IRCTC Down: ಐಆರ್​ಸಿಟಿಸಿ ವೆಬ್​ಸೈಟ್ ಮತ್ತು ಆ್ಯಪ್​ನಲ್ಲಿ ಸಮಸ್ಯೆ; ರೈಲ್ವೆ ಟಿಕೆಟ್ ಬುಕಿಂಗ್​ಗೆ ಪರ್ಯಾಯವೇನು? ಇಲ್ಲಿದೆ ಪಟ್ಟಿ

Alternative For Train Ticket Booking: ಭಾರತೀಯ ರೈಲ್ವೆ ಇಲಾಖೆಯ ಟ್ರೈನ್ ಟಿಕೆಟ್ ಬುಕಿಂಗ್ ಸರ್ವಿಸ್ ನೀಡುವ ಐಆರ್​ಸಿಟಿಸಿಯ ವೆಬ್ ಮತ್ತು ಆ್ಯಪ್​ನಲ್ಲಿ ತಾಂತ್ರಿಕ ತೊಂದರೆ ಎದುರಾಗಿದೆ. ಟಿಕೆಟ್ ಬುಕಿಂಗ್​ಗೆ ಪರ್ಯಾಯ ಆ್ಯಪ್​ಗಳನ್ನು ಬಳಸಬಹುದು.

IRCTC Down: ಐಆರ್​ಸಿಟಿಸಿ ವೆಬ್​ಸೈಟ್ ಮತ್ತು ಆ್ಯಪ್​ನಲ್ಲಿ ಸಮಸ್ಯೆ; ರೈಲ್ವೆ ಟಿಕೆಟ್ ಬುಕಿಂಗ್​ಗೆ ಪರ್ಯಾಯವೇನು? ಇಲ್ಲಿದೆ ಪಟ್ಟಿ
ಐಆರ್​ಸಿಟಿಸಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 25, 2023 | 11:45 AM

ಬೆಂಗಳೂರು, ಜುಲೈ 25: ಆನ್​ಲೈನ್​ನಲ್ಲಿ ರೈಲು ಟಿಕೆಟ್ ಬುಕ್ ಮಾಡುವ ಐಆರ್​ಸಿಟಿಸಿ (IRCTC) ಸಂಸ್ಥೆಯ ವೆಬ್​ಸೈಟ್ ಮತ್ತು ಮೊಬೈಲ್ ಆ್ಯಪ್ ಎರಡೂ ಕೂಡ ಡೌನ್ ಆಗಿವೆ. ಟ್ರೈನ್ ಟಿಕೆಟ್ ಬುಕ್ ಮಾಡಲು ಸಾಧ್ಯವಾಗುತ್ತಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬಹಳಷ್ಟು ಜನರು ಸಮಸ್ಯೆ ತೋಡಿಕೊಂಡಿದ್ದಾರೆ. ಬೆಳಗ್ಗೆಯಿಂದಲೂ ಐಆರ್​ಸಿಟಿಸಿ ಸಮಸ್ಯೆ ಎದುರಿಸುತ್ತಿರುವುದು ಕಂಡುಬಂದಿದೆ. ಐಆರ್​ಸಿಟಿಸಿ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸ್ಪಂದಿಸಿದ್ದು, ತಮ್ಮ ತಾಂತ್ರಿಕ ತಂಡದಿಂದ ಸಮಸ್ಯೆ ನಿವಾರಣೆಗೆ ಪ್ರಯತ್ನವಾಗುತ್ತಿದೆ. ಈ ಸಮಸ್ಯೆ ಪರಿಹಾರವಾದ ಬಳಿಕ ನಾವು ನೋಟಿಫೈ ಮಾಡುತ್ತೇವೆ ಎಂದು ಹೇಳಿದೆ.

