AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Spy Satellites: ಶತ್ರುಗಳ ಮೇಲೆ ಕಣ್ಣಿಡಲು 52 ಸ್ಪೈ ಸೆಟಿಲೈಟ್​​ಗಳ ನಿಯೋಜನೆಗೆ ಭಾರತ ನಿರ್ಧಾರ

India to launch 52 spy satellites over 5 years: ಭಾರತ ಮುಂದಿನ 5 ವರ್ಷದಲ್ಲಿ 52 ಸ್ಪೈ ಉಪಗ್ರಹಗಳನ್ನು ಆಗಸಕ್ಕೆ ಕಳುಹಿಸಲು ಯೋಜಿಸಿದೆ. ಖಾಸಗಿ ಸಹಭಾಗಿತ್ವದಲ್ಲಿ ಈ ಕಾರ್ಯ ನಡೆಯಲಿದೆ. ಅಮೆರಿಕ, ಚೀನಾ ಮತ್ತು ರಷ್ಯಾ ನಂತರ ಭಾರತವೇ ಅತಿಹೆಚ್ಚು ಸ್ಪೈ ಸೆಟಿಲೈಟ್ಸ್ ಹೊಂದಿದಂತಾಗುತ್ತದೆ. ಈ 52 ಉಪಗ್ರಹಗಳಲ್ಲಿ ಇಸ್ರೋ ಅರ್ಧದಷ್ಟನ್ನು ತಯಾರಿಸಲಿದೆ. ಉಳಿದವನ್ನು ಖಾಸಗಿ ಕಂಪನಿಗಳು ನಿರ್ಮಿಸಬಹುದು.

Spy Satellites: ಶತ್ರುಗಳ ಮೇಲೆ ಕಣ್ಣಿಡಲು 52 ಸ್ಪೈ ಸೆಟಿಲೈಟ್​​ಗಳ ನಿಯೋಜನೆಗೆ ಭಾರತ ನಿರ್ಧಾರ
ಸೆಟಿಲೈಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 08, 2025 | 10:34 AM

Share

ನವದೆಹಲಿ, ಮೇ 8: ಶತ್ರುಗಳ ಚಲನ ವಲನ ಇತ್ಯಾದಿಯನ್ನು ವೀಕ್ಷಿಸಲು ಭಾರತವು ಮುಂದಿನ 5 ವರ್ಷದಲ್ಲಿ 52 ಉಪಗ್ರಹಗಳ ಜಾಲವನ್ನು (Constellation of spy satellites) ಆಗಸದಲ್ಲಿ ಕೂರಿಸಲಿದೆ. ಇನ್-ಸ್ಪೇಸ್ (IN-SPACe – Indian National Space Promotion and Authorisation Centre) ಛೇರ್ಮನ್ ಪವನ್ ಕುಮಾರ್ ಗೋಯಂಕಾ ಈ ವಿಷಯವನ್ನು ತಿಳಿಸಿದ್ದಾರೆ. ಅವರ ಪ್ರಕಾರ, ಈ 52 ಗುಪ್ತಚರ ಉಪಗ್ರಹಗಳ ತಯಾರಿಕೆಯಲ್ಲಿ ಖಾಸಗಿ ವಲಯವೂ ಭಾಗವಹಿಸಲಿದೆ.

ಇಂಥ ಮಿಲಿಟರಿ ಮತ್ತು ಸ್ಪೈ ಸೆಟಿಲೈಟ್​​​ಗಳನ್ನು ಇಸ್ರೋದಿಂದ ತಯಾರಿಸಲಾಗುತ್ತದೆ. ಆದರೆ, ಈ ಖಾಸಗಿ ಸಂಸ್ಥೆಗಳಿಗೂ ಇದರಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತಿದೆ ಎಂದು ಗೋಯಂಕಾ ಹೇಳಿದ್ದಾರೆ.

ಇದನ್ನೂ ಓದಿ: ಹಾವಿಗೆ ಹಾಲೆರದರೇನು ಫಲ..! ಟರ್ಕಿ ಜೊತೆ ಎಂಥ ಫ್ರೆಂಡ್​​ಶಿಪ್? ಸರ್ಕಾರದ ನೀತಿಯನ್ನು ತರಾಟೆಗೆ ತೆಗೆದುಕೊಂಡ ತಜ್ಞರು

ಇದನ್ನೂ ಓದಿ
Image
ಟರ್ಕಿ ಜೊತೆ ಸ್ನೇಹ ಯಾಕೆ? ಸರ್ಕಾರವನ್ನು ಟೀಕಿಸಿದ ತಜ್ಞರು
Image
80 ಭಾರತೀಯ ವಿಮಾನಗಳಿಂದ ಸ್ಟ್ರೈಕ್; ಟ್ರೋಲ್ ಆದ ಪಾಕ್ ಪ್ರಧಾನಿ
Image
ಪಾಕಿಸ್ತಾನದೊಳಗೆ ಭಾರತದ ಅತಿ ಆಳದ ದಾಳಿ; 1947ರಿಂದ ಆಗಿದ್ದೇನು?
Image
ಆಪರೇಷನ್ ಸಿಂಧೂರ್​​: ಪತರಗುಟ್ಟಿದ ಪಾಕ್​ ​ಸಚಿವ ಯುಟರ್ನ್

