Home Loan: 30 ಲಕ್ಷ ರೂಪಾಯಿಯೊಳಗಿನ ಮೊತ್ತಕ್ಕೆ ಗೃಹ ಸಾಲವು ಶೇ 7ರೊಳಗೆ ಇರುವ ಟಾಪ್ 15 ಬ್ಯಾಂಕ್​ಗಳ ಪಟ್ಟಿ ಇಲ್ಲಿದೆ

ಪ್ರಸ್ತುತ ಕನಿಷ್ಠ 15 ಬ್ಯಾಂಕ್​ಗಳು ವಾರ್ಷಿಕ ಬಡ್ಡಿ ದರ ಶೇ 7ರಿಂದ ಪ್ರಾರಂಭವಾಗುವಂತೆ ಗೃಹ ಸಾಲವನ್ನು ನೀಡುತ್ತಿವೆ. ಇದನ್ನು ಸೆಪ್ಟೆಂಬರ್ 2019ಕ್ಕೆ ಹೋಲಿಸಿದರೆ ಆಗ ಕಡಿಮೆ ಗೃಹ ಸಾಲದ ದರ ಅಂದರೆ ಸುಮಾರು ಶೇ 8.40 ಇತ್ತು.

Home Loan: 30 ಲಕ್ಷ ರೂಪಾಯಿಯೊಳಗಿನ ಮೊತ್ತಕ್ಕೆ ಗೃಹ ಸಾಲವು ಶೇ 7ರೊಳಗೆ ಇರುವ ಟಾಪ್ 15 ಬ್ಯಾಂಕ್​ಗಳ ಪಟ್ಟಿ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Jul 11, 2021 | 8:16 AM

ರೆಪೊ ದರವನ್ನು ಒಂದು ವರ್ಷಕ್ಕೂ ಹೆಚ್ಚು ಕಾಲ ಶೇಕಡಾ 4ರಷ್ಟು ಕಡಿಮೆ ಮಟ್ಟದಲ್ಲಿ ಇರಿಸಿಕೊಳ್ಳುವ ರಿಸರ್ವ್ ಬ್ಯಾಂಕ್ ನಿರ್ಧಾರದಿಂದಾಗಿ ಅನೇಕ ಬ್ಯಾಂಕ್​ಗಳು ತಮ್ಮ ಸ್ಥಿರ ಠೇವಣಿ (Fixed Deposits) ಬಡ್ಡಿದರಗಳನ್ನು ಹೂಡಿಕೆದಾರರನ್ನು ನಿರಾಶೆಗೊಳಿಸುವ ಮಟ್ಟಕ್ಕೆ ತಂದು ನಿಲ್ಲಿಸಿವೆ. ಆದರೂ ಈ ಕಡಿಮೆ ರೆಪೊ ಪ್ರವೃತ್ತಿಯು ಅನೇಕ ಬ್ಯಾಂಕ್​ಗಳು ತಮ್ಮ ಗೃಹ ಸಾಲದ (Home Loan) ಮೇಲಿನ ಫ್ಲೋಟಿಂಗ್ ಬಡ್ಡಿದರಗಳನ್ನು ದಶಕಗಳ ಕನಿಷ್ಠಕ್ಕೆ ಇಳಿಸಲು ಕಾರಣವಾಗಿದೆ. ಅದರಲ್ಲೂ ವಿಶೇಷವಾಗಿ ಅಕ್ಟೋಬರ್ 2019ರಿಂದ ಕೇಂದ್ರ ಬ್ಯಾಂಕ್​ನಿಂದ ಎಲ್ಲ ಬ್ಯಾಂಕ್​ಗಳಿಗೆ ತಮ್ಮ ಸಾಲಗಳನ್ನು ಎಕ್ಸ್​ಟರ್​ನಲಿ ಮಾನದಂಡವಾಗಿ ಸೂಚಿಸುವಂತೆ ನಿರ್ದೇಶಿಸಿತು.

