Inspiration: ವಯಸ್ಸು 90 ವರ್ಷ… ಕೋಟಿ ಕೋಟಿಯ ಕುಬೇರನಾದರೂ ನಿತ್ಯ ಕಚೇರಿಗೆ ಹೋಗಿ ಕೆಲಸ; ಮೊಮ್ಮಕ್ಕಳಿಗೆ ಅಧಿಕಾರ ಬಿಟ್ಟುಕೊಡುವವರೆಗೂ ಸುಮ್ಮನಿರದು ಈ ಹಿರಿಜೀವ

|

Updated on: Jun 13, 2023 | 12:26 PM

Apollo Hospitals Chief Dr Prathap Reddy: ಚೆನ್ನೈನಲ್ಲಿರುವ ಅಪೋಲೋ ಆಸ್ಪತ್ರೆ ಕಚೇರಿಗೆ 90 ವರ್ಷದ ಡಾ. ಪ್ರತಾಪ್ ರೆಡ್ಡಿ ದಿನವೂ ಹೋಗಿ ಎಲ್ಲಾ ಉದ್ಯೋಗಿಗಳಂತೆ ಕೆಲಸ ಮಾಡುತ್ತಾರೆ. ಬೆಳಗ್ಗೆ 10ರಿಂದ ಸಂಜೆಯ 5ರವರೆಗಾದರೂ ಕಚೇರಿಯಲ್ಲಿ ಇರುತ್ತಾರೆ.

Inspiration: ವಯಸ್ಸು 90 ವರ್ಷ... ಕೋಟಿ ಕೋಟಿಯ ಕುಬೇರನಾದರೂ ನಿತ್ಯ ಕಚೇರಿಗೆ ಹೋಗಿ ಕೆಲಸ; ಮೊಮ್ಮಕ್ಕಳಿಗೆ ಅಧಿಕಾರ ಬಿಟ್ಟುಕೊಡುವವರೆಗೂ ಸುಮ್ಮನಿರದು ಈ ಹಿರಿಜೀವ
ಡಾ. ಪ್ರತಾಪ್ ಸಿ ರೆಡ್ಡಿ ಕುಟುಂಬ
Follow us on

ಇವರ ಹೆಸರು ಡಾ. ಪ್ರತಾಪ್ ಸಿ ರೆಡ್ಡಿ. ಹಲವರಿಗೆ ಈ ಹೆಸರು ಪರಿಚಿತವಿರಬಹುದು. ಭಾರತದ ಉನ್ನತ ಸ್ತರದ ಉದ್ಯಮಿಗಳಲ್ಲಿ ಇವರೂ ಒಬ್ಬರು. ಅಪೋಲೋ (Apollo Hospitals) ಎಂಬ ಬ್ರ್ಯಾಂಡ್ ಅಡಿಯಲ್ಲಿರುವ ವೈದ್ಯಕೀಯ ವ್ಯವಹಾರ ಸಾಮ್ರಾಜ್ಯದ ಅಧಿಪತಿ. ವಯಸ್ಸು 90 ವರ್ಷ. 20,000 ಕೋಟಿ ರೂ ಸಂಪತ್ತಿನ ಒಡೆಯ. ವೈಯಕ್ತಿಕ ಮತ್ತು ವ್ಯಾವಹಾರಿಕ ಬದುಕಿನಲ್ಲಿ ಅಪಾರ ಯಶಸ್ಸು ಕಂಡ ಹಿರಿಯ ಜೀವ. ಎಲ್ಲವೂ ಸುಭಿಕ್ಷ ಇರುವಾಗಲೇ ನೇಪಥ್ಯಕ್ಕೆ ಸರಿಯಬಹುದಾಗಿದ್ದರೂ ಡಾ. ಪ್ರತಾಪ್ ರೆಡ್ಡಿ (Dr. Prathap C Reddy) ಅವರ ಜಾಯಮಾನ ವಿಭಿನ್ನ. ಬಹಳ ಮಂದಿಗೆ ಪ್ರೇರಣೆ ನೀಡಬಲ್ಲುದು ಅವರ ಜೀವನಗಾಥೆ.

ನಮ್ಮಲ್ಲಿ ಅನೇಕರಿಗೆ 40 ವರ್ಷ ವಯಸ್ಸು ದಾಟಿತೆಂದರೆ ನಿವೃತ್ತಿ ಜೀವನಕ್ಕೆ ಕೌಂಟ್ ಡೌನ್ ಇಡುತ್ತೇವೆ. ಮೂರ್ನಾಲ್ಕು ಕೋಟಿ ರೂ ಸಂಪಾದನೆ ಮಾಡಿ 45 ವರ್ಷಕ್ಕೆ ನಿವೃತ್ತಿ ಪಡೆದು ಆರಾಮವಾಗಿ ಇರಬೇಕೆಂದು ಬಯಸುವವರು ಮತ್ತು ಕನಸು ಕಾಣುವವರು ಹಲವರಿದ್ದಾರೆ. ಅದು ಅವರ ಜೀವನದ ಆದ್ಯತೆ. ಆದರೆ, ಡಾ. ಪ್ರತಾಪ್ ಸಿ ರೆಡ್ಡಿ ಅವರು 50ರ ವಯಸ್ಸಿನಲ್ಲಿ ಉದ್ದಿಮೆಗಾರಿಕೆಗೆ ಕೈ ಇಟ್ಟವರು. ತಮ್ಮ ಸಂಸ್ಥೆಯನ್ನು ಉತ್ತುಂಗಕ್ಕೆ ಏರಿಸಿದ ಬಳಿಕವೂ ಇವರು ವಿಶ್ರಾಂತಿ ಬಯಸಿದವರಲ್ಲ.

