದ 10 ಪ್ರಮುಖ ಹೈ ಸ್ಟ್ರೀಟ್​ಗಳಲ್ಲಿ ಬೆಂಗಳೂರಿನ ರಸ್ತೆಗಳೇ ಅಧಿಕ ಸಂಖ್ಯೆಯಲ್ಲಿ ಇವೆ ಎನ್ನುವಂತಹ ಒಂದು ಸಮೀಕ್ಷೆ ವರದಿಯಾಗಿದೆ. ನೈಟ್ ಫ್ರ್ಯಾಂಕ್ ಎಂಬ ರಿಯಲ್ ಎಸ್ಟೇಟ್ ಕನ್ಸಲ್ಟೆನ್ಸಿ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಟಾಪ್-10 ಹೈಸ್ಟ್ರೀಟ್​ಗಳಲ್ಲಿ ಬೆಂಗಳೂರಿನ 4 ರಸ್ತೆಗಳಿವೆ.

High Streets: ಬೆಂಗಳೂರೇ ಬೆಸ್ಟ್..! ಭಾರತದ ಟಾಪ್-10 ಹೈ ಸ್ಟ್ರೀಟ್​ಗಳಲ್ಲಿ ಎಂಜಿ ರೋಡ್ ಸೇರಿ ಬೆಂಗಳೂರಿನ 4 ರಸ್ತೆಗಳು; ಏನಿದು ಹೈ ಸ್ಟ್ರೀಟ್ ಎಂದರೆ?
ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು
Follow us on

ನವದೆಹಲಿ: ಬೆಂಗಳೂರು ನಾನಾ ಕಾರಣಗಳಿಗೆ ಭಾರತಕ್ಕೆ ಹೆಮ್ಮೆ ಮೂಡಿಸುವ ನಗರ. ಅಮೆರಿಕದ ಸಿಲಿಕಾನ್ ವ್ಯಾಲಿಯಂತೆ ಭಾರತಕ್ಕೆ ಬೆಂಗಳೂರು ಸಿಲಿಕಾನ್ ಸಿಟಿ ಎನಿಸಿದೆ. ಅದಕ್ಕೆ ಮುನ್ನ ಪೆನ್ಷನರ್ಸ್ ಪ್ಯಾರಡೈಸ್ ಎಂದು ಹೆಸರು ಪಡೆದಿತ್ತು. ಪ್ರತೀ ಏರಿಯಾದಲ್ಲೂ ಪಾರ್ಕ್​ಗಳ ಸ್ಥಾಪನೆಯಾಗಿ, ಉದ್ಯಾನಗರಿ ಎಂದು ಫೇಮಸ್ ಆಯಿತು. ಅನೇಕ ಪ್ರಮುಖ ಉದ್ಯಮಗಳು ಬೆಂಗಳೂರಿನಲ್ಲೇ ಸ್ಥಾಪನೆಯಾಗಿವೆ. ಬಿಎಚ್​ಇಎಲ್, ಬಿಇಎಲ್, ಬಿಇಎಂಎಲ್, ಎನ್​ಜಿಇಎಫ್, ಮೈಕೋ, ಎಚ್​ಎಎಲ್ ಇತ್ಯಾದಿ ಕೈಗಾರಿಕೆಗಳಿಗೆ ಬೆಂಗಳೂರೇ ತವರೂರಾಗಿದ್ದು. ಈಗ ಪಬ್, ಮಾಲ್​ಗಳ ದೊಡ್ಡ ಪಟ್ಟಿಯೇ ಬೆಂಗಳೂರಲ್ಲಿ ಇವೆ. ಉದ್ಯಮ ವ್ಯವಹಾರಕ್ಕೆ ಹೇಳಿ ಮಾಡಿಸಿದ ಸ್ಥಳವಾಗಿದೆ ಬೆಂಗಳೂರು. ಓಲಾ, ಫ್ಲಿಪ್​ಕಾರ್ಟ್ ಇತ್ಯಾದಿ ಅಸಂಖ್ಯಾತ ಸ್ಟಾರ್ಟಪ್​ಗಳು, ಯೂನಿಕಾರ್ನ್​ಗಳಿಗೆ ಬೆಂಗಳೂರು ಮೂಲವಾಗಿದೆ. ಈಗ ಭಾರತದ 10 ಪ್ರಮುಖ ಹೈ ಸ್ಟ್ರೀಟ್​ಗಳಲ್ಲಿ (High Streets) ಬೆಂಗಳೂರಿನ ರಸ್ತೆಗಳೇ ಅಧಿಕ ಸಂಖ್ಯೆಯಲ್ಲಿ ಇವೆ ಎನ್ನುವಂತಹ ಒಂದು ಸಮೀಕ್ಷೆ ವರದಿಯಾಗಿದೆ. ನೈಟ್ ಫ್ರ್ಯಾಂಕ್ (Knight Frank) ಎಂಬ ರಿಯಲ್ ಎಸ್ಟೇಟ್ ಕನ್ಸಲ್ಟೆನ್ಸಿ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಟಾಪ್-10 ಹೈಸ್ಟ್ರೀಟ್​ಗಳಲ್ಲಿ ಬೆಂಗಳೂರಿನ 4 ರಸ್ತೆಗಳಿವೆ.