ವಾಸ್ತವವಾಗಿ, ಪ್ರಸ್ತುತ ಕನಿಷ್ಠ 15 ಬ್ಯಾಂಕ್​ಗಳು ವಾರ್ಷಿಕ ಬಡ್ಡಿ ದರ ಶೇ 7ರಿಂದ ಪ್ರಾರಂಭವಾಗುವಂತೆ ಗೃಹ ಸಾಲವನ್ನು ನೀಡುತ್ತಿವೆ. ಇದನ್ನು ಸೆಪ್ಟೆಂಬರ್ 2019ಕ್ಕೆ ಹೋಲಿಸಿದರೆ ಆಗ ಕಡಿಮೆ ಗೃಹ ಸಾಲದ ದರ ಅಂದರೆ ಸುಮಾರು ಶೇ 8.40 ಇತ್ತು. ನೀವು ಮನೆ ಖರೀದಿಸಲು ಯೋಜಿಸುತ್ತಿದ್ದೀರಾ? ಅಗತ್ಯ ಮಾರ್ಜಿನ್ ಮೊತ್ತ ಇದ್ದಲ್ಲಿ, 750ಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಮತ್ತು ಮರುಪಾವತಿ ಸಾಮರ್ಥ್ಯವನ್ನು ಹೊಂದಿದ್ದರೆ, ಬ್ಯಾಂಕ್​ ಬಜಾರ್ ತಿಳಿಸುವಂತೆ, ನಿಮ್ಮ ಮನೆ ಖರೀದಿಸುವ ಕನಸುಗಳನ್ನು ನನಸು ಮಾಡಲು ಇದು ಉತ್ತಮ ಸಮಯವಾಗಿದೆ.

ಆದ್ದರಿಂದ, ನೀವು 30 ಲಕ್ಷ ರೂಪಾಯಿಗಿಂತ ಕಡಿಮೆ ಗೃಹ ಸಾಲವನ್ನು ತೆಗೆದುಕೊಳ್ಳಲು ಯೋಜಿಸುತ್ತಿದ್ದರೆ, ಇದೀಗ 15 ಪ್ರಮುಖ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್​ಗಳ ಪಟ್ಟಿ ಇಲ್ಲಿದೆ. ಇವುಗಳು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತಿದೆ. ಗಮನಿಸಿ, ನಿಮ್ಮ ವಯಸ್ಸು, ಆದಾಯ, ಲಿಂಗ, ಕ್ರೆಡಿಟ್ ಸ್ಕೋರ್, ಸಾಲದ ಮೊತ್ತ, ಸಾಲದ ಮೌಲ್ಯ ಅನುಪಾತ (Loan To Value ratio) ಅಥವಾ ನೀವು ಆಯ್ಕೆ ಮಾಡಿದ ಬ್ಯಾಂಕ್​ ಯಾವುದು ಎಂಬುದರ ಆಧಾರದಲ್ಲಿ ಅಲ್ಲಿನ ನಿಯಮಗಳು ಮತ್ತು ಷರತ್ತುಗಳನ್ನು ಅವಲಂಬಿಸಿ ಬಡ್ಡಿದರವನ್ನು ನಿರ್ಧರಿಸಲಾಗುತ್ತದೆ.

