Women Business Leaders: ಭಾರತದ ಅತಿ ಯಶಸ್ವಿ ಮಹಿಳಾ ಉದ್ಯಮಿಗಳು ಮತ್ತವರ ಶ್ರೀಮಂತಿಕೆ

|

Updated on: Mar 08, 2023 | 11:32 AM

ಇಂದು ಮಾರ್ಚ್ 8, ಅಂತಾರಾಷ್ಟ್ರೀಯ ಮಹಿಳಾ ದಿನ. ಈ ವಿಶೇಷ ಸಂದರ್ಭದಲ್ಲಿ ಉದ್ಯಮ ಕ್ಷೇತ್ರದಲ್ಲಿ ಮಹಿಳೆಯರು ಎಷ್ಟರಮಟ್ಟಿಗೆ ಯಶಸ್ಸು ಕಂಡಿದ್ದಾರೆ? ಭಾರತದ ಅತ್ಯಂತ ಯಶಸ್ವಿ ಮತ್ತು ಅತಿ ಶ್ರೀಮಂತ ಮಹಿಳಾ ಉದ್ಯಮಿಗಳು ಯಾರು? ಈ ಪ್ರಶ್ನೆಗಳಿಗೆ ಉತ್ತರವಾಗಿ ಈ ವರದಿ:

1 / 12
ಭಾರತದ್ದು ಸಾಂಪ್ರದಾಯಿಕವಾಗಿ ಪುರುಷಪ್ರಧಾನ ಸಮಾಜ. ಇಲ್ಲಿ ಮಹಿಳೆಯರು ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದು ಬಹಳ ಕಡಿಮೆ. ಹೆಚ್ಚೆಂದರೆ ಶಿಕ್ಷಣ ಪಡೆದು ಕೆಲಸಕ್ಕೆ ಹೋಗಿ, ಸಾಧ್ಯವಾದಷ್ಟೂ ವರ್ಷ ವೃತ್ತಿಜೀವನದಲ್ಲಿ ತೊಡಗಿಸಿಕೊಳ್ಳುವುದು ಮಹಿಳೆಯರ ಗುರಿ ಎಂಬಂತಾಗಿದೆ. ಮಲ್ಟಿಟ್ಯಾಸ್ಕಿಂಗ್​ನಲ್ಲಿ ಪುರುಷರಿಗಿಂತ ಮಹಿಳೆಯರೇ ಬೆಟರ್ ಆದರೂ ಕುಟುಂಬನಿರ್ವಹಣೆಯ ಹೆಚ್ಚುವರಿ ಜವಾಬ್ದಾರಿ ಇತ್ಯಾದಿ ಕಾರಣಕ್ಕೆ ಅವರು ಪೂರ್ಣಪ್ರಮಾಣದಲ್ಲಿ ಉದ್ಯಮಿಗಳಾಗಲು ಕಷ್ಟಸಾಧ್ಯವಾಗುತ್ತದೆ. ಇಂಥ ಸವಾಲುಗಳನ್ನು ಮೀರಿ ಹಲವು ಮಹಿಳೆಯರು ಉದ್ಯಮಕ್ಷೇತ್ರದಲ್ಲಿ ಬೆಳೆದಿದ್ದಾರೆ, ವಿವಿಧ ಸಂಸ್ಥೆಗಳ ಲೀಡರ್​ಶಿಪ್ ಸಾಲಿನಲ್ಲಿದ್ದಾರೆ. ಭಾರತದಲ್ಲಿ ಇಂಥ ಕೆಲ ಪ್ರಮುಖ ಮಹಿಳೆಯ ಬಗ್ಗೆ ಒಂದು ಕಿರು ಪರಿಚಯ.

