AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿಸಿಎಸ್​​​ನಲ್ಲಿ ಭತ್ಯೆ ಧಮಾಕ; ಶೇ. 70 ಉದ್ಯೋಗಿಗಳಿಗೆ ಶೇ. 100 ಭತ್ಯೆ; ವರ್ಕ್ ಫ್ರಂ ಹೋಮ್​​ನವರಿಗೆ ಇಲ್ಲ ಭಾಗ್ಯ

TCS quarterly variable allowance to employees: ಆರು ಲಕ್ಷ ಉದ್ಯೋಗಿಗಳಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಂಸ್ಥೆ ಜನವರಿಯಿಂದ ಮಾರ್ಚ್​​ವರೆಗಿನ ಕ್ವಾರ್ಟರ್​​​ಗೆ ವೇರಿಯಬಲ್ ಪೇ ಬಿಡುಗಡೆ ಮಾಡಿದೆ. ಶೇ. 70ಕ್ಕೂ ಅಧಿಕ ಉದ್ಯೋಗಿಗಳಿಗೆ ನೂರಕ್ಕೆ ನೂರು ಭತ್ಯೆ ಸಿಕ್ಕಿದೆ. ಹಲವು ಹಿರಿಯ ಉದ್ಯೋಗಿಗಳಿಗೆ ಕಡಿಮೆ ಭತ್ಯೆ ಸಿಕ್ಕಿದೆ ಎನ್ನಲಾಗಿದೆ. ಟಿಸಿಎಸ್​​​ನಲ್ಲಿ ಉದ್ಯೋಗಿಯ ಒಟ್ಟು ಸಂಬಳದ ಶೇ. 15-20ರಷ್ಟು ಹಣವನ್ನು ವೇರಿಯಬಲ್ ಅಲೋಯನ್ಸ್ ಆಗಿ ನೀಡಲಾಗುತ್ತದೆ.

ಟಿಸಿಎಸ್​​​ನಲ್ಲಿ ಭತ್ಯೆ ಧಮಾಕ; ಶೇ. 70 ಉದ್ಯೋಗಿಗಳಿಗೆ ಶೇ. 100 ಭತ್ಯೆ; ವರ್ಕ್ ಫ್ರಂ ಹೋಮ್​​ನವರಿಗೆ ಇಲ್ಲ ಭಾಗ್ಯ
ಟಿಸಿಎಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 06, 2025 | 12:50 PM

Share

ನವದೆಹಲಿ, ಮೇ 6: ದೇಶದ ಅತಿದೊಡ್ಡ ಐಟಿ ಸರ್ವಿಸ್ ಸಂಸ್ಥೆಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ತನ್ನ ಉದ್ಯೋಗಿಗಳಿಗೆ ತ್ರೈಮಾಸಿಕ ಭತ್ಯೆ (Quarterly variable allowance) ಬಿಡುಗಡೆ ಮಾಡಿದೆ. ಜನವರಿಯಿಂದ ಮಾರ್ಚ್​​ವರೆಗಿನ ಕ್ವಾರ್ಟರ್​​​ಗೆ ಟಿಸಿಎಸ್ ತನ್ನ ಶೇ. 70ರಷ್ಟು ಉದ್ಯೋಗಿಗಳಿಗೆ ನೂರಕ್ಕೆ ನೂರು ತ್ರೈಮಾಸಿಕ ಭತ್ಯೆ ಕೊಟ್ಟಿದೆ. ಆದರೆ, ಸೀನಿಯರ್ ಉದ್ಯೋಗಿಗಳಿಗೆ ಈ ಬಾರಿ ಭತ್ಯೆ ಸಿಕ್ಕಿಲ್ಲ, ಅಥವಾ ಕಡಿಮೆ ಭತ್ಯೆ ಸಿಕ್ಕಿದೆ. ಹಿಂದಿನ ಎರಡು ಕ್ವಾರ್ಟರ್​​​ಗಳಲ್ಲೂ ಸೀನಿಯರ್ಸ್​​ಗೆ ನಿರಾಸೆಯಾಗಿತ್ತು. ಸತತ ಮೂರು ಕ್ವಾರ್ಟರ್​​​ಗಳು ಇವರಿಗೆ ಈ ಕ್ಯುವಿಎ ಸಿಕ್ಕಿಲ್ಲ.

ಟಿಸಿಎಸ್ ನೀಡುತ್ತಿರುವ ತ್ರೈಮಾಸಿಕ ವೇರಿಯಬಲ್ ಅಲೋಯನ್ಸ್, ಏನಿದು?

