Gold, Silver Rates Today: ಚಿನ್ನದ ತುಸು ಅಗ್ಗ, ಬೆಳ್ಳಿ ಬೆಲೆಯಲ್ಲಿ ಯಥಾಸ್ಥಿತಿ; ಭಾರತ ಮತ್ತು ವಿದೇಶಗಳಲ್ಲಿ ಎಷ್ಟಿದೆ ದರ?
2023, March 8h: ಚಿನ್ನದ ಬೆಲೆ ಭಾರತದಲ್ಲಿ 150-250 ರೂನಷ್ಟು ಇಳಿಕೆ ಕಂಡಿದೆ. ಬೆಳ್ಳಿ ಬೆಲೆ ಯಥಾಸ್ಥಿತಿಯಲ್ಲಿದೆ. ವಿದೇಶಗಳಲ್ಲಿ ಅಮೆರಿಕ ಹೊರತುಪಡಿಸಿ ಬಹುತೇಕ ಪ್ರಮುಖ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಕಡಿಮೆಗೊಂಡಿದೆ.
ಬೆಂಗಳೂರು: ಚಿನ್ನದ ಬೆಲೆ (Gold Prices in India) ಭಾರತದಲ್ಲಿ 10 ಗ್ರಾಮ್ಗೆ 150ರಿಂದ 250 ರುಪಾಯಿಯಷ್ಟು ಇಳಿಕೆಯಾಗಿದೆ. ಈಗ 22 ಕ್ಯಾರಟ್ನ 10 ಗ್ರಾಮ್ ಚಿನ್ನದ ಬೆಲೆ 51,650 ರೂ ಇದೆ. 24 ಕ್ಯಾರಟ್ ಚಿನ್ನದ ಬೆಲೆ 56,350 ರೂ ಇದೆ. ಬೆಂಗಳೂರಿನಲ್ಲಿ ಈ ಸ್ವರ್ಣದ ಬೆಲೆ 200 ರೂನಷ್ಟು ಕಡಿಮೆ ಆಗಿದೆ. ಬೆಂಗಳೂರಿನಲ್ಲೀಗ 22 ಕ್ಯಾರಟ್ ಚಿನ್ನದ ಬೆಲೆ 51,700 ರೂ ಇದೆ. ಬಹುತೇಕ ಇತರ ದಕ್ಷಿಣ ರಾಜ್ಯಗಳಲ್ಲೂ ಇದೇ ಬೆಲೆ ಇದೆ. ಇನ್ನು, ಬೆಳ್ಳಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ. ಬೆಳ್ಳಿ ಬೆಲೆ 10 ಗ್ರಾಮ್ಗೆ 669 ರೂಪಾಯಿ ಇದೆ. ಬೆಂಗಳೂರು ಹಾಗೂ ಕೆಲ ನಗರಗಳಲ್ಲಿ 700 ರೂ ಆಗಿದೆ.
ವಿದೇಶಗಳ ಚಿನಿವಾರಪೇಟೆಗಳಲ್ಲೂ (Bullion Market) ಚಿನ್ನದ ಬೆಲೆ ಕಡಿಮೆ ಆಗಿದೆ. ಅನಿವಾಸಿ ಭಾರತೀಯರು ಹೆಚ್ಚಾಗಿ ನೆಲಸಿರುವ ಅರಬ್ ದೇಶಗಳು, ಅಮೆರಿಕ, ಸಿಂಗಾಪುರ, ಮಲೇಷ್ಯಾ ದೇಶಗಳಲ್ಲಿ ಚಿನ್ನದ ಬೆಲೆ ತುಸು ಕಡಿಮೆಗೊಂಡಿದೆ. ಈ ಎಲ್ಲಾ ದೇಶಗಳಲ್ಲೂ 22 ಕ್ಯಾರಟ್ನ 10 ಗ್ರಾಮ್ ಚಿನ್ನದ ಬೆಲೆ 49 ಸಾವಿರ ರೂಗಿಂತ ಕಡಿಮೆ ಮಟ್ಟದಲ್ಲೇ ಇವೆ. ಆದರೆ, ದಶಕಗಳ ಹಿಂದೆ ಈ ದೇಶಗಳು ಮತ್ತು ಭಾರತದ ಮಧ್ಯೆ ಚಿನ್ನದ ಬೆಲೆಯಲ್ಲಿ ಇದ್ದ ದೊಡ್ಡ ಅಂತರ ಈಗ ಉಳಿದಿಲ್ಲ.
