Economy: 2022-23ರಲ್ಲಿ ಭಾರತಕ್ಕೆ ಒಳ್ಳೆಯ ಜಿಡಿಪಿ ಸಿಗಲು ಹೂಡಿಕೆಗಳೇ ಕಾರಣ ಎಂತಾರೆ ಆರ್ಥಿಕ ತಜ್ಞರು; ಅದು ಹೇಗೆ ಸಾಧ್ಯ?

Investments Effect On Indian Economy: 2022-23ರ ವರ್ಷದಲ್ಲಿ ಭಾರತದ ಆರ್ಥಿಕ ಓಟಕ್ಕೆ ಗಾಲಿಗಳಾಗಿದ್ದು ಹೂಡಿಕೆಗಳೇ. 2023-24ರ ಹಣಕಾಸು ವರ್ಷದಲ್ಲೂ ಈ ಹೂಡಿಕೆಗಳೇ ಭಾರತದ ಆರ್ಥಿಕತೆಯನ್ನು ಕಾಪಾಡುತ್ತವೆ ಎಂಬುದು ಆರ್ಥಿಕ ತಜ್ಞರಗಳ ಅನಿಸಿಕೆ.

Economy: 2022-23ರಲ್ಲಿ ಭಾರತಕ್ಕೆ ಒಳ್ಳೆಯ ಜಿಡಿಪಿ ಸಿಗಲು ಹೂಡಿಕೆಗಳೇ ಕಾರಣ ಎಂತಾರೆ ಆರ್ಥಿಕ ತಜ್ಞರು; ಅದು ಹೇಗೆ ಸಾಧ್ಯ?
ನಿರ್ಮಾಣ ವಲಯ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 01, 2023 | 6:48 PM

ಬೆಂಗಳೂರು: ಭಾರತದ ಆರ್ಥಿಕತೆ (Indian Economy) 2022-23ರಲ್ಲಿ ಶೇ. 7.2ರಷ್ಟು ಬೆಳೆದು ಜಾಗತಿಕವಾಗಿ ಅಚ್ಚರಿ ಮೂಡಿಸಿದೆ. ಬಹುತೇಕ ಇತರ ಕಡೆ ಆರ್ಥಿಕ ಬೆಳವಣಿಗೆ ಮಂದವಾಗಿ ಸಾಗುತ್ತಿರುವ ಹೊತ್ತಲ್ಲಿ ಭಾರತದಲ್ಲಿ ವೇಗ ಪಡೆದಿರುವುದು ಗಮನಾರ್ಹ ಸಂಗತಿ. ಇಲ್ಲಿ ಅಚ್ಚರಿ ಎಂದರೆ ಆ ಹಣಕಾಸು ವರ್ಷದಲ್ಲಿ ಅನುಭೋಗ (Consumption) ಪ್ರಮಾಣದಲ್ಲಿ ಅಂಥ ಹೆಚ್ಚಳವಾಗಿಲ್ಲ. ಆದರೂ ಕೂಡ ಜಿಡಿಪಿ ಸಖತ್ತಾಗಿ ಹೆಚ್ಚಿದೆ. ಇದಕ್ಕೆ ಕಾರಣವಾಗಿದ್ದು ಹೂಡಿಕೆಗಳಂತೆ. ಹಾಗಂತ ಆರ್ಥಿಕ ತಜ್ಞರುಗಳು ಅಭಿಪ್ರಾಯಪಟ್ಟಿದ್ದಾರೆ. 2022-23ರ ವರ್ಷದಲ್ಲಿ ಭಾರತದ ಆರ್ಥಿಕ ಓಟಕ್ಕೆ ಗಾಲಿಗಳಾಗಿದ್ದು ಹೂಡಿಕೆಗಳೇ. 2023-24ರ ಹಣಕಾಸು ವರ್ಷದಲ್ಲೂ ಈ ಹೂಡಿಕೆಗಳೇ ಭಾರತದ ಆರ್ಥಿಕತೆಯನ್ನು ಕಾಪಾಡುತ್ತವೆ ಎಂಬುದು ಇವರುಗಳ ಅನಿಸಿಕೆ.

ಹೂಡಿಕೆಗಳಿಂದ ಆರ್ಥಿಕತೆಗೆ ಯಾವ ರೀತಿಯಲ್ಲಿ ಪ್ರಯೋಜನ?

