AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Historic strike: ಪಾಕಿಸ್ತಾನದೊಳಗೆ ಅತಿದೂರ ಹೋಗಿ ಹೊಡೆತ ಕೊಟ್ಟಿದ್ದು ಇದೇ ಮೊದಲು; ಹಿಂದೆಲ್ಲಾ ಭಾರತ ಒಳನುಗ್ಗಿದ್ದು ಎಷ್ಟು ದೂರ?

Operation Sindoor, India's deepest ever strike inside Pakistani territory: ಪಹಲ್ಗಾಮ್ ಉಗ್ರ ದಾಳಿಗೆ ಪ್ರತಿಯಾಗಿ ಭಾರತದ ಮಿಲಿಟರಿ ಪಡೆಗಳು ಆಪರೇಷನ್ ಸಿಂಧೂರ ಮಾಡಿ ಪಾಕಿಸ್ತಾನದ ಉಗ್ರರಿಗೆ ಘಾಸಿ ಮಾಡಿದೆ. ಬಹವಾಲಪುರ್ ಸೇರಿದಂತೆ ಪಾಕಿಸ್ತಾನದ ಪಂಜಾಬ್ ಮತ್ತು ಪಿಒಕೆಯಲ್ಲಿರುವ 9 ಸ್ಥಳಗಳಲ್ಲಿನ ಉಗ್ರರ ಕ್ಯಾಂಪ್ ಧ್ವಂಸಗೊಂಡಿವೆ. ಬಹವಾಲ್​​ಪುರ್ 250 ಕಿಮೀ ಒಳಗಿದ್ದು, ಇಷ್ಟು ದೂರ ಹೋಗಿ ಭಾರತ ಸ್ಟ್ರೈಕ್ ಮಾಡಿದ್ದು ಇದೇ ಮೊದಲು.

Historic strike: ಪಾಕಿಸ್ತಾನದೊಳಗೆ ಅತಿದೂರ ಹೋಗಿ ಹೊಡೆತ ಕೊಟ್ಟಿದ್ದು ಇದೇ ಮೊದಲು; ಹಿಂದೆಲ್ಲಾ ಭಾರತ ಒಳನುಗ್ಗಿದ್ದು ಎಷ್ಟು ದೂರ?
ಬಹವಲಪುರ್​​ನಲ್ಲಿರುವ ಜೈಷೆ ಕಟ್ಟಡ ಧ್ವಂಸವಾಗಿರುವ ಚಿತ್ರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:May 07, 2025 | 5:42 PM

Share

ನವದೆಹಲಿ, ಮೇ 7: ಪಹಲ್ಗಾಂ ಉಗ್ರ ದಾಳಿಗೆ ಪ್ರತಿಯಾಗಿ ಭಾರತವು ಪಾಕಿಸ್ತಾನದೊಳಗೆ ನುಗ್ಗಿ 9 ಸ್ಥಳಗಳ ಮೇಲೆ ದಾಳಿ ಮಾಡಿದೆ. 70ಕ್ಕೂ ಹೆಚ್ಚು ಉಗ್ರಗಾಮಿಗಳು ಸತ್ತಿರುವ ಅಂದಾಜು ಇದೆ. ಇದು ಈವರೆಗೆ ಭಾರತ ಮಾಡಿರದ ಅತಿ ತೀಕ್ಷ್ಣ ದಾಳಿ (Operation Sindoor) ಎನಿಸಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯ ಹಾಗೂ ಆಕ್ರಮಿತ ಕಾಶ್ಮೀರ ಭಾಗದಲ್ಲಿ (PoK- Pakistan occupied Kashmir) ಈ 9 ಸ್ಥಳಗಳಿವೆ. ಜೈಷೆ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯ ಕಚೇರಿ ಅಥವಾ ತರಬೇತಿ ಕ್ಯಾಂಪ್ ಇರುವುದು ಬಹವಾಲಪುರ್​​​ನಲ್ಲಿ. ಇಲ್ಲಿ ಭಾರತ ನುಗ್ಗಿ ಹೊಡೆದಿದೆ. ಹಫೀಜ್ ಸಯ್ಯದ್ ಕುಟುಂಬದ 10 ಸದಸ್ಯರು ಸೇರಿ ಹಲವರು ಇಲ್ಲಿ ಸತ್ತಿರುವ ಶಂಕೆ ಇದೆ.

