AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs Pak: ಯುಎನ್​​ಡಿಪಿ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಪಾಕಿಸ್ತಾನಕ್ಕಿಂತ 38 ಸ್ಥಾನ ಮೇಲಿರುವ ಭಾರತ

UNDP HDI score 2023, India gains 4 places: ಯುಎನ್​​ಡಿಪಿ ಬಿಡುಗಡೆ ಮಾಡಿದ 2023ನೇ ಸಾಲಿನ ಹ್ಯೂಮನ್ ಡೆವಲಪ್ಮೆಂಟ್ ಇಂಡೆಕ್ಸ್​​​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ 130ನೇ ಸ್ಥಾನ ಹಂಚಿಕೊಂಡಿವೆ. 2022ರಲ್ಲಿ ಭಾರತ 134ನೇ ಸ್ಥಾನದಲ್ಲಿತ್ತು. ಬಾಂಗ್ಲಾದೇಶ 129ನೇ ಸ್ಥಾನದಲ್ಲಿತ್ತು. ಪಾಕಿಸ್ತಾನವು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಮತ್ತಷ್ಟು ಕುಸಿದಿದೆ. ಈಗ ಅದು 168ನೇ ಸ್ಥಾನಕ್ಕೆ ಹೋಗಿದೆ.

India vs Pak: ಯುಎನ್​​ಡಿಪಿ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಪಾಕಿಸ್ತಾನಕ್ಕಿಂತ 38 ಸ್ಥಾನ ಮೇಲಿರುವ ಭಾರತ
ಜನರು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 06, 2025 | 4:30 PM

Share

ನವದೆಹಲಿ, ಮೇ 6: ವಿಶ್ವದ ಸಂಸ್ಥೆಯ ಡೆವಲಪ್ಮೆಂಟ್ ಪ್ರೋಗ್ರಾಮ್ ವಿಭಾಗ (UNDP- United Nations Development Programme) ಈಗ ಬಿಡುಗಡೆ ಮಾಡಿರುವ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ (HDI- Human Development Index) ಭಾರತ ನಾಲ್ಕು ಸ್ಥಾನ ಮೇಲೇರಿದೆ. 2023ರ ವರ್ಷದಲ್ಲಿ ಭಾರತದ ಹ್ಯೂಮನ್ ಡೆವಲಪ್ಮೆಂಟ್ ಇಂಡೆಕ್ಸ್ 0.685 ಇದೆ. ಒಟ್ಟು 193 ದೇಶಗಳ ಪೈಕಿ ಭಾರತ 130ನೇ ಸ್ಥಾನದಲ್ಲಿದೆ. 2022ರಲ್ಲಿ ಭಾರತ 134ನೇ ಸ್ಥಾನದಲ್ಲಿತ್ತು. ಆದಾಯ, ಆರೋಗ್ಯ ಮತ್ತು ಶಿಕ್ಷಣದಲ್ಲಿ ಭಾರತ ಉತ್ತಮ ಪ್ರಗತಿ ಸಾಧಿಸಿದ ಪರಿಣಾಮವಾಗಿ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತ ಮೇಲೇರಲು ಕಾರಣವಾಗಿದೆ.

1990ರಲ್ಲಿ ಭಾರತದ ಮಾನವ ಅಭಿವೃದ್ಧಿ ಸೂಚ್ಯಂಕದ ಮೌಲ್ಯ 0.446 ಇತ್ತು. ಈಗ ಅದು 0.685ಕ್ಕೆ ಏರಿದೆ. ಮೂರು ದಶಕದಲ್ಲಿ ಅದು ಶೇ. 53.6ರಷ್ಟು ಹೆಚ್ಚಾಗಿದೆ. ಕಳೆದ ಒಂದು ದಶಕದಲ್ಲಿ ಕೋಟ್ಯಂತರ ಜನರು ಬಡತನ ರೇಖೆಯಿಂದ ಹೊರಗೆ ಬಂದಿದ್ದಾರೆ. ಬಹುಸ್ತರದ ಬಡತನವನ್ನು ಬಹಳ ವೇಗದಲ್ಲಿ ಕಡಿಮೆಗೊಳಿಸಿದ ಕೆಲವೇ ದೇಶಗಳಲ್ಲಿ ಭಾರತವೂ ಒಂದು. ಆಯುಷ್ಮಾನ್ ಭಾರತ್, ಪಿಎಂ ಕಿಸಾನ್, ಜಲ್ ಜೀವನ್ ಮಿಷನ್ ಇತ್ಯಾದಿ ಸರ್ಕಾರಿ ಯೋಜನೆಗಳು ಬಡತನ ನಿವಾರಣೆ ಮಾಡಲು ಸಹಾಯಕವಾಗಿವೆ ಎಂಬುದು ಎಂಬುದು ಯುಎನ್​​​ಡಿಪಿ ಅನಿಸಿಕೆ.

