AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India’s Exports: ಒಂದು ವರ್ಷದಲ್ಲಿ 825 ಟ್ರಿಲಿಯನ್ ಡಾಲರ್ ರಫ್ತು; ಭಾರತಕ್ಕೆ ಹೊಸ ದಾಖಲೆ

India's total exports rose to 824.9 billion USD: 2023-24ಕ್ಕೆ ಹೋಲಿಸಿದರೆ 2024-25ರಲ್ಲಿ ಭಾರತದ ರಫ್ತು ಶೇ. 6ರಷ್ಟು ಏರಿಕೆ ಆಗಿದೆ. ಸರಕು ಮತ್ತು ಸೇವಾ ರಫ್ತು 824.9 ಬಿಲಿಯನ್ ಡಾಲರ್​​ನಷ್ಟು ಆಗಿದೆ ಎಂಬುದು ಸರ್ಕಾರದಿಂದ ಬಿಡುಗಡೆಯಾದ ದತ್ತಾಂಶದಿಂದ ತಿಳಿದುಬರುತ್ತದೆ. ಸರಕುಗಳಿಗಿಂತ ಸರ್ವಿಸ್ ಸೆಕ್ಟರ್​​​ನ ರಫ್ತು ಗಣನೀಯವಾಗಿ ಏರಿಕೆ ಆಗಿದೆ.

India's Exports: ಒಂದು ವರ್ಷದಲ್ಲಿ 825 ಟ್ರಿಲಿಯನ್ ಡಾಲರ್ ರಫ್ತು; ಭಾರತಕ್ಕೆ ಹೊಸ ದಾಖಲೆ
ಕರಾಚಿ ಬಂದರು(ಸಂಗ್ರಹ ಚಿತ್ರ)
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 02, 2025 | 5:49 PM

Share

ನವದೆಹಲಿ, ಮೇ 2: ಕಳೆದ ಹಣಕಾಸು ವರ್ಷದಲ್ಲಿ (2024-25) ಭಾರತದ ಒಟ್ಟಾರೆ ರಫ್ತು ಶೇ. 6ರಷ್ಟು ಹೆಚ್ಚಳವಾಗಿದೆ. ಸರಕು ಮತ್ತು ಸೇವಾ ಕ್ಷೇತ್ರಗಳೆರಡೂ ಸೇರಿ ಭಾರತವು 824.9 ಬಿಲಿಯನ್ ಡಾಲರ್​​ನಷ್ಟು ಮೌಲ್ಯದ ರಫ್ತು ಮಾಡಿದೆ. ಇದು ಭಾರತದ ಇತಿಹಾಸದಲ್ಲೇ ಹೊಸ ದಾಖಲೆ ಎನಿಸಿದೆ. ಯಾವುದೇ ವರ್ಷದಲ್ಲಿ ಇಷ್ಟೊಂದು ಮೊತ್ತದ ರಫ್ತನ್ನು ಭಾರತ ಮಾಡಿದ್ದಿಲ್ಲ. ಸರಕು ಕ್ಷೇತ್ರಕ್ಕಿಂತ ಸರ್ವಿಸ್ ರಫ್ತು ಗಣನೀಯವಾಗಿ ಹೆಚ್ಚಿದೆ. ಇದು ಒಟ್ಟಾರೆ ರಫ್ತು ಏರುವಂತೆ ಮಾಡಿದೆ.

‘2025ರ ಮಾರ್ಚ್​​​ನಲ್ಲಿ ಸರ್ವಿಸ್ ರಫ್ತು 35.6 ಬಿಲಿಯನ್ ಡಾಲರ್ ಇದೆ. ಹಿಂದಿನ ವರ್ಷದ (2024) ಮಾರ್ಚ್​​​ನಲ್ಲಿ 30 ಬಿಲಿಯನ್ ಡಾಲರ್ ಸರ್ವಿಸ್ ಎಕ್ಸ್​​ಪೋರ್ಟ್ ಇತ್ತು. ಅದಕ್ಕೆ ಹೋಲಿಸಿದರೆ ಬರೋಬ್ಬರಿ ಶೇ. 18.6ರಷ್ಟು ರಫ್ತು ಹೆಚ್ಚಳವಾಗಿದೆ. ಇನ್ನು ಇಡೀ ಹಣಕಾಸು ವರ್ಷದಲ್ಲಿ ಸರ್ವಿಸ್ ಸೆಕ್ಟರ್​​ನಿಂದ 387.5 ಬಿಲಿಯನ್ ಡಾಲರ್ ರಫ್ತಾಗಿದೆ. ಹಿಂದಿನ ವರ್ಷದ 341.5 ಬಿಲಿಯನ್ ಡಾಲರ್​​ಗೆ ಹೋಲಿಸಿದರೆ ಈ ಬಾರಿಯ ಸರ್ವಿಸ್ ರಫ್ತು ಶೇ. 13.6ರಷ್ಟು ಏರಿದೆ’ ಎಂದು ವಾಣಿಜ್ಯ ಮತ್ತು ಉದ್ಯಮ ಸಚಿವಾಲಯ ಶುಕ್ರವಾರ ಹೇಳಿಕೆ ನೀಡಿದೆ.

