Pension Scheme: ತಿಂಗಳಿಗೆ 10 ಸಾವಿರ ರೂ. ಉಳಿಸಿ, ತಿಂಗಳಿಗೆ 1.5 ಲಕ್ಷ ರೂ. ಪಡೆಯೋದು ಹೇಗೆ ಗೊತ್ತಾ?

ತಿಂಗಳಿಗೆ 1.5 ಲಕ್ಷ ರೂಪಾಯಿ ಪಿಂಚಣಿ ಪಡೆಯುವುದಕ್ಕೆ ಪ್ರತಿ ತಿಂಗಳು ರೂ. 10,000 ಉಳಿಸುವುದು ಹೇಗೆ ಮತ್ತು ಯಾವುದರಿಂದ ಸಾಧ್ಯವಾಗುತ್ತದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

Pension Scheme: ತಿಂಗಳಿಗೆ 10 ಸಾವಿರ ರೂ. ಉಳಿಸಿ, ತಿಂಗಳಿಗೆ 1.5 ಲಕ್ಷ ರೂ. ಪಡೆಯೋದು ಹೇಗೆ ಗೊತ್ತಾ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Nov 22, 2021 | 11:32 AM

ಅಧಿಕ ಹಣದುಬ್ಬರದ ಕಾರಣಕ್ಕಾಗಿ ಯಾವುದೇ ವ್ಯಕ್ತಿಯ ನಿವೃತ್ತಿ ನಿಧಿಯು ಸಾಕಾಗದಿರುವ ಸಾಧ್ಯತೆ ಹೆಚ್ಚಿರುತ್ತದೆ. ನಿವೃತ್ತಿ ನಿಧಿಯ ಜತೆಗೆ ಖಾತೆಗೆ ಪ್ರತಿ ತಿಂಗಳು ಹಣವನ್ನು ಸ್ವೀಕರಿಸುವುದಕ್ಕಿಂತ ಹೆಚ್ಚು ಆರಾಮದಾಯಕವಾದದ್ದೂ ಏನೂ ಇಲ್ಲ. ಸರ್ಕಾರ ಬೆಂಬಲಿತ ಈಕ್ವಿಟಿ-ಸಂಯೋಜಿತ ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಮೇಲೆ ತಿಳಿಸಿದ ಗುರಿಗಳಿಗೆ ಸುರಕ್ಷಿತ ಮತ್ತು ಅತ್ಯಂತ ಸೂಕ್ತವಾಗಿದೆ. ಇದು ವೃದ್ಧಾಪ್ಯಕ್ಕೆ ಭದ್ರತೆಯನ್ನು ಒದಗಿಸಲು ಸರ್ಕಾರವು ಪ್ರಾರಂಭಿಸಿರುವ ಪಿಂಚಣಿ-ಕಮ್-ಹೂಡಿಕೆ ಯೋಜನೆಯಾಗಿದೆ. ಸುರಕ್ಷಿತ ಮತ್ತು ನಿಯಂತ್ರಿತ ಮಾರುಕಟ್ಟೆ ಆಧಾರಿತ ಆದಾಯದ ಮೂಲಕ ನಿವೃತ್ತಿಯನ್ನು ಪರಿಣಾಮಕಾರಿಯಾಗಿ ಯೋಜಿಸಲು ಇದು ಆಕರ್ಷಕವಾದ ದೀರ್ಘಾವಧಿ ಉಳಿತಾಯ ಮಾರ್ಗವನ್ನು ತೋರಿಸುತ್ತದೆ. PFRDA ಸ್ಥಾಪಿಸಿದ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಟ್ರಸ್ಟ್ (NPST) ಎನ್​ಪಿಎಸ್​ ಅಡಿಯಲ್ಲಿ ಎಲ್ಲ ಸ್ವತ್ತುಗಳ ನೋಂದಾಯಿತ ಮಾಲೀಕ ಆಗಿದೆ.

ಎನ್​ಪಿಎಸ್​ ಒಂದು ಸ್ವಯಂಪ್ರೇರಿತ ಕೊಡುಗೆ ಯೋಜನೆಯಾಗಿದ್ದು, ಇದರಲ್ಲಿ ಚಂದಾದಾರರು ಸಾಲಕ್ಕಿಂತ (Debt) ಹೆಚ್ಚಿನ ಈಕ್ವಿಟಿ ಅನುಪಾತವನ್ನು ಆರಿಸಿಕೊಳ್ಳಬಹುದು. ಇದು ಸ್ಥಿರ ಹೂಡಿಕೆಗಳ ದೀರ್ಘಾವಧಿಯ ಸ್ವಭಾವದಿಂದಾಗಿ ಆದಾಯವನ್ನು ಹೆಚ್ಚಿಸುತ್ತದೆ. ಹೂಡಿಕೆದಾರರು ಮೆಚ್ಯೂರಿಟಿ ಮೌಲ್ಯದ ಶೇ 40ರಷ್ಟು ಮೌಲ್ಯದ ವರ್ಷಾಶನವನ್ನು ಖರೀದಿಸಬೇಕಾಗುತ್ತದೆ. ಆದರೆ ಮೆಚ್ಯೂರಿಟಿ ಸಮಯದಲ್ಲಿ ಗರಿಷ್ಠ ಶೇ 60ರಷ್ಟನ್ನು ಹಿಂಪಡೆಯಬಹುದು. ಹೀಗಾಗಿ ಒಂದು ದೊಡ್ಡ ಮೊತ್ತವನ್ನು ಸೃಷ್ಟಿಸುವ ಪ್ರಯೋಜನವನ್ನು ಮತ್ತು ನಿಯಮಿತ ಮಾಸಿಕ ಪಿಂಚಣಿಯ ಸೌಕರ್ಯವನ್ನು ನೀಡುತ್ತದೆ.

