Go First: ಗೋ ಫಸ್ಟ್ ವಿಮಾನಗಳನ್ನು ಪಡೆಯಲು ಟಾಟಾ, ಇಂಡಿಗೋ ಮುಂದು; ಲೀಸಿಂಗ್ ಕಂಪನಿಗಳ ಜೊತೆ ಮಾತುಕತೆ

Tata Group, IndiGo In Talks With Go First Lessors: ಗೋ ಫಸ್ಟ್ ಏರ್​ಲೈನ್ಸ್ ಒಟ್ಟು 55 ವಿಮಾನಗಳನ್ನು ಹೊಂದಿದೆ. ವರದಿಗಳ ಪ್ರಕಾರ 40ಕ್ಕೂ ಹೆಚ್ಚು ವಿಮಾನಗಳನ್ನು ಮರುಸ್ವಾಧೀನಪಡಿಸಿಕೊಳ್ಳಲು ಗೋ ಫಸ್ಟ್ ವಿಮಾನಗಳ ಗುತ್ತಿಗೆದಾರರು ಪ್ರಯತ್ನಿಸುತ್ತಿದ್ದಾರೆ.

Go First: ಗೋ ಫಸ್ಟ್ ವಿಮಾನಗಳನ್ನು ಪಡೆಯಲು ಟಾಟಾ, ಇಂಡಿಗೋ ಮುಂದು; ಲೀಸಿಂಗ್ ಕಂಪನಿಗಳ ಜೊತೆ ಮಾತುಕತೆ
ಗೋ ಫಸ್ಟ್ ವಿಮಾನ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 10, 2023 | 11:27 AM

ನವದೆಹಲಿ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ವಿಮಾನ ಹಾರಾಟ ಸೇವೆ ತಾತ್ಕಾಲಿಕವಾಗಿ ನಿಲ್ಲಿಸಿರುವ ಮತ್ತು ಇನ್ಸಾಲ್ವೆನ್ಸಿಗೆ ಅರ್ಜಿ (Insolvency) ಸಲ್ಲಿಸಿರುವ ಗೋ ಫಸ್ಟ್ ಏರ್​ಲೈನ್ಸ್​ಗೆ (Go First Airlines) ಸೇರಿದ ವಿಮಾನಗಳಿಗೆ ಬೇಡಿಕೆ ಬರುತ್ತಿದೆ. ಪ್ರತಿಸ್ಪರ್ಧಿ ಏರ್​ಲೈನ್ಸ್ ಸಂಸ್ಥೆಗಳಾದ ಟಾಟಾ ಗ್ರೂಪ್, ಇಂಡಿಗೋ ಮೊದಲಾದವರು ಗೋ ಫಸ್ಟ್ ವಿಮಾನಗಳ ಖರೀದಿಗೆ ಪ್ರಯತ್ನಿಸುತ್ತಿವೆ. ಗೋ ಫಸ್ಟ್​ಗೆ ವಿಮಾನಗಳ ಗುತ್ತಿಗೆ ಕೊಟ್ಟಿರುವ ಸಂಸ್ಥೆಗಳೊಂದಿಗೆ (Lessors) ಟಾಟಾ ಗ್ರೂಪ್ ಮತ್ತು ಇಂಡಿಗೋ ಮಾತುಕತೆ ನಡೆಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಗೋ ಫಸ್ಟ್ ಏರ್​ಲೈನ್ಸ್ ಒಟ್ಟು 55 ವಿಮಾನಗಳನ್ನು ಹೊಂದಿದೆ. ವರದಿಗಳ ಪ್ರಕಾರ 40ಕ್ಕೂ ಹೆಚ್ಚು ವಿಮಾನಗಳನ್ನು ಮರುಸ್ವಾಧೀನಪಡಿಸಿಕೊಳ್ಳಲು ಗೋ ಫಸ್ಟ್ ವಿಮಾನಗಳ ಗುತ್ತಿಗೆದಾರರು ಪ್ರಯತ್ನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಸ್ಪರ್ಧಿ ಸಂಸ್ಥೆಗಳಿಗೆ ಈ ವಿಮಾನಗಳನ್ನು ನೀಡುವ ಕುರಿತು ಮಾತುಕತೆಗೆ ಈ ಲೀಸಿಂಗ್ ಕಂಪನಿಗಳೂ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ.

