ಭರವಸೆ, ಆಶಾವಾದದಿಂದ ಮುನ್ನಡೆಯುತ್ತಿರುವ ಮಾರ್ಕೆಟ್, ಏರಿಕೆ ಹಾಗೇ ಉಳಿಕೆ: AMFI ಮುಖ್ಯಸ್ಥ ಬಾಲಸುಬ್ರಮಣಿಯನ್
ಭಾರತದ ಮ್ಯೂಚ್ಯುವಲ್ ಫಂಡ್ ಮಾರುಕಟ್ಟೆ ಮತ್ತು ಹೂಡಿಕೆ ಬಗ್ಗೆ ಎಎಂಎಫ್ಐ ಅಧ್ಯಕ್ಷರಾದ ಎ. ಬಾಲಸುಬ್ರಮಣಿಯನ್ ಅವರ ಸಂದರ್ಶನ ಇಲ್ಲಿದೆ.
ಎಎಂಎಫ್ಐ (AMFI) ಅಧ್ಯಕ್ಷರಾಗಿದ್ದ ತಮ್ಮ ಅಧಿಕಾರಾವಧಿಯಲ್ಲಿ ಭಾರತದಲ್ಲಿ ಬಹುಶಃ ಅತ್ಯಂತ ನವೀನ ಮತ್ತು ಪ್ರಭಾವಶಾಲಿ ವೈಯಕ್ತಿಕ ಹಣಕಾಸು ಅಭಿಯಾನವನ್ನು ಪ್ರಾರಂಭಿಸಿದ ವ್ಯಕ್ತಿ ಇವರು. ‘ಮ್ಯೂಚುವಲ್ ಫಂಡ್ ಸಾಹಿ ಹೈ’ ಅಭಿಯಾನವು ವ್ಯವಸ್ಥಿತ ಹೂಡಿಕೆ ಯೋಜನೆ (SIP) ಕಲ್ಪನೆಯು ಮುಖ್ಯವಾಹಿನಿಯಲ್ಲಿ ದಿನನಿತ್ಯ ಕುಟುಂಬಗಳಲ್ಲಿ ಸಂಭಾಷಣೆಯ ಭಾಗವಾಗಿಸಿದೆ. ರಿಟರ್ನ್ಸ್ ಚೆನ್ನಾಗಿದೆ. ಈಗ ಭಾರತಕ್ಕೆ ಹಣಕಾಸು ಒದಗಿಸುವ ಅಗತ್ಯ ಇರುವುದರಿಂದ ಮ್ಯೂಚುವಲ್ ಫಂಡ್ ಉದ್ಯಮದ ಬಿಗ್ ಬಾಸ್ ಆಗಿ ಎರಡನೇ ಅವಧಿಯಲ್ಲಿ ಎ. ಬಾಲಸುಬ್ರಮಣ್ಯನ್ ಅವರು SIP ಅನ್ನು ‘ಮನೆ ಮನೆ’ ವಿದ್ಯಮಾನವನ್ನಾಗಿ ಮಾಡಲು ಸಿದ್ಧರಾಗಿದ್ದಾರೆ.
“ಲೀಡರ್ಸ್ ಆಫ್ ಗ್ಲೋಬಲ್ ಭಾರತ್” ಸಂದರ್ಶನ ಸರಣಿಯ ಎರಡನೇ ಭಾಗದಲ್ಲಿ ಆದಿತ್ಯ ಬಿರ್ಲಾ ಸನ್ ಲೈಫ್ ಎಎಮ್‌ಸಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನ್ಯೂಸ್ 9ಗೆ ಹೇಳಿರುವಂತೆ, ಭಾರತದ ಈಕ್ವಿಟಿ ಮಾರುಕಟ್ಟೆ ಬಗ್ಗೆ ಭರವಸೆ, ಆಶಾವಾದ ಇರಿಸಿಕೊಂಡಿದ್ದಾರೆ. ಈಗಂತೂ ಮೂಲಭೂತ ಅಂಶಗಳು ಸಹ ಈಕ್ವಿಟಿ ಮಾರುಕಟ್ಟೆಯನ್ನು ಮುನ್ನಡೆಸುತ್ತಿವೆ ಎಂದು ಹೇಳುತ್ತಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ:
ಮೊದಲಿಗೆ, ಪ್ರಮುಖ ಉದ್ಯಮ ಸಂಸ್ಥೆ ಅಸೋಸಿಯೇಷನ್ ಆಫ್ ಮ್ಯೂಚುವಲ್ ಫಂಡ್ಸ್ ಆಫ್ ಇಂಡಿಯಾ (AMFI) ಅಧ್ಯಕ್ಷರಾಗಿ ನಿಮ್ಮ ನೇಮಕ ಆಗಿದ್ದಕ್ಕೆ ಅಭಿನಂದನೆಗಳು. ಇದೊಂದು ದೊಡ್ಡ ಆದೇಶ. ಭಾರತೀಯ ಮಾರುಕಟ್ಟೆಗಳು ಗೂಳಿ (ಬುಲ್) ಓಟದಲ್ಲಿವೆ. ಜಾಗತಿಕ ದೃಷ್ಟಿಕೋನದಿಂದ ಸೂಚ್ಯಂಕಗಳ ಪ್ರದರ್ಶನವನ್ನು ನೀವು ಹೇಗೆ ನೋಡುತ್ತೀರಿ?
