
ನವದೆಹಲಿ, ಮೇ 7: ಪಹಲ್ಗಾಂ ಉಗ್ರದಾಳಿಗೆ (Pahalgam terror attack) ಪ್ರತಿಯಾಗಿ ಭಾರತವು ಪಾಕಿಸ್ತಾನದಲ್ಲಿ ಆಪರೇಷನ್ ಸಿಂಧೂರ (Operation Sindoor) ಮೂಲಕ 9 ಉಗ್ರ ನೆಲೆಗಳನ್ನು ನಾಶ ಮಾಡಿದೆ. ಈ ಘಟನೆ ಪಾಕಿಸ್ತಾನವನ್ನು ಬೆಚ್ಚಿಬೀಳಿಸಿದೆ. ಅಲ್ಲಿರುವ ಹೆಚ್ಚಿನ ಜನಸಾಮಾನ್ಯರಿಗೆ ಮಾಧ್ಯಮಗಳನ್ನು ನೋಡಿ ಘಟನೆ ಬಗ್ಗೆ ಗೊತ್ತಾಗಿದ್ದು. ಇಂಟರ್ನೆಟ್ನಲ್ಲಿ ಈ ದಾಳಿ ಬಗ್ಗೆ ಪಾಕಿಸ್ತಾನೀಯರು ಬಹಳ ಹುಡುಕಾಟ ನಡೆಸಿದ್ದಾರೆ. ಎಂದಿಗಿಂತ ಅಲ್ಲಿ ಇಂಟರ್ನೆಟ್ ಸರ್ಚ್ ಹೆಚ್ಚಾಗಿತ್ತು. ಭಾರತವು ಈ ದಾಳಿಗೆ ಆಪರೇಷನ್ ಸಿಂಧೂರ ಎಂದು ಹೆಸರಿಟ್ಟಿದೆ. ಈ ಆಪರೇಷನ್ ಸಿಂದೂರ್ ಬಗ್ಗೆ ಪಾಕಿಸ್ತಾನೀಯರು ಅತಿಹೆಚ್ಚು ಸರ್ಚ್ ಮಾಡಿದ್ದಾರೆ ಎಂದು ವರದಿಯೊಂದು ಬಂದಿದೆ. ಸಿಂದೂರ ಅಷ್ಟೇ ಅಲ್ಲ, ದಾಳಿ ಬಗ್ಗೆ ವಿವಿಧ ಕ್ವೀರಿಗಳು ಸರ್ಚ್ ಎಂಜಿನ್ನಲ್ಲಿ ದಾಖಲಾಗಿವೆ.
ಆಪರೇಷನ್ ಸಿಂದೂರ್ ಎಂದರೆ ಏನು? ಸಿಂದೂರ್ ಹೆಸರು ಯಾಕೆ? ಎಂಬಿತ್ಯಾದಿ ಪದಗಳನ್ನು ಇಟ್ಟುಕೊಂಡು ಪಾಕಿಸ್ತಾನೀಯರು ಹೆಚ್ಚು ಅಂತರ್ಜಾಲ ಶೋಧಿಸಿದ್ದಾರೆ. ಇದು ಮಾತ್ರವಲ್ಲ, “India launches missile”, “India missile attack”, “India fired missile Pakistan” ಇತ್ಯಾದಿ ಪದಗಳೂ ಕೂಡ ಸರ್ಚ್ನಲ್ಲಿ ಕಂಡು ಬಂದಿವೆ. ಇಂಡಿಯನ್ ನ್ಯೂಸ್ ಚಾನ್ಸ್, ಇಂಡಿಯ ವರ್ಸಸ್ ಪಾಕಿಸ್ತಾನ್ ಇತ್ಯಾದಿ ಪದಗಳೂ ಕೂಡ ಪಾಕಿಸ್ತಾನೀಯರಿಂದ ಸರ್ಚ್ಗೆ ಬಳಕೆ ಆಗಿವೆ.
ಇದನ್ನೂ ಓದಿ: ಭಾರತದ ಆಪರೇಷನ್ ಸಿಂದೂರ; ಪಾಕಿಸ್ತಾನ ಷೇರುಪೇಟೆ ತತ್ತರ; ಕರಾಚಿ ಇಂಡೆಕ್ಸ್ ಸಖತ್ ಕುಸಿತ
ಸಿಂಧೂರ ಎಂಬುದು ಭಾರತದ ಹಿಂದೂ ಮಹಿಳೆಯರು ಹಣೆ ಇಟ್ಟುಕೊಳ್ಳುವ ಕುಂಕುಮ. ಇದು ಮುತ್ತೈದೆ ಸಂಕೇತ. ಅಂದರೆ, ಗಂಡ ಜೀವಂತ ಇರುವವರೆಗೂ ಹಿಂದೂ ಹೆಣ್ಮಕ್ಕಳು ಸಾಂಪ್ರದಾಯಿಕವಾಗಿ ತಮ್ಮ ಹಳೆಗೆ ಸಿಂಧೂರ ಇಟ್ಟುಕೊಳ್ಳುತ್ತಾರೆ.
ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್ನಲ್ಲಿ ಕೆಲ ಉಗ್ರಗಾಮಿಗಳು ಪ್ರವಾಸಿಗರ ಮೇಲೆ ಗುಂಡಿನ ದಾಳಿ ಮಾಡಿ 26 ಮಂದಿಯನ್ನು ಬಲಿಪಡೆದಿದ್ದರು. ಇದರಲ್ಲಿ ಒಬ್ಬ ನೇಪಾಳಿ ಹಾಗೂ ಒಬ್ಬ ಸ್ಥಳೀಯರು ಸೇರಿದ್ದಾರೆ. ಪ್ರವಾಸದ ಖುಷಿಯಲ್ಲಿದ್ದ ಜನರ ಗುಂಪಿಗೆ ನುಗ್ಗಿದ ಉಗ್ರರು, ಮಹಿಳೆಯರ ಕಣ್ಣೆದುರೇ ಅವರ ಪತಿ, ಅಪ್ಪಂದಿರನ್ನು ಕೊಂದಿದ್ದಾರೆ.
ಇದನ್ನೂ ಓದಿ: ಆಪರೇಷನ್ ಸಿಂಧೂರ್: ಷೇರುಮಾರುಕಟ್ಟೆ ಕುಸಿದರೂ ಡಿಫೆನ್ಸ್ ಷೇರುಗಳು ಏರಿಕೆ; ಎಚ್ಎಎಲ್ಗೂ ಬೇಡಿಕೆ
ಉಗ್ರರು ಭಾರತೀಯ ಮಹಿಳೆಯರ ಗಂಡಂದಿರನ್ನು ಕೊಂದು ಅವರ ಹಣೆಯ ಸಿಂಧೂರ ಅಳಿಸಿದ ಘಟನೆಗೆ ಸೂಚಕವಾಗಿ ಆಪರೇಷನ್ ಸಿಂಧೂರ ಎಂದು ಹೆಸರಿಟ್ಟಿರುವ ಸಾಧ್ಯತೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:27 pm, Wed, 7 May 25