AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2024-25ನೇ ಸಾಲಿನ 4ನೇ ತ್ರೈಮಾಸಿಕ ಪೇಟಿಎಂ ಆದಾಯದಲ್ಲಿ ಭರ್ಜರಿ ಏರಿಕೆ..!

ಯುಪಿಐನಿಂದ ಆರಂಭವಾಗಿ ಈಗ ದೊಡ್ಡ ಇ-ಕಾಮರ್ಸ್ ಮತ್ತು ಯುಟಿಲಿಟಿ ಸೇವೆಗಳವರೆಗೆ ಬಿಸಿನೆಸ್ ವಿಸ್ತರಿಸಿರುವ ಪೇಟಿಎಂ 2024-25ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿಉತ್ತಮ ಸಾಧನೆ ತೋರಿರುವುದು ಕಂಡು ಬಂದಿದೆ. ತೆರಿಗೆ ಪಾವತಿ ನಂತರವೂ ಇಎಸ್​ಒಪಿಗಿಂತ ( ESOP) ಇಬಿಐಟಿಡಿಎ ( EBITDA) ಲಾಭದಾಯವಾಗಿದೆ ಎಂದು ಘೋಷಣೆ ಮಾಡಿದೆ. ಈ ಸಂಬಂಧ ಪೇಟಿಎಂ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

2024-25ನೇ ಸಾಲಿನ 4ನೇ ತ್ರೈಮಾಸಿಕ ಪೇಟಿಎಂ ಆದಾಯದಲ್ಲಿ ಭರ್ಜರಿ ಏರಿಕೆ..!
Paytm
ರಮೇಶ್ ಬಿ. ಜವಳಗೇರಾ
|

Updated on:May 06, 2025 | 10:08 PM

Share

2024-25ನೇ ಸಾಲಿನ ನಾಲ್ಕನೇ ತ್ರೈಮಾಸಿಕದ ಆದಾಯದ ವರದಿಯನ್ನು ಪೇಟಿಎಂ ಪ್ರಕಟ ಮಾಡಿದ್ದು, ನಾಲ್ಕನೇ ತ್ರೈಮಾಸಿಕದಲ್ಲಿ 81 ಕೋಟಿ ರೂ. ಲಾಭವಾಗಿದೆ ಎಂದು ಪ್ರಕಟಣೆ ಮೂಲಕ ಘೋಷಿಸಿಕೊಂಡಿದೆ. ತೆರಿಗೆ ಪಾವತಿ ನಂತರವೂ (PAT) 23 ಕೋಟಿ ರೂ. ಲಭಾವಾಗಿದೆ ಎಂದು ಪೇಟಿಎಂ ತಿಳಿಸಿದೆ. ಯುಪಿಐ ಸಹಾಯಧನವಾಗಿ 70 ಕೋಟಿ ರೂ.  ಸ್ವೀಕರಿಸಿದ್ದು,  ಒಟ್ಟು 12,809 ಕೋಟಿ ರೂ. ರೋಬಸ್ಟ್​ ಕ್ಯಾಶ್ ಬ್ಯಾಲೆನ್ಸ್ ಇದೆ ಎಂದು ತಿಳಿಸಿದೆ.  ಈ  ಮೂಲಕ ಇಎಸ್​ಒಪಿಗಿಂತ ( ESOP) ಇಬಿಐಟಿಡಿಎ ( EBITDA) ಲಾಭದಾಯವಾಗಿದೆ ಎಂದು ಘೋಷಣೆ ಮಾಡಿದೆ.