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಂಸ್ಥೆ ತನ್ನ ಉದ್ಯೋಗಿಗಳಿಗೆ ಪ್ರತೀ ವರ್ಷದ ಸಂಬಳ ಹೆಚ್ಚಳ, ಬೋನಸ್ ಜೊತೆಗೆ ಮೂರು ತಿಂಗಳಿಗೊಮ್ಮೆ ವೇರಿಯಬಲ್ ಅಲೋಯನ್ಸ್ ನೀಡುತ್ತದೆ. ಇದು ಒಂದು ರೀತಿಯ ಬೋನಸ್ ಆಗಿರುತ್ತದೆ. ಉದ್ಯೋಗಿಗಳ ಸಂಬಳದ ಆಧಾರದ ಮೇಲೆ ಈ ಭತ್ಯೆ ಕೊಡಲಾಗುತ್ತದೆ. ಟಿಸಿಎಸ್​​​ನಲ್ಲಿ ಸಾಮಾನ್ಯವಾಗಿ ಶೇ. 15ರಿಂದ 20ರಷ್ಟು ಮೊತ್ತ ಇದಾಗಿರುತ್ತದೆ. ಕೆಲ ಯುನಿಟ್​​​​ಗಳಲ್ಲಿ ಅವು ಸೃಷ್ಟಿಸುವ ಬ್ಯುಸಿನೆಸ್ ಆಧಾರದ ಮೇಲೆ ನೀಡಲಾಗುತ್ತದೆ.

ಇದನ್ನೂ ಓದಿ: ಬ್ಯಾಂಕ್ ಆಫ್ ಬರೋಡಾದಲ್ಲಿ ಗೃಹಸಾಲ ದರ ಶೇ. 8ರಿಂದ ಆರಂಭ; ಯುವಕರು, ಮಹಿಳೆಯರಿಗೆ ಇನ್ನೂ ಕಡಿಮೆ

ಇದನ್ನೂ ಓದಿ
Image
ಬಿಒಬಿಯಲ್ಲಿ ಗೃಹಸಾಲ ದರ ಶೇ. 8 ಮಾತ್ರ
Image
ಉತ್ತಮ ಸ್ಥಿತಿಯಲ್ಲಿ ಭಾರತದ ಆರ್ಥಿಕತೆ: ಸಿಇಎ
Image
ಐಎಂಎಫ್​​​ಗೆ ಅಯ್ಯರ್; ಪಾಕಿಸ್ತಾನಕ್ಕೆ ಇದೆಯಾ ಆಪತ್ತು?
Image
ನೀವೆಷ್ಟು ಅನುಕೂಲಸ್ಥರು? ಇಗೋ ನೋಡಿ 4 ಪರ್ಸೆಂಟ್ ಸೂತ್ರ

ವರ್ಕ್ ಫ್ರಂ ಹೋಮ್ ಮಾಡಿದವರಿಗೆ ಇಲ್ಲ ಭತ್ಯೆ

ಟಿಸಿಎಸ್ ಸಂಸ್ಥೆ ಕಳೆದ ವರ್ಷ (2024ರ ಏಪ್ರಿಲ್) ಕ್ಯುವಿಎ ನೀತಿಯನ್ನು ಪರಿಷ್ಕರಿಸಿತ್ತು. ಅದರಂತೆ ಕಚೇರಿಗೆ ಬಂದು ಹೆಚ್ಚು ಕೆಲಸ ಮಾಡದವರಿಗೆ ಕ್ಯುವಿಎ ಇರುವುದಿಲ್ಲ ಎಂದಿತ್ತು. ಅದರ ಪಾಲಿಸಿ ಪ್ರಕಾರ ಶೇ. 60ಕ್ಕಿಂತ ಕಡಿಮೆ ಕಚೇರಿ ಹಾಜರಾತಿ ಇದ್ದರೆ ಸೊನ್ನೆ ಭತ್ಯೆ ನೀಡಲಾಗುತ್ತದೆ. ಶೇ. 60ರಿಂದ 75ರಷ್ಟು ಹಾಜರಾತಿ ಇದ್ದರೆ ಶೇ. 50 ಭತ್ಯೆ ನೀಡಲಾಗುತ್ತದೆ. ಶೇ. 75ರಿಂದ ಶೇ. 85ರಷ್ಟು ಹಾಜರಾತಿ ಇದ್ದರೆ ಶೇ. 75 ವೇರಿಯಬಲ್ ಪೇ ಸಿಗುತ್ತದೆ. ಶೇ. 85 ಹಾಗು ಹೆಚ್ಚಿನ ಹಾಜರಾತಿ ಇದ್ದರೆ ನೂರಕ್ಕೆ ನೂರು ಭತ್ಯೆ ಕೊಡಲಾಗುತ್ತದೆ ಎಂದು ಟಿಸಿಎಸ್​​ನ ಹೊಸ ನೀತಿಯಲ್ಲಿ ತಿಳಿಸಲಾಗಿದೆ.