ಇದನ್ನೂ ಓದಿ: Crorepati Calculation: 10 ವರ್ಷದಲ್ಲಿ 1 ಕೋಟಿ ಹಣ ಗಳಿಸಲು ತಿಂಗಳಿಗೆ ಎಷ್ಟು ಹೂಡಿಕೆ ಮಾಡಬೇಕು? ಇಲ್ಲಿದೆ ಎಸ್​ಐಪಿ ಲೆಕ್ಕಾಚಾರ

ಚೆನ್ನೈನಲ್ಲಿರುವ ಅಪೋಲೋ ಆಸ್ಪತ್ರೆ ಕಚೇರಿಗೆ 90 ವರ್ಷದ ಡಾ. ಪ್ರತಾಪ್ ರೆಡ್ಡಿ ದಿನವೂ ಹೋಗಿ ಎಲ್ಲಾ ಉದ್ಯೋಗಿಗಳಂತೆ ಕೆಲಸ ಮಾಡುತ್ತಾರೆ. ಬೆಳಗ್ಗೆ 10ರಿಂದ ಸಂಜೆಯ 5ರವರೆಗಾದರೂ ಕಚೇರಿಯಲ್ಲಿ ಇರುತ್ತಾರೆ. ವಾರಕ್ಕೆ ಒಂದು ವೀಕಾಫ್ ಬಿಟ್ಟರೆ ಉಳಿದ ದಿನಗಳಲ್ಲಿ ಇವರನ್ನು ಕಚೇರಿಯಲ್ಲಿ ಕಾಣಬಹುದು. 60 ವರ್ಷ ದಾಟಿದರೆ ಅರುಳೋ ಮರುಳೋ ಎನ್ನುತ್ತಾರೆ, ಆದರೆ, 90 ವರ್ಷ ವಯಸ್ಸಿನಲ್ಲಿ ದೊಡ್ಡ ಉದ್ಯಮ ನಿಭಾಯಿಸುತ್ತಾರೆಂದರೆ ನಿಜಕ್ಕೂ ಅಚ್ಚರಿಯೇ ಸರಿ.

ಅಪೋಲೋ ಸಾಮ್ರಾಜ್ಯ ಎಷ್ಟು ದೊಡ್ಡದು ನೋಡಿ

ಅಪೋಲೋ ಹಾಸ್ಪಿಟಲ್ಸ್ ಎಂಟರ್​ಪ್ರೈಸಸ್ ಸಂಸ್ಥೆ ಅಡಿಯಲ್ಲಿ ಅಪೋಲೋ ಆಸ್ಪತ್ರೆ, ಪ್ರಾಥಮಿಕ ಹೆಲ್ತ್ ಕ್ಲಿನಿಕ್, ಡಿಜಿಟಲ್ ಹೆಲ್ತ್ ಪೋರ್ಟಲ್, ಡಯಾಗ್ನಾಸ್ಟಿಕ್ ಸೆಂಟರ್, ಮ್ಯಾಟರ್ನಿಟಿ ಸರ್ವಿಸ್ ಸೇರಿ 21 ಬ್ರ್ಯಾಂಡ್​ಗಳಲ್ಲಿ ವೈದ್ಯಕೀಯ ಸೇವೆಯ ವ್ಯವಹಾರ ಇದೆ. ಇದರಲ್ಲಿ ದೇಶಾದ್ಯಂತ 71 ಆಸ್ಪತ್ರೆಗಳೂ ಒಳಗೊಂಡಿವೆ. 5000 ಔಷಧ ಮಳಿಗೆ, 291 ಪ್ರೈಮರಿ ಕೇರ್ ಕ್ಲಿನಿಕ್ ಇತ್ಯಾದಿಗಳಿವೆ. ಷೇರುಪೇಟೆಯಲ್ಲೂ ಅಪೋಲೋ ಆಸ್ಪತ್ರೆ ಲಿಸ್ಟ್ ಆಗಿದೆ. ಪ್ರತೀ ಷೇರಿನ ಬೆಲೆ ಸದ್ಯ 4,970 ರುಪಾಯಿ ಇದ್ದು, ಅದರ ಒಟ್ಟು ಷೇರುಸಂಪತ್ತು 71,000 ಕೋಟಿ ರೂನಷ್ಟಿದೆ. ಇದರಲ್ಲಿ ರೆಡ್ಡಿ ಕುಟುಂಬದವರ ಷೇರುಪಾಲು ಶೇ. 29.3ರಷ್ಟಿದೆ. ಇದರ ಜೊತೆಗೆ ಅಪೋಲೋ ತನ್ನ ಉದ್ಯಮದಿಂದ ಸಾಕಷ್ಟು ಆದಾಯ ಹೊಂದಿದೆ. ಮಾರ್ಚ್ ತಿಂಗಳಲ್ಲಿ ಅದಕ್ಕೆ ಸಿಕ್ಕ ನಿವ್ವಳ ಆದಾಯ 145 ಕೋಟಿ ರೂ.