ಬೆಳಗ್ಗೆ 10ಗಂಟೆಯಿಂದ ಈ ಸಮಸ್ಯೆ ಇದೆ. ಕುತೂಹಲವೆಂದರೆ ಬೆಳಗ್ಗೆ 10 ಗಂಟೆಗೆ ತತ್ಕಾಲ್ ಟಿಕೆಟ್ ಬುಕಿಂಗ್ ಸೇವೆ ಆರಂಭವಾಗುತ್ತದೆ. ಬಹಳ ತುರ್ತಾಗಿ ಟಿಕೆಟ್ ಅಗತ್ಯ ಇರುವವರಿಗೆಂದು ತತ್ಕಾಲ್ ಯೋಜನೆ ಇರುವುದು. ಈ ಸಮಯದಲ್ಲೇ ಇ-ಟಿಕೆಟ್ ಸರ್ವಿಸ್ ಅಲಭ್ಯ ಇರುವುದು ಹಲವರನ್ನು ನಿರಾಸೆಗೊಳಿಸಿದೆ.

ಇದನ್ನೂ ಓದಿ: Rs.2000 Exchange Deadline: 2,000 ರೂ ನೋಟುಗಳು ಇನ್ನೂ ಇವೆಯೇ? ಸೆಪ್ಟಂಬರ್ 30ರ ಡೆಡ್​ಲೈನ್ ವಿಸ್ತರಣೆ ಆಗೊಲ್ಲ; ಬೇಗ ಮರಳಿಸಿಬಿಡಿ

ರೈಲು ಟಿಕೆಟ್ ಬುಕಿಂಗ್​ಗೆ ಪರ್ಯಾಯ ಮಾರ್ಗಗಳು

ಐಆರ್​ಸಿಟಿಸಿಯಲ್ಲಿ ತಾಂತ್ರಿಕ ಸಮಸ್ಯೆಯಾಗಿರುವುದರಿಂದ ಅಮೇಜಾನ್, ಮೇಕ್ ಮೈ ಟ್ರಿಪ್ ಮೊದಲಾದ ಆ್ಯಪ್​ಗಳ ಮೂಲಕ ಟಿಕೆಟ್ ಬುಕ್ ಮಾಡಿ ಎಂದು ಐಆರ್​ಸಿಟಿಸಿ ಟ್ವೀಟ್ ಮಾಡಿದೆ.

ಇಲ್ಲಿ ಸಮಸ್ಯೆಯಾಗಿರುವ ಐಆರ್​ಸಿಟಿಸಿಯಲ್ಲಿ ಬುಕ್ ಮಾಡುವ ಇಟಿಕೆಟ್​ಗೆ ಮಾತ್ರ. ರೈಲ್ವೆ ಕೌಂಟರುಗಳಲ್ಲಿ ಟಿಕೆಟ್ ಬುಕಿಂಗ್ ಮಾಡಲು ಸಾಧ್ಯ.

ಇದನ್ನೂ ಓದಿ: ITR Deadline: ಐಟಿ ರಿಟರ್ನ್ ಫೈಲ್ ಮಾಡುವ ಗಡುವು ವಿಸ್ತರಣೆಯಾಗುತ್ತಾ? ಇಲ್ಲಿಯವರೆಗೆ ಐಟಿಆರ್ ಸಲ್ಲಿಸಿದವರೆಷ್ಟು? ಇಲ್ಲಿದೆ ಡೀಟೇಲ್ಸ್

ಹಾಗೆಯೇ, ಐಆರ್​ಸಿಟಿಸಿಯದ್ದೇ ಪ್ಲಾಟ್​ಫಾರ್ಮ್ ಬಳಸಿ ರೈಲ್ವೆ ಟಿಕೆಟ್ ಬುಕಿಂಗ್ ಸೇವೆ ಬೇರೆ ಹಲವು ಆ್ಯಪ್​ಗಳಲ್ಲೂ ಲಭ್ಯ ಇವೆ. ಗೋ ಐಬಿಬೋ, ಮೇಕ್ ಮೈ ಟ್ರಿಪ್, ಪೇಟಿಎಂ, ಟ್ರೈನ್​ಮ್ಯಾನ್, ಇಕ್ಸಿಗೋ, ರೆಡ್​ರೈಲ್ ಇತ್ಯಾದಿ ಮೂಲಕ ಟ್ರೈನ್ ಟಿಕೆಟ್ ಬುಕ್ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್