ಇಂದು “ಲೀಡರ್ಸ್ ಆಫ್ ಗ್ಲೋಬಲ್ ಭಾರತ್”ನಲ್ಲಿ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಮೊದಲನೆಯದಾಗಿ ಧನ್ಯವಾದಗಳು. ನಾನು 2016ರಲ್ಲಿ ಎರಡು ವರ್ಷಗಳ ಅವಧಿಗೆ AMFIಯೊಂದಿಗೆ ಇದ್ದೆ. ಮ್ಯೂಚುವಲ್ ಫಂಡ್ ಉದ್ಯಮದ ಬೆಳವಣಿಗೆಯ ಯಶೋಗಾಥೆಯನ್ನು ನೋಡುವುದರಲ್ಲಿ ನಾನು ಆಳವಾಗಿ ತೊಡಗಿಸಿಕೊಂಡ ಸಮಯ ಅದು. ನಾವು ನಂತರ ಹೆಚ್ಚು ಜನಪ್ರಿಯವಾದ ‘ಮ್ಯೂಚುವಲ್ ಫಂಡ್ ಸಹಿ ಹೈ’ ಅಭಿಯಾನವನ್ನು ತಂದಿದ್ದೇವೆ. ವಾಸ್ತವವಾಗಿ, ನಾನು ಎರಡನೇ ಅವಧಿಗೆ AMFI ಅಧ್ಯಕ್ಷ ಸ್ಥಾನವನ್ನು ವಹಿಸಬೇಕು ಎಂದು ಮ್ಯೂಚುವಲ್ ಫಂಡ್ ಉದ್ಯಮದ ಸದಸ್ಯರು ಮತ್ತೊಮ್ಮೆ ಭಾವಿಸಿದ್ದಕ್ಕಾಗಿ ನನಗೆ ತುಂಬಾ ಸಂತೋಷವಾಗಿದೆ. ಒಂದು ಹಂತದಲ್ಲಿ ನಾವು ಸ್ಪರ್ಧಿಗಳು. ಆದರೆ AMFIನಲ್ಲಿ ಪರಸ್ಪರ ಪ್ರೀತಿಯನ್ನು ಹೊಂದಿದ್ದೇವೆ. ಇನ್ನೂ ಬಹಳ ದೂರ ಸಾಗಬೇಕಿರುವುದು ಸತ್ಯ. ಇನ್ನೂ ಹೆಚ್ಚಿನ ಕೆಲಸ ಮಾಡಬೇಕಿದೆ. ಮತ್ತು ನಾನು ರಾಷ್ಟ್ರದ ಜನರಿಗೆ ಸೇವೆ ಸಲ್ಲಿಸಲು ಮತ್ತು ಸರಿಯಾದ ಮಾರ್ಗದ ಮೂಲಕ ಅವರ ಹಣವನ್ನು ಉಳಿಸಲು ಸಹಾಯ ಮಾಡುವ ಬಗ್ಗೆ ಸಾಕಷ್ಟು ಉತ್ಸುಕನಾಗಿದ್ದೇನೆ. ನಾವು ಒಟ್ಟಾಗಿ ಅದನ್ನು ಸಾಧಿಸುತ್ತೇವೆ.
ಭಾರತ ಮತ್ತು ವಿದೇಶಗಳಲ್ಲಿನ ಮಾರುಕಟ್ಟೆಯ ಪ್ರದರ್ಶನ ಕುರಿತ ನಿಮ್ಮ ಪ್ರಶ್ನೆಗೆ ಬರುವುದಾದರೆ, ಖಂಡಿತವಾಗಿಯೂ ಕಳೆದ ಎರಡು ವರ್ಷಗಳಲ್ಲಿ ನಗದು ಸುಧಾರಣೆಗೆ ಸಂಬಂಧಿಸಿದಂತೆ ಬಹಳಷ್ಟು ಸಂಗತಿಗಳು ಸಂಭವಿಸಿವೆ. ಈ ಶಟ್ಡೌನ್ ಅವಧಿಯ ಕಳೆದ ಎರಡೂವರೆ ವರ್ಷಗಳಲ್ಲಿ ನೀವು ಏನು ನೋಡಿದ್ದೀರಿ, ಭರವಸೆಯು ಬೆಳವಣಿಗೆಯನ್ನು ನಡೆಸುತ್ತಿದೆ. ಎಂದು ನಾನು ಭಾವಿಸುವಂತೆ, ಆರ್ಥಿಕತೆ ಮತ್ತು ವ್ಯಾಪಾರದ ಪ್ರಾರಂಭವು ಈಗ ಬೆಳವಣಿಗೆಗೆ ಚಾಲನೆ ನೀಡುವ ಹಂತವನ್ನು ತಲುಪುತ್ತಿದ್ದೇವೆ.
ಸಹಜವಾಗಿ, ಖರ್ಚು ಮಾಡುವ ಶಕ್ತಿಯನ್ನು ಸುಧಾರಿಸಲು ನಾವು ಬಹಳಷ್ಟು ಮಾಡಬೇಕಾಗಿದೆ. ಏಕಕಾಲದಲ್ಲಿ ಮೂಲಸೌಕರ್ಯಕ್ಕೆ ಹಂಚಿಕೆಯನ್ನು ಸುಧಾರಿಸುವ ಅವಶ್ಯಕತೆಯಿದೆ. ನನ್ನ ಸ್ವಂತ ಅಭಿಪ್ರಾಯವೆಂದರೆ, ಮಾರುಕಟ್ಟೆಯಲ್ಲಿ ಒಟ್ಟಾರೆ ಏರಿಕೆ ಉಳಿಯುತ್ತದೆ. ಸಾಂಕ್ರಾಮಿಕ ಸಮಯದಲ್ಲಿ ಮಾರುಕಟ್ಟೆಯು ಗಣನೀಯವಾಗಿ ಹೆಚ್ಚುತ್ತಿದೆ, ಕೆಲವು ಬಲವರ್ಧನೆಯ ಮೂಲಕ ಹೋಗಬಹುದು. ಆದರೆ ಖಚಿತವಾಗಿ ಏರಿಕೆ ಉಳಿಯುತ್ತದೆ.
ಇಂದು ಮಾರುಕಟ್ಟೆಗಳು ಏರುಗತಿಯಲ್ಲಿವೆ. ಈ ಏರಿಕೆ ಪರ್ವ ಉಳಿಯಲು ಇದೆಯೇ. ಇದು ನೀರ ಮೇಲಿನ ಗುಳ್ಳೆಯೇ ಅಥವಾ ಏರಿಕೆಯು ಬಲವಾದ ಮೂಲಭೂತ ಅಂಶಗಳ ಉತ್ಪನ್ನವೇ? ಸಾಮಾನ್ಯ ಹೂಡಿಕೆದಾರರಿಗೆ ಏನು ಸಂದೇಶ ನೀಡಬೇಕು?
