AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rupee Value: ಅಮೆರಿಕದ ಡಾಲರ್ ವಿರುದ್ಧ ಭಾರತದ ರೂಪಾಯಿ ಮೌಲ್ಯ 18 ತಿಂಗಳ ಕನಿಷ್ಠ ಮಟ್ಟಕ್ಕೆ

ಅಮೆರಿಕ ಡಾಲರ್ ವಿರುದ್ಧ ಭಾರತದ ರೂಪಾಯಿ ಮೌಲ್ಯ ಡಿಸೆಂಬರ್ 10ನೇ ತಾರೀಕಿನ ಶುಕ್ರವಾರದಂದು ಹದಿನೆಂಟು ತಿಂಗಳ ಕನಿಷ್ಠ ಮಟ್ಟವನ್ನು ತಲುಪಿದೆ.

Rupee Value: ಅಮೆರಿಕದ ಡಾಲರ್ ವಿರುದ್ಧ ಭಾರತದ ರೂಪಾಯಿ ಮೌಲ್ಯ 18 ತಿಂಗಳ ಕನಿಷ್ಠ ಮಟ್ಟಕ್ಕೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Srinivas Mata

Updated on: Dec 10, 2021 | 10:59 PM

ಭಾರತದ ರೂಪಾಯಿ ಮೌಲ್ಯವು ಡಾಲರ್ ವಿರುದ್ಧ ಶುಕ್ರವಾರ ಕುಸಿತ ಕಂಡಿದ್ದು, ಆ ಮೂಲಕ 18 ತಿಂಗಳಲ್ಲೇ ಕನಿಷ್ಠ ಮಟ್ಟವನ್ನು ಮುಟ್ಟಿತು. ಹಣದುಬ್ಬರ ಡೇಟಾ ಬಿಡುಗಡೆಗೂ ಮುನ್ನ ಗ್ರೀನ್‌ಬ್ಯಾಕ್ ಜಾಗತಿಕವಾಗಿ ಬಲಗೊಂಡಿದ್ದರಿಂದ ಮೌಲ್ಯ ಭಾರೀ ಪ್ರಮಾಣದಲ್ಲಿ ಕುಸಿಯಿತು. ಒಂದು ವೇಳೆ ಫೆಡರಲ್ ರಿಸರ್ವ್ ಡಿಸೆಂಬರ್ 14-15ರಂದು ನಿಗದಿತ ಸಭೆಯಲ್ಲಿ ಬಿಗಿಯಾದ ಹಣಕಾಸು ನೀತಿಯನ್ನು ಸೂಚಿಸಿದಲ್ಲಿ ಹಣದುಬ್ಬರದ ದತ್ತಾಂಶವು ಅಮೆರಿಕದಲ್ಲಿನ ಗ್ರಾಹಕರ ಬೆಲೆಗಳಲ್ಲಿ ಹೊಸ ಚೇತರಿಕೆ ಕಂಡಿರುವುದು ತೋರಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಭಾಗಶಃ ಕನ್ವರ್ಟಿಬಲ್ ರೂಪಾಯಿಯು ಹಿಂದಿನ ಮುಕ್ತಾಯದಲ್ಲಿ 1 ಡಾಲರ್​ಗೆ 75.5200ಕ್ಕೆ ಹೋಲಿಸಿದರೆ ಶುಕ್ರವಾರದಂದು ಅಮೆರಿಕ ಡಾಲರ್‌ಗೆ 75.7650ಕ್ಕೆ ಸ್ಥಿರವಾಯಿತು. ದೇಶೀಯ ಕರೆನ್ಸಿಯು 1 ಡಾಲರ್​ಗೆ 75.65ಕ್ಕೆ ದಿನವನ್ನು ಪ್ರಾರಂಭಿಸಿತು. ದಿನದ ಅವಧಿಯಲ್ಲಿ 1 ಡಾಲರ್​ಗೆ 75.62-75.8450ರ ವ್ಯಾಪ್ತಿಯಲ್ಲಿ ವಹಿವಾಟು ನಡೆಸಿತು.

