Sign In

By signing in or creating an account, you agree with Associated Broadcasting Company's Terms & Conditions and Privacy Policy.

Investors Wealth: ಕರ್ನಾಟಕ ಬಜೆಟ್​ನ 3 ವರ್ಷದ ಮೊತ್ತ ಷೇರುಪೇಟೆಯಲ್ಲಿ ಒಂದೇ ದಿನದಲ್ಲಿ ಕಳ್ಕೊಂಡ ಹೂಡಿಕೆದಾರರು

ಹೂಡಿಕೆದಾರರ ಸಂಪತ್ತು ಷೇರು ಮಾರುಕಟ್ಟೆಯಲ್ಲಿ ನವೆಂಬರ್ 22, 2021ರಂದು 8.22 ಲಕ್ಷ ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿದ್ದಾರೆ.

Investors Wealth: ಕರ್ನಾಟಕ ಬಜೆಟ್​ನ 3 ವರ್ಷದ ಮೊತ್ತ ಷೇರುಪೇಟೆಯಲ್ಲಿ ಒಂದೇ ದಿನದಲ್ಲಿ ಕಳ್ಕೊಂಡ ಹೂಡಿಕೆದಾರರು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Nov 22, 2021 | 11:02 PM

ಭಾರತದ ಷೇರು ಮಾರುಕಟ್ಟೆಯಲ್ಲಿನ 8,21,666.77 ಕೋಟಿ ರೂಪಾಯಿ, ಅಂದರೆ 8.22 ಲಕ್ಷ ಕೋಟಿ ರೂಪಾಯಿ ಹೂಡಿಕೆದಾರರ ಹಣ ನವೆಂಬರ್ 22ನೇ ತಾರೀಕಿನ ಸೋಮವಾರದ ಒಂದೇ ದಿನ ಕೊಚ್ಚಿಕೊಂಡು ಹೋಗಿದೆ. ಕಳೆದ ಹಲವು ತಿಂಗಳಲ್ಲೇ ಕಂಡರಿಯದ ಪ್ರಮಾಣದಲ್ಲಿ ಮಾರಾಟದ ಒತ್ತಡ ಬಿದ್ದಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು ಸೋಮವಾರ ಒಂದು ದಿನ ಕಳೆದುಕೊಂಡ ಈ ಮೊತ್ತವಿದೆಯಲ್ಲಾ, ಕರ್ನಾಟಕ ಬಜೆಟ್​ಗಿಂತ (2021- 22ರಲ್ಲಿ 2.46 ಲಕ್ಷ ಕೋಟಿ ರೂಪಾಯಿ) ಮೂರು ಪಟ್ಟಿಗೂ ಅಧಿಕವಾಗುತ್ತದೆ. ಬಿಎಸ್​ಇ ಸೆನ್ಸೆಕ್ಸ್​ 1,170.12 ಪಾಯಿಂಟ್ಸ್ ಅಥವಾ ಶೇ 1.96ರಷ್ಟು ಕುಸಿದು, 58,465.89 ಪಾಯಿಂಟ್ಸ್ ಮುಟ್ಟಿತು. ಕಳೆದ ಏಳು ತಿಂಗಳ ಅವಧಿಯಲ್ಲಿ ಒಂದೇ ದಿನದಲ್ಲಿ ಷೇರು ಮಾರುಕಟ್ಟೆಯು ಕಂಡ ಅತಿದೊಡ್ಡ ಕುಸಿತ ಇದು. ಮತ್ತು ಸತತ ನಾಲ್ಕನೇ ಸೆಷನ್​ ಸೆನ್ಸೆಕ್ಸ್ ಇಳಿಕೆ ದಾಖಲಿಸಿದೆ. ಒಂದು ಹಂತದಲ್ಲಿ ಸೆನ್ಸೆಕ್ಸ್ 1624.09 ಪಾಯಿಂಟ್ಸ್ ನೆಲ ಕಚ್ಚಿತ್ತು. ಬಿಎಸ್​ಇ ಲಿಸ್ಟೆಡ್​ ಕಂಪೆನಿಗಳು 8,21,666.77 ಕೋಟಿ ರೂಪಾಯಿ ಕಡಿಮೆ ಆಗಿ, 2,60,98,530.22 ಕೋಟಿ ರೂಪಾಯಿ ತಲುಪಿತು.