ಮಾರುಕಟ್ಟೆ ಯಾವಾಗಲೂ ವಕ್ರರೇಖೆಗಿಂತ ಮುಂದಿದೆ. ಮಾರುಕಟ್ಟೆಗಳನ್ನು ಚಾಲನೆ ಮಾಡಲು ಬಂದಾಗ ಭರವಸೆ ಮತ್ತು ಆಶಾವಾದವು ಮೊದಲು ಬರುತ್ತದೆ. ಆದರೆ ಮೂಲಭೂತ ಅಂಶಗಳು ನಂತರ ಬರುತ್ತವೆ. ಒಮ್ಮೆ ಭರವಸೆ ಮತ್ತು ಆಶಾವಾದವು ಮುಂದುವರಿದರೆ, ಏರಿಕೆಯು ಅಲ್ಲಿಯೇ ಉಳಿಯುತ್ತದೆ. ಗಳಿಕೆ ಇಲ್ಲದಿದ್ದಾಗ ಮೌಲ್ಯಮಾಪನ ಹಿಗ್ಗುತ್ತದೆ. ಸದ್ಯಕ್ಕೆ, ನಾವು ಭರವಸೆ ಮತ್ತು ಆಶಾವಾದದ ಹಂತದಲ್ಲಿದ್ದೇವೆ. ನೀವು ಕಾರ್ಪೊರೇಟ್ ಕಾರ್ಯಕ್ಷಮತೆಯನ್ನು ನೋಡಿದರೆ ಒಳ್ಳೆಯ ಸುದ್ದಿ ಇದೆ. ಕಳೆದ ಮೂರು ತಿಂಗಳು ಲಾಭ ಗಳಿಸಿದೆ. ಸೆಪ್ಟೆಂಬರ್ ತ್ರೈಮಾಸಿಕ ಕಾರ್ಪೊರೇಟ್ ಕಾರ್ಯಕ್ಷಮತೆ ಸಾಮಾನ್ಯವಾಗಿ ವಿಶ್ಲೇಷಕರ ಮೌಲ್ಯಮಾಪನಕ್ಕಿಂತ ಉತ್ತಮವಾಗಿದೆ. ಮೂಲಭೂತ ಅಂಶಗಳೂ ಈಗ ಬರಲಾರಂಭಿಸಿವೆ. ಭಾರತದ ಆರ್ಥಿಕತೆಯೊಂದಿಗೆ ಸಾಂಕ್ರಾಮಿಕ ರೋಗದಿಂದ ಹೊರಬರುವ ಜಾಗತಿಕ ಆರ್ಥಿಕತೆಯ ನಿರೀಕ್ಷೆ ತುಂಬಾ ಹೆಚ್ಚಾಗಿದೆ.
ಭಾರತವು ಶೇ 8 ರಿಂದ 8.5 ನಡುವೆ ಎಲ್ಲಿಯಾದರೂ ಬೆಳೆಯುವ ನಿರೀಕ್ಷೆಯಿದೆ. ಆದರೆ ವಿಶ್ವ ಆರ್ಥಿಕತೆಯು ಶೇ 3 ಅಥವಾ ಶೇ 4 ಸರಾಸರಿ ಬೆಳವಣಿಗೆಗೆ ಮರಳುತ್ತದೆ. ಸ್ವಾಭಾವಿಕವಾಗಿ, ಮೌಲ್ಯಮಾಪನಗಳನ್ನು ಸರಿಹೊಂದಿಸಲಾಗುತ್ತದೆ. ಇದು ನೀರ ಮೇಲಿನ ಗುಳ್ಳೆಯೋ ಅಲ್ಲವೋ ಎಂಬ ನಿಮ್ಮ ಪ್ರಶ್ನೆಗೆ, ಇದು ಹಾಗೆ ಎಂಬಂತೆ ತೋರುತ್ತಿಲ್ಲ. ಸ್ಪಷ್ಟವಾಗಿ, ನಾವು ಹೆಚ್ಚಿನ ವ್ಯಾಲ್ಯೂಯೇಷನ್ ಅವಧಿಯಲ್ಲಿದ್ದೇವೆ. ಬೆಳವಣಿಗೆಯ ಕಥೆಗೆ ಚಾಲನೆ ನೀಡಲು ಹಲವು ಪ್ರಯತ್ನಗಳು ನಡೆಯುತ್ತಿವೆ ಹಾಗೂ ಅದು ಭರವಸೆ ಮತ್ತು ಆಶಾವಾದವನ್ನು ಜೀವಂತವಾಗಿರಿಸುತ್ತದೆ. ಆದ್ದರಿಂದ, ಮಾರುಕಟ್ಟೆಯು ಏರಿಕೆಯಲ್ಲಿ ಇರುತ್ತದೆ.
ಈ ಗೂಳಿ ಓಟದ ಮತ್ತೊಂದು ಆಸಕ್ತಿದಾಯಕ ವೈಶಿಷ್ಟ್ಯವೆಂದರೆ ಬಹುಶಃ ಹಿಂದೆಂದಿಗಿಂತಲೂ ಹೆಚ್ಚು ಚಿಲ್ಲರೆ ಹೂಡಿಕೆದಾರರ ಆಗಮನವಾಗಿದೆ. ಈ ಭಾಗವಹಿಸುವಿಕೆಯು ಈಕ್ವಿಟಿ ಮಾರುಕಟ್ಟೆಯನ್ನು ಎಲ್ಲರಿಗೂ ತಲುಪುವಂತೆ. ಈ ವಿದ್ಯಮಾನವನ್ನು ನೀವು ಹೇಗೆ ನೋಡುತ್ತೀರಿ?
ನಾವು ಯುಎಸ್ ಮಾರುಕಟ್ಟೆಯನ್ನು ನೋಡಬೇಕು. ಅಮೆರಿಕದಲ್ಲಿ ಶೇ 45ರಷ್ಟು ಮಾಲೀಕತ್ವ ರೀಟೇಲ್ನಿಂದ ಬಂದರೆ ಬಾಕಿ ಸಾಂಸ್ಥಿಕ ಹೂಡಿಕೆದಾರರಿಂದ ಬರುತ್ತದೆ. ಈ ರೀಟೇಲ್ ಭಾಗವು ಮ್ಯೂಚುವಲ್ ಫಂಡ್ಳು ಮತ್ತು ನೇರ ಈಕ್ವಿಟಿಯನ್ನು ಒಳಗೊಂಡಿದೆ. ಭಾರತದ ಸನ್ನಿವೇಶದಲ್ಲಿ ಇತ್ತೀಚಿನ ರೀಟೇಲ್ ಕೊಡುಗೆ ಮುಂದುವರಿಯುತ್ತದೆ. ಇತ್ತೀಚಿನ ಅನುಭವವು ರೀಟೇಲ್ ಹೂಡಿಕೆದಾರರಿಗೆ ತುಂಬಾ ಒಳ್ಳೆಯದು ಮತ್ತು ಪ್ರವೃತ್ತಿ ಮುಂದುವರಿಸುವುದನ್ನು ನೋಡುತ್ತೇನೆ. ವಿಶ್ವಾಸವಿ ಸುಧಾರಿಸಿದೆ ಮತ್ತು ರೀಟೇಲ್ ಹೂಡಿಕೆದಾರರು ದೀರ್ಘಾವಧಿಯ ಉಳಿತಾಯದ ದೃಷ್ಟಿಕೋನದಿಂದ ಭಾಗವಹಿಸುವಿಕೆ ನೋಡುತ್ತಿದ್ದಾರೆ.
