AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RIL: ಕೇಂದ್ರ ಸರ್ಕಾರ ವಿರುದ್ಧ ಕೇಸ್ ಗೆದ್ದ ಅಂಬಾನಿ ಕಂಪನಿ; 14,000 ಕೋಟಿ ದಂಡದಿಂದ ತಪ್ಪಿಸಿಕೊಂಡ ಆರ್​ಐಎಲ್

Delhi HC Uphelds Arbitral Award In Favour of RIL: ಆಂಧ್ರದ ಕೃಷ್ಣ ಗೋದಾವರಿ ಜಲಾನಯನ ಪ್ರದೇಶದಲ್ಲಿ ಅನಿಲ ನಿಕ್ಷೇಪ ಯೋಜನೆಯಲ್ಲಿ ಭಾಗಿಯಾಗಿದ್ದ ಒಎನ್​ಜಿಸಿ ಮತ್ತು ರಿಲಾಯನ್ಸ್ ಇಂಡಸ್ಟ್ರೀಸ್ ನಡುವಿನ ವ್ಯಾಜ್ಯದಲ್ಲಿ ಆರ್​ಐಎಲ್ ಪರವಾಗಿ ನ್ಯಾಯತೀರ್ಪು ಬಂದಿದೆ.

RIL: ಕೇಂದ್ರ ಸರ್ಕಾರ ವಿರುದ್ಧ ಕೇಸ್ ಗೆದ್ದ ಅಂಬಾನಿ ಕಂಪನಿ; 14,000 ಕೋಟಿ ದಂಡದಿಂದ ತಪ್ಪಿಸಿಕೊಂಡ ಆರ್​ಐಎಲ್
ಮುಕೇಶ್ ಅಂಬಾನಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 10, 2023 | 1:57 PM

Share

ನವದೆಹಲಿ: ಕೃಷ್ಣ ಗೋದಾವರಿ ಜಲಾನಯನ ಪ್ರದೇಶದಲ್ಲಿ (Krishna Godavari Basin) ಅನಿಲ ಹಂಚಿಕೆ ವಿಚಾರದಲ್ಲಿ ಉಂಟಾದ ವ್ಯಾಜ್ಯವೊಂದರಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಪರವಾಗಿ ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ. 2018ರಲ್ಲಿ ನ್ಯಾಯಮಂಡಳಿ ನೀಡಿದ್ದ ತೀರ್ಪನ್ನು ದೆಹಲಿ ಉಚ್ಚನ್ಯಾಯಾಲಯ (Delhi High Court) ಮೇ 9ರಂದು ಎತ್ತಿಹಿಡಿದು ಆದೇಶ ಹೊರಡಿಸಿದೆ. ಮೂವರು ಸದಸ್ಯರ ನ್ಯಾಯಪೀಠವು 2:1 ಬಹುಮತದಲ್ಲಿ ಆರ್​ಐಎಲ್ ಪರವಾಗಿ ತೀರ್ಪು ನೀಡಿದೆ. ಇದರೊಂದಿಗೆ ರಿಲಾಯನ್ಸ್ ಇಂಡಸ್ಟ್ರೀಸ್ ಹಾಗೂ ಅದರ ಪಾಲುದಾರ ಸಂಸ್ಥೆಗಳಾದ ಬ್ರಿಟಿಷ್ ಪೆಟ್ರೋಲಿಯಂ ಮತ್ತು ನೀಕೋ (NECO) ನಿಟ್ಟುಸಿರುಬಿಡುವಂತಾಗಿದೆ. ನ್ಯಾಯಮಂಡಳಿ ತೀರ್ಪನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿ ಕೇಂದ್ರದ ಪರ ತೀರ್ಪು ನೀಡಿದ್ದರೆ ರಿಲಾಯನ್ಸ್ ಸಂಸ್ಥೆ ಸುಮಾರು 14,000 ಕೋಟಿ ರೂ ಪರಿಹಾರ ಕಟ್ಟಿಕೊಡಬೇಕಿತ್ತು. ಸರ್ಕಾರಿ ಸ್ವಾಮ್ಯದ ಒಎನ್​ಜಿಸಿ ಮತ್ತು ರಿಲಾಯನ್ಸ್ ನಡುವಿನ ಅನಿಲ ವ್ಯಾಜ್ಯದ ಪ್ರಕರಣ ಇದು.