30 ಲಕ್ಷ ರೂ.ಗಿಂತ ಕಡಿಮೆ ಇರುವ ಗೃಹ ಸಾಲಗಳಿಗೆ ಪ್ರಸ್ತುತ ಕಡಿಮೆ ಬಡ್ಡಿದರ ಇರುವ ಟಾಪ್ 15 ಬ್ಯಾಂಕ್: 1. ಕೊಟಕ್ ಮಹೀಂದ್ರಾ ಬ್ಯಾಂಕ್ – ಶೇ 6.65ರಿಂದ 7.30 2. ಒಂಜಾಬ್ ಅಂಡ್ ಸಿಂದ್ ಬ್ಯಾಂಕ್- ಶೇ 6.65ರಿಂದ 7.35 3. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ- ಶೇ 6.70ರಿಂದ ಶೇ 7.15 4. ಐಸಿಐಸಿಐ ಬ್ಯಾಂಕ್- ಶೇ 6.75ರಿಂದ ಶೇ 7.30 5. ಎಚ್​ಡಿಎಫ್​ಸಿ ಬ್ಯಾಂಕ್- ಶೇ 6.75ರಿಂದ 7.50 6. ಬ್ಯಾಂಕ್ ಆಫ್ ಬರೋಡ- ಶೇ 6.75ರಿಂದ 8.35 7. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ- ಶೇ 6.80ರಿಂದ ಶೇ 7.35 8. ಪಂಜಾಬ್ ನ್ಯಾಷನಲ್ ಬ್ಯಾಂಕ್- ಶೇ 6.80ರಿಂದ ಶೇ 7.60 9. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ- ಶೇ 6.85ರಿಂದ ಶೇ 7.30 10. ಬ್ಯಾಂಕ್ ಆಫ್ ಇಂಡಿಯಾ- ಶೇ 6.85ರಿಂದ ಶೇ 8.35 11. ಐಡಿಬಿಐ ಬ್ಯಾಂಕ್- ಶೇ 6.85ರಿಂದ ಶೇ 10.05 12. ಯುಕೋ ಬ್ಯಾಂಕ್- ಶೇ 6.90ರಿಂದ ಶೇ 7.25 13. ಬ್ಯಾಂಕ್ ಆಫ್ ಮಹಾರಾಷ್ಟ್ರ- ಶೇ 6.90ರಿಂದ ಶೇ 8.40 14. ಆಕ್ಸಿಸ್ ಬ್ಯಾಂಕ್- ಶೇ 6.90ರಿಂದ ಶೇ 8.55 15. ಕೆನರಾ ಬ್ಯಾಂಕ್- ಶೇ 6.90ರಿಂದ ಶೇ 8.90

(ನಿಗದಿತ ಸಾಲದ ಮೊತ್ತದಲ್ಲಿ ಅವಧಿ ಅಥವಾ ಕ್ರೆಡಿಟ್ ಸ್ಕೋರ್‌ಗಳೊಂದಿಗೆ ಬದಲಾಗುವ ಬಡ್ಡಿದರಗಳನ್ನು ಒಂದು ರೇಂಜ್ ಎಂದು ಸೂಚಿಸಲಾಗುತ್ತದೆ, ಮತ್ತು ಬ್ಯಾಂಕುಗಳು ತಮ್ಮ ಪ್ರಸ್ತುತ ಗೃಹ ಸಾಲದ ದರಗಳಿಗೆ ಅನುಗುಣವಾಗಿ ಹೆಚ್ಚುತ್ತಿರುವ ಕ್ರಮದಲ್ಲಿ 30 ಲಕ್ಷ ರೂಪಾಯಿಗೆ ಜುಲೈ 2, 2021 ರಂದು ಆಯಾ ಬ್ಯಾಂಕ್ ವೆಬ್‌ಸೈಟ್‌ಗಳ ದತ್ತಾಂಶ.)

ಇದನ್ನೂ ಓದಿ: Home loan: ಗೃಹ ಸಾಲ ಪಡೆಯುವಾಗ ಈ 5 ತಪ್ಪುಗಳನ್ನು ಮಾಡದಿರಿ

ಇದನ್ನೂ ಓದಿ: Housing Loan: ಮನೆ ಕಟ್ಟಲು, ಖರೀದಿ ಮಾಡಲು ಸಾಲ ಮಾಡುವ ಮುನ್ನ ತಿಳಿಯಲೇಬೇಕಾದ ಸಂಗತಿಗಳು

(Here are the list of 15 banks which provide cheaper interest rate for housing loan amount less than Rs 30 lakhs)

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