AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pakistanis Search: ಸಿಂದೂರ ಎಂದರೇನು? ತಲೆಕೆಡಿಸಿಕೊಂಡ ಪಾಕಿಸ್ತಾನೀಯರು; ಇವತ್ತು ಇಂಟರ್ನೆಟ್​​​ನಲ್ಲಿ ಪಾಕಿಗಳಿಂದ ಸಖತ್ ಸರ್ಚ್

Operation Sindoor tops the list of words searched by Pakistanis: ಭಾರತವು ಪಾಕಿಸ್ತಾನದಲ್ಲಿರುವ ಉಗ್​ರರನ್ನು ಗುರಿಯಾಗಿಸಿ ಆಪರೇಷನ್ ಸಿಂಧೂರ ಮೂಲಕ ಭರ್ಜರಿ ಕಾರ್ಯಾಚರಣೆ ನಡೆಸಿದೆ. ಇವತ್ತು ಬೆಳಗ್ಗೆ ಪಾಕಿಸ್ತಾನದಲ್ಲಿ ಇಂಟರ್ನೆಟ್ ಸರ್ಚ್ ಸಾಕಷ್ಟು ಹೆಚ್ಚಿತ್ತು. ಅಲ್ಲಿಯ ಜನರು ಇಂಟರ್ನೆಟ್​​​ನಲ್ಲಿ ಭಾರತದ ದಾಳಿ ಕುರಿತು ಅತಿಹೆಚ್ಚು ಶೋಧ ಮಾಡಿದ್ದಾರೆ.

Pakistanis Search: ಸಿಂದೂರ ಎಂದರೇನು? ತಲೆಕೆಡಿಸಿಕೊಂಡ ಪಾಕಿಸ್ತಾನೀಯರು; ಇವತ್ತು ಇಂಟರ್ನೆಟ್​​​ನಲ್ಲಿ ಪಾಕಿಗಳಿಂದ ಸಖತ್ ಸರ್ಚ್
ಆಪರೇಷನ್ ಸಿಂಧೂರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:May 07, 2025 | 4:30 PM

Share

ನವದೆಹಲಿ, ಮೇ 7: ಪಹಲ್ಗಾಂ ಉಗ್ರದಾಳಿಗೆ (Pahalgam terror attack) ಪ್ರತಿಯಾಗಿ ಭಾರತವು ಪಾಕಿಸ್ತಾನದಲ್ಲಿ ಆಪರೇಷನ್ ಸಿಂಧೂರ (Operation Sindoor) ಮೂಲಕ 9 ಉಗ್ರ ನೆಲೆಗಳನ್ನು ನಾಶ ಮಾಡಿದೆ. ಈ ಘಟನೆ ಪಾಕಿಸ್ತಾನವನ್ನು ಬೆಚ್ಚಿಬೀಳಿಸಿದೆ. ಅಲ್ಲಿರುವ ಹೆಚ್ಚಿನ ಜನಸಾಮಾನ್ಯರಿಗೆ ಮಾಧ್ಯಮಗಳನ್ನು ನೋಡಿ ಘಟನೆ ಬಗ್ಗೆ ಗೊತ್ತಾಗಿದ್ದು. ಇಂಟರ್ನೆಟ್​​​​ನಲ್ಲಿ ಈ ದಾಳಿ ಬಗ್ಗೆ ಪಾಕಿಸ್ತಾನೀಯರು ಬಹಳ ಹುಡುಕಾಟ ನಡೆಸಿದ್ದಾರೆ. ಎಂದಿಗಿಂತ ಅಲ್ಲಿ ಇಂಟರ್ನೆಟ್ ಸರ್ಚ್ ಹೆಚ್ಚಾಗಿತ್ತು. ಭಾರತವು ಈ ದಾಳಿಗೆ ಆಪರೇಷನ್ ಸಿಂಧೂರ ಎಂದು ಹೆಸರಿಟ್ಟಿದೆ. ಈ ಆಪರೇಷನ್ ಸಿಂದೂರ್ ಬಗ್ಗೆ ಪಾಕಿಸ್ತಾನೀಯರು ಅತಿಹೆಚ್ಚು ಸರ್ಚ್ ಮಾಡಿದ್ದಾರೆ ಎಂದು ವರದಿಯೊಂದು ಬಂದಿದೆ. ಸಿಂದೂರ ಅಷ್ಟೇ ಅಲ್ಲ, ದಾಳಿ ಬಗ್ಗೆ ವಿವಿಧ ಕ್ವೀರಿಗಳು ಸರ್ಚ್ ಎಂಜಿನ್​​​ನಲ್ಲಿ ದಾಖಲಾಗಿವೆ.

ಆಪರೇಷನ್ ಸಿಂದೂರ್ ಎಂದರೆ ಏನು? ಸಿಂದೂರ್ ಹೆಸರು ಯಾಕೆ? ಎಂಬಿತ್ಯಾದಿ ಪದಗಳನ್ನು ಇಟ್ಟುಕೊಂಡು ಪಾಕಿಸ್ತಾನೀಯರು ಹೆಚ್ಚು ಅಂತರ್ಜಾಲ ಶೋಧಿಸಿದ್ದಾರೆ. ಇದು ಮಾತ್ರವಲ್ಲ, “India launches missile”, “India missile attack”, “India fired missile Pakistan” ಇತ್ಯಾದಿ ಪದಗಳೂ ಕೂಡ ಸರ್ಚ್​​​ನಲ್ಲಿ ಕಂಡು ಬಂದಿವೆ. ಇಂಡಿಯನ್ ನ್ಯೂಸ್ ಚಾನ್ಸ್, ಇಂಡಿಯ ವರ್ಸಸ್ ಪಾಕಿಸ್ತಾನ್ ಇತ್ಯಾದಿ ಪದಗಳೂ ಕೂಡ ಪಾಕಿಸ್ತಾನೀಯರಿಂದ ಸರ್ಚ್​​​ಗೆ ಬಳಕೆ ಆಗಿವೆ.