ಏನಿದು ರಿಲಾಯನ್ಸ್ ಮತ್ತು ಒಎನ್​ಜಿಸಿ ವ್ಯಾಜ್ಯ?

ಕೃಷ್ಣ ಗೋದಾವರಿ ಜಲಾನಯನ ಪ್ರದೇಶದಲ್ಲಿ ಅನಿಲ ನಿಕ್ಷೇಪ ಹಂಚಿಕೆಗೆ ಸಂಬಂಧಿಸಿದ ಪ್ರಕರಣ ಇದು. ಆಂಧ್ರದ ಕರಾವಳಿ ಭಾಗದಲ್ಲಿ ನೈಸರ್ಗಿಕ ಅನಿಲ ನಿಕ್ಷೇಪ ಶೋಧಿಸಲು ಮತ್ತು ಹೊರತೆಗೆಯಲು 2000ದ ಏಪ್ರಿಲ್ 12ರಂದು ರಿಲಾಯನ್ಸ್ ಮತ್ತಿತರ ಕಂಪನಿಗಳ ಜೊತೆ ಕೇಂದ್ರ ಸರ್ಕಾರ ಪ್ರಾಡಕ್ಟ್ ಶೇರಿಂಗ್ ಗುತ್ತಿಗೆ (ಪಿಎಸ್​ಸಿ) ಒಪ್ಪಂದ ಮಾಡಿಕೊಂಡಿತ್ತು. ಎರಡಕ್ಕೂ ಬೇರೆ ಬೇರೆ ಬ್ಲಾಕ್​ಗಳನ್ನು ನಿಯೋಜಿಸಲಾಗಿತ್ತು.

ಇದನ್ನೂ ಓದಿGo First: ಗೋ ಫಸ್ಟ್ ವಿಮಾನಗಳನ್ನು ಪಡೆಯಲು ಟಾಟಾ, ಇಂಡಿಗೋ ಮುಂದು; ಲೀಸಿಂಗ್ ಕಂಪನಿಗಳ ಜೊತೆ ಮಾತುಕತೆ

ಆದರೆ, 2013ರಲ್ಲಿ ಒಎನ್​ಜಿಸಿಗೆ ಸೇರಿದ ಬ್ಲಾಕ್ ಮತ್ತು ಆರ್​ಐಎಲ್​ಗೆ ಸೇರಿದ ಬ್ಲಾಕ್ ಮಧ್ಯೆ ಸಂಪರ್ಕ ಜೋಡಿಸಿ ಆ ಮೂಲಕ ಅನಿಲವನ್ನು ಸಾಗಿಸಲಾಗುತ್ತಿತ್ತು ಎಂದು ಒಎನ್​ಜಿಸಿ ಶಂಕಿಸಿತ್ತು. ಕೇಂದ್ರ ಪೆಟ್ರೋಲಿಯಂ ಸಚಿವಾಲಯವು ರಿಲಾಯನ್ಸ್ ವಿರುದ್ಧ 2016ರಲ್ಲಿ 1.5 ಬಿಲಿಯನ್ ಡಾಲರ್ ಹಾಗು 174 ಮಿಲಿಯನ್ ಡಾಲರ್ (ಒಟ್ಟು ಸುಮಾರು 14,000 ಕೋಟಿ ರೂ) ದಂಡ ವಿಧಿಸಿತ್ತು. ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ರಿಲಾಯನ್ಸ್ ನೇತೃತ್ವದ ಸಂಸ್ಥೆಗಳು ನ್ಯಾಯಮಂಡಳಿ ಮೊರೆ ಹೋದವು. 2018ರಲ್ಲಿ ನ್ಯಾಯಮಂಡಳಿಯಿಂದ ಆರ್​ಐಎಲ್ ಪರವಾಗಿ ತೀರ್ಪು ಬಂದಿತು. ಇದನ್ನು ಪ್ರಶ್ನಿಸಿ ಸರ್ಕಾರವು ದೆಹಲಿ ಹೈಕೋರ್ಟ್ ಮೆಟ್ಟಿಲೇರಿತ್ತು. ಈಗ ದೆಹಲಿ ಕೋರ್ಟ್​ನಿಂದಲೂ ಸರ್ಕಾರದ ವಿರುದ್ಧವಾಗಿ ತೀರ್ಪು ಬಂದಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