Post Office Savings Account: ಈ ಯೋಜನೆಯಲ್ಲಿ ಹೂಡಿದ 10 ಲಕ್ಷ ರೂಪಾಯಿಯಿಂದ 5 ವರ್ಷದಲ್ಲಿ 14 ಲಕ್ಷ ರೂ., ಜತೆಗೆ ತೆರಿಗೆ ಉಳಿತಾಯ
ಅಂಚೆ ಕಚೇರಿಯ ಈ ಉಳಿತಾಯ ಯೋಜನೆಯಲ್ಲಿ 10 ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡಿದಲ್ಲಿ ಐದು ವರ್ಷದಲ್ಲಿ 14 ಲಕ್ಷ ರೂಪಾಯಿ ಆಗುತ್ತದೆ. ಅದರ ಬಗ್ಗೆ ವಿವರಗಳು ಇಲ್ಲಿವೆ.
ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ (NSC) ಎಂಬುದು ಅಂಚೆ ಕಚೇರಿ ಉಳಿತಾಯ ಯೋಜನೆಗಳಲ್ಲೇ (Post Office Savings) ಜನಪ್ರಿಯವಾದದ್ದು. ಇದು ಸೆಕ್ಷನ್ 80C ಅಡಿಯಲ್ಲಿ ಖಾತ್ರಿಯ ಆದಾಯ ಮತ್ತು ತೆರಿಗೆ ಪ್ರಯೋಜನಗಳನ್ನು ಒದಗಿಸುತ್ತದೆ. ಅಪಾಯ ಬೇಡ ಅಂದುಕೊಳ್ಳುವ ಹೂಡಿಕೆದಾರರಿಗಾಗಿ ಫೈನಾನ್ಷಿಯಲ್ ಪ್ಲಾನರ್ಗಳು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಸಲಹೆ ನೀಡುತ್ತಾರೆ. ಏಕೆಂದರೆ ಇದು ಬಂಡವಾಳವನ್ನು ಸಂರಕ್ಷಿಸುತ್ತದೆ ಮತ್ತು ಇತರ ನಿಶ್ಚಿತ-ರಿಟರ್ನ್ ಉಳಿತಾಯ ಯೋಜನೆಗಳಿಗಿಂತ ಹೆಚ್ಚಿನ ಫಿಕ್ಸೆಡ್ ರಿಟರ್ನ್ ನೀಡುತ್ತದೆ. ವೈಯಕ್ತಿಕ ಹಣಕಾಸು ತಜ್ಞರ ಪ್ರಕಾರ, ಹಿರಿಯ ನಾಗರಿಕರು ಸ್ಥಿರವಾದ ಮಾಸಿಕ ಆದಾಯವನ್ನು ಗಳಿಸಲು ಎನ್ಎಸ್ಸಿ ಅನ್ನು ಬಳಸಬಹುದು. ಯಾವುದೇ ವ್ಯಕ್ತಿಯು ಸ್ವಂತ ಹೆಸರಿನಲ್ಲಿ ಅಥವಾ ಅಪ್ರಾಪ್ತ ವಯಸ್ಕರ ಪರವಾಗಿ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಎನ್‌ಎಸ್‌ಸಿಗಳನ್ನು ಇಬ್ಬರು ವ್ಯಕ್ತಿಗಳು ಜಂಟಿಯಾಗಿ ಖರೀದಿಸಬಹುದು, ಜಂಟಿಯಾಗಿ ಅಥವಾ ಬದುಕುಳಿದವರು ಯಾರಿರುತ್ತಾರೋ ಅವರಿಗೆ ಉಳಿಯುತ್ತದೆ.
ಎನ್ಎಸ್ಸಿ ಬಡ್ಡಿ ದರ ಸರ್ಕಾರವು ಪ್ರತಿ ತ್ರೈಮಾಸಿಕದಲ್ಲಿ ಎನ್ಎಸ್ಸಿಗಳ ಮೇಲಿನ ಬಡ್ಡಿದರವನ್ನು ನಿಗದಿಪಡಿಸುತ್ತದೆ. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದ ಪ್ರಸ್ತುತ ತ್ರೈಮಾಸಿಕ ದರವು ಶೇ 6.8ರಷ್ಟಿದೆ. ಈ ಬಡ್ಡಿ ದರದಲ್ಲಿ ನೀವು ಇಂದು 1000 ರೂಪಾಯಿಗಳ ಎನ್ಎಸ್ಸಿ ಗಳನ್ನು ಖರೀದಿಸಿದರೆ, ಐದು ವರ್ಷಗಳಲ್ಲಿ ನಿಮ್ಮ ಹೂಡಿಕೆಯು 1389 ರೂಪಾಯಿಗಳಿಗೆ ಏರುತ್ತದೆ. ಗರಿಷ್ಠ ಹೂಡಿಕೆ ಮಿತಿ ಇಲ್ಲದ ಕಾರಣ ಎನ್‌ಎಸ್‌ಸಿಗಳನ್ನು ಯಾವುದೇ ಮೊತ್ತಕ್ಕೆ ಖರೀದಿಸಬಹುದು. ಆದ್ದರಿಂದ ನೀವು ಈಗ ಎನ್ಎಸ್ಸಿಗಳಲ್ಲಿ 10 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ ನಿಮ್ಮ ಹಣವು ಐದು ವರ್ಷಗಳಲ್ಲಿ 13.89 ಲಕ್ಷಕ್ಕೆ ಏರುತ್ತದೆ.