2025ರ  ಜನವರಿಯಿಂದ  ಮಾರ್ಚ್​ ವರೆಗಿನ ನಾಲ್ಕನೇ ತ್ರೈಮಾಸಿಕದಲ್ಲಿ  ಇಎಸ್​ಒಪಿಗಿಂತ ಇಬಿಐಟಿಡಿಎ  81 ಕೋಟಿ ರೂ. ಲಾಭದಾಯಕವಾಗಿದೆ. ಇದರಲ್ಲಿ ಯುಪಿಐ ಪ್ರೋತ್ಸಾಹ ಧನವು ಸಹ ಸೇರಿದ್ದು, ಇದರೊಂದಿಗೆ ಇಂದಿನ ತ್ರೈಮಾಕಗಿಂತ  51 ಕೋಟಿ ರೂ. ಹೆಚ್ಚಳವಾಗಿದೆ. ಈ ಮೂಲಕ ಅದು ಒಟ್ಟು 11 ಕೋಟಿ ರೂ.ಗೆ ತಲುಪಿದೆ.

ಈ ಅಸಾಧಾರಣ ವೆಚ್ಚಗಳನ್ನು ಕಡಿಮೆ ಮಾಡಿ ತೆರಿಗೆ ಪಾವತಿ ನಂತರದ ಲಾಭ (PAT) 23 ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ. ಯುಪಿಐ ಪ್ರೋತ್ಸಾಹಧನ ಹಾಗೂ ಶುಲ್ಕಗಳನ್ನು ಹೊರತುಪಡಿಸಿ, ತೆರಿಗೆ ಪಾವತಿಯಲ್ಲಿ 115 ಕೋಟಿ ರೂ.ಗಳಿಂದ 93 ಕೋಟಿ ರೂ.ಗಳಿಗೆ ತಲುಪಿದೆ. ಇನ್ನು. ಫಿನ್‌ಟೆಕ್ 12,809 ಕೋಟಿ ರೂ. ನಗದು ಬಾಕಿಯನ್ನು ಘೋಷಿಸಿಕೊಂಡಿದೆ.

2025 ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಪೇಟಿಎಂ ತನ್ನ ಆದಾಯದಲ್ಲಿ ಶೇ. 5 ರಷ್ಟು ಬೆಳವಣಿಗೆ ದಾಖಲಿಸಿದ್ದು,, 1,911 ಕೋಟಿ ರೂ.ಗೆ ತಲುಪಿದ್ದು, ಇದರ ಲಾಭ .1,071 ಕೋಟಿರೂ.ಗೆ ಏರಿಕೆಯಾಗಿದೆ. ಈ ಮೂಲಕ 12 ತ್ರೈಮಾಸಿಕದಲ್ಲಿ ಶೇ. 545 ರಷ್ಟು ಏರಿಕೆಯಾಗಿದೆ. ಹಣಕಾಸು ಸೇವೆಗಳಿಂದ ಕಂಪನಿಯ ಆದಾಯವು ಅನುಕ್ರಮವಾಗಿ ಶೆ.9ರಷ್ಟು ಏರಿಕೆಯಾಗಿದ್ದು, 545 ಕೋಟಿ ರೂ.ಗೆ ತಲುಪಿದೆ. ಆದರೆ ವ್ಯಾಪಾರಿ ಸಾಲ ವಿತರಣೆ 4,315 ಕೋಟಿ ರೂ.ಗಳಷ್ಟಿದೆ.

ಕಂಪನಿಯ ನಿವ್ವಳ ಪಾವತಿ ರೂ. 578 ಕೋಟಿಗಳಾಗಿರುವುದರಿಂದ ಪಾವತಿಗಳು ಸ್ಥಿರ ಆದಾಯವನ್ನು ಗಳಿಸುತ್ತಲೇ ಇದೆ. ಇದರಲ್ಲಿ ಯುಪಿಐಯ 70 ಕೋಟಿ ರೂ. ಸೇರಿದೆ. ಇದರೊಂದಿಗೆ ಲಾಭವು 508 ಕೋಟಿ ರೂ.ನಷ್ಟಿದ್ದು, ತ್ರೈಮಾಸಿಕದಿಂದ ಶೇ. 4 ರಷ್ಟು ಏರಿಕೆಯಾಗಿದೆ ಎಂದು ಪೇಟಿಎಂ ತಿಳಿಸಿದೆ.