ಬಹವಾಲ್​​ಪುರ್​​​ನಲ್ಲಿರುವ ಜೈಷೆ ಶಿಬಿರವು ಅಂತಾರಾಷ್ಟ್ರೀಯ ಗಡಿಯಿಂದ 250-300 ಕಿಮೀ ದೂರದಲ್ಲಿದೆ ಎಂದು ಹೇಳಲಾಗುತ್ತಿದೆ. ಕೆಲ ಮಾಧ್ಯಮಗಳಲ್ಲಿ ಇದು 100 ಕಿಮೀ ಎಂದಿದೆ. 100 ಕಿಮೀ ಆಗಲೀ ಅಥವಾ 250 ಕಿಮೀ ಆಗಲಿ, ಭಾರತವು ಪಾಕಿಸ್ತಾನದೊಳಗೆ ಇಷ್ಟು ಒಳನುಗ್ಗಿ ಹೊಡೆತ ನೀಡಿದ್ದು ಇದೇ ಮೊದಲು. 1947ರಿಂದ ಪಾಕಿಸ್ತಾನದೊಂದಿಗೆ ನಡೆದ ನಾಲ್ಕು ಯುದ್ಧಗಳಲ್ಲಾಗಲೀ, ಅಥವಾ ಸರ್ಜಿಕಲ್ ಸ್ಟ್ರೈಕ್, ಏರ್​​ಸ್ಟ್ರೈಕ್​​​ನಂತಹ ಕಾರ್ಯಾಚರಣೆಗಳಲ್ಲಾಗಲೀ ಭಾರತವು ಪಾಕಿಸ್ತಾನದ ಮುಖ್ಯ ಭಾಗಕ್ಕೆ ಇಷ್ಟು ದೂರ ಹೋಗಿದ್ದಿಲ್ಲ. ಹೀಗಾಗಿ, ಆಪರೇಷನ್ ಸಿಂದೂರ ಎಲ್ಲಾ ದೃಷ್ಟಿಯಿಂದಲೂ ಐತಿಹಾಸಿಕ ಎನಿಸಿದೆ.

ಇದನ್ನೂ ಓದಿ: ಅಭಿ ಪಿಕ್ಚರ್ ಬಾಕಿ ಹೈ ಎಂದ ಮನೋಜ್ ನರವನೆ; ದೊಡ್ಡ ಪ್ರಹಾರದ ಮುನ್ಸೂಚನೆ ಕೊಟ್ಟರಾ ಮಾಜಿ ಸೇನಾ ಮುಖ್ಯಸ್ಥ?

ಇದನ್ನೂ ಓದಿ
Image
ಭಾರತದ ದಾಳಿ ಬಗ್ಗೆ ಮಹಿಳಾ ಅಧಿಕಾರಿಗಳಿಂದಲೇ ಸುದ್ದಿಗೋಷ್ಠಿ ನಡೆಸಿದ್ದೇಕೆ?
Image
ಮೋದಿಗೆ ಹೋಗಿ ಹೇಳು ಎಂದಿದ್ದವರಿಗೆ ದಿಟ್ಟ ಉತ್ತರ: #Itoldmodi ವೈರಲ್‌!
Image
ಆಪರೇಷನ್ ಸಿಂಧೂರ್​​: ಪತರಗುಟ್ಟಿದ ಪಾಕ್​ ​ಸಚಿವ ಯುಟರ್ನ್
Image
ಅಮೃತಸರ ವಿಮಾನ ನಿಲ್ದಾಣ, ಕರ್ತಾರ್‌ಪುರ ಕಾರಿಡಾರ್ ಬಂದ್

2025ರ ಆಪರೇಷನ್ ಸಿಂಧೂರ್​​​ನಲ್ಲಿ ಪಾಕಿಸ್ತಾನದೊಳಗೆ ಭಾರತ ಹೋಗಿದ್ದೆಷ್ಟು ದೂರ?

