Multibagger: ಈ ಕಂಪೆನಿ ಸ್ಟಾಕ್ ಬೆಲೆ ಆರು ತಿಂಗಳಲ್ಲಿ 1 ಲಕ್ಷ ರೂಪಾಯಿಯಿಂದ 30 ಲಕ್ಷ ರೂ.ಗೆ ಹೆಚ್ಚಳ
ಈ ಮಲ್ಟಿಬ್ಯಾಗರ್ ಸ್ಟಾಕ್‌ನಲ್ಲಿ ಮಾಡಿದ್ದ 1 ಲಕ್ಷ ರೂಪಾಯಿಯ ಹೂಡಿಕೆ ಆರು ತಿಂಗಳಲ್ಲೇ 30 ಲಕ್ಷ ರೂಪಾಯಿ ಆಗಿದೆ. ಯಾವುದು ಆ ಸ್ಟಾಕ್ ಎಂಬ ವಿವರ ಇಲ್ಲಿದೆ.
ಕೊವಿಡ್-19 ಬಿಕ್ಕಟ್ಟಿನ ಎರಡನೇ ಅಲೆಯ ನಂತರ ಷೇರು ಮಾರುಕಟ್ಟೆ ಚೇತರಿಸಿಕೊಂಡಿದ್ದು, ತನ್ನ ಹೂಡಿಕೆದಾರರಿಗೆ ಅದ್ಭುತ ಲಾಭವನ್ನು ನೀಡಿದೆ. ಕಳೆದ ಆರು ತಿಂಗಳಲ್ಲಿ 2021ನೇ ಇಸವಿಯಲ್ಲಿ ಹಲವು ಮಲ್ಟಿಬ್ಯಾಗರ್ ಸ್ಟಾಕ್‌ಗಳು ಈ ಪಟ್ಟಿಗೆ ಸೇರ್ಪಡೆ ಆಗಿವೆ. ಅದರಲ್ಲಿ ರಘುವೀರ್ ಸಿಂಥೆಟಿಕ್ಸ್ ಷೇರುಗಳನ್ನು ಸಹ ಒಳಗೊಂಡಿದೆ. ಈ ಜವಳಿ ಸ್ಟಾಕ್ ಕಳೆದ ಆರು ತಿಂಗಳಲ್ಲಿ ಪ್ರತಿ ಷೇರಿನ ಬೆಲೆ ಸುಮಾರು 20 ರೂಪಾಯಿಯಿಂದ ರೂ. 600.40ಕ್ಕೆ ಏರಿಕೆ ಕಂಡಿದೆ. ಈ ಸಣ್ಣ ಸಮಯದಲ್ಲಿ ಸುಮಾರು 30 ಪಟ್ಟು ಹೆಚ್ಚಾಗಿದೆ.
ರಘುವೀರ್ ಸಿಂಥೆಟಿಕ್ಸ್ ಷೇರು ಬೆಲೆ ಇತಿಹಾಸ ಕಳೆದ ಒಂದು ವಾರದಲ್ಲಿ ಈ ಮಲ್ಟಿಬ್ಯಾಗರ್ ಸ್ಟಾಕ್ 494 ರೂಪಾಯಿಯಿಂದ 600 ರೂಪಾಯಿಗೆ ಏರಿಕೆ ಕಂಡಿದೆ. ಒಂದು ವಾರದಲ್ಲಿ ಸುಮಾರು ಶೇ 21.5ರಷ್ಟು ಏರಿಕೆಯಾಗಿದೆ. ಕಳೆದ ಒಂದು ವಾರದ ವಹಿವಾಟಿನಲ್ಲಿ ಎಲ್ಲ 5 ವಹಿವಾಟುಗಳಲ್ಲಿ ಜವಳಿ ಸ್ಟಾಕ್ ಶೇಕಡಾ 5ರಷ್ಟು ಅಪ್ಪರ್ ಸರ್ಕ್ಯೂಟ್ ಅನ್ನು ಮುಟ್ಟಿದೆ. ಕಳೆದ ಒಂದು ತಿಂಗಳಲ್ಲಿ ರಘುವೀರ್ ಸಿಂಥೆಟಿಕ್ಸ್ ಷೇರಿನ ಬೆಲೆ 216 ರೂಪಾಯಿಯಿಂದ 600 ರುಪಾಯಿ ಮಟ್ಟಕ್ಕೆ ಏರಿದೆ. ಈ ಅವಧಿಯಲ್ಲಿ ಸುಮಾರು ಶೇ 175ರಷ್ಟು ಏರಿಕೆಯಾಗಿದೆ. ಅದೇ ರೀತಿ ನಿಖರವಾಗಿ ಆರು ತಿಂಗಳ ಅವಧಿಯಲ್ಲಿ ಈ ಮಲ್ಟಿಬ್ಯಾಗರ್ ಸ್ಟಾಕ್ ಸುಮಾರು ರೂ. 20ರ ಮಟ್ಟದಿಂದ ರೂ. 600 ಮಟ್ಟಕ್ಕೆ ಏರಿದ್ದು, ಈ ಅವಧಿಯಲ್ಲಿ ಸುಮಾರು ಶೇ 2900ರಷ್ಟು ಹೆಚ್ಚಳವಾಗಿದೆ.