ಫಿನ್‌ಟೆಕ್ ದೈತ್ಯ ಕಂಪನಿಯು ಏರಿಕೆ ಕಂಡಿದ್ದು,ನಾಲ್ಕರ ತ್ರೈಮಾಸಿಕದಲ್ಲಿ ಒಟ್ಟು ವ್ಯಾಪಾರ ಮೌಲ್ಯ 5.1 ಲಕ್ಷ ಕೋಟಿ ರೂ.ಗಳಿಗೆ ಮತ್ತು ಸರಾಸರಿ ಮಾಸಿಕ ವಹಿವಾಟು 7.2 ಕೋಟಿಗೆ ಏರಿದೆ. ಏತನ್ಮಧ್ಯೆ, ಪೇಟಿಯಂನ ಪಾವತಿ ಸಾಧನಗಳನ್ನು ಬಳಸುವ ವ್ಯಾಪಾರಿಗಳ ಸಂಖ್ಯೆ ತ್ರೈಮಾಸಿಕದಲ್ಲಿ 8 ಲಕ್ಷದಷ್ಟು ಏರಿಕೆಯಾಗಿದ್ದು, ಅದು ಒಟ್ಟು 1.24 ಕೋಟಿಗೆ ತಲುಪಿದೆ.

ಭಾರತದ ಮೊದಲ ಸೋಲಾರ್ ಸೌಂಡ್‌ಬಾಕ್ಸ್ ಮತ್ತು ಮಹಾಕುಂಭ ಸೌಂಡ್‌ಬಾಕ್ಸ್ ಅನ್ನು ಪ್ರಾರಂಭಿಸುವುದರೊಂದಿಗೆ ಕಂಪನಿ ಬಲವಾಗಿದೆ ಈ ಹೊಸ ಉತ್ಪನ್ನಗಳು ಸೌಂಡ್‌ಬಾಕ್ಸ್ ವಿಭಾಗದಲ್ಲಿ ಪೇಟಿಯಂನ ಪ್ರಾಬಲ್ಯವನ್ನು ಬಲಪಡಿಸುವುದಲ್ಲದೆ, ವ್ಯಾಪಾರಿಗಳಲ್ಲಿ ಹಣಕಾಸು ಸೇವೆಗಳ ವಿತರಣೆಯನ್ನು ವಿಸ್ತರಿಸುವಲ್ಲಿ ಸಹಾಯಕವಾಗಿದೆ.