ಟಿಸಿಎಸ್​​​ನಲ್ಲಿ ಸಂಬಳ ಹೆಚ್ಚಳ ಪ್ರಕ್ರಿಯೆ ಸದ್ಯಕ್ಕೆ ಇಲ್ಲ…

ಟಿಸಿಎಸ್ ಸಂಸ್ಥೆ ಸಾಮಾನ್ಯವಾಗಿ ಪ್ರತೀ ವರ್ಷವೂ ಏಪ್ರಿಲ್ ತಿಂಗಳಲ್ಲಿ ಸ್ಯಾಲರಿ ಹೈಕ್ ಪ್ರಕ್ರಿಯೆ ಆರಂಭಿಸುತ್ತದೆ. ಆದರೆ, ಈ ಬಾರಿ ಈ ಪ್ರೋಸಸ್ ಇನ್ನೂ ಶುರುವಾಗಿಲ್ಲ. ಜಾಗತಿಕವಾಗಿ ಇರುವ ಆರ್ಥಿಕ ಅನಿಶ್ಚಿತತೆ, ಹಾಗೂ ಭವಿಷ್ಯದ ಬ್ಯುಸಿನೆಸ್ ಹೇಗಿರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಸಂಬಳ ಹೆಚ್ಚಳ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

ಇದನ್ನೂ ಓದಿ: ನಿಮ್ಮ ಹಣಕಾಸು ಭವಿಷ್ಯ ಭದ್ರವಾ? ಖಾತ್ರಿಪಡಿಸಲು ಬಳಸಿ ಈ 4 ಪರ್ಸೆಂಟ್ ಸೂತ್ರ

ಟಿಸಿಎಸ್ ನಿವ್ವಳ ಲಾಭದಲ್ಲಿ ತುಸು ಇಳಿಕೆ

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಂಸ್ಥೆ 2024-25ರ ಕೊನೆಯ ಕ್ವಾರ್ಟರ್​​​ನಲ್ಲಿ (ಜನವರಿಯಿಂದ ಮಾರ್ಚ್) 64,479 ಕೋಟಿ ರೂ ಆದಾಯ ಗಳಿಸಿದೆ. ಇದು ಹಿಂದಿನ ವರ್ಷದ ಕ್ವಾರ್ಟರ್​​​ಗಿಂತ ಶೇ. 5.3ರಷ್ಟು ಏರಿಕೆ ಆಗಿದೆ. ಆದರೂ ಕೂಡ ಅದರ ನಿವ್ವಳ ಲಾಭ ಶೇ. 1.7ರಷ್ಟು ಕಡಿಮೆ ಆಗಿದೆ. ಟಿಸಿಎಸ್ ಸಂಸ್ಥೆ ಈ ಕ್ವಾರ್ಟರ್​​​ನಲ್ಲಿ ಗಳಿಸಿದ ನಿವ್ವಳ ಲಾಭ 12,224 ಕೋಟಿ ರೂನಷ್ಟಿದೆ.

ಆರು ಲಕ್ಷ ದಾಟಿದ ಟಿಸಿಎಸ್ ಉದ್ಯೋಗಿಗಳ ಸಂಖ್ಯೆ

ಟಿಸಿಎಸ್ ಸಂಸ್ಥೆ ನಾಲ್ಕನೇ ಕ್ವಾರ್ಟರ್​​​ನಲ್ಲಿ 625 ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿದೆ. ಒಂದು ವರ್ಷದಲ್ಲಿ 42,000 ಟ್ರೈನಿಗಳನ್ನು ಸೇರಿಸಿಕೊಳ್ಳಲಾಗಿದೆ. 2025ರ ಮಾರ್ಚ್ ಅಂತ್ಯಕ್ಕೆ ಕಂಪನಿಯ ಒಟ್ಟು ಉದ್ಯೋಗಿಗಳ ಸಂಖ್ಯೆ 6,07,979 ಆಗಿದೆ. ಈ ಪೈಕಿ ಒಂದು ಲಕ್ಷಕ್ಕೂ ಅಧಿಕ ಉದ್ಯೋಗಿಗಳಿಗೆ ಕಳೆದ ಒಂದು ವರ್ಷದಲ್ಲಿ ಭಡ್ತಿ ಸಿಕ್ಕಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್