2 / 12
ನೀತಾ ಅಂಬಾನಿ: ಒಟ್ಟು ಆಸ್ತಿ ಮೌಲ್ಯ 6.56 ಲಕ್ಷ ಕೋಟಿ ರುಪಾಯಿ (2020ರ ಮಾಹಿತಿ). ನೀತಾ ಅಂಬಾನಿ ಅವರು ಭಾರತದ ನಂಬರ್ ಒನ್ ಶ್ರೀಮಂತ ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥಾಪಕ ಮುಕೇಶ್ ಅಂಬಾನಿಯ ಪತ್ನಿ. ಮುಂಬೈ ಇಂಡಿಯನ್ಸ್ ಐಪಿಎಲ್ ಟೀಮ್​ನ ಮಾಲಕಿ. ಇವರು ಆರ್​ಐಎಲ್​ನ ಸಮಾಜಸೇವೆ ಅಂಗವಾದ ರಿಲಾಯನ್ಸ್ ಫೌಂಡೇಶನ್​ನ ಸಂಸ್ಥಾಪಕಿಯೂ ಹೌದು. ಫೌಂಡೇಶನ್ ಮೂಲಕ ಹಲವಾರು ರೀತಿಯ ಚಟುವಟಿಕೆಗಳನ್ನು ಅವರು ನಿಭಾಯಿಸುತ್ತಾರೆ.

3 / 12
ರೋಷಿನಿ ನಾದರ್: 40,000 ಕೋಟಿ ರೂ ಆಸ್ತಿ ಒಡತಿ. ಎಚ್​ಸಿಎಲ್ ಕಾರ್ಪೊರೇಶನ್ಸ್ ಕಂಪನಿಯ ಸಿಇಒ ಶಿವ್ ನಾದರ್ ಅವರ ಮಗಳಾದ ರೋಷಿನಿ ನಾದರ್ ಸ್ಟ್ರಾಟಿಜಿಕ್ ಆಂಟ್ರಪ್ರನೂರ್ ಎನಿಸಿದ್ದಾರೆ. ಕಂಪನಿಯ ವ್ಯವಹಾರ ವೃದ್ಧಿಸಲು ಬಹಳ ನಿಖರವಾದ ನಿರ್ಧಾರ ತೆಗೆದುಕೊಳ್ಳುವ ಕ್ಷಮತೆ ಅವರಲ್ಲಿದೆ. ಶಿವ್ ನಾದರ್ ಫೌಂಡೇಶನ್​ನ ಟ್ರಸ್ಟಿಯಾಗಿ ಅವರು ಹಲವಾರು ಶಾಲೆಗಳು ಮತ್ತು ದತ್ತಿ ಸಂಸ್ಥೆಗಳನ್ನು ನಿಭಾಯಿಸುತ್ತಾರೆ.

4 / 12
ಕಿರಣ್ ಮಜುಮ್ದಾರ್ ಶಾ: 39,000 ಕೋಟಿ ರೂ ಆಸ್ತಿಯ ಒಡತಿ. ಅದಕ್ಕಿಂತ ಮೇಲಾಗಿ ಇವರು ಬಯೋಕಾನ್ ಕಂಪನಿಯ ಮುಖ್ಯಸ್ಥೆಯಾಗಿ ಉದ್ಯಮ ವಲಯದಲ್ಲಿ ಸೈ ಎನಿಸಿದ್ದಾರೆ. ಉದ್ದಿಮೆಗಾರಿಕೆ ಬಯಸಿ ಇವರು ಹೋದವರಲ್ಲ, ತಮಗೆ ಸಿಕ್ಕ ಅವಕಾಶ ಬಳಸಿ ಬೆಳೆದು ಈಗ ಭಾರತದ ಅತ್ಯಂತ ಯಶಸ್ವಿ ಮಹಿಳಾ ಉದ್ಯಮಿಗಳಲ್ಲಿ ಅಗ್ರಗಣ್ಯರೆನಿಸಿದ್ದಾರೆ.

5 / 12
ಜಿಯಾ ಮೋಡಿ: ಭಾರತದ ಅಗ್ರಗಣ್ಯ ಕಾರ್ಪೊರೇಟ್ ಲಾಯರ್​ಗಳಲ್ಲಿ ಒಬ್ಬರು. ಏರ್​ಟೆಲ್, ಶ್ನೀಡರ್ ಎಲೆಕ್ಟ್ರಿಕ್ ಮೊದಲಾದ ಟಾಪ್ ಕಂಪನಿಗಳ ಕಾನೂನು ವ್ಯಾಜ್ಯಗಳನ್ನು ಇವರು ನಿರ್ವಹಿಸಿದ ಖ್ಯಾತಿ ಹೊಂದಿದ್ದಾರೆ. ಈಕೆ ವಕೀಲೆ ಮಾತ್ರವಲ್ಲ, ಕಾರ್ಪೊರೇಟ್ ಕಂಪನಿಗಳಿಗೆ ಸಲಹೆ ನೀಡುವ ಒಂದು ಸಂಸ್ಥೆಯ ಮಾಲಕಿಯೂ ಹೌದು. ವಿದೇಶಗಳ ಕೆಲ ಕಂಪನಿಗಳೂ ಈಕೆಯ ಕ್ಲೈಂಟ್​ಗಲಾಗಿವೆ.