60:40 ಈಕ್ವಿಟಿ-ಡೆಟ್ ಮಿಶ್ರಣಕ್ಕಾಗಿ NPS ರಿಟರ್ನ್ಸ್ ಸುಲಭವಾಗಿ ಶೇ 10ರ ವಾರ್ಷಿಕ ಆದಾಯವನ್ನು ಪಡೆಯಬಹುದು. ಅದು ಶೇ 7.2ಕ್ಕೆ (0.6×12) ಅನುವಾದಿಸುವ ಈಕ್ವಿಟಿ ಹೂಡಿಕೆಯ ಮೇಲೆ ಶೇ 12ರಷ್ಟು ಮತ್ತು ಡೆಟ್ ಶೇ 3.20 (0.4×8) ಪಡೆಯುತ್ತದೆ. NPS ಯೋಜನೆಯಿಂದ ಸಿಗುವ ಆದಾಯವು ಈಕ್ವಿಟಿ ಮತ್ತು ಡೆಟ್​ ಇನ್​ಸ್ಟ್ರುಮೆಂಟ್​ ಮಿಶ್ರಣವಾಗಿದೆ.

60:40 ಸಾಲದ ಅನುಪಾತದಲ್ಲಿ 30 ವರ್ಷಗಳ ಅವಧಿಗೆ ಎನ್​ಪಿಎಸ್​ನಲ್ಲಿ ತಿಂಗಳಿಗೆ ರೂ 10,000 ಹೂಡಿಕೆ ಎನ್​ಪಿಎಸ್​ ಕ್ಯಾಲ್ಕುಲೇಟರ್ ಪ್ರಕಾರ, ಎನ್​ಪಿಎಸ್​ ಖಾತೆಯಲ್ಲಿ 60:40ರ ಈಕ್ವಿಟಿ ಅನುಪಾತದೊಂದಿಗೆ 30 ವರ್ಷಗಳ ಅವಧಿಗೆ 10,000 ರೂಪಾಯಿಗಳ ಮಾಸಿಕ ಹೂಡಿಕೆಯನ್ನು ಇಟ್ಟುಕೊಳ್ಳುವುದರಿಂದ ಮೆಚ್ಯೂರಿಟಿ ಮತ್ತು ವರ್ಷಾಶನ ಖರೀದಿಯ ಮೇಲೆ ಇಂಡಿಗಂಟಾಗಿ 1,36,75,952 ರೂಪಾಯಿ ಹಾಗೂ ರೂ. 45,587 ಪೆನ್ಷನ್ ಬರುತ್ತದೆ. ಆದರೆ ಹೂಡಿಕೆದಾರರು 25 ವರ್ಷಗಳ ಅವಧಿಗೆ ರೂ 1,36,75,952 ಮೆಚ್ಯೂರಿಟಿ ಮೊತ್ತದೊಂದಿಗೆ ವ್ಯವಸ್ಥಿತ ಹಿಂತೆಗೆದುಕೊಳ್ಳುವ ಯೋಜನೆಯನ್ನು (SWP) ಖರೀದಿಸಿದರೆ, ಒಟ್ಟಾರೆ ಮಾಸಿಕ ಪಿಂಚಣಿಯನ್ನು ವರ್ಷಕ್ಕೆ ರೂ 1.5 ಲಕ್ಷಕ್ಕೆ ತೆಗೆದುಕೊಳ್ಳುವ ಮೂಲಕ ತಿಂಗಳಿಗೆ ಹೆಚ್ಚುವರಿ ರೂ 1.03 ಲಕ್ಷವನ್ನು ಪಡೆಯುತ್ತಾರೆ.

ಎನ್​ಪಿಎಸ್​ ಯೋಜನೆಯನ್ನು ನಿರ್ವಹಿಸುವ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA), ಚಂದಾದಾರರಿಗೆ ಪ್ರವೇಶ ಮತ್ತು ನಿರ್ಗಮನ ನಿಯಮಗಳನ್ನು ಸಡಿಲಿಸಿದೆ. ಎನ್​ಪಿಎಸ್​ಗೆ ಸೇರುವ ಗರಿಷ್ಠ ವಯಸ್ಸನ್ನು 65 ವರ್ಷದಿಂದ 70 ವರ್ಷಕ್ಕೆ ಏರಿಸಿದೆ.

ಇದನ್ನೂ ಓದಿ: Post Office Scheme: ಪೋಸ್ಟ್​ ಆಫೀಸ್​ನ ಈ ಸ್ಕೀಮ್​ನಲ್ಲಿ 50 ಸಾವಿರ ರೂಪಾಯಿ ಇಟ್ಟರೆ 3300 ರೂ. ಪೆನ್ಷನ್

ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