Post Office Schemes: ಪೋಸ್ಟ್​ ಆಫೀಸ್​ನ ಈ ಸ್ಕೀಮ್​ನಲ್ಲಿ ಹಣ ತೊಡಗಿಸಿದರೆ ಖಾತ್ರಿ ರಿಟರ್ನ್ಸ್, ಹೂಡಿಕೆ ಡಬಲ್

ಪೋಸ್ಟ್ ಆಫೀಸ್​ನ ಈ ಹೂಡಿಕೆಯಲ್ಲಿ ಖಾತ್ರಿ ರಿಟರ್ನ್ಸ್ ಮತ್ತು ಹಣ ದುಪ್ಪಟ್ಟಾಗುತ್ತದೆ. ಯಾವುದು ಆ ಯೋಜನೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

Post Office Schemes: ಪೋಸ್ಟ್​ ಆಫೀಸ್​ನ ಈ ಸ್ಕೀಮ್​ನಲ್ಲಿ ಹಣ ತೊಡಗಿಸಿದರೆ ಖಾತ್ರಿ ರಿಟರ್ನ್ಸ್, ಹೂಡಿಕೆ ಡಬಲ್
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Srinivas Mata

Updated on: Nov 22, 2021 | 2:27 PM

ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳಲ್ಲಿ ಕಿಸಾನ್ ವಿಕಾಸ್ ಪತ್ರವೂ ಒಂದು. ಇದು ಖಚಿತವಾದ ಖಾತ್ರಿಯ ಲಾಭದೊಂದಿಗೆ ಹೂಡಿಕೆದಾರರ ಹಣವನ್ನು ದ್ವಿಗುಣಗೊಳಿಸುವ ಭರವಸೆ ನೀಡುತ್ತದೆ. ಇದು ಕೇಂದ್ರ ಸರ್ಕಾರ ಬೆಂಬಲಿತ ಸಣ್ಣ ಉಳಿತಾಯ ಯೋಜನೆಗಳಲ್ಲಿ ಒಂದಾಗಿದೆ. ಕೇಂದ್ರವು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಬದಲಾಯಿಸದೆ ಹಾಗೇ ಬಿಟ್ಟಾಗಿನಿಂದ ಕಿಸಾನ್ ವಿಕಾಸ್ ಪತ್ರದ ಬಡ್ಡಿ ದರವೂ ಶೇ 6.9ರಲ್ಲೇ ಸ್ಥಿರವಾಗಿದೆ. ಇಂಡಿಯಾ ಪೋಸ್ಟ್ ವೆಬ್‌ಸೈಟ್ ಪ್ರಕಾರ, ಈ ಪೋಸ್ಟ್ ಆಫೀಸ್ ಯೋಜನೆಯು 124 ತಿಂಗಳ ಮೆಚ್ಯೂರಿಟಿ ಅವಧಿಯನ್ನು ಹೊಂದಿದೆ ಮತ್ತು ಈ ಅವಧಿಯಲ್ಲಿ ಹೂಡಿಕೆದಾರರ ಹಣವು ದ್ವಿಗುಣಗೊಳ್ಳುತ್ತದೆ ಎಂದು ಇಂಡಿಯಾ ಪೋಸ್ಟ್ ಹೇಳಿಕೊಂಡಿದೆ.

“ಹೂಡಿಕೆ ಮಾಡಿದ ಮೊತ್ತ (ಕೆವಿಪಿಯಲ್ಲಿ) 124 ತಿಂಗಳುಗಳಲ್ಲಿ ದ್ವಿಗುಣಗೊಳ್ಳುತ್ತದೆ.” ಈ ಸಣ್ಣ ಉಳಿತಾಯ ಯೋಜನೆಯಲ್ಲಿ ಕನಿಷ್ಠ 1,000 ರೂಪಾಯಿ ಮತ್ತು 100 ರೂಪಾಯಿಯ ಗುಣಕದಲ್ಲಿ ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿಲ್ಲದೆ ಹೂಡಬಹುದು. ಹೂಡಿಕೆದಾರರು ಎಷ್ಟು ಪೋಸ್ಟ್ ಆಫೀಸ್ KVP ಖಾತೆಗಳನ್ನು ತೆರೆಯಬಹುದು ಎಂಬುದಕ್ಕೆ ನಿರ್ಬಂಧವಿಲ್ಲ. ನಿಗದಿತ ಅರ್ಜಿ ನಮೂನೆಯೊಂದಿಗೆ ಸಂಬಂಧಿಸಿದ ಅಂಚೆ ಕಚೇರಿಯಲ್ಲಿ ಸಲ್ಲಿಸುವ ಮೂಲಕ KVPಯನ್ನು ಭದ್ರತೆಯಾಗಿ ಅಡಮಾನ ಮಾಡಬಹುದು ಅಥವಾ ವರ್ಗಾಯಿಸಬಹುದು. ಹೂಡಿಕೆದಾರರು ತಮ್ಮ KVP ಪ್ರಮಾಣಪತ್ರವನ್ನು ಒಂದು ಅಂಚೆ ಕಚೇರಿಯಿಂದ ಇನ್ನೊಂದಕ್ಕೆ ವರ್ಗಾಯಿಸಬಹುದು. ವಾಸ್ತವವಾಗಿ, ಕಿಸಾನ್ ವಿಕಾಸ್ ಪ್ರಮಾಣಪತ್ರವನ್ನು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ವರ್ಗಾಯಿಸಬಹುದು.