ಗರಿಷ್ಠ ಮಟ್ಟಕ್ಕಿಂತ 3 ಸಾವಿರ ರೂ ಕಡಿಮೆ
ಭಾರತದ ಹೋಲ್ಸೇಲ್ ಮಾರುಕಟ್ಟೆಯಲ್ಲಿ (ಎಂಸಿಎಕ್ಸ್ ಫ್ಯೂಚರ್ಸ್) ಒಂದು ಹಂತದಲ್ಲಿ 10 ಗ್ರಾಮ್ ಚಿನ್ನದ ಬೆಲೆ 58,847 ರುಪಾಯಿಗೆ ಹೋಗಿ ಮುಟ್ಟಿತ್ತು. ಈಗ ಅಲ್ಲಿ 55,762 ರೂ ಬೆಲೆಯಲ್ಲಿ ವಹಿವಾಟು ನಡೆಯುತ್ತಿದೆ. ಆ ಗರಿಷ್ಠ ಮಟ್ಟಕ್ಕಿಂತ ಮೂರು ಸಾವಿರಕ್ಕೂ ಹೆಚ್ಚು ಮೊತ್ತದಷ್ಟು ಬೆಲೆ ಇಳಿದಿದೆ.
ಇದನ್ನೂ ಓದಿ: BIG Gifts: ನಿರುದ್ಯೋಗಿಗಳಿಗೆ ಭತ್ಯೆ; ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಬಳ ಏರಿಕೆ; ಈ ರಾಜ್ಯದವರಿಗೆ ಹೋಳಿ ಗಿಫ್ಟ್
ಭಾರತದಲ್ಲಿರುವ ಬೆಲೆ
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 51,650 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 56,350 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 669 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಬೆಂಗಳೂರು: 51,700 ರೂ
ಚೆನ್ನೈ: 52,350 ರೂ
ಮುಂಬೈ: 51,650 ರೂ
ದೆಹಲಿ: 51,800 ರೂ
ಕೋಲ್ಕತಾ: 51,650 ರೂ
ಕೇರಳ: 51,650 ರೂ
ಅಹ್ಮದಾಬಾದ್: 51,700 ರೂ
ಜೈಪುರ್: 51,800 ರೂ
ಲಕ್ನೋ: 51,800 ರೂ
ಭುವನೇಶ್ವರ್: 51,650 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
ಮಲೇಷ್ಯಾ: 2,650 ರಿಂಗಿಟ್ (48,482 ರುಪಾಯಿ)
ಕತಾರ್: 2,140 ರಿಯಾಲ್ (48,093 ರೂ)
ದುಬೈ: 2070 ಡಿರಾಮ್ (46,117 ರುಪಾಯಿ)
ಅಮೆರಿಕ: 565 ಡಾಲರ್ (46,167 ರುಪಾಯಿ)
ಸಿಂಗಾಪುರ: 773 ಸಿಂಗಾಪುರ್ ಡಾಲರ್ (47,003 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (10 ಗ್ರಾಮ್ಗೆ)
ಬೆಂಗಳೂರು: 700 ರೂ
ಚೆನ್ನೈ: 700 ರೂ
ಮುಂಬೈ: 669 ರೂ
ದೆಹಲಿ: 669 ರೂ
ಕೋಲ್ಕತಾ 669 ರೂ
ಕೇರಳ: 700 ರೂ
ಅಹ್ಮದಾಬಾದ್: 669 ರೂ
ಜೈಪುರ್: 669 ರೂ
ಲಕ್ನೋ: 669 ರೂ
ಭುವನೇಶ್ವರ್: 700 ರೂ