ನವದೆಹಲಿ, ಜುಲೈ 29: ಪ್ಯಾನ್ ನಂಬರ್ ಮತ್ತು ಆಧಾರ್ ನಂಬರ್ ಲಿಂಕ್ ಮಾಡದ ತೆರಿಗೆ ಪಾವತಿದಾರರು ಹೆಚ್ಚಿನ ಮೊತ್ತದ ತೆರಿಗೆ ಪಾತಿಸಬೇಕಾಗುತ್ತದೆ. ಮೇ 31ರೊಳಗೆ ಆಧಾರ್ ಜೊತೆ ಲಿಂಕ್ ಆಗದ ಪ್ಯಾನ್ ನಂಬರ್ ನಿಷ್ಕ್ರಿಯಗೊಂಡಿರುತ್ತದೆ. ಇಂಥ ಪ್ಯಾನ್ ನಂಬರ್ ಬಳಸಿದರೂ ಬಳಸದೇ ಇದ್ದರೂ ಎರಡೂ ಒಂದೆ. ಪ್ಯಾನ್ ಇಲ್ಲದೇ ಐಟಿಆರ್ ಸಲ್ಲಿಕೆ ಮಡಿದರೆ ಹೆಚ್ಚಿನ ತೆರಿಗೆ ಅನ್ವಯ ಆಗುತ್ತದೆ. 2023ರ ಮಾರ್ಚ್ 28, ಹಾಗೂ 2024ರ ಏಪ್ರಿಲ್ 23ರಂದು ಸಿಬಿಡಿಟಿ ಈ ಸಂಬಂಧ ಒಂದು ಸುತ್ತೋಲೆ ಹೊರಡಿಸಿತ್ತು. ಅದರ ಪ್ರಕಾರ ಸೆಕ್ಷನ್ 206ಎಎ ಅಡಿಯಲ್ಲಿ ಇನಾಪರೇಟಿವ್ ಪ್ಯಾನ್ ಬಳಸಿದ ತೆರಿಗೆ ಪಾವತಿದಾರರಿಗೆ ಟ್ಯಾಕ್ಸ್ ಡಿಮ್ಯಾಂಡ್ ನೋಟೀಸ್ ಕೊಡಲಾಗುತ್ತಿದೆ. ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಯಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ.
ವರ್ಷಕ್ಕೆ 2.5 ಲಕ್ಷ ರೂ ಒಳಗೆ ಸಂಬಳ ಇರುವವರಿಗೆ ವಿನಾಯಿತಿ ಇದೆ. ಅವರ ಪ್ಯಾನ್ ನಿಷ್ಕ್ರಿಯಗೊಂಡಿದ್ದರೂ ಅವರನ್ನು ಟ್ಯಾಕ್ಸ್ ಡಿಮ್ಯಾಂಡ್ಗೆ ಪರಿಗಣಿಸಲಾಗುವುದಿಲ್ಲ. ಆದರೆ, ವಿನಾಯಿತಿ ಮಿತಿಗಿಂತ ಹೆಚ್ಚಿನ ಆದಾಯ ಇರುವವರು ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡದೇ ಇದ್ದರೆ ಕ್ರಮ ಎದುರಿಸಬೇಕಾಗುತ್ತದೆ.
ಇನಾಪರೇಟಿವ್ ಪ್ಯಾನ್, ಅಥವಾ ಆಧಾರ್ಗೆ ಲಿಂಕ್ ಆಗದ ಪ್ಯಾನ್ ಅನ್ನು ಯಾರಾದರೂ ಬಳಸುತ್ತಿದ್ದರೆ ಅವರಿಗೆ ಶೇ. 20ರಷ್ಟು ಟಿಡಿಎಸ್ ತೆರಿಗೆ ಮುರಿದುಕೊಳ್ಳಲಾಗುತ್ತದೆ. ಈ ನಿಟ್ಟಿನಲ್ಲಿ ಅಂಥ ತೆರಿಗೆ ಪಾವತಿದಾರರಿಗೆ ಟ್ಯಾಕ್ಸ್ ಡಿಮ್ಯಾಂಡ್ ಜಾರಿ ಮಾಡಲಾಗುತ್ತಿದೆ ಎಂದು ತೆರಿಗೆ ತಜ್ಞರೊಬ್ಬರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಟೊಮೆಟೋ ಬೆಲೆ ಏರಿಕೆ ನಿಯಂತ್ರಣಕ್ಕೆ ಕ್ರಮ; ಸಬ್ಸಿಡಿ ದರದಲ್ಲಿ ಸರ್ಕಾರದಿಂದಲೇ ಟೊಮೆಟೋ ಮಾರಾಟ
2024ರ ಮಾರ್ಚ್ 31ರವರೆಗೆ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಲು ಗಡುವು ಕೊಡಲಾಗಿತ್ತು. ಲಿಂಕ್ ಆಗದ ಪ್ಯಾನ್ ಇನಾಪರೇಟಿವ್ ಆಗಿತ್ತು. ಮೇ 31ಕ್ಕೆ ಮತ್ತೊಂದು ಗಡುವು ಕೊಡಲಾಗಿತ್ತು. ಅಷ್ಟಾಗಿಯೂ ಆಧಾರ್ ಪ್ಯಾನ್ ಲಿಂಕ್ ಮಾಡದವರು ಈಗ ಹೆಚ್ಚುವರಿ ತೆರಿಗೆ ಕಟ್ಟುವುದು ಅನಿವಾರ್ಯವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