ಮ್ಯೂಚುವಲ್ ಫಂಡ್‌ಗಳು ಮತ್ತು ಡೈರೆಕ್ಟ್ ಈಕ್ವಿಟಿಗಳ ಮೂಲಕ ಹಂಚಿಕೆಯು ಹೆಚ್ಚುತ್ತಲೇ ಇರುತ್ತದೆ. ಇದು ಗಮನಾರ್ಹ ಟ್ರೆಂಡ್ ಆಗಿದೆ. ಭಾರತವು ಈ ರೀಟೇಲ್ ಉತ್ತೇಜನವನ್ನು ಸಾಧಿಸಲು ಸಾಕಷ್ಟು ಸಮಯದಿಂದ ಹೆಣಗಾಡುತ್ತಿದೆ. ಈ ನಿಟ್ಟಿನಲ್ಲಿ ಕೊವಿಡ್ ನಿಜವಾಗಿಯೂ ಎಂಬಂತೆ ಬಂದಿದೆ. ಹೆಚ್ಚಿನ ಮಾಹಿತಿ ಲಭ್ಯತೆ ಮತ್ತು ಡಿಜಿಟಲ್ ತಂತ್ರಜ್ಞಾನದಿಂದ ವಿಶ್ವಾಸ ಮತ್ತು ವಿಶ್ವಾಸಾರ್ಹತೆಯ ಪದರವನ್ನು ನೀಡುತ್ತದೆ. ತಂತ್ರಜ್ಞಾನ ಪ್ಲಾಟ್ಫಾರ್ಮ್ಗಳ ಮೂಲಕ ರೀಟೇಲ್ ಹೂಡಿಕೆದಾರರನ್ನು ಒಳಗೊಳ್ಳುವ ವಿಧಾನವು ಉತ್ತಮ ಕಲಿಕೆಯಾಗಿದೆ.
ಈಗ ಎರಡನೇ ಕ್ರಾಂತಿ ನಡೆಯಲಿದೆ. ಭಾರತೀಯ ಬಾಂಡ್ ಮಾರುಕಟ್ಟೆಯಲ್ಲಿ ರೀಟೇಲ್ ಭಾಗವಹಿಸುವಿಕೆಯನ್ನು ಅನುಮತಿಸುವ ಯೋಜನೆಯನ್ನು ಪ್ರಧಾನಿ ಇತ್ತೀಚೆಗೆ ಅನಾವರಣಗೊಳಿಸಿದ್ದಾರೆ. ಇದು ಬಹಳ ದೊಡ್ಡದಾಗಿದೆ. ಇದು ವೇಗವನ್ನು ಪಡೆದಾಗ, ಸರ್ಕಾರದ ಕೊರತೆಯನ್ನು ನೀಗಿಸಲು ರೀಟೇಲ್ ಹೂಡಿಕೆದಾರರ ನಿಧಿಗೆ ಸಹಾಯ ಮಾಡಬಹುದು. ಬಹುಶಃ ರೀಟೇಲ್ ಹೂಡಿಕೆಯ ಪ್ರೊಫೈಲ್ ಅನ್ನು ನಿರ್ಮಿಸುವ ವಿಷಯದಲ್ಲಿ ಭಾರತವು ಶೀಘ್ರದಲ್ಲೇ ಅಮೆರಿಕ ದಾರಿಯಲ್ಲಿ ಹೋಗುತ್ತಿದೆ.
ಮ್ಯೂಚುವಲ್ ಫಂಡ್ ಸಹಿ ಹೈ ಅಭಿಯಾನಕ್ಕೆ ಈ ಶ್ರೇಯ ಹೋಗಬೇಕು. ಮ್ಯೂಚುವಲ್ ಫಂಡ್‌ಗಳು ಅಥವಾ ನೇರವಾಗಿ ಈಕ್ವಿಟಿಗಳ ಮೂಲಕ ರೀಟೇಲ್ ಭಾಗವಹಿಸುವಿಕೆಯನ್ನು ಮತ್ತಷ್ಟು ಸೃಷ್ಟಿಸಲು, ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಲು ಹೊಸ ಅಭಿಯಾನಕ್ಕೆ ಅವಕಾಶವಿದೆ.
ನೀವು ಹೇಳುವುದು ಸರಿ. ಸಹಿ ಹೈ ಅಭಿಯಾನವು ಸಾಕಷ್ಟು ಚೆನ್ನಾಗಿ ಕೆಲಸ ಮಾಡಿದೆ. ಇದು ಹೂಡಿಕೆಯ ಕಲ್ಪನೆಯನ್ನು ಮುಖ್ಯವಾಹಿನಿಗೆ ತಂದಿದೆ. ಮ್ಯೂಚುವಲ್ ಫಂಡ್ ಎಂಬ ಪದವು ದೈನಂದಿನ ಕೌಟುಂಬಿಕ ಸಂಭಾಷಣೆಯ ಭಾಗವಾಗಿದೆ. ಕಾರ್ಯತಂತ್ರವಾಗಿ, ಅದು ಏನು ಮಾಡಿದೆ ಎಂದರೆ ಇಂದು ಜಾಗೃತಿ ಇದೆ ಮತ್ತು ಅದೃಷ್ಟವಶಾತ್ ಮ್ಯೂಚುವಲ್ ಫಂಡ್ ಉದ್ಯಮವು ಉತ್ಪನ್ನ ಪೂರೈಕೆದಾರ ಎನ್ನುವುದಕ್ಕಿಂತ ಸಲ್ಯೂಷನ್ ಪೂರೈಕೆದಾರ ಆಗಿ ಕಂಡುಬರುತ್ತದೆ. ಜಾಗೃತಿಯಲ್ಲಿ ಭಾರೀ ಹೆಚ್ಚಳವಾಗಿದೆ. ಈಗಾಗಲೇ ಏನಾಗಿದೆ ಎಂದರೆ ಹೂಡಿಕೆದಾರರಿಗೆ ನೀಡುವ ಸಲ್ಯೂಷನ್ ವ್ಯಾಪ್ತಿಯು ಅಗಾಧವಾಗಿದೆ. ಎಲ್ಲ ರೀತಿಯ ಹೂಡಿಕೆದಾರರಿಗೆ ಮ್ಯೂಚುವಲ್ ಫಂಡ್ ಲಭ್ಯವಿದೆ. ದೇಶದಲ್ಲಿ ಪ್ರತಿಯೊಂದು ರೀತಿ ಉಳಿತಾಯಕ್ಕೆ ಸಮಗ್ರವಾಗಿ ಪರಿಹಾರವಿದೆ ಎಂದು ನಾನು ನಿಮಗೆ ಹೇಳುತ್ತೇನೆ. ಸತ್ಯವೆಂದರೆ, ನೀವು ಇದನ್ನು ಪ್ರವೇಶಿಸಲು ಬ್ಯಾಂಕ್‌ಗೆ ಹೋಗುವ ಅಗತ್ಯವಿಲ್ಲ. ಮ್ಯೂಚುವಲ್ ಫಂಡ್ ಉದ್ಯಮವು ಈ ಪ್ರಯೋಜನವನ್ನು ಹೆಚ್ಚಿಸಬೇಕಾಗಿದೆ.