ಹೂಡಿಕೆ ಮೇಲೆ ಪರಿಣಾಮ ರಘುವೀರ್ ಸಿಂಥೆಟಿಕ್ಸ್ ಷೇರಿನ ಬೆಲೆ ಇತಿಹಾಸ ಗಮನಿಸುವುದಾದರೆ, ಹೂಡಿಕೆದಾರರು ಒಂದು ವಾರದ ಹಿಂದೆ ಈ ಸ್ಟಾಕ್‌ನಲ್ಲಿ 1 ಲಕ್ಷ ಹೂಡಿಕೆ ರೂ. ಮಾಡಿದ್ದರೆ ಅದು ರೂ.1.21 ಲಕ್ಷ ಆಗಿರುತ್ತಿತ್ತು. ಅದೇ ರೀತಿ, ಹೂಡಿಕೆದಾರರು ಒಂದು ತಿಂಗಳ ಹಿಂದೆ ಈ ಮಲ್ಟಿಬ್ಯಾಗರ್ ಜವಳಿ ಸ್ಟಾಕ್‌ನಲ್ಲಿ ರೂ. 1 ಲಕ್ಷ ಹೂಡಿಕೆ ಮಾಡಿದ್ದರೆ ಇಂದು 2.75 ಲಕ್ಷ ರೂಪಾಯಿಯಾಗಿ ಬೆಳೆದಿರುತ್ತಿತ್ತು. ಹೂಡಿಕೆದಾರರು ಆರು ತಿಂಗಳ ಹಿಂದೆ ಈ ಮಲ್ಟಿಬ್ಯಾಗರ್ ಸ್ಟಾಕ್‌ನಲ್ಲಿ ರೂ. 1 ಲಕ್ಷ ಹೂಡಿಕೆ ಮಾಡಿದ್ದರೆ ಮತ್ತು ಈ ಅವಧಿಯಲ್ಲಿ ಈ ಕೌಂಟರ್‌ನಲ್ಲಿ ಹೂಡಿಕೆ ಮಾಡಿದ್ದರೆ ಅದರ 1 ಲಕ್ಷ ರೂಪಾಯಿ ಇಂದು 30 ಲಕ್ಷ ರೂಪಾಯಿಯಾಗಿ ಬದಲಾಗುತ್ತಿತ್ತು.
ಷೇರುದಾರರಿಗೆ ಆಲ್ಫಾ ರಿಟರ್ನ್ ಈ ಅವಧಿಯಲ್ಲಿ ನಿಫ್ಟಿ- 50 ಸೂಚ್ಯಂಕ ಶೇಕಡಾ 11ರಷ್ಟು ಆದಾಯವನ್ನು ಪಡೆದಿದೆ. ಇನ್ನು ಬಿಎಸ್ಇ ಸೆನ್ಸೆಕ್ಸ್ ಸುಮಾರು ಶೇ 12ರಷ್ಟು ಆದಾಯ ನೀಡಿದೆ. ಆದ್ದರಿಂದ ಈ ಮಲ್ಟಿಬ್ಯಾಗರ್ ಜವಳಿ ಸ್ಟಾಕ್ 2021ರಲ್ಲಿ ಆಲ್ಫಾ ಸ್ಟಾಕ್‌ಗಳಲ್ಲಿ ಒಂದಾಗಿದೆ. ಏಕೆಂದರೆ ಇದು ಬಿಎಸ್ಇ ಸೆನ್ಸೆಕ್ಸ್ ಮತ್ತು ಎನ್ಎಸ್ಇ ನಿಫ್ಟಿಗಿಂತ ಹೆಚ್ಚಿನ ಲಾಭವನ್ನು ತನ್ನ ಷೇರುದಾರರಿಗೆ ನೀಡಿದೆ.
ಇದನ್ನೂ ಓದಿ: Multibagger: ಕೇವಲ 18 ತಿಂಗಳಲ್ಲಿ 1 ಲಕ್ಷ ರೂ. ಹೂಡಿಕೆ 1.06 ಕೋಟಿ ರೂಪಾಯಿಗೆ ಬೆಳೆದ ಮಲ್ಟಿಬ್ಯಾಗರ್ ಸ್ಟಾಕ್ ಇದು