ಗೋ ಫಸ್ಟ್​ನ ಲೆಸ್ಸರ್ಸ್ ಅಥವಾ ಗುತ್ತಿಗೆದಾರರಲ್ಲಿ ಜ್ಯಾಕ್ಸನ್ ಸ್ಕ್ವಯರ್ ಏವಿಯೇಶನ್, ಎಸ್​ಎಂಬಿಸಿ ಏವಿಯೇಶನ್ ಕ್ಯಾಪಿಟಲ್ ಮತ್ತು ಸಿಡಿಬಿ ಏವಿಯೇಶನ್ ಇತ್ಯಾದಿ ದೊಡ್ಡ ದೊಡ್ಡ ಲೀಸಿಂಗ್ ಸಂಸ್ಥೆಗಳಿವೆ. ಗೋ ಫಸ್ಟ್ ಏರ್​ಲೈನ್ಸ್​ನ ಏರ್​ಬಸ್ ಎ320 ವಿಮಾನಗಳನ್ನು ಲೀಸ್​ಗೆ ಕೊಟ್ಟಿರುವುದು ಈ ಸಂಸ್ಥೆಗಳೇ. ಗೋ ಫಸ್ಟ್ ಏರ್​ಲೈನ್ಸ್ ಮೇ 3ರಂದು ಭಾರತದ ಕಂಪನಿ ಕಾನೂನು ನ್ಯಾಯಮಂಡಳಿ (ಎನ್​ಸಿಎಲ್​ಎಟಿ) ಬಳಿ ಇನ್ಸಾಲ್ವೆನ್ಸಿಗೆ ಅರ್ಜಿ ಸಲ್ಲಿಸಿದಾಗಲೀ ಈ ಲೀಸಿಂಗ್ ಸಂಸ್ಥೆಗಳು ಪ್ರಬಲವಾಗಿ ವಿರೋಧ ವ್ಯಕ್ತಪಡಿಸಿದ್ದವು. ಆದರೂ ಕೂಡ ಗೋ ಫಸ್ಟ್ ಏರ್​ಲೈನ್ಸ್ ತನ್ನ ನಿರ್ಧಾರಕ್ಕೆ ಬದ್ಧವಾಗಿತ್ತು. ಇದಾದ ಬಳಿಕ ಲೀಸಿಂಗ್ ಕಂಪನಿಗಳು ತನ್ನ ವಿಮಾನಗಳನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುತ್ತಿವೆ ಎಂದು ಗೋ ಫಸ್ಟ್ ಅಳಲು ತೋಡಿಕೊಂಡಿದ್ದ ಸುದ್ದಿ ಇತ್ತೀಚೆಗೆ ಬಂದಿತ್ತು.

ಇದನ್ನೂ ಓದಿPod Taxi: ಭಾರತದ ಮೊದಲ ಚಾಲಕರಹಿತ ಪೋಡ್ ಟ್ಯಾಕ್ಸಿ; ಏನಿದರ ವಿಶೇಷತೆ, ಬೆಂಗಳೂರಿಗೆ ಯಾಕೆ ಬರಲಿಲ್ಲ ಈ ಪ್ರಾಜೆಕ್ಟ್?

