India Posts Payments Bank: ಇಂಡಿಯಾ ಪೋಸ್ಟ್ಸ್ ಪೇಮೆಂಟ್ಸ್ ಬ್ಯಾಂಕ್​ಗೆ ಮೂರು ವರ್ಷಗಳಲ್ಲಿ 5 ಕೋಟಿ ಗ್ರಾಹಕರು

ಇಂಡಿಯಾ ಪೋಸ್ಟ್ಸ್​ ಪೇಮೆಂಟ್ಸ್ ಬ್ಯಾಂಕ್ ಗ್ರಾಹಕರ ಸಂಖ್ಯೆಯು ಮೂರು ವರ್ಷದಲ್ಲಿ 5 ಕೋಟಿಯನ್ನು ದಾಟಿದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

India Posts Payments Bank: ಇಂಡಿಯಾ ಪೋಸ್ಟ್ಸ್ ಪೇಮೆಂಟ್ಸ್ ಬ್ಯಾಂಕ್​ಗೆ ಮೂರು ವರ್ಷಗಳಲ್ಲಿ 5 ಕೋಟಿ ಗ್ರಾಹಕರು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jan 18, 2022 | 10:57 PM

ಇಂಡಿಯಾ ಪೋಸ್ಟ್ಸ್ ಪೇಮೆಂಟ್ಸ್ ಬ್ಯಾಂಕ್ (India Posts Payments Bank) ಮಂಗಳವಾರದಂದು (ಜನವರಿ 18) ಘೋಷಣೆ ಮಾಡಿದ ಪ್ರಕಾರ, ಕಾರ್ಯಾಚರಣೆ ಆರಂಭಿಸಿದ ಮೂರು ವರ್ಷಗಳಲ್ಲಿ 5 ಕೋಟಿ ಗ್ರಾಹಕರನ್ನು ದಾಟಿ, ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಪಾವತಿ ಬ್ಯಾಂಕ್‌ಗಳಲ್ಲಿ ಒಂದು ಎನಿಸಿಕೊಂಡಿದೆ. ಐಪಿಪಿಬಿ ತನ್ನ 1.36 ಲಕ್ಷ ಅಂಚೆ ಕಚೇರಿಗಳ ಮೂಲಕ ಈ ಐದು ಕೋಟಿ ಖಾತೆಗಳನ್ನು ಡಿಜಿಟಲ್ ಮತ್ತು ಕಾಗದರಹಿತ ವಿಧಾನದಲ್ಲಿ ತೆರೆದಿದೆ. ಅದರಲ್ಲಿ 1.20 ಲಕ್ಷ ಅಂಚೆ ಕಚೇರಿ ಗ್ರಾಮೀಣ ಪ್ರದೇಶಗಳಲ್ಲಿ, ಸುಮಾರು 1.47 ಲಕ್ಷ ಮನೆ ಬಾಗಿಲಿನ ಬ್ಯಾಂಕಿಂಗ್ ಸೇವಾ ಪೂರೈಕೆದಾರರ ನೆರವನ್ನು ಹೊಂದಿದೆ. “ಇದರೊಂದಿಗೆ ಐಪಿಪಿಬಿ 2,80,000 ಅಂಚೆ ಕಚೇರಿ ಉದ್ಯೋಗಿಗಳ ಬಲವನ್ನು ಹೆಚ್ಚಿಸುವ ಮೂಲಕ ಆರ್ಥಿಕವಾಗಿ ತಿಳಿವಳಿಕೆಯುಳ್ಳ ಮತ್ತು ಸಶಕ್ತ ಗ್ರಾಹಕ-ಬೇಸ್ ಅನ್ನು ನಿರ್ಮಿಸಿ ವಿಶ್ವದ ಅತಿದೊಡ್ಡ ಡಿಜಿಟಲ್ ಆರ್ಥಿಕ ಸಾಕ್ಷರತಾ ಕಾರ್ಯಕ್ರಮ ಸಾಧಿಸಿದೆ. ಐಪಿಪಿಬಿ ಡಿಜಿಟಲ್ ಬ್ಯಾಂಕಿಂಗ್ ತಳಮಟ್ಟದವರೆಗೆ ಕೊಂಡೊಯ್ದಿದೆ ಎಂದು