ಮಾರುಕಟ್ಟೆಯು ವಿಸ್ತರಿಸಿದಂತೆ ಮ್ಯೂಚುವಲ್ ಫಂಡ್ ಉದ್ಯಮದಿಂದ ಹೆಚ್ಚಿನ ಉತ್ಪನ್ನಗಳಿಗೆ ಜಾಸ್ತಿ ವೈವಿಧ್ಯವನ್ನು ನೀಡುವುದು ಮಾತ್ರವಲ್ಲದೆ ವೈಯಕ್ತಿಕ ಅಗತ್ಯಗಳಿಗೆ ಸರಿಹೊಂದುವಂತೆ ಗ್ರಾಹಕರಿಗೆ ತಕ್ಕಂತೆ ಸಕ್ರಿಯಗೊಳಿಸಲು ಅವಕಾಶವಿದೆಯೇ?
ಉತ್ಪನ್ನಗಳ ಕೊರತೆ ಇಲ್ಲ ಎಂದು ನಾನು ಭಾವಿಸುತ್ತೇನೆ. ನಾವು ವರ್ಷಗಳಿಂದ ಅಭಿವೃದ್ಧಿಪಡಿಸಿದ ಉತ್ಪನ್ನಗಳ ವ್ಯಾಪಕ ಶ್ರೇಣಿಯನ್ನು ಹೊಂದಿದ್ದೇವೆ. ಆವಿಷ್ಕಾರ ಮಾಡುವುದು ಹೇಗೆ ಎಂಬುದು ದೊಡ್ಡ ಆಲೋಚನೆ. ನಾವೀನ್ಯತೆಯು ಮುಂದಕ್ಕೆ ಹೋಗುವ ಪ್ರಮುಖ ಮಂತ್ರವಾಗಿದೆ. ಇನ್ನೊಂದು ದೊಡ್ಡ ಉಪಾಯವೆಂದರೆ ಗ್ರಾಹಕರಿಗೆ ತಕ್ಕಂತೆ ರೂಪಿಸುವುದು. ಹೂಡಿಕೆದಾರರ ದೃಷ್ಟಿಕೋನದಿಂದ ಉತ್ಪನ್ನವನ್ನು ಹೆಚ್ಚಿಸಬೇಕು. ಮ್ಯೂಚುವಲ್ ಫಂಡ್ ಉದ್ಯಮವು ಉತ್ಪನ್ನಗಳ ವೈವಿಧ್ಯವನ್ನು ನೀಡಲು ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುತ್ತಿದೆ. ಆದರೆ ಹೂಡಿಕೆದಾರರು ಈಗ ಹೆಚ್ಚು ವಿವೇಚನಾಶೀಲರಾಗಿ ಇರುವುದರಿಂದ ಮೌಲ್ಯವರ್ಧಿತ (ವ್ಯಾಲ್ಯೂ ಆ್ಯಡೆಡ್) ಉತ್ಪನ್ನಗಳ ಸಮಯ ಬಂದಿದೆ. ನಾವು ಪ್ರಯತ್ನಿಸುತ್ತಿರುವುದು ಗ್ರಾಹಕರಿಗಾಗಿ ಸರಳ ಉತ್ಪನ್ನಗಳನ್ನು ಮಾಡುವ ಬದಲಿಗೆ ಹೆಚ್ಚು ಹೇಳಿ ಮಾಡಿಸಿದ, ಹೆಚ್ಚು ಸಲ್ಯೂಷನ್-ಆಧಾರಿತ ಕೊಡುಗೆಗಳನ್ನು ನೀಡಲು ಬಯಸುತ್ತೇವೆ.
ಮ್ಯೂಚುವಲ್ ಫಂಡ್ ಉದ್ಯಮವು ಕ್ಯಾನ್ವಾಸ್ ಅನ್ನು ಆವಿಷ್ಕರಿಸಿದೆ ಮತ್ತು ವಿಸ್ತರಿಸಿದೆ ಎಂದು ನಾವು ಗಮನಿಸಿದ್ದೇವೆ. ಆದರೆ ಸಂಪೂರ್ಣವಾಗಿ ಕಡಿಮೆ ಟಿಕೆಟ್ ಸಲ್ಯೂಷನ್ಗಳನ್ನು ರಚಿಸಲು ಪರಿಹಾರ ಇದೆ. 100 ರೂಪಾಯಿಯ SIP ಅನ್ನು ಮುಖ್ಯವಾಹಿನಿಗೆ ತರಬಹುದೇ? ಪ್ರವೇಶ ಹಂತದಲ್ಲಿ ಹೆಚ್ಚಿನ ಉತ್ಪನ್ನಗಳನ್ನು ಮಾಡಲು ಸ್ಥಳವಿದೆಯೇ, ವಿಶೇಷವಾಗಿ ಪಿರಮಿಡ್‌ನ ಕೆಳಭಾಗದಲ್ಲಿ ತೊಡಗಿಸಿಕೊಳ್ಳಲು? ನಾವು ಸ್ಯಾಚೆಟ್ ವಿಧಾನವನ್ನು ಅನ್ವೇಷಿಸಬಹುದೇ?