ಭಾರತದ ಟಾಪ್-10 ಹೈ ಸ್ಟ್ರೀಟ್​ಗಳು

ನೈಟ್ ಫ್ರ್ಯಾಂಕ್ ಬಿಡುಗಡೆ ಮಾಡಿದ ಅಗ್ರ-10 ಹೈ ಸ್ಟ್ರೀಟ್​ಗಳಲ್ಲಿ ಬೆಂಗಳೂರೊಂದರ 4 ರಸ್ತೆಗಳೇ ಇವೆ. ಎಂಜಿ ರಸ್ತೆ ಅಗ್ರಸ್ಥಾನದಲ್ಲಿದೆ. ಕಮರ್ಷಿಯಲ್ ಸ್ಟ್ರೀಟ್, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್​ಗಳು ಕ್ರಮವಾಗಿ 7, 9 ಮತ್ತು 10ನೇ ಸ್ಥಾನದಲ್ಲಿವೆ. 10 ಹೈ ಸ್ಟ್ರೀಟ್​ಗಳ ಪಟ್ಟಿ ಈ ಕೆಳಕಂಡಂತಿದೆ:

  1. ಮಹಾತ್ಮ ಗಾಂಧಿ ರಸ್ತೆ (ಎಂಜಿ ರೋಡ್): ಬೆಂಗಳೂರು
  2. ಸೋಮಾಜಿಗುಡ: ಹೈದರಾಬಾದ್
  3. ಲಿಂಕಿಂಗ್ ರೋಡ್: ಮುಂಬೈ
  4. ಸೌತ್ ಎಕ್ಸ್​ಟೆನ್ಷನ್ 1 ಮತ್ತು 2ನೇ ಭಾಗ: ದೆಹಲಿ
  5. ಪಾರ್ಕ್ ಸ್ಟ್ರೀಟ್ ಮತ್ತು ಕಾಮಾಕ್ ಸ್ಟ್ರೀಟ್: ಕೋಲ್ಕತಾ
  6. ಅಣ್ಣಾ ನಗರ್: ಚೆನ್ನೈ
  7. ಕಮರ್ಷಿಯಲ್ ಸ್ಟ್ರೀಟ್: ಬೆಂಗಳೂರು
  8. ಸೆಕ್ಟರ್ 18 ಮಾರ್ಕೆಟ್: ನೋಯ್ಡಾ
  9. ಬ್ರಿಗೇಡ್ ರೋಡ್: ಬೆಂಗಳೂರು
  10. ಚರ್ಚ್ ಸ್ಟ್ರೀಟ್: ಬೆಂಗಳೂರು

ಇದನ್ನೂ ಓದಿExpensive: ಚುನಾವಣಾ ಖರ್ಚಿನಲ್ಲಿ ಕರ್ನಾಟಕವೇ ನಂ.1; ರಾಜ್ಯದಲ್ಲಿ ಆಗುವ ಎಲೆಕ್ಷನ್ ವೆಚ್ಚ ಎಷ್ಟು? ಚುನಾವಣಾ ಆಯೋಗಕ್ಕೆ ಆಗುವ ಖರ್ಚೆಷ್ಟು? ಇಲ್ಲಿದೆ ಡೀಟೇಲ್ಸ್