ಇದನ್ನೂ ಓದಿ: ಕೇರಳದಲ್ಲಿ ವಿಳಿಂಜಂ ಬಂದರು ಅನಾವರಣ; ಇದು ಭಾರತದ ಮೊದಲ ಟ್ರಾನ್ಸ್​​ಶಿಪ್​ಮೆಂಟ್ ಹಬ್

2024-25ರಲ್ಲಿ ಭಾರತದ ರಫ್ತು ವಿವರ

ಒಟ್ಟು ರಫ್ತು: 824.9 ಬಿಲಿಯನ್ ಡಾಲರ್ (ಶೇ. 6 ಏರಿಕೆ)

  • ಸರಕು ರಫ್ತು: 437.42 ಬಿಲಿಯನ್ ಡಾಲರ್ (ಶೇ. 0.08 ಏರಿಕೆ)
  • ಸೇವಾ ರಫ್ತು: 387.5 ಬಿಲಿಯನ್ ಡಾಲರ್ (ಶೇ. 13.6 ಏರಿಕೆ)

ರಫ್ತು ಹೆಚ್ಚಿದರೂ ವ್ಯಾಪಾರ ಕೊರತೆಯಲ್ಲೂ ಹೆಚ್ಚಳ

ಭಾರತದ ರಫ್ತು ಹೊಸ ದಾಖಲೆ ಬರೆದರೂ 2024-25ರಲ್ಲಿ ದೇಶದ ಟ್ರೇಡ್ ಡೆಫಿಸಿಟ್ ಕೂಡ ಏರಿಕೆ ಆಗಿದೆ. ಹಿಂದಿನ ವರ್ಷದಲ್ಲಿ 241.14ರಷ್ಟಿದ್ದ ಟ್ರೇಡ್ ಡೆಫಿಸಿಟ್ 2024-25ರಲ್ಲಿ 282.82 ಬಿಲಿಯನ್ ಡಾಲರ್​​​ಗೆ ಏರಿದೆ. ಆಮದು ಪ್ರಮಾಣ ಗಣನೀಯವಾಗಿ ಏರಿಕೆ ಆದ ಫಲವಾಗಿ ಟ್ರೇಡ್ ಡೆಫಿಸಿಟ್ ಹೆಚ್ಚಿದೆ.

ಇದನ್ನೂ ಓದಿ: ಜಿಎಸ್​​​ಟಿ ಕಲೆಕ್ಷನ್ ಏಪ್ರಿಲ್​​ನಲ್ಲಿ 2.37 ಲಕ್ಷ ರೂ; ಹೊಸ ದಾಖಲೆ ಬರೆದ ತೆರಿಗೆ ಸಂಗ್ರಹ; ಕರ್ನಾಟಕ ಟಾಪ್-2

ಮ್ಯಾನುಫ್ಯಾಕ್ಚರಿಂಗ್ ಪಿಎಂಐ ಏರಿಕೆ

ಇದೇ ವೇಳೆ, ಸರ್ಕಾರದಿಂದ ಬಿಡುಗಡೆ ಆದ ಮತ್ತೊಂದು ಪ್ರಮುಖ ದತ್ತಾಂಶದ ಪ್ರಕಾರ ಏಪ್ರಿಲ್ ತಿಂಗಳಲ್ಲಿ ಭಾರತದ ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್​ ಬೆಳೆದಿರುವುದು ಕಂಡು ಬಂದಿದೆ. ಎಚ್​​ಎಸ್​​ಬಿಸಿ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪಿಎಂಐ ಇಂಡೆಕ್ಸ್ ಮಾರ್ಚ್​​​ನಲ್ಲಿ 58.1 ಇದ್ದದ್ದು ಏಪ್ರಿಲ್​​​ನಲ್ಲಿ 58.2ಕ್ಕೆ ಏರಿದೆ. ಇದು ಗಣನೀಯ ಏರಿಕೆ ಅಲ್ಲವಾದರೂ ಕಳೆದ 10 ತಿಂಗಳಲ್ಲೇ ಗರಿಷ್ಠ ಪಿಎಂಐ ಮಟ್ಟವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