ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯ ಸೇವಾ ಶುಲ್ಕ ಪರಿಷ್ಕರಿಸಿದ ಪೇಮೆಂಟ್ಸ್ ಬ್ಯಾಂಕ್; ಇಲ್ಲಿದೆ ಪರಿಷ್ಕೃತ ದರ

| Updated By: ಗಣಪತಿ ಶರ್ಮ

Updated on: Nov 04, 2022 | 5:08 PM

ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯ ಸೇವಾ ಶುಲ್ಕವನ್ನು ‘ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್’ ಪರಿಷ್ಕರಿಸಿದೆ. ಪರಿಷ್ಕೃತ ದರ ಡಿಸೆಂಬರ್ 1ರಿಂದ ಜಾರಿಗೆ ಬರಲಿದೆ.

ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯ ಸೇವಾ ಶುಲ್ಕ ಪರಿಷ್ಕರಿಸಿದ ಪೇಮೆಂಟ್ಸ್ ಬ್ಯಾಂಕ್; ಇಲ್ಲಿದೆ ಪರಿಷ್ಕೃತ ದರ
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್
Image Credit source: Twitter
Follow us on

ನವದೆಹಲಿ: ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯ (AePS) ಸೇವಾ ಶುಲ್ಕವನ್ನು ‘ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB)’ ಪರಿಷ್ಕರಿಸಿದೆ. ಪರಿಷ್ಕೃತ ದರ ಡಿಸೆಂಬರ್ 1ರಿಂದ ಜಾರಿಗೆ ಬರಲಿದೆ. ಪೇಮೆಂಟ್ಸ್ ಬ್ಯಾಂಕ್ ಹೊರತುಪಡಿಸಿ ಬೇರೆ ನೆಟ್​ವರ್ಕ್​ಗೆ ಪಾವತಿ ಮಾಡುವುದಿದ್ದರೆ ತಿಂಗಳಿಗೆ ಒಂದು ವಹಿವಾಟು ಉಚಿತವಾಗಿರಲಿದೆ. ನಂತರದ ವಹಿವಾಟಿಗೆ ಶುಲ್ಕ ತೆರಬೇಕಾಗುತ್ತದೆ. ಇವುಗಳಲ್ಲಿ ನಗದು ಠೇವಣಿ, ಹಿಂಪಡೆಯುವಿಕೆ ಅಥವಾ ವಿತ್​ಡ್ರಾ, ಮಿನಿ ಸ್ಟೇಟ್​​ಮೆಂಟ್ ಸೇರಿವೆ ಎಂದು ಪೇಮೆಂಟ್ಸ್ ಬ್ಯಾಂಕ್ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಪರಿಷ್ಕೃತ ಸೇವಾ ಶುಲ್ಕದ ವಿವರ

ನಗದು ವಿತ್​ಡ್ರಾ ಮತ್ತು ಠೇವಣಿಗೆ ಉಚಿತ ವಹಿವಾಟಿನ ಮಿತಿಯ ನಂತರ 20 ರೂ. ಹಾಗೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಪಾವತಿಸಬೇಕಾಗುತ್ತದೆ. ಎಇಪಿಎಸ್​ ಮಿನಿ ಸ್ಟೇಟ್​ಮೆಂಟ್​ಗೆ ಪೇಮೆಂಟ್ಸ್​ ಬ್ಯಾಂಕ್ 5 ರೂ. ಸೇವಾ ಶುಲ್ಕ ವಿಧಿಸಲಿದೆ.

ಇದನ್ನೂ ಓದಿ
Personal Loan: ವೈಯಕ್ತಿಕ ಸಾಲದ ಅರ್ಹತೆ ಹೆಚ್ಚಿಸಿಕೊಳ್ಳಲು ಇಲ್ಲಿವೆ 4 ಸರಳ ವಿಧಾನ
Amazon Hiring: ಉದ್ಯೋಗಾಕಾಂಕ್ಷಿಗಳಿಗೆ ನಿರಾಸೆ; ನೇಮಕಾತಿ ಮುಂದೂಡಿಕೆ ಘೋಷಿಸಿದ ಅಮೆಜಾನ್
EPFO Amendment: ಇಪಿಎಫ್​ಒ 2014ರ ತಿದ್ದುಪಡಿ ಎತ್ತಿಹಿಡಿದ ಸುಪ್ರೀಂ ಕೋರ್ಟ್; ಹೆಚ್ಚು ಪಿಂಚಣಿ ಬಯಸಿದ್ದವರಿಗೆ ನಿರಾಸೆ
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ; ಬಾಕಿ ಇರುವ ತುಟ್ಟಿಭತ್ಯೆ 3 ಕಂತಿನಲ್ಲಿ ನೀಡುವ ನಿರೀಕ್ಷೆ

