AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಕ್ಸ್​​ಪ್ರೆಸ್​​ವೇ ನಿರ್ಮಾಣದಲ್ಲಿ ಚೀನಾ ಕಿಂಗ್; 10 ವರ್ಷದಲ್ಲಿ ಯುಕೆ ಕಟ್ಟಿದ್ದು 105 ಕಿಮೀ ಮಾತ್ರ; ಭಾರತ ನಿರ್ಮಿಸಿದ್ದು ಎಷ್ಟು ರಸ್ತೆ?

China, India and other countries in building expressways: ಚೀನಾ ದೇಶ ಕಳೆದ 10 ವರ್ಷದಲ್ಲಿ ಬರೋಬ್ಬರಿ 50,000 ಕಿಮೀಯಷ್ಟು ಹೊಸ ಎಕ್ಸ್​​ಪ್ರೆಸ್​​ವೇಗಳನ್ನು ನಿರ್ಮಿಸಿದೆ. ಇದೇ ಅವಧಿಯಲ್ಲಿ ಬೇರೆ ಬೇರೆ ದೇಶಗಳು ಕಟ್ಟಿದ ಎಕ್ಸ್​​ಪ್ರೆಸ್​​ವೆ ನಗಣ್ಯ ಮಾತ್ರ. ಭಾರತ ಹೆಚ್ಚು ಎಕ್ಸ್​​ಪ್ರೆಸ್​​ವೇ ನಿರ್ಮಿಸದೇ ಹೋದರೂ ಸಾಕಷ್ಟು ಹೆದ್ದಾರಿಗಳನ್ನು ನಿರ್ಮಿಸಿದೆ.

ಎಕ್ಸ್​​ಪ್ರೆಸ್​​ವೇ ನಿರ್ಮಾಣದಲ್ಲಿ ಚೀನಾ ಕಿಂಗ್; 10 ವರ್ಷದಲ್ಲಿ ಯುಕೆ ಕಟ್ಟಿದ್ದು 105 ಕಿಮೀ ಮಾತ್ರ; ಭಾರತ ನಿರ್ಮಿಸಿದ್ದು ಎಷ್ಟು ರಸ್ತೆ?
ಚೀನಾದ ಎಕ್ಸ್​​ಪ್ರೆಸ್​​​ವೇ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 05, 2025 | 6:42 PM

Share

ನವದೆಹಲಿ, ಮೇ 5: ಒಂದು ದೇಶದ ಆರ್ಥಿಕತೆ ಉತ್ತಮವಾಗಿ ಬೆಳೆಯಬೇಕಾದರೆ ಮೂಲಸೌಕರ್ಯ (Infrastructure) ಉತ್ತಮವಾಗಿರಬೇಕು. ಇಂಥ ಮೂಲಸೌಕರ್ಯಗಳಲ್ಲಿ ರಸ್ತೆಯೂ ಒಳಗೊಂಡಿರುತ್ತದೆ. ಭಾರತ ಕಳೆದ ಕೆಲ ವರ್ಷಗಳಿಂದ ರಸ್ತೆ ಮತ್ತು ರೈಲು ಇನ್​​ಫ್ರಾಸ್ಟ್ರಕ್ಚರ್ ಅನ್ನು ಬಲಪಡಿಸುತ್ತಾ ಬಂದಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದ ರಸ್ತೆ ನಿರ್ಮಾಣದ ವೇಗ ಉತ್ತಮವೇ ಇದೆ. ಚೀನಾ ಬಿಟ್ಟರೆ ಭಾರತವೇ ರಸ್ತೆ ನಿರ್ಮಾಣದಲ್ಲಿ ಸೈ ಎನಿಸಿರುವುದು. ಫೈನಾನ್ಷಿಯಲ್ ಟೈಮ್ಸ್​​​ನಲ್ಲಿ ಬಂದ ವರದಿಯೊಂದು, ವಿವಿಧ ದೇಶಗಳು ಕಳೆದ 10 ವರ್ಷದಲ್ಲಿ ರಸ್ತೆ ನಿರ್ಮಾಣದಲ್ಲಿ ಎಷ್ಟು ಪ್ರಗತಿ ಸಾಧಿಸಿವೆ ಎನ್ನುವ ವಿಚಾರದ ಮೇಲೆ ಬೆಳಕು ಚೆಲ್ಲಿದೆ.