  1. ಬಹವಲಪುರ್, ಪಂಜಾಬ್: 250-300 ಕಿಮೀ
  2. ಮುರಿಡ್ಕೆ, ಪಂಜಾಬ್: 40-50 ಕಿಮೀ
  3. ಸಿಯಾಲ್​ಕೋಟ್, ಪಂಜಾಬ್: 10-20 ಕಿಮೀ
  4. ಚಾಕ್ ಅಮ್ರು, ಪಂಜಾಬ್: 5-10 ಕಿಮೀ
  5. ಮುಜಾಫರಾಬಾದ್, ಪಿಒಕೆ: 40-60 ಕಿಮೀ
  6. ಬಾಘ್, ಪಿಒಕೆ: 40-60 ಕಿಮೀ
  7. ಭಿಂಬರ್, ಪಿಒಕೆ: 50-70 ಕಿಮೀ
  8. ಗುಲ್​​ಪುರ್, ಪಿಒಕೆ: 10-20 ಕಿಮೀ
  9. ಕೋಟ್ಲಿ, ಪಿಒಕೆ: 20-30 ಕಿಮೀ

1947ರ ನಂತರದ ಇತರ ಯುದ್ಧಗಳಲ್ಲಿ ಭಾರತ ಎಷ್ಟು ಆಳಕ್ಕೆ ಹೋಗಿತ್ತು..?

  1. 1947-48ರ ಯುದ್ಧ: ಆಗ ಭಾರತ ಮತ್ತು ಪಾಕಿಸ್ತಾನದ ಯುದ್ಧದ ಸ್ಥಳವು ಜಮ್ಮು ಮತ್ತು ಕಾಶ್ಮೀರಕ್ಕೆ ಸೀಮಿತವಾಗಿತ್ತು. ಪಾಕಿಸ್ತಾನದೊಳಗೆ ಹೋಗಿರಲಿಲ್ಲ.
  2. 1965ರ ಯುದ್ಧ: ಪಂಜಾಬ್ ಪ್ರಾಂತ್ಯದ ಲಾಹೋರ್ ನಗರಕ್ಕೆ ಸಮೀಪದವರೆಗೂ ಹೋಗಲಾಗಿತ್ತು. ದೂರ ಸುಮಾರು 20-25 ಕಿಮೀ.
  3. 1971ರ ಯುದ್ಧ: ಸಿಂಧ್ ಪ್ರಾಂತ್ಯದ 40-50 ಕಿಮೀವರೆಗೂ ಭಾರತೀಯ ಸೇನೆ ನುಗ್ಗಿ ಪಟ್ಟಣಗಳನ್ನು ವಶಪಡಿಸಿಕೊಂಡಿತ್ತು.
  4. 1999ರ ಕಾರ್ಗಿಲ್ ಯುದ್ಧ: ಈ ಯುದ್ಧದ ರಂಗವೂ ಕೂಡ ಕಾಶ್ಮೀರದ ಕಾರ್ಗಿಲ್ ಪ್ರದೇಶಕ್ಕೆ ಸೀಮಿತವಾಗಿತ್ತು.

ಇದನ್ನೂ ಓದಿ: ಆಪರೇಷನ್ ಸಿಂಧೂರ್: ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡಿದ ಕರ್ನಲ್ ಸೋಫಿಯಾ ಖುರೇಷಿ ಯಾರು? ಇಲ್ಲಿದೆ ಮಾಹಿತಿ

  • 2016ರ ಸರ್ಜಿಕಲ್ ಸ್ಟ್ರೈಕ್: 2016ರಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್​​​ನಲ್ಲಿ ಭಾರತವು ಪಾಕ್ ಆಕ್ರಮಿತ ಕಾಶ್ಮೀರ ಭಾಗದ ಒಂದು ಟೆರರ್ ಕ್ಯಾಂಪ್ ಮೇಲೆ ದಾಳಿ ಮಾಡಲಾಗಿತ್ತು.
  • 2019ರ ಬಾಲಾಕೋಟ್ ಸ್ಟ್ರೈಕ್: 2019ರಲ್ಲಿ ಭಾರತದ ವಾಯುಪಡೆಯಿಂದ ಜೈಷೆ ಮೊಹಮ್ಮದ್ ಉಗ್ರರ ಶಿಬಿರದ ಮೇಲೆ ದಾಳಿ ಮಾಡಲಾದ ಸ್ಥಳವು ಬಾಲಾಕೋಟ್. ಅದು ಪಾಕಿಸ್ತಾನದ ಖೈಬರ್ ಪಖ್ತುಂಕ್ವ ಪ್ರಾಂತಲ್ಲಿದೆ. ಎಲ್​​ಒಸಿಯಿಂದ 40-50 ಕಿಮೀ ಒಳಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:38 pm, Wed, 7 May 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