ಹೇಳಿದೆ. ಎನ್‌ಪಿಸಿಐ, ಆರ್‌ಬಿಐ ಮತ್ತು ಯುಐಡಿಎಐನ ಇಂಟರ್‌ಆಪರೇಬಲ್ ಪಾವತಿಗಳು ಮತ್ತು ವಿಲೇವಾರಿ ವ್ಯವಸ್ಥೆಗಳ ಮೂಲಕ 13 ಭಾಷೆಗಳಲ್ಲಿ ಸೇವೆಗಳನ್ನು ನೀಡುತ್ತಿದೆ, ” ಎಂದು ಸಂವಹನ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಒಟ್ಟು ಖಾತೆದಾರರಲ್ಲಿ ಸುಮಾರು ಶೇ 48ರಷ್ಟು ಮಹಿಳಾ ಖಾತೆದಾರರಾಗಿದ್ದರೆ, ಶೇ 52ರಷ್ಟು ಪುರುಷರು ಇದ್ದಾರೆ. ಮಹಿಳಾ ಗ್ರಾಹಕರನ್ನು ಬ್ಯಾಂಕಿಂಗ್ ನೆಟ್‌ವರ್ಕ್ ಅಡಿಯಲ್ಲಿ ತರಲು ಬ್ಯಾಂಕ್‌ ಗಮನವನ್ನು ನೀಡುತ್ತಿದೆ. ಸುಮಾರು ಶೇ 98ರಷ್ಟು ಮಹಿಳೆಯರ ಖಾತೆಗಳನ್ನು ಮನೆ ಬಾಗಿಲಲ್ಲಿ ತೆರೆಯಲಾಗಿದೆ ಹಾಗೂ ಶೇ 68ಕ್ಕಿಂತ ಹೆಚ್ಚು ಮಹಿಳೆಯರು ನೇರ ನಗದು ವರ್ಗಾವಣೆ (DBT) ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಲು ಯುವಕರನ್ನು ಆಕರ್ಷಿಸಿದೆ ಎಂದು ಐಪಿಪಿಬಿ ಬಹಿರಂಗಪಡಿಸಿದೆ. ಶೇ 41ಕ್ಕಿಂತ ಹೆಚ್ಚು ಖಾತೆದಾರರು 18ರಿಂದ 35 ವರ್ಷ ವಯಸ್ಸಿನವರಾಗಿದ್ದಾರೆ.

“ಇಂಡಿಯಾ ಪೋಸ್ಟ್‌ನಲ್ಲಿ ನಗರ ಮತ್ತು ಗ್ರಾಮೀಣ ಭಾಗ ಎರಡನ್ನೂ ಒಳಗೊಂಡಿರುವ ಭಾರತದಲ್ಲಿನ ಅತಿದೊಡ್ಡ ಆರ್ಥಿಕ ಸೇರ್ಪಡೆ ನೆಟ್‌ವರ್ಕ್‌ಗಳಲ್ಲಿ ಒಂದಾಗಲು ನಾವು ಬದ್ಧರಾಗಿದ್ದೇವೆ. 3 ವರ್ಷಗಳ ಅಲ್ಪಾವಧಿಯಲ್ಲಿ ಐದು ಕೋಟಿ ಗ್ರಾಹಕರನ್ನು ತಲುಪುವುದು ವೆಚ್ಚವನ್ನು ಉಳಿಸುವ ಈ ಮಾದರಿಯ ಯಶಸ್ಸಿನ ಬಗ್ಗೆ ಹೇಳುತ್ತದೆ – ವಿಶೇಷವಾಗಿ ಗ್ರಾಮೀಣ ಭಾರತಕ್ಕೆ ಪರಿಣಾಮಕಾರಿ, ಸರಳ, ಸುಲಭ ಮತ್ತು ಸುರಕ್ಷಿತ ಡಿಜಿಟಲ್ ಪರಿಸರ ವ್ಯವಸ್ಥೆ ಇದಾಗಿದೆ. ನಾವು ಗ್ರಾಮೀಣ ಮಹಿಳೆಯರನ್ನು ಅವರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಲು ಸಬಲೀಕರಣಗೊಳಿಸಬಹುದು ಎಂದು ಸಂತೋಷಪಡುತ್ತೇವೆ,” ಎಂದು ಅಂಚೆ ಇಲಾಖೆ ಕಾರ್ಯದರ್ಶಿ ಹೇಳಿದ್ದಾರೆ.