ಜಾಗತಿಕವಾಗಿ ಅಂತಹ ಉತ್ಪನ್ನಗಳು ಅಸ್ತಿತ್ವದಲ್ಲಿವೆ. ಕಡಿಮೆ ಮಟ್ಟದ ಭಾಗವಹಿಸುವಿಕೆಗಾಗಿ ಕ್ರೆಡಿಟ್ ಕಾರ್ಡ್ ಅನ್ನು ಸ್ವೈಪ್ ಮಾಡಿ. ನೀವು ಖರೀದಿಗೆ 95 ಡಾಲರ್‌ಗಳನ್ನು ಖರ್ಚು ಮಾಡಿದರೆ ಮತ್ತು ಮ್ಯೂಚುವಲ್ ಫಂಡ್‌ಗಾಗಿ ಐದು ಡಾಲರ್‌ಗಳನ್ನು ಹೂಡಿಕೆ ಮಾಡುವ ಆಯ್ಕೆ ಇದೆ. ಅಂತಹ ಉದಾಹರಣೆಗಳು ಇವೆ. ಆದರೆ ಹೂಡಿಕೆಯು ಗಂಭೀರವಾದ ವ್ಯವಹಾರವಾಗಿದೆ ಮತ್ತು ಅದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ನಾನು ಭಾವಿಸುತ್ತೇನೆ. ಸಾಂದರ್ಭಿಕವಾಗಿ ಇರಲು ಅವಕಾಶವಿಲ್ಲ. ಹೂಡಿಕೆಯು ಸಣ್ಣ ಟಿಕೆಟ್ ಅಥವಾ ಸ್ಯಾಚೆಟ್ ಎಂಬ ಬಗ್ಗೆ ಅಲ್ಲ. ಜನರು 100 ರೂಪಾಯಿಗಳ SIP ಅನ್ನು ಪ್ರಯತ್ನಿಸಬಹುದು. ಆದರೆ ಅಂತಹ ನಿರ್ಧಾರಗಳು ಉದ್ದೇಶದಿಂದ ಹುಟ್ಟಿಲ್ಲ. ಕ್ವಾಂಟಮ್‌ಗಿಂತ ಹೂಡಿಕೆಯ ಉದ್ದೇಶ ಮುಖ್ಯ. ಹೂಡಿಕೆ ಮಾಡಲು ಜನರ ಬಳಿ ಹಣವಿದೆ ಎಂದು ನಾನು ನಂಬುತ್ತೇನೆ. ನಂತರ ದುಂದು ವೆಚ್ಚಗಳಿಗೆ ಕಡಿವಾಣ ಹಾಕುವ ಮೂಲಕ ಮತ್ತು ಆ ಹಣವನ್ನು ವಿವೇಕದಿಂದ ಹೂಡಿಕೆಯಾಗಿ ಬಳಸುವುದರೊಂದಿಗೆ ಉಳಿತಾಯದ ಮಾರ್ಗಗಳಿವೆ. ಮನಸ್ಥಿತಿ ಬದಲಾವಣೆಯ ಅಗತ್ಯವಿದೆ. ಹೂಡಿಕೆದಾರರು SIP ಅನ್ನು ಖರ್ಚು ಮಾಡುವ ಬದಲು ಹೂಡಿಕೆಯಾಗಿ ನೋಡಬೇಕು. ಹೀಗೆ ಮಾಡುವುದರಿಂದ ಯಾವಾಗಲೂ ಉತ್ತಮ ಅನುಭವ ಸಿಗುತ್ತದೆ. ಕಡಿಮೆ ಮಟ್ಟದ ಟಿಕೆಟ್ ಗಾತ್ರವು ಪ್ರವೇಶ ಹಂತದಲ್ಲಿ ಪರೀಕ್ಷಿಸುವುದನ್ನು ಸಕ್ರಿಯಗೊಳಿಸುವುದಕ್ಕೆ ಹೊರತುಪಡಿಸಿ ಹೆಚ್ಚಿನ ಸಮಯಕ್ಕೆ ಸಹಾಯ ಮಾಡುವುದಿಲ್ಲ.
ಡೇಟಾ ಸಂಗ್ರಹಣೆ ಮತ್ತು ಪ್ರೊಸೆಸಿಂಗ್ ನಿರ್ಣಾಯಕವಾಗಿದೆ. AMFI ಅಧ್ಯಕ್ಷರಾಗಿ, ಈ ವಲಯದ ವ್ಯಾಪಾರದಲ್ಲಿನ ನಾಯಕರಾಗಿ, ಭಾರತವು ಹೇಗೆ ಗಳಿಸುತ್ತದೆ, ಉಳಿಸುತ್ತದೆ ಮತ್ತು ಸರಿಯಾಗಿ ಹೂಡಿಕೆ ಮಾಡಬೇಕಾದ ಕಂಪೆನಿ ಕುರಿತು ಉತ್ತಮ ಮಾಹಿತಿಗಾಗಿ ಡೇಟಾ ಮೈನಿಂಗ್‌ನಲ್ಲಿ ಹೂಡಿಕೆ ಮಾಡುವ ಅವಶ್ಯಕತೆಯಿದೆ ಎಂದು ನೀವು ಭಾವಿಸುತ್ತೀರಾ?
ಹಲವಾರು ಅಧ್ಯಯನಗಳನ್ನು ನಡೆಸುವ ವಿವಿಧ ಏಜೆನ್ಸಿಗಳ ಜತೆ ನಾವು ಕೆಲಸ ಮಾಡುತ್ತಿದ್ದೇವೆ. ಹೆಚ್ಚುವರಿಯಾಗಿ, ವಿಶ್ವವಿದ್ಯಾನಿಲಯ ಫೋರಂ ಇದೆ ಮತ್ತು ಪ್ರಾದೇಶಿಕ ದೃಷ್ಟಿಕೋನದಿಂದಲೂ ಡೇಟಾವನ್ನು ಆಯ್ದುಕೊಳ್ಳುತ್ತದೆ. ಎಲ್ಲ ಚಟುವಟಿಕೆಗಳು ಭಾರತದಲ್ಲಿನ ಗ್ರಾಹಕರು ಉತ್ತಮ ನೋಟವನ್ನು ಪಡೆಯಲು ನಮಗೆ ಸಹಾಯ ಮಾಡುತ್ತವೆ. ಅಂತಹ ಎಲ್ಲ ಕಾರ್ಯಕ್ರಮಗಳು ಉತ್ತಮ ಒಳನೋಟಗಳನ್ನು ನೀಡಲು ಸಹಾಯ ಮಾಡುತ್ತವೆ. ಆ ಫಲಿತಾಂಶಗಳನ್ನು ನಾವು ಉತ್ತಮ ರೀತಿಯಲ್ಲಿ ಬಳಸಬಹುದಾಗಿದೆ. ಸಾರ್ವಜನಿಕವಾಗಿ ಈಗಾಗಲೇ ಸಾಕಷ್ಟು ಡೇಟಾ ಲಭ್ಯವಿದೆ. ಬ್ಯಾಂಕ್ಗಳ ಶಾಖೆ ಸಂಖ್ಯೆ, ಗ್ರಾಹಕರ ಪ್ರೊಫೈಲ್ ಮತ್ತು ಒಟ್ಟಾರೆ ಪ್ರಾದೇಶಿಕ ಪಥದ ಮೇಲೆ ರಿಸರ್ವ್ ಬ್ಯಾಂಕ್ ಬ್ಯಾಂಕ್ ಇಂಡಿಯಾವು ಗಮನಾರ್ಹವಾದ ಮಾಹಿತಿ ಹೊಂದಿದೆ. ಪೂರ್ವವೀಕ್ಷಣೆಯ ಅಡಿಯಲ್ಲಿ ಪ್ರದೇಶದ ವಿಭಿನ್ನ ವೈಶಿಷ್ಟ್ಯಗಳನ್ನು ಒದಗಿಸುವ ವೈಯಕ್ತಿಕ ಅಗತ್ಯಗಳನ್ನು ನೋಡುವ ಸೇವೆಗಳನ್ನು ನೀಡಲು ಬಳಸಬೇಕಿದೆ.