ಪೋಸ್ಟ್ ಆಫೀಸ್ ಕಿಸಾನ್ ವಿಕಾಸ್ ಪತ್ರ ಯೋಜನೆಯ ಕುರಿತು ಮಾತನಾಡಿದ ತಜ್ಞರು, “ಪೋಸ್ಟ್ ಆಫೀಸ್ ಕಿಸಾನ್ ವಿಕಾಸ್ ಪತ್ರದಲ್ಲಿ ಬಡ್ಡಿದರವನ್ನು ಹೂಡಿಕೆಯ ಅವಧಿಯುದ್ದಕ್ಕೂ ನಿಗದಿಪಡಿಸಲಾಗುತ್ತದೆ. ಠೇವಣಿಯ ಮೇಲೆ ಕೇಂದ್ರದಿಂದ ನೀಡಲಾಗುವ ಕೆವಿಪಿ ಬಡ್ಡಿ ದರವನ್ನು ಹೂಡಿಕೆದಾರರು ಪಡೆಯುತ್ತಾರೆ. ಯಾರಾದರೂ ಪೋಸ್ಟ್ ಆಫೀಸ್ ಕಿಸಾನ್ ವಿಕಾಸ್ ಪತ್ರ ಖಾತೆಯನ್ನು ಜನವರಿಯಿಂದ ಮಾರ್ಚ್ 2020ರ ತ್ರೈಮಾಸಿಕದಲ್ಲಿ ತೆರೆದಿದ್ದರೆ, ಮೆಚ್ಯೂರಿಟಿಯ ಸಮಯದಲ್ಲಿ ಶೇ 7.6ರ ವಾರ್ಷಿಕ ಬಡ್ಡಿದರವನ್ನು ಪಡೆಯುತ್ತಾರೆ. ಸದ್ಯಕ್ಕೆ ಕಿಸಾನ್ ವಿಕಾಸ್​ ಪತ್ರಕ್ಕೆ ತ್ರೈಮಾಸಿಕದಲ್ಲಿ ತೆರೆಯುವ ಹೊಸ ಖಾತೆಗಳಿಗೆ ಬಡ್ಡಿ ದರವು ಶೇಕಡಾ 6.9 ರಷ್ಟಿದೆ.

2020ರ ಏಪ್ರಿಲ್‌ನಿಂದ ಜೂನ್‌ವರೆಗೆ KVP ಬಡ್ಡಿ ದರವನ್ನು ಶೇ 7.6ರಿಂದ ಶೇ 6.9ಕ್ಕೆ ಇಳಿಸಲಾಯಿತು ಮತ್ತು ಇದು ಇಲ್ಲಿಯವರೆಗೆ ಸ್ಥಿರವಾಗಿದೆ. ಆದ್ದರಿಂದ ಪೋಸ್ಟ್ ಆಫೀಸ್ ಕಿಸಾನ್ ವಿಕಾಸ್ ಪತ್ರ ಖಾತೆಗೆ ರಿಟರ್ನ್ಸ್ ಅಪಾಯಮುಕ್ತ, ಸುರಕ್ಷಿತ ಮತ್ತು ಖಾತ್ರಿ ಆಗಿದೆ. ಉಳಿತಾಯ ತಜ್ಞರು ಹೇಳುವಂತೆ, “ಈ ಪೋಸ್ಟ್ ಆಫೀಸ್ ಸಣ್ಣ ಉಳಿತಾಯ ಯೋಜನೆಯು ಅಪಾಯ ಬೇಡ ಅಂದುಕೊಳ್ಳುವವರಿಗೆ ಸರಿಹೊಂದುತ್ತದೆ. ವೈವಿಧ್ಯಮಯ ಪೋರ್ಟ್​ಫೋಲಿಯೋ ನಂಬುವವರಿಗೆ, ಕೆಲವು ಭಾಗವನ್ನು ಸುರಕ್ಷಿತವಾಗಿರಲಿ ಎಂದು ಬಯಸುವವರೆಗೂ ಇದು ಸೂಕ್ತವಾಗಿದೆ. ಇದು ಖಾತ್ರಿಪಡಿಸಿದ ರಿಟರ್ನ್ಸ್ ಯೋಜನೆಯಾಗಿದೆ.”

ಇದನ್ನೂ ಓದಿ: Post Office Scheme: ಪೋಸ್ಟ್ ಆಫೀಸ್​ನ ಈ ಯೋಜನೆಯಲ್ಲಿ ತಿಂಗಳಿಗೆ 10 ಸಾವಿರ ಹೂಡಿಕೆ ಮಾಡಿದರೆ ಆಗಬಹುದು ಮಿಲಿಯನೇರ್