ಇದನ್ನೂ ಓದಿ: ಭಾರತದ ಆಪರೇಷನ್ ಸಿಂದೂರ; ಪಾಕಿಸ್ತಾನ ಷೇರುಪೇಟೆ ತತ್ತರ; ಕರಾಚಿ ಇಂಡೆಕ್ಸ್ ಸಖತ್ ಕುಸಿತ

ಇದನ್ನೂ ಓದಿ
Image
ಆಪರೇಷನ್ ಸಿಂದೂರ; ಪಾಕ್ ಷೇರುಪೇಟೆ ತತ್ತರ
Image
ಆಪರೇಷನ್ ಸಿಂಧೂರ್​​ಗೆ ಷೇರುಮಾರುಕಟ್ಟೆಯಿಂದ ಮಿಶ್ರಪ್ರತಿಕ್ರಿಯೆ
Image
ಪಾಕಿಸ್ತಾನದ ಈ 9 ಸ್ಥಳಗಳ ಮೇಲೆ ಭಾರತದಿಂದ ದಾಳಿ, ಮನೆ ಬಿಟ್ಟು ಓಡಿದ ಜನರು
Image
ಆಪರೇಷನ್ ಸಿಂಧೂರ್ ಎಂದರೇನು? ಈ ದಾಳಿಗೆ ಭಾರತ ಇದೇ ಹೆಸರಿಟ್ಟಿದ್ದೇಕೆ?

ಭಾರತವು ಆಪರೇಷನ್ ಸಿಂದೂರ ಎಂದು ಹೆಸರಿಟ್ಟಿದ್ದು ಯಾಕೆ?

ಸಿಂಧೂರ ಎಂಬುದು ಭಾರತದ ಹಿಂದೂ ಮಹಿಳೆಯರು ಹಣೆ ಇಟ್ಟುಕೊಳ್ಳುವ ಕುಂಕುಮ. ಇದು ಮುತ್ತೈದೆ ಸಂಕೇತ. ಅಂದರೆ, ಗಂಡ ಜೀವಂತ ಇರುವವರೆಗೂ ಹಿಂದೂ ಹೆಣ್ಮಕ್ಕಳು ಸಾಂಪ್ರದಾಯಿಕವಾಗಿ ತಮ್ಮ ಹಳೆಗೆ ಸಿಂಧೂರ ಇಟ್ಟುಕೊಳ್ಳುತ್ತಾರೆ.

ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್​​​ನಲ್ಲಿ ಕೆಲ ಉಗ್ರಗಾಮಿಗಳು ಪ್ರವಾಸಿಗರ ಮೇಲೆ ಗುಂಡಿನ ದಾಳಿ ಮಾಡಿ 26 ಮಂದಿಯನ್ನು ಬಲಿಪಡೆದಿದ್ದರು. ಇದರಲ್ಲಿ ಒಬ್ಬ ನೇಪಾಳಿ ಹಾಗೂ ಒಬ್ಬ ಸ್ಥಳೀಯರು ಸೇರಿದ್ದಾರೆ. ಪ್ರವಾಸದ ಖುಷಿಯಲ್ಲಿದ್ದ ಜನರ ಗುಂಪಿಗೆ ನುಗ್ಗಿದ ಉಗ್ರರು, ಮಹಿಳೆಯರ ಕಣ್ಣೆದುರೇ ಅವರ ಪತಿ, ಅಪ್ಪಂದಿರನ್ನು ಕೊಂದಿದ್ದಾರೆ.

ಇದನ್ನೂ ಓದಿ: ಆಪರೇಷನ್ ಸಿಂಧೂರ್: ಷೇರುಮಾರುಕಟ್ಟೆ ಕುಸಿದರೂ ಡಿಫೆನ್ಸ್ ಷೇರುಗಳು ಏರಿಕೆ; ಎಚ್​​ಎಎಲ್​​ಗೂ ಬೇಡಿಕೆ

ಉಗ್ರರು ಭಾರತೀಯ ಮಹಿಳೆಯರ ಗಂಡಂದಿರನ್ನು ಕೊಂದು ಅವರ ಹಣೆಯ ಸಿಂಧೂರ ಅಳಿಸಿದ ಘಟನೆಗೆ ಸೂಚಕವಾಗಿ ಆಪರೇಷನ್ ಸಿಂಧೂರ ಎಂದು ಹೆಸರಿಟ್ಟಿರುವ ಸಾಧ್ಯತೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:27 pm, Wed, 7 May 25

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ
Live Video: ಸಿಎಂ ಡಿಕೆ ಶಿವಕುಮಾರ್ ಮಹತ್ವದ ಸುದ್ದಿಗೋಷ್ಠಿ
Live Video: ಸಿಎಂ ಡಿಕೆ ಶಿವಕುಮಾರ್ ಮಹತ್ವದ ಸುದ್ದಿಗೋಷ್ಠಿ
‘ಇಷ್ಟು ಗಲೀಜು ಆಟ ಆಡಬೇಡಿ’; ಕಾವ್ಯಾಗೆ ನೇರವಾಗಿ ಹೇಳಿದ ಗಾನವಿ
‘ಇಷ್ಟು ಗಲೀಜು ಆಟ ಆಡಬೇಡಿ’; ಕಾವ್ಯಾಗೆ ನೇರವಾಗಿ ಹೇಳಿದ ಗಾನವಿ