ಮೇಲಿನ ಪಟ್ಟಿಯಲ್ಲಿ ಬೆಂಗಳೂರು ಬಿಟ್ಟರೆ ಬೇರೆ ಯಾವ ನಗರವೂ ಒಂದಕ್ಕಿಂತ ಹೆಚ್ಚು ಸ್ಟ್ರೀಟ್​ಗಳನ್ನು ಹೊಂದಿಲ್ಲ. ಹೀಗಾಗಿ, ಬೆಂಗಳೂರು ಎಲ್ಲ ನಗರಕ್ಕಿಂತ ಸ್ಪಷ್ಟ ಮುಂಚೂಣಿಯಲ್ಲಿದೆ.

ಹೈ ಸ್ಟ್ರೀಟ್ ಎಂದರೇನು?

ಹೈ ಸ್ಟ್ರೀಟ್ ಎಂದರೆ ಒಂದು ನಗರದ ಮುಖ್ಯ ಬೀದಿ ಹಾಗು ವಾಣಿಜ್ಯ ಸ್ಥಳವಾಗಿರಬೇಕು. ನಗರದ ಹೃದಯಭಾಗದಲ್ಲಿದ್ದು, ಈ ರಸ್ತೆಯಲ್ಲಿ ವೈವಿಧ್ಯಮಯ ರೀಟೇಲ್ ಶಾಪ್​ಗಳು, ರೆಸ್ಟೋರೆಂಟ್​ಗಳು, ಥಿಯೇಟರ್, ಕೆಫೆ ಇತ್ಯಾದಿ ಕಮರ್ಷಿಯಲ್ ಮತ್ತು ರೀಟೇಲ್ ಮಾರುಕಟ್ಟೆಗಳಿರಬೇಕು. ನಮ್ಮ ಎಂಜಿ ರಸ್ತೆ, ಕಮರ್ಷಿಯಲ್ ರಸ್ತೆಗಳಿಗೆ ಹೋದರೆ ಏನುಂಟು, ಏನಿಲ್ಲ? ಯಾರಿಗಾದರೂ ಏನಾದರೂ ಶಾಪಿಂಗ್ ಮಾಡಬೇಕೆಂದರೆ ಈ ರಸ್ತೆಗಳಲ್ಲಿ ನಾನಾ ಆಯ್ಕೆಗಳು ಸಿಗುತ್ತವೆ.

ಇದನ್ನೂ ಓದಿGo First: ಗೋ ಫಸ್ಟ್ ವಿಮಾನಗಳನ್ನು ಪಡೆಯಲು ಟಾಟಾ, ಇಂಡಿಗೋ ಮುಂದು; ಲೀಸಿಂಗ್ ಕಂಪನಿಗಳ ಜೊತೆ ಮಾತುಕತೆ

ಯಾವ ಹೈಸ್ಟ್ರೀಟ್​ಗಳಲ್ಲಿ ಮಾರುಕಟ್ಟೆ ಪ್ರದೇಶಗಳು ಸುಲಭವಾಗಿ ಕಣ್ಣಿಗೆ ನಿಲುಕುವಂತಿರಬೇಕು. ಅಂಥ ಹೈಸ್ಟ್ರೀಟ್​ಗಳಿಗೆ ಪಟ್ಟಿಯಲ್ಲಿ ಮೇಲಿನ ಸ್ಥಾನ ಕೊಡಲಾಗಿದೆ. ನೈಟ್ ಫ್ರಾಂಕ್ ಸಂಸ್ಥೆ ಭಾರತದಲ್ಲಿ ಇಂಥ 30 ಹೈಸ್ಟ್ರೀಟ್​ಗಳ ಸಮೀಕ್ಷೆ ನಡೆಸಿ ಟಾಪ್-10 ಪಟ್ಟಿ ಮಾಡಿದೆ. ಆದರೆ, ಜನರು ಒಂದು ರಸ್ತೆಗೆ ಹೋಗಿ ಅತಿಹೆಚ್ಚು ಶಾಪಿಂಗ್ ಅಥವಾ ವೆಚ್ಚ ಮಾಡುವುದು ಎಂದರೆ ಅದು ಅಹ್ಮದಾಬಾದ್​ನ ಎಸ್​ಜಿ ಹೈವೇ ಅಂತೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