ಇದನ್ನೂ ಓದಿ: ಭಾರತದ ಜೊತೆ ಹೀಗೆ ಕಿತ್ತಾಡ್ತಿದ್ರೆ ನಾಶವಾಗಿಬಿಡ್ತೀರಿ: ಪಾಕಿಸ್ತಾನಕ್ಕೆ ಮೂಡೀಸ್ ಎಚ್ಚರಿಕೆ

ಇದನ್ನೂ ಓದಿ
Image
ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯಾಗುತ್ತಿದೆ ಭಾರತ
Image
ನೀಟ್ ಕೇಂದ್ರದಲ್ಲಿ ಆಧಾರ್ ಫೇಸ್ ಅಥೆಂಟಿಕೇಶನ್ ಪ್ರಯೋಗ
Image
ಚೀನಾ ರೋಡ್ ಕಿಂಗ್; ಭಾರತದಲ್ಲಿ ರಸ್ತೆ ನಿರ್ಮಾಣ ಹೇಗೆ?
Image
ಉತ್ತಮ ಸ್ಥಿತಿಯಲ್ಲಿ ಭಾರತದ ಆರ್ಥಿಕತೆ: ಸಿಇಎ

ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕಳೆಗುಂದಿದ ಪಾಕಿಸ್ತಾನ

ಪಾಕಿಸ್ತಾನದ ಮಾನವ ಅಭಿವೃದ್ಧಿ ಸೂಚ್ಯಂಕ 2023ರಲ್ಲಿ 0.544ರಷ್ಟಿದೆ. ಜಾಗತಿಕವಾಗಿ ಅದು 168ನೇ ಸ್ಥಾನಕ್ಕೆ ಇಳಿದಿದೆ. ಕೆಳ ಮಾನವ ಅಭಿವೃದ್ಧಿ ಸ್ತರದಲ್ಲಿರುವ ದೇಶಗಳ ಸಾಲಿನಲ್ಲಿ ಪಾಕಿಸ್ತಾನ ಇದೆ.

ಇದೇ ವೇಳೆ, ಭಾರತದ ಹೆಚ್​​ಡಿಐ ಮೌಲ್ಯವು ಮಧ್ಯಮ ಮಾನವ ಅಭಿವೃದ್ಧಿ ಸ್ತರದಲ್ಲಿದೆ. ಪಾಕಿಸ್ತಾನಕ್ಕಿಂತ ಭಾರತ ಶೇ. 19ರಷ್ಟು ಹೆಚ್ಚು ಅಂಕ ಹೊಂದಿದೆ. ತಲಾದಾಯದಲ್ಲಿ ಪಾಕಿಸ್ತಾನಕ್ಕಿಂತ ಭಾರತ ಶೇ 57 ಹೆಚ್ಚು ಇದೆ.

ಭಾರತದ ಇತರ ನೆರೆಯ ದೇಶಗಳ ವಿಚಾರಕ್ಕೆ ಬಂದರೆ, ಶ್ರೀಲಂಕಾ ಉನ್ನತ ಸ್ತರದ ಗುಂಪಿಗೆ ಸೇರುತ್ತದೆ. 2023ರ ಹ್ಯೂಮನ್ ಡೆವಲಪ್ಮೆಂಟ್ ಇಂಡೆಕ್ಸ್​​​ನಲ್ಲಿ ಶ್ರೀಲಂಕಾ 0.776 ಸ್ಕೋರ್​​ನೊಂದಿಗೆ 89ನೇ ಸ್ಥಾನದಲ್ಲಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ 16 ಸ್ಥಾನ ಕಡಿಮೆಗೊಂಡಿದೆ. ಆದರೂ ಅದು ಉನ್ನತ ಮಾನವ ಅಭಿವೃದ್ಧಿ ಸ್ತರದಲ್ಲಿದೆ. ಹೆಚ್​​ಡಿಐ ಸ್ಕೋರ್ 0.700ಕ್ಕಿಂತ ಹೆಚ್ಚಿದ್ದರೆ ಅದು ಉನ್ನತ ಸ್ತರ.

ಇದನ್ನೂ ಓದಿ: ಎಕ್ಸ್​​ಪ್ರೆಸ್​​ವೇ ನಿರ್ಮಾಣದಲ್ಲಿ ಚೀನಾ ಕಿಂಗ್; 10 ವರ್ಷದಲ್ಲಿ ಯುಕೆ ಕಟ್ಟಿದ್ದು 105 ಕಿಮೀ ಮಾತ್ರ; ಭಾರತ ನಿರ್ಮಿಸಿದ್ದು ಎಷ್ಟು ರಸ್ತೆ?

ಬಾಂಗ್ಲಾದೇಶವು ರ್ಯಾಂಕಿಂಗ್​​​​ನಲ್ಲಿ ಭಾರತದ ಜೊತೆ 130ನೇ ಸ್ಥಾನ ಹಂಚಿಕೊಂಡಿದೆ. ಹಿಂದಿನ ವರ್ಷದಲ್ಲಿ (2022) ಅದು 129ನೇ ಸ್ಥಾನದಲ್ಲಿತ್ತು. ಇನ್ನು, ನೇಪಾಳ 145ನೇ ಸ್ಥಾನದಲ್ಲಿದೆ.

ಹ್ಯೂಮನ್ ಡೆವಲಪ್ಮೆಂಟ್ ಇಂಡೆಕ್ಸ್​​​ನಲ್ಲಿ ಅಗ್ರ-5 ದೇಶಗಳು

ಐಸ್​​ಲ್ಯಾಂಡ್, ನಾರ್ವೆ, ಸ್ವಿಟ್ಜರ್​​​ಲ್ಯಾಂಡ್, ಡೆನ್ಮಾರ್ಕ್ ಮತ್ತು ಜರ್ಮನಿ ದೇಶಗಳು ಯುಎನ್​​ಡಿಪಿ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಮೊದಲ ಐದು ಸ್ಥಾನ ಪಡೆದಿವೆ. ಐಸ್​​ಲ್ಯಾಂಡ್ ದೇಶದ ಹ್ಯೂಮನ್ ಡೆವಲಪ್ಮೆಂಟ್ ಇಂಡೆಕ್ಸ್ 0.972 ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