ಚೀನಾದ ಪ್ರಚಂಡ ಎಕ್ಸ್​​​ಪ್ರೆಸ್​ವೇ ಜಾಲ

ಚೀನಾದ ರಸ್ತೆ ಜಾಲ ವಿಶ್ವದಲ್ಲೇ ಅತ್ಯುತ್ತಮ ಎನಿಸಿದೆ. ಕಳೆದ 10 ವರ್ಷದಲ್ಲಿ ಚೀನಾ ಬರೋಬ್ಬರಿ 50,000 ಕಿಮೀಯಷ್ಟು ದೂರದ ಎಕ್ಸ್​​ಪ್ರೆಸ್​​ವೇಗಳನ್ನು ನಿರ್ಮಿಸಿದೆಯಂತೆ. 2013ರಲ್ಲಿ ಚೀನಾದಲ್ಲಿ 1,27,000 ಕಿಮೀ ಎಕ್ಸ್​​ಪ್ರೆಸ್​​ವೇಗಳಿದ್ದುವು. 2023ರಲ್ಲಿ ಅದು 1,77,000 ಕಿಮೀಗೆ ಏರಿದೆ. ಹೊಸದಾಗಿ ನಿರ್ಮಿಸಲಾದ ಎಕ್ಸ್​​ಪ್ರೆಸ್​ವೇಗಳಲ್ಲಿ 18,400 ಕಿಮೀಯಷ್ಟು ರಸ್ತೆಗಳು ಷಟ್ಪಥ ರಸ್ತೆಗಳಾಗಿವೆ. ಇದರೊಂದಿಗೆ ಚೀನಾ ವಿಶ್ವದ ಅತಿದೊಡ್ಡ ಎಕ್ಸ್​ಪ್ರೆಸ್​​ವೇ ಜಾಲ ಇರುವ ದೇಶವೆನಿಸಿದೆ.

ಭಾರತದಲ್ಲಿ ಎಕ್ಸ್​​ಪ್ರೆಸ್​​ವೇ ಎಷ್ಟಿದೆ?

ಭಾರತದಲ್ಲಿ ಎಕ್ಸ್​​ಪ್ರೆಸ್​​ವೇಗಳು ಇತ್ತೀಚೆಗೆ ನಿರ್ಮಾಣ ಆಗತೊಡಗಿವೆ. ಇಲ್ಲಿಯವರೆಗೆ 2,138 ಕಿಮೀಯಷ್ಟು ಎಕ್ಸ್​ಪ್ರೆಸ್​​ವೇಗಳು ಸಂಚಾರಕ್ಕೆ ತೆರೆದುಕೊಂಡಿವೆ. ಚೀನಾದ 1.77 ಲಕ್ಷ ಕಿಮೀಗೆ ಹೋಲಿಸಿದರೆ ಭಾರತದ ಎಕ್ಸ್​​ಪ್ರೆಸ್​​​ವೇ ಜಾಲ ಇನ್ನೂ ಆರಂಭಿಕ ಹಂತದಲ್ಲಿದೆ.

ಇದನ್ನೂ ಓದಿ
Image
ಸಂಬಂಧ ಸುಧಾರಿಸಿಕೊಳ್ಳದಿದ್ರೆ ಪಾಕಿಸ್ತಾನ ಕೆಟ್ಟಂತೆ: ಮೂಡೀಸ್
Image
ಉತ್ತಮ ಸ್ಥಿತಿಯಲ್ಲಿ ಭಾರತದ ಆರ್ಥಿಕತೆ: ಸಿಇಎ
Image
38,000 ಕೋಟಿ ರೂ ಭೂಷಣ್ ಪವರ್ ಹಗರಣ, ಏನಿದು?
Image
ಯುದ್ಧಕ್ಕೆ ನಿಂತ್ರೆ ಪಾಕಿಸ್ತಾನ ಬದುಕೋದು 4 ದಿನ ಮಾತ್ರ?

ಇದನ್ನೂ ಓದಿ: ಭಾರತದ ಜೊತೆ ಹೀಗೆ ಕಿತ್ತಾಡ್ತಿದ್ರೆ ನಾಶವಾಗಿಬಿಡ್ತೀರಿ: ಪಾಕಿಸ್ತಾನಕ್ಕೆ ಮೂಡೀಸ್ ಎಚ್ಚರಿಕೆ

ಆದರೆ, ಹೆದ್ದಾರಿ ನಿರ್ಮಾಣದಲ್ಲಿ ಭಾರತ ಮುಂಚೂಣಿಯಲ್ಲಿದೆ. 2014ರಲ್ಲಿ ಭಾರತದ ಹೆದ್ದಾರಿ ನೆಟ್ವರ್ಕ್ 91,284 ಕಿಮೀಯಷ್ಟಿತ್ತು. 2023ರಲ್ಲಿ ಅದು 1,46,145 ಕಿಮೀಗೆ ವಿಸ್ತರಿಸಿದೆ. ಹತ್ತು ವರ್ಷದಲ್ಲಿ ಹೆದ್ದಾರಿಗಳು 54,858 ಕಿಮೀಯಷ್ಟು ಏರಿಕೆ ಆಗಿವೆ. ಮುಂಬರುವ ಕೆಲ ವರ್ಷಗಳಲ್ಲಿ 34,800 ಹೊಸ ಹೆದ್ದಾರಿಗಳ ನಿರ್ಮಾಣ ಆಗುವ ಸಾಧ್ಯತೆ ಇದೆ.