ಇದನ್ನೂ ಓದಿ: Payments Bank: ಪೇಮೆಂಟ್ಸ್ ಬ್ಯಾಂಕ್​ಗಳ ಗ್ರಾಹಕರು 2 ಲಕ್ಷ ರೂಪಾಯಿ ತನಕ ಬ್ಯಾಲೆನ್ಸ್ ಇಡಲು ಅವಕಾಶ

ಭಾರತೀಯ ರಾಷ್ಟ್ರೀಯ ಪಾವತಿ ನಿಗಮದ (NPCI) ವೆಬ್​ಸೈಟ್ ಮಾಹಿತಿಯ ಪ್ರಕಾರ, ಎಇಪಿಎಸ್​ ಎಂಬುದು ಬ್ಯಾಂಕ್ ನೇತೃತ್ವದ ಮಾದರಿಯಾಗಿದೆ. ಇದು ಆಧಾರ್ ದೃಢೀಕರಣವನ್ನು ಬಳಸಿಕೊಂಡು ಯಾವುದೇ ಬ್ಯಾಂಕಿನ ಬ್ಯುಸಿನೆಸ್ ಕರೆಸ್ಪಾಂಡೆಂಟ್ ಮೂಲಕ ಪಿಒಎಸ್​ನಲ್ಲಿ (MicroATM) ಆನ್‌ಲೈನ್ ಇಂಟರ್‌ಆಪರೇಬಲ್ ಹಣಕಾಸು ಸೇರ್ಪಡೆ ವಹಿವಾಟನ್ನು ಅನುಮತಿಸುತ್ತದೆ. ಈ ವಿಧಾನದಲ್ಲಿ ಆರು ವಿಧಧ ವಹಿವಾಟು ನಡೆಸಬಹುದಾಗಿದೆ.

ಆಧಾರ್ ಆಧಾರಿತ ಪಾವತಿ ವ್ಯವಸ್ಥೆ ಎಂದರೆ…

‘ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಅಭಿವೃದ್ಧಿಪಡಿಸಿದ ಬ್ಯಾಂಕ್ ನೇತೃತ್ವದ ಮಾದರಿಯಾಗಿದೆ. ಈ ವ್ಯವಸ್ಥೆಯ ಮೂಲಕ ಮೈಕ್ರೋ ಎಟಿಎಂ, ಕಿಯೋಸ್ಕ್, ಮೊಬೈಲ್ ಸಾಧನಗಳನ್ನು ಬಳಸಿಕೊಂಡು ಯಾವುದೇ ಬ್ಯಾಂಕಿನ ಅಧಿಕೃತ ಉದ್ಯಮ ಕರೆಸ್ಪಾಂಡೆಂಟ್ ಮೂಲಕ ಆಧಾರ್ ದೃಢೀಕರಣದೊಂದಿಗೆ ಆನ್​ಲೈನ್ ವ್ಯವಹಾರ ನಡೆಸಬಹುದು. ಆಧಾರ್ ಲಿಂಕ್ ಮಾಡಿರುವ ಖಾತೆದಾರರಿಗೆ ದೃಢೀಕರಣದ ಮೂಲಕ ವಿವಿಧ ಸೇವೆಗಳನ್ನು ನೀಡುವ ಸಲುವಾಗಿ ರಾಷ್ಟ್ರೀಯ ಪಾವತಿ ನಿಗಮ ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಆಧಾರ್ ಸಂಖ್ಯೆಯನ್ನು ಖಾತೆಯೊಂದಿಗೆ ಜೋಡಣೆ ಮಾಡಿರುವ ಭಾರತೀಯರು ಈ ಸೇವೆಯನ್ನು ಪಡೆಯಬಹುದಾಗಿದೆ’ ಎಂದು ರಾಷ್ಟ್ರೀಯ ಪಾವತಿ ನಿಗಮದ ಪ್ರಕಟಣೆ ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