ದೇಶೀಯ ಷೇರುಗಳಲ್ಲಿನ ದೌರ್ಬಲ್ಯ ಮತ್ತು ವಿದೇಶೀ ಬಂಡವಾಳ ಹೂಡಿಕೆದಾರರು ಭಾರತೀಯ ಈಕ್ವಿಟಿ ಮಾರುಕಟ್ಟೆಗಳಿಂದ ಹಣವನ್ನು ಹಿಂತೆಗೆದುಕೊಳ್ಳುವುದನ್ನು ಮುಂದುವರಿಸುವ ಭಯವೂ ರೂಪಾಯಿಯ ಭಾವನೆಯನ್ನು ಘಾಸಿಗೊಳಿಸಿತು ಎಂದು ಡೀಲರ್‌ಗಳು ತಿಳಿಸಿದ್ದಾರೆ. 30 ಷೇರುಗಳ ಗುಚ್ಛ ಸೆನ್ಸೆಕ್ಸ್ ಕೇವಲ 20.46 ಪಾಯಿಂಟ್‌ಗಳು ಅಥವಾ ಶೇ 0.03ರಷ್ಟು ನಷ್ಟ ಕಂಡು, 58,786.67ಕ್ಕೆ ಮುಕ್ತಾಯವಾಯಿತು. ನಿಫ್ಟಿ- 50 ಸೂಚ್ಯಂಕವು 5.55 ಅಂಕಗಳನ್ನು ಅಥವಾ ಶೇ 0.03ರಷ್ಟು ಇಳಿದು, 17,511.30 ಪಾಯಿಂಟ್ಸ್ ತಲುಪಿತು. ಶುಕ್ರವಾರ ಭಾರತೀಯ ವಹಿವಾಟಿನ ಸಮಯದ ನಂತರ ಫೆಡರಲ್ ರಿಸರ್ವ್‌ನ ಆದ್ಯತೆ ಮಾಪಕವಾದ ಅಮೆರಿಕ ಗ್ರಾಹಕ ಬೆಲೆ ಹಣದುಬ್ಬರದ ಡೇಟಾವನ್ನು ನಿಗದಿಪಡಿಸಲಾಗಿದೆ.

ರಾಯಿಟರ್‌ನ ಅರ್ಥಶಾಸ್ತ್ರಜ್ಞರ ಸಮೀಕ್ಷೆಯ ಪ್ರಕಾರ, ಅಮೆರಿಕ ಹಣದುಬ್ಬರವು ನವೆಂಬರ್‌ನಲ್ಲಿ ವರ್ಷದಿಂದ ವರ್ಷಕ್ಕೆ ಶೇ 6.8ಕ್ಕೆ ಏರಿಕೆ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಇದು ಅಕ್ಟೋಬರ್‌ನಲ್ಲಿ ಶೇ 6.2ರ ಹೆಚ್ಚಳವನ್ನು ಮೀರಿದೆ. ಇದು 31 ವರ್ಷಗಳಲ್ಲಿ ಶೀಘ್ರ ಹೆಚ್ಚಳವಾಗಿದೆ. ಆರು ಪ್ರಮುಖ ಪ್ರತಿಸ್ಪರ್ಧಿ ಕರೆನ್ಸಿಗಳ ಬುಟ್ಟಿಗೆ ವಿರುದ್ಧವಾಗಿ ಗ್ರೀನ್‌ಬ್ಯಾಕ್ ಅನ್ನು ಅಳೆಯುವ ಅಮೆರಿಕ ಡಾಲರ್ ಸೂಚ್ಯಂಕವು ಶುಕ್ರವಾರ 96.41ಕ್ಕೆ ಬಲಗೊಂಡಿತು. ದೇಶದಲ್ಲಿ ಹಣದುಬ್ಬರ ಮತ್ತೆ ಏರಿಕೆಯಾಗಿದೆ. ದಿನದ ಆರಂಭದಲ್ಲಿ ಸೂಚ್ಯಂಕವು 96.12ರ ಆಸುಪಾಸಿನಲ್ಲಿತ್ತು. ಅಧ್ಯಕ್ಷ ಜೆರೋಮ್ ಪೊವೆಲ್ ಸೇರಿದಂತೆ ಫೆಡ್ ಅಧಿಕಾರಿಗಳು ಈಗಾಗಲೇ ಅಮೆರಿಕದ ಕೇಂದ್ರ ಬ್ಯಾಂಕ್ ದೇಶದಲ್ಲಿ ಹಣದುಬ್ಬರದ ಒತ್ತಡದ ನಡುವೆ ನಿರೀಕ್ಷೆಗಿಂತ ಬೇಗ ಬಡ್ಡಿದರಗಳನ್ನು ಹೆಚ್ಚಿಸಬಹುದು ಎಂದು ಸುಳಿವು ನೀಡಿದ್ದಾರೆ. ಪರಿಮಾಣಾತ್ಮಕ ಸರಾಗಗೊಳಿಸುವಿಕೆಯ ಜಾರಿಯನ್ನು ವೇಗಗೊಳಿಸಲು ಇದು ಸೂಕ್ತ ಆಗಬಹುದು ಎಂದು ಅವರು ಇತ್ತೀಚೆಗೆ ಹೇಳಿದ್ದರು.