6 / 12
ಸುನೀತಾ ರೆಡ್ಡಿ: ಇವರು ಅಪೋಲೋ ಆಸ್ಪತ್ರೆಗಳ ಸಮೂಹಕ್ಕೆ ಎಂಡಿಯಾಗಿದ್ದಾರೆ. ಬಹಳ ಚಿಕ್ಕ ವಯಸ್ಸಿನಲ್ಲಿ ಫಾರ್ಮಾ ಕ್ಷೇತ್ರಕ್ಕೆ ಬಂದ ಅವರು ಇಲ್ಲಿಯ ವ್ಯವಹಾರದ ಆಳ ಅಗಲಗಳನ್ನು ಕರತಲಾಮಲಕ ಮಾಡಿಕೊಂಡಿದ್ದಾರೆ.

7 / 12
ಸ್ಮಿತಾ ವಿ ಕ್ರಿಶ್ನಾ: ಈಕೆ 38,500 ಕೋಟಿ ರೂ ಆಸ್ತಿಯ ಒಡತಿ. ಭಾರತದ ಖ್ಯಾತ ಉದ್ಯಮಕುಟುಂಬಗಳಲ್ಲಿ ಒಂದಾದ ಗೋದ್ರೇಜ್ ಫ್ಯಾಮಿಲಿಯ ಸದಸ್ಯೆ ಈಕೆ. ಗೋದ್ರೇಜ್ ಗ್ರೂಪ್​ನಲ್ಲಿ ಈಕೆಯದ್ದು ಪ್ರಮುಖ ಜವಾಬ್ದಾರಿ ಇದೆ. ಕನ್ಸೂಮರ್ ಗೂಡ್ಸ್ ವ್ಯವಹಾರದ ನಿರ್ವಹಣೆ ಮಾಡುತ್ತಾರೆ.

8 / 12
ಮಂಜು ದೇಶಬಂಧು ಗುಪ್ತ: 27,000 ಕೋಟಿ ರೂ ಆಸ್ತಿ ಈಕೆಯಲ್ಲಿದೆ. ಫಾರ್ಮಾ ಉದ್ಯಮಿ ದೇಶಬಂಧು ಗುಪ್ತಾ ಅವರ ಪತ್ನಿ ಈಕೆ. 40 ವರ್ಷಗಳಿಂದ ಇವರು ಫಾರ್ಮಾ ಕಂಪನಿ ಲುಪಿನ್ ಲಿ ಸಂಸ್ಥೆಯನ್ನು ನಿಭಾಯಿಸುತ್ತಾ ಬಂದಿದ್ದಾರೆ.

9 / 12
ಲೀನಾ ಗಾಂಧಿ ತಿವಾರಿ: ಈಕೆಯ ಆಸ್ತಿ ಮೌಲ್ಯ 17,000 ಕೋಟಿ ರುಪಾಯಿ. ಜೆನೆರಿಕ್ ಔಷಧಗಳನ್ನು ತಯಾರಿಸುವ ಯುಎಸ್​ವಿ ಕಂಪನಿಯ ಮುಖ್ಯಸ್ಥೆ ಈಕೆ. ಹಲವು ದಶಕಗಳಿಂದ ಯುಎಸ್​ವಿಯನ್ನು ನಿಭಾಯಿಸಿ ಒಳ್ಳೆಯ ಸ್ತರಕ್ಕೆ ತೆಗೆದುಕೊಂಡು ಹೋದ ಸಾಧನೆ ಈಕೆಯದ್ದು.