52 ಸೆಟಿಲೈಟ್​​ಗಳಲ್ಲಿ 26 ಉಪಗ್ರಹಗಳನ್ನು ಖಾಸಗಿಯವರು ತಯಾರಿಸಿಕೊಡಲಿದ್ದಾರೆ. ಉಳಿದವನ್ನು ಇಸ್ರೋ ತಯಾರಿಸಲಿದೆ. ಶತ್ರುಗಳ ಚಲನ ವಲನದ ಮೇಲೆ ಕಣ್ಣಿಡಲು, ಗಡಿಗಳನ್ನು ಗಮನಿಸಲು ಮತ್ತು ಮಿಲಿಟರಿ ಕಾರ್ಯಾಚರಣೆಗಳನ್ನು ಸಂಘಟಿತವಾಗಿ ನಡೆಸಲು ಭಾರತೀಯ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಗಳಿಗೆ ಈ ಸ್ಪೈ ಸೆಟಿಲೈಟ್​​ಗಳು ಸಹಾಯವಾಗಲಿವೆ. ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ಸ್ಥಿತಿ ಏರ್ಪಟ್ಟಿರುವ ಈ ಸಂದರ್ಭದಲ್ಲಿ ಭಾರತವು ಸ್ಪೈ ಸೆಟಿಲೈಟ್​​​ಗಳ ಯೋಜನೆ ಘೋಷಿಸಿರುವುದು ಕುತೂಹಲ ಮೂಡಿಸಿದೆ.

ಸ್ಪೈ ಸೆಟಿಲೈಟ್ಸ್: ಕೆಲವೇ ರಾಷ್ಟ್ರಗಳ ಗುಂಪಿಗೆ ಸೇರಲಿರುವ ಭಾರತ

ಭಾರತದಲ್ಲಿ ಸದ್ಯ ಸುಮಾರು 9-10 ಸ್ಪೈ ಸೆಟಿಲೈಟ್​​​ಗಳಿರಬಹುದು. ಈಗ 52 ಸೆಟಿಲೈಟ್​​ಗಳು ಸಿದ್ಧವಾದಲ್ಲಿ ಭಾರತ ನಾಲ್ಕನೇ ಸ್ಥಾನಕ್ಕೇರಬಹುದು. ಅಮೆರಿಕದಲ್ಲಿ 247 ಸ್ಪೈ ಸೆಟಿಲೈಟ್​​ಗಳಿವೆ. ಚೀನಾ ಬಳಿ 157, ರಷ್ಯಾ ಬಳಿ 110 ಸ್ಪೈ ಉಪಗ್ರಹಗಳಿವೆ. ಫ್ರಾನ್ಸ್, ಇಸ್ರೇಲ್ ಮತ್ತು ಇಟಲಿ ಬಳಿ 10-20 ಸ್ಪೈ ಸೆಟಿಲೈಟ್​​ಗಳಿವೆ.

ಇದನ್ನೂ ಓದಿ: ಆಪರೇಷನ್ ಸಿಂಧೂರ್​ನಲ್ಲಿ 80 ಭಾರತೀಯ ಯುದ್ಧವಿಮಾನಗಳಿಂದ ದಾಳಿ: ಟ್ರೋಲ್ ಆದ ಪಾಕ್ ಪ್ರಧಾನಿ ಹೇಳಿಕೆ

ಎಸ್​ಎಸ್​​ಎಲ್​​​ವಿ ರಾಕೆಟ್ ನಿರ್ಮಾಣ ಅವಕಾಶ ಈಗ ಖಾಸಗಿಯವರಿಗೂ ಲಭ್ಯ

ಇಸ್ರೋ ಸಂಸ್ಥೆ ಎಸ್​​ಎಸ್​​ಎಲ್​​ವಿ ಮತ್ತು ಜಿಎಸ್​​ಎಲ್​​ವಿ ತಂತ್ರಜ್ಞಾನಗಳ ಆಧಾರಿತವಾಗಿ ರಾಕೆಟ್​​ಗಳನ್ನು ತಯಾರಿಸುತ್ತದೆ. ಇದರಲ್ಲಿ ಎಸ್​​ಎಸ್​​ಎಲ್​​ವಿ ಸರಣಿಯ ರಾಕೆಟ್​​​ಗಳು 500 ಕಿಲೋವರೆಗಿನ ತೂಕದ ಸಣ್ಣ ಸೆಟಿಲೈಟ್​​ಗಳನ್ನು ನಭಕ್ಕೆ ಸೇರಿಸಲು ಬಳಕೆ ಆಗುತ್ತವೆ. ಈ ರಾಕೆಟ್ ತಂತ್ರಜ್ಞಾನವನ್ನು ಖಾಸಗಿಯವರಿಗೂ ನೀಡಲು ಇಸ್ರೋ ಮುಂದಾಗಿದೆ. ಇನ್ಮುಂದೆ, ಭಾರತದ ಖಾಸಗಿ ಸಂಸ್ಥೆಗಳು ಎಸ್​​ಎಸ್​​ಎಲ್​​ವಿ ರಾಕೆಟ್​​​ಗಳನ್ನು ತಯಾರಿಸಲಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಗಿಲ್ಲಿ ಹಾಡಿಗೆ ಧ್ರುವಂತ್ ಅಪಸ್ವರ: ಉಗುರಲ್ಲೇ ಕೊಲ್ಲುವೆ ಎಂದ ಗಿಲ್ಲಿ
ಗಿಲ್ಲಿ ಹಾಡಿಗೆ ಧ್ರುವಂತ್ ಅಪಸ್ವರ: ಉಗುರಲ್ಲೇ ಕೊಲ್ಲುವೆ ಎಂದ ಗಿಲ್ಲಿ
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್