ನಮ್ಮ ಕಡೆಯಿಂದ, ಈಗ 12 ಭಾಷೆಗಳಲ್ಲಿ ಪ್ರಸ್ತುತ ಮ್ಯೂಚುವಲ್ ಫಂಡ್ ಸಹಿ ಹೈ ಅಭಿಯಾನದೊಂದಿಗೆ ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದೇವೆ. ಇದು ಹೂಡಿಕೆದಾರರ ಉತ್ತಮ ತಿಳಿವಳಿಕೆಯನ್ನು ಪಡೆಯಲು ಅಪಾರವಾಗಿ ಸಹಾಯ ಮಾಡಿದೆ. ಅದನ್ನು ಹೇಳಿದ ನಂತರ, ಒಟ್ಟಾರೆ ಕಾರ್ಯತಂತ್ರದ ಪ್ರಮುಖ ಭಾಗವಾಗಿ ನೋಡುತ್ತೇನೆ. ಆದರೆ ಇದು ಬದಲಾವಣೆಯ ಪೋಸ್ಟ್ ಆಗಿದ್ದು ಮತ್ತು ಪ್ರಸ್ತುತ ಬಳಕೆದಾರರಿಗೆ ಹೆಚ್ಚಿನ ಸೇವೆ ನೀಡಲು ಡೇಟಾ ಅನಾಲಿಟಿಕ್ಸ್‌ಗೆ ಹೆಚ್ಚಿನ ಪ್ರಾಮುಖ್ಯ ನೀಡುತ್ತೇನೆ.
AMFI ಸಹಿ ಹೈ ಅಭಿಯಾನದೊಂದಿಗೆ ಜಾಗೃತಿ ಮೂಡಿಸಲು ಸಹಾಯ ಮಾಡಿದೆ. ಆದರೆ ಪ್ರಸ್ತುತ ಗೂಳಿ ಓಟವನ್ನು ಗಮನಿಸಿದರೆ ಕೆಲವೊಮ್ಮೆ ಫಿಯರ್ ಆಫ್ ಮಿಸ್ಸಿಂಗ್ ಔಟ್ (FOMO) ಮತ್ತು ಉದ್ಯಮವು ಕೆಲವೊಮ್ಮೆ ಅದನ್ನು ಎನ್‌ಕ್ಯಾಶ್ ಮಾಡಲು ಪ್ರಯತ್ನಿಸುತ್ತದೆ. ತಪ್ಪು-ಮಾರಾಟವನ್ನು ಒಟ್ಟಿಗೆ ತೆಗೆದುಹಾಕಲು AMFI ಹೇಗೆ ಯೋಜಿಸುತ್ತದೆ?
ಈ ಸವಾಲನ್ನು ತಗ್ಗಿಸಲು ನಾವು ಈಗಾಗಲೇ ಯೋಜನೆಗಳನ್ನು ಹೊಂದಿದ್ದೇವೆ. ಜಾಗೃತಿ ಮೂಡಿಸುವುದು ನಮ್ಮ ಮುಖ್ಯ ಕಾರ್ಯತಂತ್ರವಾಗಿದೆ. ಜನರಿಗೆ ಉಳಿತಾಯದ ಪ್ರಾಮುಖ್ಯ, SIPಗಳಲ್ಲಿ ಹೂಡಿಕೆ ಮತ್ತು ನೇರ ಈಕ್ವಿಟಿಗಳಿಗೆ ಬಂದಾಗ ಸಂಯೋಜಿತ ಶಕ್ತಿಯ ಪ್ರಾಮುಖ್ಯವನ್ನು ಅರಿತುಕೊಳ್ಳುವುದು ಇದರ ಹಿಂದಿನ ಪ್ರಮುಖ ಆಧಾರವಾಗಿದ್ದರೂ ಒಳಗೊಂಡಿರುವ ಅಪಾಯಗಳನ್ನು ಎತ್ತಿ ತೋರಿಸುವಲ್ಲಿ ನಮ್ಮ ಕಡೆಯಿಂದ ಕ್ರಮೇಣ ಪೂರ್ವಭಾವಿ ಪ್ರಯತ್ನಗಳು ಕಂಡುಬಂದಿವೆ. ಹೂಡಿಕೆದಾರರಿಗೆ ಸಾಕಷ್ಟು ಮಾಹಿತಿಯನ್ನು ಪ್ರಸ್ತುತಪಡಿಸುವುದು ಇದರ ಉದ್ದೇಶವಾಗಿದೆ. ಹೂಡಿಕೆದಾರರನ್ನು ವದಂತಿಗಳು, ಕಿವಿಮಾತುಗಳಿಗೆ ಬಲಿಯಾಗದಂತೆ ಅವರಿಗೆ ಅರ್ಥ ಮಾಡಿಸುವುದು ಮತ್ತು ಮುಖ್ಯವಾಗಿ ಹಂಚಿಕೆಯ ನ್ಯಾಯಯುತ ನಿರೀಕ್ಷೆಯನ್ನು ಹೊಂದಿರುವುದು ಇಲ್ಲಿನ ಪ್ರಮುಖ ಸಂದೇಶವಾಗಿದೆ. ಇದೆಲ್ಲವೂ ಈಗ ಪ್ರಚಾರದ ಆಂತರಿಕ ಭಾಗವಾಗಿದೆ.
ನಾವು ಮ್ಯೂಚುವಲ್ ಫಂಡ್‌ಗಳನ್ನು ಹೂಡಿಕೆಯ ವಾಹನವಾಗಿ ಮಾರ್ಕೆಟಿಂಗ್ ಮಾಡುತ್ತಿದ್ದೇವೆ ಮತ್ತು ಈಗ ಯಾವುದೇ ಹೂಡಿಕೆದಾರರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲು ಸಮಾನವಾದ ಸೇವೆಯಾಗಿ ಮಾರ್ಕೆಟಿಂಗ್ ಮಾಡುತ್ತಿದ್ದೇವೆ. ವ್ಯಕ್ತಿಯ ಅಗತ್ಯಗಳನ್ನು ಪೂರೈಸುವ ಸಂಭಾವ್ಯ ಸೂಕ್ತವಾದ ಉತ್ಪನ್ನವನ್ನು ನಾವು ತಲುಪಿಸುವಲ್ಲಿ ಮಾಹಿತಿಯು ಪ್ರಮುಖ ಶಕ್ತಿಯಾಗಿದೆ.