“ಭಾರತೀಯ ರೂಪಾಯಿ ಸದ್ಯಕ್ಕೆ ರೂ. 75.70ರ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ. ಬಲವಾದ ಡಾಲರ್, ಎಫ್‌ಐಐ (ವಿದೇಶೀ ಸಾಂಸ್ಥಿಕ ಹೂಡಿಕೆ) ಹೊರಹರಿವು, ಈಕ್ವಿಟಿ ಮಾರುಕಟ್ಟೆಗಳಲ್ಲಿನ ಕರೆಕ್ಷನ್ ಮತ್ತು ಅಮೆರಿಕ ಫೆಡರಲ್ ರಿಸರ್ವ್‌ನಿಂದ ವೇಗವಾಗಿ ಕುಗ್ಗುವ ಸಾಧ್ಯತೆಯಿಂದಾಗಿ ಜುಲೈ 2020ರಿಂದ ಕಡಿಮೆಯಾಗಿದೆ. ಅದೇ ಸಮಯದಲ್ಲಿ, ಭಾರತದ ಕೇಂದ್ರೀಯ ಬ್ಯಾಂಕ್ ಹೊಂದಾಣಿಕೆಯಾಗಿ ಉಳಿದಿರುವುದು ದೇಶೀಯ ಕರೆನ್ಸಿಗೆ ಮತ್ತೊಂದು ನಕಾರಾತ್ಮಕ ಅಂಶವಾಗಿದೆ. ಹೆಚ್ಚಿನ ವ್ಯಾಪಾರ ಕೊರತೆ ಮತ್ತು ಆಹಾರದ ಬೆಲೆಗಳ ಏರಿಕೆಯು ರೂಪಾಯಿಯ ಮೇಲೆ ತೂಗುತ್ತಿದೆ,” ಎಂದು ತಜ್ಞರು ಹೇಳುತ್ತಾರೆ.

ಒಮಿಕ್ರಾನ್ ರೂಪಾಂತರ ಮತ್ತು ಸಂಭವನೀಯ ಫೆಡ್ ಬಿಗಿಗೊಳಿಸುವಿಕೆಯ ಮೇಲಿನ ಕಳವಳದಿಂದಾಗಿ ರೂಪಾಯಿ ಮೌಲ್ಯ ದುರ್ಬಲವಾಗಿ ಇರುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಆದರೂ ಒಮಿಕ್ರಾನ್ ತೀವ್ರತೆ ಕಡಿಮೆ ಇರಬಹುದು ಎಂಬ ನಿರೀಕ್ಷೆಗಳು ರೂಪಾಯಿಯಲ್ಲಿ ತೀವ್ರ ಕುಸಿತವನ್ನು ತಡೆಯಬಹುದು. ರೂಪಾಯಿಯು ಸುಮಾರು 75-74.80ರಲ್ಲಿ ಸಪೋರ್ಟ್ ಕಂಡುಕೊಳ್ಳಬಹುದು, ಆದರೆ ರೆಸಿಸ್ಟೆನ್ಸ್ ಸುಮಾರು 76 ರೂಪಾಯಿಯಲ್ಲಿ ಕಂಡುಬರುತ್ತದೆ. ಸರ್ಕಾರಿ ಬಾಂಡ್‌ಗಳು ದುರ್ಬಲಗೊಂಡಿವೆ. 10-ವರ್ಷದ ಬೆಂಚ್​ಮಾರ್ಕ್​ ಶೇ 6.10 ದರದ 2031ರ ಪೇಪರ್‌ನಲ್ಲಿನ ಯೀಲ್ಡ್ ಎರಡು ಬೇಸಿಸ್ ಪಾಯಿಂಟ್‌ಗಳನ್ನು ಶೇ 6.37ರಷ್ಟು ಹೆಚ್ಚಿಸಿದೆ ಎನ್ನಲಾಗಿದೆ.

ವಾರಾಂತ್ಯದಲ್ಲಿ ಜಾಗತಿಕ ಹಣಕಾಸು ಮಾರುಕಟ್ಟೆಗಳಲ್ಲಿನ ಏರಿಳಿತಗಳ ಆತಂಕದಿಂದ ಬಾಂಡ್ ಟ್ರೇಡರ್ಸ್ ನಿರ್ಣಾಯಕ ಅಮೆರಿಕ ಹಣದುಬ್ಬರ ದತ್ತಾಂಶಕ್ಕಿಂತ ಮುಂಚಿತವಾಗಿ ತಮ್ಮ ಪೋರ್ಟ್​ಫೋಲಿಯೋವನ್ನು ಹಗುರಗೊಳಿಸಲು ಆದ್ಯತೆ ನೀಡಿದ್ದಾರೆ.

ಇದನ್ನೂ ಓದಿ: Most Valuable Companies Of India: ಭಾರತದ ಅತ್ಯಂತ ಮೌಲ್ಯಯುತ ಕಂಪೆನಿಗಳ ಪಟ್ಟಿಯ ಮೊದಲ ಸ್ಥಾನದಲ್ಲಿ ರಿಲಯನ್ಸ್

ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಪ್ಪು ಪುತ್ರಿ ಧ್ರುತಿ
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಪ್ಪು ಪುತ್ರಿ ಧ್ರುತಿ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ
ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್