“ಸ್ಥಿರವಾದ ಜಾಗತಿಕ ಪ್ರಭಾವದ ಮಧ್ಯೆಯೂ ಇಂದಿನ ವಹಿವಾಟಿನ ಅವಧಿಯಲ್ಲಿ ಭಾರತೀಯ ಮಾರುಕಟ್ಟೆಯು ತೀಕ್ಷ್ಣವಾದ ಮಾರಾಟಕ್ಕೆ ಸಾಕ್ಷಿಯಾಗಿದೆ. ಕೃಷಿ ಕಾನೂನು ಮಸೂದೆಗಳನ್ನು ಹಿಂತೆಗೆದುಕೊಳ್ಳುವಾಗ ರಿಲಯನ್ಸ್ ಮಾರುಕಟ್ಟೆಯ ಮೇಲೆ ಒತ್ತಡವನ್ನು ಬೀರಿದೆ ಮತ್ತು ಪೇಟಿಎಂ ಐಪಿಒ ಕಳಪೆ ಪ್ರದರ್ಶನವು ಬಹುನಿರೀಕ್ಷಿತ ಇಳಿಕೆಗೆ ಕೆಲವು ನೆಪಗಳಾಗಿವೆ. ವಿದೇಶೀ ಸಾಂಸ್ಥಿಕ ಹೂಡಿಕೆದಾರರು ಮಾರಾಟ ಮಾಡುತ್ತಿದ್ದಾರೆ. ಭಾರತೀಯ ಮಾರುಕಟ್ಟೆಯಲ್ಲಿ ನಿರಂತರವಾಗಿ ಮೌಲ್ಯಮಾಪನಗಳನ್ನು ವಿಸ್ತರಿಸಲಾಗಿದೆ ಎಂದು ಭಾವಿಸುತ್ತಿದ್ದಾರೆ. ಆದರೆ ಇನ್ನೂ ಭಾರತದ ಮೇಲೆ ದೀರ್ಘಾವಧಿಯ ಬುಲಿಶ್ ದೃಷ್ಟಿಕೋನವನ್ನು ಹೊಂದಿದ್ದಾರೆ,” ಎನ್ನುತ್ತಾರೆ ವಿಶ್ಲೇಷಕರು.

ಪೇಟಿಎಂನ ಮಾತೃ ಸಂಸ್ಥೆಯಾದ One97 ಕಮ್ಯುನಿಕೇಷನ್ಸ್, ಬಿಎಸ್​ಇನಲ್ಲಿ ಷೇರಿಗೆ ಶೇ 13ರಷ್ಟು ಕುಸಿದು, ರೂ. 1,360.30 ತಲುಪಿತು. “ರಿಲಯನ್ಸ್-ಅರಾಮ್ಕೋ ಒಪ್ಪಂದದ ರದ್ದತಿ, ಕೃಷಿ ಕಾಯ್ದೆಗಳ ಹಿಂಪಡೆಯುವಿಕೆ, ಎಫ್‌ಐಐಗಳ ನಿರಂತರ ಮಾರಾಟ ಮತ್ತು ಪೇಟಿಎಂ ಲಿಸ್ಟಿಂಗ್​ನಿಂದ ನಿರಾಶೆಗೀಡಾದ ಮಾರುಕಟ್ಟೆ ಭಾವನೆಗಳು ಮಾರುಕಟ್ಟೆಯಲ್ಲಿ ಮುಕ್ತ ಕುಸಿತಕ್ಕೆ ಕಾರಣವಾಯಿತು,” ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್‌ನ ಲಿಮಿಟೆಡ್ ರಿಟೇಲ್ ರೀಸರ್ಚ್ ಮುಖ್ಯಸ್ಥ ಸಿದ್ಧಾರ್ಥ ಖೇಮ್ಕಾ ಹೇಳಿದ್ದಾರೆ.

ಇದನ್ನೂ ಓದಿ: Share Market News: ಷೇರು ಮಾರುಕಟ್ಟೆಯಲ್ಲಿ ‘ಕರಡಿ ಹಿಡಿತ’; 1500ಕ್ಕೂ ಹೆಚ್ಚು ಪಾಯಿಂಟ್ಸ್​ ಕುಸಿದ ಸೆನ್ಸೆಕ್ಸ್

ರಶೀದ್ ಖಾನ್ ವಿರುದ್ಧ ಬೌಂಡರಿಗಳ ಮಳೆಗರೆದ ಲಿವಿಂಗ್‌ಸ್ಟೋನ್
ರಶೀದ್ ಖಾನ್ ವಿರುದ್ಧ ಬೌಂಡರಿಗಳ ಮಳೆಗರೆದ ಲಿವಿಂಗ್‌ಸ್ಟೋನ್
ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಗೂಳಿ ದಾಳಿ; ಶಾಕಿಂಗ್ ವಿಡಿಯೋ ಇಲ್ಲಿದೆ
ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಗೂಳಿ ದಾಳಿ; ಶಾಕಿಂಗ್ ವಿಡಿಯೋ ಇಲ್ಲಿದೆ
ಬೀದರ್ ಜಡ್ಜ್​​ ಮನೆಯಲ್ಲಿಯೇ ಕಳ್ಳತನ ಮಾಡಿದ ಖತರ್ನಾಕ್ ಖದೀಮರು
ಬೀದರ್ ಜಡ್ಜ್​​ ಮನೆಯಲ್ಲಿಯೇ ಕಳ್ಳತನ ಮಾಡಿದ ಖತರ್ನಾಕ್ ಖದೀಮರು
ಕರ್ನಾಟಕದಲ್ಲಿ 30,000 ಎಕರೆ ವಕ್ಫ್ ಭೂಮಿ ವಿದೇಶಿ ಕಂಪನಿಗಳಿಗೆ ಗುತ್ತಿಗೆ;ಶಾ
ಕರ್ನಾಟಕದಲ್ಲಿ 30,000 ಎಕರೆ ವಕ್ಫ್ ಭೂಮಿ ವಿದೇಶಿ ಕಂಪನಿಗಳಿಗೆ ಗುತ್ತಿಗೆ;ಶಾ
ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಆರ್​ಸಿಬಿ
ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಆರ್​ಸಿಬಿ
ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ
ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್