ಇತರ ದೇಶಗಳಲ್ಲಿ ಎಕ್ಸ್​​ಪ್ರೆಸ್​​ವೇ ಎಷ್ಟಿದೆ?

ಕಳೆದ 10 ವರ್ಷದಲ್ಲಿ ಯಾವ್ಯಾವ ದೇಶಗಳು ಎಷ್ಟು ಎಕ್ಸ್​​ಪ್ರೆಸ್​​ವೇಗಳನ್ನು ನಿರ್ಮಿಸಿವೆ ಎನ್ನುವ ವಿವರ ಈ ಕೆಳಕಂಡಂತಿದೆ:

  • ಸ್ಪೇನ್: 11,131.8 ಕಿಮೀ
  • ಫ್ರಾನ್ಸ್: 4,919.7 ಕಿಮೀ
  • ಜರ್ಮನಿ: 2,317.4 ಕಿಮೀ
  • ಟರ್ಕಿ: 3,350.6 ಕಿಮೀ
  • ಪೋಲ್ಯಾಂಡ್: 2,486 ಕಿಮೀ
  • ಬ್ರಿಟನ್: 105 ಕಿಮೀ

ಇದನ್ನೂ ಓದಿ: ಪಾಕಿಸ್ತಾನಕ್ಕೆ ಮೇ 9ರಂದು ಕಾದಿದೆಯಾ ಆಪತ್ತು? ಐಎಂಎಫ್​​ಗೆ ಭಾರತದ ಪ್ರತಿನಿಧಿಯಾಗಿ ಪಿ ಅಯ್ಯರ್ ಆಯ್ಕೆ

ಬ್ರಿಟನ್​​​ನಲ್ಲಿ ಯಾಕಿಷ್ಟು ಕಡಿಮೆ ಎಕ್ಸ್​​ಪ್ರೆಸ್​​ವೇ ನಿರ್ಮಾಣ?

ಯುನೈಟೆಡ್ ಕಿಂಗ್ಡಂ ಅಥವಾ ಬ್ರಿಟನ್​​ನಲ್ಲಿ ಕಳೆದ 10 ವರ್ಷದಲ್ಲಿ ಕೇವಲ 105 ಕಿಮೀಯಷ್ಟು ಮಾತ್ರ ಎಕ್ಸ್​​ಪ್ರೆಸ್​​ವೇಗಳು ನಿರ್ಮಾಣ ಆಗಿವೆ. 1990ರಿಂದ ಈಚೆಗೆ ನಿರ್ಮಾಣ ಆಗಿರುವುದು ಕೇವಲ 679 ಕಿಮೀ ಮಾತ್ರ. ಈ ದೇಶದಲ್ಲಿ ಪರಿಸರವಾದಿಗಳು ಪ್ರಬಲವಾಗಿದ್ದಾರೆ. ಎಕ್ಸ್​ಪ್ರೆಸ್​​ವೇ ನಿರ್ಮಾಣದಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂದು ಆಕ್ಷೇಪಿಸಿ ಇಲ್ಲಿ ರಸ್ತೆ ಅಭಿವೃದ್ಧಿಗೆ ತಡೆಗಳು ಒಡ್ಡುತ್ತಿದ್ದಾರೆ. ಎಕ್ಸ್​​ಪ್ರೆಸ್​​ವೇ ನಿರ್ಮಾಣಕ್ಕೆ ಮರಗಿಡಗಳನ್ನು ನಾಶ ಮಾಡಬೇಕಾಗಬಹುದು. ಹೀಗಾಗಿ, ವಿರೋಧ ಹೆಚ್ಚು. ಇದೇ ಕಾರಣಕ್ಕೆ 35 ವರ್ಷಗಳಿಂದ ಬ್ರಿಟನ್​​​ನಲ್ಲಿ ಎಕ್ಸ್​​ಪ್ರೆಸ್​​ವೇ ಪ್ರಾಜೆಕ್ಟ್​​​ಗಳು ಆಮೆಗತಿಯಿಂದ ಸಾಗುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