Published On - 10:04 pm, Tue, 6 May 25

ಸ್ವಜನಪಕ್ಷಪಾತವಿಲ್ಲದ ಏಕೈಕ ಸ್ಥಳವೆಂದರೆ ಸೇನೆ; ಸಿಡಿಎಸ್ ಅನಿಲ್ ಚೌಹಾಣ್
ಸ್ವಜನಪಕ್ಷಪಾತವಿಲ್ಲದ ಏಕೈಕ ಸ್ಥಳವೆಂದರೆ ಸೇನೆ; ಸಿಡಿಎಸ್ ಅನಿಲ್ ಚೌಹಾಣ್
ಶಾಹೀನ್ ಅಫ್ರಿದಿ ಬ್ಯಾಟಿಂಗ್ ಶ್ಲಾಘಿಸಿದ ಕುಲ್ದೀಪ್ ಯಾದವ್
ಶಾಹೀನ್ ಅಫ್ರಿದಿ ಬ್ಯಾಟಿಂಗ್ ಶ್ಲಾಘಿಸಿದ ಕುಲ್ದೀಪ್ ಯಾದವ್
ಬುರುಡೆ ಜತೆ ಸಿಕ್ಕ ID ಕಾರ್ಡ್,ವಾಕಿಂಗ್ ಸ್ಟಿಕ್ ಬಗ್ಗೆ ಸತ್ಯ ಬಿಚ್ಚಿಟ ಮಗ
ಬುರುಡೆ ಜತೆ ಸಿಕ್ಕ ID ಕಾರ್ಡ್,ವಾಕಿಂಗ್ ಸ್ಟಿಕ್ ಬಗ್ಗೆ ಸತ್ಯ ಬಿಚ್ಚಿಟ ಮಗ
ಬಿಗ್ ಬಾಸ್ ರಂಜಿತ್ ಮನೆಯಲ್ಲಿ ಫೈಟ್: ಇಲ್ಲಿದೆ ವೈರಲ್ ವಿಡಿಯೋ
ಬಿಗ್ ಬಾಸ್ ರಂಜಿತ್ ಮನೆಯಲ್ಲಿ ಫೈಟ್: ಇಲ್ಲಿದೆ ವೈರಲ್ ವಿಡಿಯೋ
ಬೆಂಗಳೂರಿನಲ್ಲಿ ಮಳೆ ರುದ್ರನರ್ತನ: ವಾಹನ ಸವಾರರಿಗೆ ನರಕ ದರ್ಶನ
ಬೆಂಗಳೂರಿನಲ್ಲಿ ಮಳೆ ರುದ್ರನರ್ತನ: ವಾಹನ ಸವಾರರಿಗೆ ನರಕ ದರ್ಶನ
ಸಂಪುಟ ಸಭೆಯಲ್ಲಿ ಜಾತಿ ಜ್ವಾಲೆ:ಏರು ಧ್ವನಿಯಲ್ಲೇ ಸಚಿವರಿಂದ ಆಕ್ಷೇಪ
ಸಂಪುಟ ಸಭೆಯಲ್ಲಿ ಜಾತಿ ಜ್ವಾಲೆ:ಏರು ಧ್ವನಿಯಲ್ಲೇ ಸಚಿವರಿಂದ ಆಕ್ಷೇಪ
ಧರ್ಮಸ್ಥಳ ಕೇಸ್: ಇಂದು ಇನ್ನಷ್ಟು ತಲೆಬುರುಡೆ, ಅಸ್ಥಿಪಂಜರಗಳು ಪತ್ತೆ
ಧರ್ಮಸ್ಥಳ ಕೇಸ್: ಇಂದು ಇನ್ನಷ್ಟು ತಲೆಬುರುಡೆ, ಅಸ್ಥಿಪಂಜರಗಳು ಪತ್ತೆ
ಒಳನುಸುಳುಕೋರರನ್ನು ರಕ್ಷಿಸಲು ರಾಹುಲ್ ಗಾಂಧಿ ಯಾತ್ರೆ; ಅಮಿತ್ ಶಾ ವಾಗ್ದಾಳಿ
ಒಳನುಸುಳುಕೋರರನ್ನು ರಕ್ಷಿಸಲು ರಾಹುಲ್ ಗಾಂಧಿ ಯಾತ್ರೆ; ಅಮಿತ್ ಶಾ ವಾಗ್ದಾಳಿ
ಆಳಂದ ಮತಗಳ್ಳತನ:ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ ಪ್ರಿಯಾಂಕ್ ಖರ್ಗೆ
ಆಳಂದ ಮತಗಳ್ಳತನ:ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ ಪ್ರಿಯಾಂಕ್ ಖರ್ಗೆ
ಇನ್ಮುಂದೆ ಕಿಚ್ಚ ಸುದೀಪ್ ಅವರೇ ವಿಷ್ಣುವರ್ಧನ್​ ಮಗ: ಅಭಿಮಾನದ ಮಾತು
ಇನ್ಮುಂದೆ ಕಿಚ್ಚ ಸುದೀಪ್ ಅವರೇ ವಿಷ್ಣುವರ್ಧನ್​ ಮಗ: ಅಭಿಮಾನದ ಮಾತು