ಇದು ಸರಳವಾಗಿದೆ: ಹೆಚ್ಚಿನ ಅರಿವು ಕಡಿಮೆ ತಪ್ಪು-ಮಾರಾಟದ ಅಪಾಯವಾಗಿದೆ.
ಹೂಡಿಕೆಯ ಮಹತ್ವದ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡುವ ಮೂಲಕ ಸಬಲೀಕರಣಗೊಳಿಸುವುದು ನಮ್ಮ ಪ್ರಮುಖ ಆಲೋಚನೆಯಾಗಿದೆ. ಇದನ್ನು ಚೆನ್ನಾಗಿ ಮಾಡಿದರೆ, ಬಾಕಿಯದು ತುಲನಾತ್ಮಕವಾಗಿ ಸುಲಭವಾಗುತ್ತದೆ.
ಭಾರತವು SIPಗಳನ್ನು ದಾಖಲಿಸಿದೆ. ಈ ವಲಯವು ಯೇ ದಿಲ್ ಮಾಂಗೆ ಮೋರ್ ಎನ್ನುತ್ತದೆಯೇ. ಮುಂದಿನ ವರ್ಷದಲ್ಲಿ, ಮೂರು ವರ್ಷಗಳಲ್ಲಿ ಅಥವಾ ಐದು ವರ್ಷಗಳ ಕಾಲಮಿತಿಯೊಳಗೆ ಸಾಧಿಸಲು ನೀವು ಕೆಲವು ಗುರಿಗಳನ್ನು ಹೊಂದಿದ್ದೀರಾ?
ಉದ್ಯಮ ಸಂಸ್ಥೆಯಾಗಿ, ನಾವು ನಮಗಾಗಿ ಗುರಿಗಳನ್ನು ಇಟ್ಟುಕೊಳ್ಳುವುದಿಲ್ಲ. AMFI ಒಂದು ಫೆಸಿಲಿಟೇಟರ್ (ವ್ಯವಸ್ಥೆ ಮಾಡಿಕೊಡುವಂಥದ್ದು) ಆಗಿ ಕಾರ್ಯನಿರ್ವಹಿಸುತ್ತದೆ. ಇದು ಉದ್ಯಮವು ನಿಯಂತ್ರಕದಿಂದ ಮತ್ತು ಹೂಡಿಕೆದಾರರ ದೃಷ್ಟಿಕೋನದಿಂದ ಸರಿಯಾದ ನೀತಿಗಳನ್ನು ಹೊಂದಲು ಸಹಾಯ ಮಾಡುತ್ತದೆ.
ವಿಶ್ವಾಸಾರ್ಹ ಉತ್ಪನ್ನಗಳು ಮತ್ತು ಕೊಡುಗೆಗಳ ಮೂಲಕ ಹೆಚ್ಚಿನ ಹೂಡಿಕೆದಾರರ ಭಾಗವಹಿಸುವಿಕೆಗಾಗಿ ಜಾಗೃತಿ ಮೂಡಿಸಲು ಎಕೋ ಸಿಸ್ಟಮ್ಗೆ ಸಹಾಯ ಮಾಡುವುದು ನಮ್ಮ ಆಲೋಚನೆಯಾಗಿದೆ. ನಮ್ಮ ಪಾತ್ರವು ಆಡಳಿತದ ಕೋನದಿಂದ ಜವಾಬ್ದಾರ ಆಗಿರಬೇಕು ಮತ್ತು ನಿಜವಾಗಿಯೂ ವಿಶ್ವಾಸಾರ್ಹ ಪಾತ್ರವನ್ನು ವಹಿಸುವುದು.
ಉದ್ಯಮಕ್ಕೆ ಸಂಬಂಧಿಸಿದಂತೆ, ಪ್ರತಿ ಮ್ಯೂಚುಯಲ್ ಫಂಡ್ ಪ್ಲೇಯರ್ಗೂ ಹೆಚ್ಚಿನ ಆಕಾಂಕ್ಷೆ ಇರುತ್ತದೆ. ಭಾರತೀಯ ಮಾರುಕಟ್ಟೆಯು ಹೆಚ್ಚು ಕಡಿಮೆ ವ್ಯಾಪಿಸಿದೆ. ಬಳಕೆ ಆಗದ ಸಾಮರ್ಥ್ಯವು ತುಂಬ ದೊಡ್ಡದಾಗಿದೆ. ಎಲ್ಲ ಸೇವೆಯನ್ನು ಹೊಂದಿರದ ಅಥವಾ ಕಡಿಮೆ ಸೇವೆಯನ್ನು ಹೊಂದಿರುವ ಮಾರುಕಟ್ಟೆಗಳನ್ನು ತಲುಪುವ ಅವಶ್ಯಕತೆಯಿದೆ.
ಫಂಡ್ ಹೌಸ್‌ಗಳು ಮ್ಯೂಚುವಲ್ ಫಂಡ್ ಮಾರ್ಗದ ಮೂಲಕ ದೇಶದಲ್ಲಿ ಹೂಡಿಕೆಯ ಗಾಥೆಯನ್ನು ಸಾಮೂಹಿಕವಾಗಿ ಯಶಸ್ವಿಗೊಳಿಸುವ ದೃಷ್ಟಿಯನ್ನು ಹೊಂದಿವೆ.
“ಲೀಡರ್ಸ್ ಆಫ್ ಗ್ಲೋಬಲ್ ಭಾರತ್” ಎಂಬುದು ಭಾರತದ ಬೆಳವಣಿಗೆಯ ಕಥೆಯನ್ನು ರೂಪಿಸುವ ವಿಚಾರಗಳ ಮೇಲೆ ಕೇಂದ್ರೀಕರಿಸುವ ಪ್ರಮುಖ ಪ್ರಭಾವಶಾಲಿ ಸರಣಿಯಾಗಿದ್ದು, ಅನುಕರಣೆಗಾಗಿ ಉತ್ತಮ ಅಭ್ಯಾಸಗಳನ್ನು ದಾಖಲು ಮಾಡುವುದು ಮತ್ತು ಪ್ರಮುಖ ವ್ಯಕ್ತಿಗಳಿಂದ ಕಲಿಕೆ ಪಡೆಯುವುದು ಮತ್ತು ಕಲಿಕೆಯನ್ನು ಮರೆಯುವುದರ ಈ ಸರಣಿಯನ್ನು TV9 ನೆಟ್‌ವರ್ಕ್ ಬಿಜಿನೆಸ್ ಮತ್ತು ಎಕಾನಮಿ ಸಂಪಾದಕರಾದ ರಾಕೇಶ್ ಖಾರ್ ನಿರೂಪಿಸಿದ್ದಾರೆ.
Published On - 7:26 pm, Mon, 22 November 21