ಎನ್ಎಸ್ಸಿ ತೆರಿಗೆ ಪ್ರಯೋಜನ ಪ್ರತಿ ಹಣಕಾಸು ವರ್ಷದಲ್ಲಿ ಎನ್‌ಎಸ್‌ಸಿಯಲ್ಲಿ ಹೂಡಿಕೆ ಮಾಡಿದ ರೂ. 1.5 ಲಕ್ಷದವರೆಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿಯಲ್ಲಿ ಆದಾಯ ತೆರಿಗೆ ಕಡಿತಕ್ಕೆ ಅರ್ಹತೆ ಪಡೆಯುತ್ತದೆ. ಎನ್ಎಸ್ಸಿ ಹೂಡಿಕೆಗಳ ಮೇಲೆ ಉತ್ಪತ್ತಿ ಆಗುವ ಬಡ್ಡಿಯನ್ನು ಪ್ರತಿ ವರ್ಷ ಮರು-ಹೂಡಿಕೆ ಮಾಡಲಾಗುವುದು ಮತ್ತು ಪ್ರತಿ ವರ್ಷ ಗರಿಷ್ಠ 1.5 ಲಕ್ಷ ರೂಪಾಯಿಗಳವರೆಗೆ ತೆರಿಗೆ ಕಡಿತಕ್ಕೆ ಅರ್ಹವಾಗಿದೆ. ಏಕೆಂದರೆ ಇದು ಪ್ರತಿ ವರ್ಷ ರೆಕರಿಂಗ್ ಆಗಿದೆ ಮತ್ತು ಮೆಚ್ಯೂರಿಟಿ ಮೇಲೆ ಪಾವತಿಸಲಾಗುತ್ತದೆ. ಆದರೂ ಎನ್ಎಸ್ಸಿ ಮೆಚ್ಯೂರ್ ಆದಾಗ ಗಳಿಸಿದ ಸಂಪೂರ್ಣ ಬಡ್ಡಿಯು ಠೇವಣಿದಾರರ ಕೈಯಲ್ಲಿ ತೆರಿಗೆಗೆ ಒಳಪಡುತ್ತದೆ. ಹಣಕಾಸು ಸಲಹೆಗಾರರ ಪ್ರಕಾರ, ಕಡಿಮೆ ಆದಾಯ ತೆರಿಗೆ ಗುಂಪಿನ ಹೂಡಿಕೆದಾರರಿಗೆ ಇದು ಸೂಕ್ತವಾಗಿದೆ. ಪ್ರಮಾಣಪತ್ರವನ್ನು ರಿಡೀಮ್ ಮಾಡಿದಾಗ ಯಾವುದೇ ಟಿಡಿಎಸ್ ಅನ್ನು ಕಡಿತಗೊಳಿಸಲಾಗುವುದಿಲ್ಲ ಎಂಬುದನ್ನು ಗಮನಿಸಬೇಕು.
ಎನ್ಎಸ್ಸಿಯ ಅವಧಿಪೂರ್ವ ನಗದು ಎನ್ಎಸ್ಸಿಯ ನಗದು ಅವಧಿಪೂರ್ವವಾಗಿ ತೆಗೆದುಕೊಳ್ಳುವುದಕ್ಕೆ ಮೂರು ಸಂದರ್ಭಗಳಲ್ಲಿ ಮಾತ್ರ ಅನುಮತಿಸಲಾಗಿದೆ: ಠೇವಣಿದಾರನ ಸಾವು, ನ್ಯಾಯಾಲಯದ ಆದೇಶಗಳು ಅಥವಾ ಅಡಮಾನದಿಂದ ಮುಟ್ಟುಗೋಲು. ಖರೀದಿಸಿದ ಒಂದು ವರ್ಷದೊಳಗೆ ಅದನ್ನು ರಿಡೀಮ್ ಮಾಡಿಕೊಂಡರೆ ಮುಖಬೆಲೆಯನ್ನು ಮಾತ್ರ ಪಾವತಿಸಲಾಗುತ್ತದೆ. ಪ್ರಮಾಣಪತ್ರಗಳನ್ನು ಒಂದು ವರ್ಷದ ನಂತರ, ಆದರೆ ಖರೀದಿಸಿದ ದಿನಾಂಕದಿಂದ ಮೂರು ವರ್ಷಗಳ ನಂತರ ಎನ್‌ಕ್ಯಾಶ್ ಮಾಡಿದರೆ ಪೋಸ್ಟ್ ಆಫೀಸ್ ಉಳಿತಾಯ ಖಾತೆಗೆ ಅನ್ವಯವಾಗುವ ಸರಳ ಬಡ್ಡಿದರವನ್ನು ಪಾವತಿಸಲಾಗುತ್ತದೆ. ಮತ್ತೊಂದೆಡೆ, ಎನ್ಎಸ್ಸಿಗಳು ಮೂರು ವರ್ಷಗಳ ಹೂಡಿಕೆ ನಂತರ ರಿಯಾಯಿತಿ ಮೌಲ್ಯವಾಗಿ ನಗದು ಮಾಡಬಹುದು.
ಇದನ್ನೂ ಓದಿ: ಎಸ್ಬಿಐ ಫಿಕ್ಸೆಡ್ ಡೆಪಾಸಿಟ್ಸ್ ವರ್ಸಸ್ ಅಂಚೆ ಕಚೇರಿ ಡೆಪಾಸಿಟ್ಸ್; ಎಲ್ಲಿ, ಎಷ್ಟು ಬಡ್ಡಿ ಸಿಗುತ್ತದೆ?