ಇದನ್ನೂ ಓದಿSoros Successor: ಅಪ್ಪನನ್ನು ಮೀರಿಸುವ ಮಗ; ಉದಾರ ದಾನಿ ಜಾರ್ಜ್ ಸೋರೋಸ್ ಸಾಮ್ರಾಜ್ಯ ಮಗನ ಕೈಗೆ; ಅಪ್ಪನಿಗಿಂತ ಹೆಚ್ಚು ರಾಜಕೀಯ ಗುರಿಕಾರ ಮಗ

4 ಮಕ್ಕಳು, 10 ಮೊಮ್ಮಕ್ಕಳು; ನೇಪಥ್ಯಕ್ಕೆ ಸರಿಯುವ ಮುನ್ನ ಯಾರಿಗೆ ಚುಕ್ಕಾಣಿ ಕೊಡುವುದು?

ಅಪೋಲೋ ಸಾಮ್ರಾಜ್ಯದ ಅಧಿಪತಿ 90 ವರ್ಷದ ಡಾ. ಪ್ರತಾಪ್ ರೆಡ್ಡಿ ಅವರಿಗೆ ಈಗ ತಮ್ಮ ವಾರಸುದಾರನನ್ನು ಹುಡುಕುವುದು ಮುಖ್ಯವಾದ ಕೆಲಸವಾಗಿದೆ. ಹಾಗಂತ ಇವರ ತುಂಬು ಸಂಸಾರದಲ್ಲಿ ಬಿರುಕುಗಳು ಅಥವಾ ವಿವಾದಗಳು ಇವೆ ಎಂದಲ್ಲ. ಬಹಳ ಸುಂದರ ಕುಟುಂಬ ಇವರದ್ದು. ಪ್ರೀತಾ ರೆಡ್ಡಿ, ಸುನೀತಾ ರೆಡ್ಡಿ, ಶೋಭನಾ ಕಾಮಿನೇನಿ ಮತ್ತು ಸಂಗೀತಾ ರೆಡ್ಡಿ, ಇವರ ನಾಲ್ವರ ಹೆಣ್ಮಕ್ಕಳು. ಇವರೆಲ್ಲರೂ ಸೇರಿ ಅಪೋಲೋ ಆಸ್ಪತ್ರೆ ಸಮೂಹದ ವ್ಯವಹಾರಗಳನ್ನು ನಿಭಾಯಿಸಲು ತಮ್ಮ ತಂದೆಗೆ ಸಹಾಯವಾಗಿದ್ದಾರೆ. ಹಿರಿಯಳಾದ ಪ್ರೀತಾ ರೆಡ್ಡಿ ಈ ಕಂಪನಿಯ ನಿರ್ವಾಹಕ ನಿರ್ದೇಶಕಿ (ಎಂಡಿ) ಆಗಿದ್ದಾರೆ. ಇತರ ಮೂವರು ಮಕ್ಕಳಿಗೂ ಮಹತ್ವದ ಜವಾಬ್ದಾರಿಗಳಿವೆ. ಎಲ್ಲರೂ ಸಮರ್ಥವಾಗಿ ಕೆಲಸ ನಿಭಾಯಿಸುತ್ತಿದ್ದಾರೆ.

ಇನ್ನು, ಮೂರನೇ ತಲೆಮಾರಿನ ವಿಚಾರಕ್ಕೆ ಬಂದರೆ ರೆಡ್ಡಿ ಅವರಿಗೆ 10 ಮೊಮ್ಮಕ್ಕಳಿದ್ದಾರೆ. ಅವರಲ್ಲಿ 9 ಮಂದಿ ಈಗಾಗಲೇ ಅಪೋಲೋ ಆಸ್ಪತ್ರೆಯ ವಿವಿಧ ವ್ಯವಹಾರಗಳಲ್ಲಿ ಮತ್ತು ಸೇವೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. 10 ಮಂದಿಗೂ ಹಿರಿಯ ರೆಡ್ಡಿ ಜವಾಬ್ದಾರಿ ಹಂಚಲಿದ್ದಾರೆ. ಅವರ ಕಾರ್ಯನಿರ್ವಹಣೆ ಆಧಾರದ ಮೇಲೆ ಇಡೀ ಸಂಸ್ಥೆಯ ಚುಕ್ಕಾಣಿ ಯಾರಿಗೆ ಕೊಡುವುದೆಂದು ಪ್ರತಾಪ್ ರೆಡ್ಡಿ ನಿರ್ಧರಿಸಲಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