10 / 12
ರಾಧಾ ವೆಂಬು: 14,000 ಕೋಟಿ ರೂ ಆಸ್ತಿಯ ಒಡತಿ. ಕಾರ್ಪಸ್ ಕಾರ್ಪರೇಶನ್ ಕಂಪನಿಯ ನಿರ್ದೇಶಕಿ ಈಕೆ. ಶ್ರೀಧರ್ ವೆಂಬು ಅವರ ಸಾಫ್ಟ್​ವೇರ್ ಕಂಪನಿ ಜೋಹೋ ಕಾರ್ಪೊರೇಶನ್​ನಲ್ಲಿ ಕಾರ್ಪಸ್ ಹೆಚ್ಚಿನ ಪಾಲುದಾರಿಕೆ ಹೊಂದಿದೆ.

11 / 12
ಜಿ. ಅನುರಾಧಾ: 12,000 ಕೋಟಿ ರೂ ಆಸ್ತಿ ಹೊಂದಿದ್ದಾರೆ. ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಕಂಪನಿಯ ಮುಖ್ಯಸ್ಥ ಜಿ.ವಿ. ಪ್ರಸಾದ್ ಅವರ ಪತ್ನಿ ಈಕೆ. ಲ್ಯಾಬೊರೇಟರೀಸ್​ನಲ್ಲಿ ಈಕೆ ಮ್ಯಾನೇಜರ್ ಮತ್ತು ಟ್ರಸ್ಟೀ ಆಗಿದ್ದಾರೆ. ಭಾರತದಲ್ಲಿ ಸಂಪ್ರದಾಯಗಳಿಗೆ ಉತ್ತೇಜನ ನೀಡುವಂತಹ ಸಪ್ತರಿಣಿ ಎಂಬ ಸಂಸ್ಥೆಯನ್ನೂ ಈಕೆ ಸ್ಥಾಪಿಸಿದ್ದಾರೆ.

12 / 12
ಇನ್ನೂ ಹಲವು ಯಶಸ್ವಿ ಮಹಿಳಾ ಉದ್ಯಮಿಗಳಿದ್ದಾರೆ. ಜೆಕೆ ಸಿಮೆಂಟ್ ಕಂಪನಿಯ ಕವಿತಾ ಯದುಪತಿ ಸಿಂಘಾನಿಯಾ, ಥರ್ಮಾಕ್ಸ್ ಕಂಪನಿಯ ಅನು ಆಗಾ, ಹೀರೋ ಫೈನ್​ಕಾರ್ಪ್ ಕಂಪನಿಯ ರೇಣು ಮುಂಜಲ್, ಪಿಡಿಲೈಟ್ ಇಂಡಸ್ಟ್ರೀಸ್ ಕಂಪನಿಯ ಸಂಸ್ಥಾಪಕಿ ಕಲ್ಪನಾ ಅಪೂರ್ವ ಪರೇಖ್, ದಿವಿಸ್ ಲ್ಯಾಬೊರೇಟರೀಸ್​ನ ನಿರ್ದೇಶಕಿ ನಿಲಿಮಾ ಮೋಟಪರ್ತಿ, ಅಲೆಂಬಿಕ್ ಫಾರ್ಮಸ್ಯೂಟಿಕಲ್ಸ್​ಮಲ್ಲಿಕಾ ಚಿರಾಯು ಅಮಿನ್, ನೈಕಾ ಸಿಇಒ ಫಾಲ್ಗುಣಿ ನಾಯ್ಯರ್, ಅರಿಸ್ಟಾ ನೆಟ್ವರ್ಕ್ಸ್​ನ ಸಿಇಒ ಜಯಶ್ರೀ ಉಲ್ಲಾಳ, ಹೀಗೆ ಪಟ್ಟಿ ಉದ್ದವೇ ಇದೆ. ಇವರೆಲ್ಲರೂ ಕನಿಷ್ಠವೆಂದರೂ 10 ಸಾವಿರ ಕೋಟಿ ರೂನಷ್ಟು ಆಸ್ತಿಯ ಒಡತಿಯರು. ಜೊತೆಗೆ ಯಶಸ್ವಿ ಉದ್ಯಮಿಗಳೂ ಹೌದು.