ಐಪಿಪಿಬಿ ಎಂ.ಡಿ. ಮತ್ತು ಸಿಇಒ ವೆಂಕಟರಾಮು ಮಾತನಾಡಿ, “ಕೊವಿಡ್ -19 ಸಾಂಕ್ರಾಮಿಕ ಸಮಯದಲ್ಲಿಯೂ ತಡೆರಹಿತ ಬ್ಯಾಂಕಿಂಗ್ ಮತ್ತು ಜಿ2ಸಿ ಸೇವೆಗಳನ್ನು ಒದಗಿಸುವಾಗ ಈ ಗ್ರಾಹಕರ ನೆಲೆಯನ್ನು ನಿರ್ಮಿಸುವ ಮೂಲಕ ನಾವು ಪ್ರಬಲದಿಂದ ಪ್ರಬಲಕ್ಕೆ ಸಾಗಿರುವುದು ಬ್ಯಾಂಕ್‌ಗೆ ಹೆಮ್ಮೆಯ ಕ್ಷಣವಾಗಿದೆ. ಬ್ಯಾಂಕ್ ತನ್ನ ಗ್ರಾಹಕರಿಗೆ ಸಂಪೂರ್ಣ ಡಿಜಿಟಲ್ ಮತ್ತು ಕಾಗದರಹಿತ ಬ್ಯಾಂಕಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಅಳೆಯಲು ಸಾಧ್ಯವಾಗುತ್ತದೆ. ಜನರಿಗೆ ಅವರ ಮನೆ ಬಾಗಿಲಿಗೆ ಸೇವೆ ಸಲ್ಲಿಸುತ್ತದೆ. ಸೂಕ್ತವಾದ ಉತ್ಪನ್ನಗಳು ಮತ್ತು ಸೇವೆಗಳ ಸಹಯೋಗ ಹಾಗೂ ಸಹಯೋಗದಲ್ಲಿ ಸೃಷ್ಟಿ ಮೂಲಕ ಗ್ರಾಮೀಣ, ಕಡಿಮೆ ಬ್ಯಾಂಕ್​ ವ್ಯವಸ್ಥೆ ಮತ್ತು ಬ್ಯಾಂಕ್ ವ್ಯವಸ್ಥೆ ದೊರೆಯದ ನಾಗರಿಕರಿಗೆ ಸೇವೆ ಸಲ್ಲಿಸಲು ಐಪಿಪಿಬಿ ಬದ್ಧವಾಗಿದೆ,” ಎಂದಿದ್ದಾರೆ.

ಇದನ್ನೂ ಓದಿ: Post Office Scheme: ಪೋಸ್ಟ್ ಆಫೀಸ್​ನ ಈ ಯೋಜನೆಯಲ್ಲಿ ತಿಂಗಳಿಗೆ 10 ಸಾವಿರ ಹೂಡಿಕೆ ಮಾಡಿದರೆ ಆಗಬಹುದು ಮಿಲಿಯನೇರ್

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್