ಏರ್​ಪೋರ್ಟ್ ಸ್ಲಾಟ್​ಗಳ ಸ್ವಾಧೀನಕ್ಕೂ ಪ್ರಯತ್ನ

ಗೋ ಫಸ್ಟ್ ವಿಮಾನಗಳಿಗೆ ಇರುವ ಏರ್​ಪೋರ್ಟ್ ಸ್ಲಾಟ್​ಗಳಿಗೂ ಭಾರೀ ಬೇಡಿಕೆ ಬಂದಿದೆ. ಈ ಸ್ಲಾಟ್​ಗಳನ್ನು ಖರೀದಿಸಲು ಆಕಾಸ ಏರ್ ಸೇರಿದಂತೆ ಹಲವು ವೈಮಾನಿಕ ಸಂಸ್ಥೆಗಳು ಆಸಕ್ತಿ ತೋರಿರುವುದು ಕಂಡುಬಂದಿದೆ. ಟಾಟಾ ಗ್ರೂಪ್ ಮತ್ತು ಇಂಡಿಗೋ ಏರ್​ಲೈನ್ ಸಂಸ್ಥೆಗಳೂ ಈ ವಿಚಾರದಲ್ಲಿ ತೀವ್ರ ಪ್ರಯತ್ನಗಳನ್ನು ಹಾಕುತ್ತಿವೆ. ನವದೆಹಲಿ ಮತ್ತು ಮುಂಬೈ ಏರ್​ಪೋರ್ಟ್​ಗಳಲ್ಲಿ ವಿಮಾನಗಳ ಲ್ಯಾಂಡಿಂಗ್ ಮತ್ತು ಪಾರ್ಕಿಂಗ್ ಸಂಬಂಧ ಟಾಟಾ ಗ್ರೂಪ್ ಮತ್ತು ಇಂಡಿಗೋ ಏರ್​ಲೈನ್ಸ್ ಮಾತುಕತೆ ನಡೆಸುತ್ತಿವೆ. ಪ್ರತಿಯೊಂದು ವಿಮಾನ ಸಂಸ್ಥೆಗಳಿಗೂ ವಿವಿಧ ಏರ್​ಪೋರ್ಟ್​ಗಳಲ್ಲಿ ಲ್ಯಾಂಡಿಂಗ್​ಗೆ ಮತ್ತು ನಿಲುಗಡೆಗೆ ಸ್ಥಳಾವಕಾಶ ಕೊಡಲಾಗುತ್ತದೆ. ಗೋ ಫಸ್ಟ್ ವಿಮಾನಗಳಿಗಿರುವ ಸ್ಥಳ ಮೀಸಲನ್ನು ಪಡೆಯಲು ಟಾಟಾ ಮತ್ತು ಇಂಡಿಗೋ ಪ್ರಯತ್ನಿಸುತ್ತಿದ್ದು ಏರ್​ಪೋರ್ಟ್ ಆಪರೇಟರ್​ಗಳೊಂದಿಗೆ ಮಾತನಾಡುತ್ತಿವೆ.

ಇದನ್ನೂ ಓದಿGovt Schemes: ಕೇಂದ್ರದ ಈ 3 ಸ್ಕೀಮ್​ಗಳಿಗೆ 8 ವರ್ಷ; ಎಷ್ಟು ಕೋಟಿ ಭಾರತೀಯರನ್ನು ತಲುಪಿವೆ ಈ ಸ್ಕೀಮ್​ಗಳು?

ಟಾಟಾ ಗ್ರೂಪ್ ಸಂಸ್ಥೆ ಇತ್ತೀಚೆಗಷ್ಟೇ ಏರ್ ಇಂಡಿಯಾ ಸಂಸ್ಥೆಯನ್ನು ಖರೀದಿಸಿ, ಭಾರತದ ನಂಬರ್ ಒನ್ ಏರ್​ಲೈನ್ಸ್ ಸಂಸ್ಥೆ ಎನಿಸಿದೆ. ಏರ್ ಏಷ್ಯಾ, ಸಿಂಗಾಪುರ್ ಏರ್​ಲೈನ್ಸ್​ನ ಭಾರತೀಯ ಕಾರ್ಯಾಚರಣೆಯ ಮಾಲಿಕತ್ವ ಹೊಂದಿರುವ ಟಾಟಾ ಗ್ರೂಪ್ ಇದೀಗ ತನ್ನೆಲ್ಲಾ ವೈಮಾನಿಕ ಸೇವೆಗಳನ್ನು ಇಂಟಿಗ್ರೇಟ್ ಮಾಡುವ ಆಲೋಚನೆಯಲ್ಲಿದೆ. ಎಲ್ಲವೂ ಒಂದೇ ಏರ್​ಲೈನ್ಸ್​ಗೆ ವಿಲೀನವಾಗಲಿದೆ. ಟಾಟಾ ಗ್ರೂಪ್ ಇತ್ತೀಚೆಗಷ್ಟೇ ಬಹಳಷ್ಟು ಹೊಸ ವಿಮಾನಗಳನ್ನು ಖರೀದಿಸಲು ಬೋಯಿಂಗ್ ಮತ್ತು ಏರ್​ಬಸ್ ಸಂಸ್ಥೆಗಳಿಗೆ ಆರ್ಡರ್ ಕೊಟ್ಟಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್