
ನವದೆಹಲಿ, ಜುಲೈ 27: ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿದೆ. ಈ ಡೆಡ್ಲೈನ್ ಹತ್ತಿರವಾಗುತ್ತಿದ್ದಂತೆ, ಧಾವಂತದಲ್ಲಿ ತೆರಿಗೆದಾರರು ಸಣ್ಣಪುಟ್ಟ ತಪ್ಪುಗಳನ್ನು ಮಾಡುವುದು ಸಾಮಾನ್ಯ. ಸಬ್ಮಿಟ್ (Submit) ಬಟನ್ ಒತ್ತುವ ಮುನ್ನ ಈ ಕೆಳಗಿನ ಪ್ರಮುಖ ವಿಷಯಗಳನ್ನು ಪರಿಶೀಲಿಸಿದರೆ, ತೆರಿಗೆ ಇಲಾಖೆಯಿಂದ ನೋಟಿಸ್ ಬರುವುದನ್ನು ತಪ್ಪಿಸಬಹುದು ಹಾಗೂ ರೀಫಂಡ್ (Refund) ಬೇಗನೆ ಸಿಗುವಂತೆ ನೋಡಿಕೊಳ್ಳಬಹುದು.
ಫಾರ್ಮ್ 16, ಬ್ಯಾಂಕ್ ಸ್ಟೇಟ್‌ಮೆಂಟ್, ಬಡ್ಡಿ ಪ್ರಮಾಣಪತ್ರಗಳು (Interest Certificates), ಡಿಮ್ಯಾಟ್/ಮ್ಯೂಚುಯಲ್ ಫಂಡ್ ಕ್ಯಾಪಿಟಲ್ ಗೇನ್ಸ್ ವಿವರಗಳು ಹಾಗೂ ಹೂಡಿಕೆಯ ಆಧಾರಗಳನ್ನು ಸಿದ್ಧವಾಗಿಟ್ಟುಕೊಳ್ಳಿ.
ನಿಮ್ಮ ಬಳಿಯಿರುವ ದಾಖಲೆಗಳನ್ನು ಆದಾಯ ತೆರಿಗೆ ಪೋರ್ಟಲ್‌ನಲ್ಲಿ ಲಭ್ಯವಿರುವ AIS (Annual Information Statement) ಮತ್ತು Form 26AS ನೊಂದಿಗೆ ಹೋಲಿಸಿ ಪರಿಶೀಲಿಸಿ.
ಸಂಬಳ, ಬ್ಯಾಂಕ್ ಡೆಪಾಸಿಟ್‌ಗಳ ಬಡ್ಡಿ, ಷೇರು ಮಾರುಕಟ್ಟೆಯ ಲಾಭ ಮತ್ತು ಕಡಿತಗೊಂಡ ತೆರಿಗೆ (TDS) ವಿವರಗಳು ಸರಿಯಾಗಿ ಹೊಂದಾಣಿಕೆಯಾಗಬೇಕು. Mismatch ಇದ್ದರೆ ನೋಟಿಸ್ ಬರುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ: ನೀವು ಐಟಿ ರಿಟರ್ನ್ಸ್ ಸಲ್ಲಿಸಿ 6 ವರ್ಷಗಳವರೆಗೆ ಈ ದಾಖಲೆಗಳು ಜೊತೆಯಲ್ಲಿರಲಿ: ತೆರಿಗೆ ತಜ್ಞರ ಸಲಹೆ
ಸಂಬಳದ ಹೊರತಾಗಿ ಬ್ಯಾಂಕ್ ಉಳಿತಾಯ ಖಾತೆ ಬಡ್ಡಿ (Savings Interest), ಫಿಕ್ಸ್ಡ್ ಡೆಪಾಸಿಟ್ ಬಡ್ಡಿ, ಡಿವಿಡೆಂಡ್, ಮನೆ ಬಾಡಿಗೆ ಆದಾಯ ಮತ್ತು ಕ್ರಿಪ್ಟೋ/ಷೇರು ಲಾಭಗಳನ್ನು ತಪ್ಪದೇ ನಮೂದಿಸಿ.
ತೆರಿಗೆ ಮರುಪಾವತಿ (Tax Refund) ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಬರಲು, ನಿಮ್ಮ ಬ್ಯಾಂಕ್ ಖಾತೆ ಐಟಿಆರ್ ಪೋರ್ಟಲ್‌ನಲ್ಲಿ Pre-Validated ಆಗಿದೆಯೇ ಹಾಗೂ IFSC ಕೋಡ್ ಸರಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಇದನ್ನೂ ಓದಿ: ಆದಾಯ ತೆರಿಗೆ ನೋಟೀಸ್ ಬಂತಾ? ಅದು ವಂಚಕರ ಜಾಲವಾ? ಆನ್ಲೈನ್ನಲ್ಲೇ ಪರಿಶೀಲಿಸಿ
ನೀವು ‘ಹಳೆಯ ತೆರಿಗೆ ಪದ್ಧತಿ’ (Old Tax Regime) ಅಥವಾ ‘ಹೊಸ ತೆರಿಗೆ ಪದ್ಧತಿ’ (New Tax Regime) ಪೈಕಿ ಯಾವುದರಲ್ಲಿ ಹೆಚ್ಚು ತೆರಿಗೆ ಉಳಿತಾಯವಾಗುತ್ತದೆ ಎಂಬುದನ್ನು ಲೆಕ್ಕಹಾಕಿ ಸರಿಯಾದ ವಿಭಾಗವನ್ನು ಆಯ್ಕೆಮಾಡಿ.
ಐಟಿಆರ್ ಸಬ್ಮಿಟ್ ಮಾಡಿದ ತಕ್ಷಣ ಪ್ರಕ್ರಿಯೆ ಮುಗಿಯುವುದಿಲ್ಲ. ರಿಟರ್ನ್ ಸಲ್ಲಿಸಿದ 30 ದಿನಗಳ ಒಳಗಾಗಿ E-Verification (ಆಧಾರ್ OTP, ನೆಟ್ ಬ್ಯಾಂಕಿಂಗ್ ಮೂಲಕ) ಪೂರ್ಣಗೊಳಿಸುವುದು ಕಡ್ಡಾಯ. ಇ-ವೆರಿಫೈ ಮಾಡದಿದ್ದರೆ ಸಲ್ಲಿಕೆಯಾದ ಐಟಿಆರ್ ರದ್ದಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