ಬಂಡವಾಳ ಹೂಡಿಕೆಗಳು ವಿವಿಧ ವಲಯಗಳಿಗೆ ಪುಷ್ಟಿಕೊಡುತ್ತದೆ. ಉದಾಹರಣೆಗೆ, ನಿರ್ಮಾಣ ವಲಯಕ್ಕೆ ಅಂದರೆ ಕನ್ಸ್​ಟ್ರಕ್ಷನ್ ಸೆಕ್ಟರ್​ಗೆ ಹೆಚ್ಚು ಹೂಡಿಕೆ ಆದಾಗ ಗ್ರಾಮೀಣ ಭಾಗದ ಜನರಿಗೆ ಹೆಚ್ಚು ಉದ್ಯೋಗಾವಕಾಶ ಕೊಡುತ್ತದೆ. ಇಂಥದ್ದು ಎಲ್ಲಾ ವಲಯಕ್ಕೂ ಆದಾಗ ಉದ್ಯೋಗಸೃಷ್ಟಿ ಹೆಚ್ಚಾಗುತ್ತದೆ. ಅದರ ಪರಿಣಾಮವಾಗಿ ಆರ್ಥಿಕತೆಯ ಆರೋಗ್ಯ ಉತ್ತಮಗೊಳ್ಳುತ್ತದೆ ಎನ್ನುತ್ತಾರೆ ಆರ್ಥಿಕ ತಜ್ಞರು.

ಸರ್ಕಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಹೂಡಿಕೆಯ ಸಂಕೇತವಾಗಿರುವ ಗ್ರಾಸ್ ಫಿಕ್ಸೆಡ್ ಕ್ಯಾಪಿಟಲ್ ಫಾರ್ಮೇಶನ್ 2022-23ರಲ್ಲಿ ಶೇ. 11.4ರಷ್ಟು ಹೆಚ್ಚಾಗಿರುವುದು ಕಂಡು ಬಂದಿದೆ. ಈ ಹೂಡಿಕೆ ಸುಗ್ಗಿ ಈ ಹಣಕಾಸು ವರ್ಷದಲ್ಲೂ ಮುಂದುವರಿಯಲಿದೆ. ಈ ಹಣಕಾಸು ವರ್ಷದಲ್ಲಿ 10 ಲಕ್ಷ ಕೋಟಿ ರೂ ಹಣ ಹೂಡಿಕೆಗೆ ಯೋಜಿಸಿದೆ.

ಇದನ್ನೂ ಓದಿGDP Data: ಇಗೋ ನೋಡಿ ಭಾರತದ ಆರ್ಥಿಕ ಬೆಳವಣಿಗೆ; ಕೊನೆಯ ಕ್ವಾರ್ಟರ್​ನಲ್ಲಿ ಶೇ. 6.1, ಇಡೀ ವರ್ಷದಲ್ಲಿ ಶೇ. 7.2 ಜಿಡಿಪಿ ವೃದ್ಧಿ

ಅನುಭೋಗ ಪ್ರಮಾಣ ಕಡಿಮೆ; ಕಾರಣ ಏನು?

ಆರ್ಥಿಕತೆ ಚಟುವಟಿಕೆ ಉತ್ತಮದಿಂದರಲು ಅನುಭೋಗವೂ ಒಂದು ಪ್ರಮುಖ ಅಂಶ. ಭಾರತದಲ್ಲಿ ಭಾರತದಲ್ಲಿ ಕಳೆದ ವರ್ಷ ಕನ್ಸಂಪ್ಷನ್ ನಿರೀಕ್ಷಿತ ಮಟ್ಟದಲ್ಲಿ ಹೆಚ್ಚಿಲ್ಲ. ಕೊನೆಯ ಕ್ವಾರ್ಟರ್, ಅಂದರೆ ಜನವರಿಯಿಂದ ಮಾರ್ಚ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಅನುಭೋಗದ ಪ್ರಮಾಣ ಶೇ. 0.5ರಷ್ಟು ಮಾತ್ರ ಏರಿದೆ. 3ನೇ ಕ್ವಾರ್ಟರ್ ಅವಧಿ ಶೇ. 2ಎಷ್ಟು ಅನುಭೋಗ ಇಳಿಕೆಯಾಗಿದ್ದಕ್ಕೆ ಹೋಲಿಸಿದರೆ ಕೊನೆಯ ಕ್ವಾರ್ಟರ್​ನದ್ದು ಉತ್ತಮವೇ ಸರಿ.

ಅನುಭೋಗ ಅಥವಾ ಜನಸಾಮಾನ್ಯರು ಮಾಡುವ ಖರ್ಚು ಕಡಿಮೆ ಆಗಲು ಹಣದುಬ್ಬರ ಕಾರಣ ಇರಬಹುದು ಎಂಬುದು ಆರ್ಥಿಕ ತಜ್ಞರ ಅನಿಸಿಕೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್