AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಗಸ್ಟ್ ತಿಂಗಳಲ್ಲಿ ಬ್ಯಾಂಕ್​ಗಳಿಗೆ 13 ರಜಾ ದಿನಗಳು; ಕರ್ನಾಟಕದಲ್ಲೆಷ್ಟಿದೆ ರಜೆ? ವರ್ಷಾಂತ್ಯದವರೆಗೆ ರಜೆಗಳೆಷ್ಟು, ಇಲ್ಲಿದೆ ಪಟ್ಟಿ

Bank holidays list in August: ಸ್ವಾತಂತ್ರ್ಯ ದಿನಾಚರಣೆ, ಕೃಷ್ಣ ಜನ್ಮಾಷ್ಟಮಿ ಇತ್ಯಾದಿ ವಿಶೇಷ ದಿನಗಳಿರುವ ಆಗಸ್ಟ್​ನಲ್ಲಿ ಒಟ್ಟಾರೆ 13 ದಿನಗಳು ಬ್ಯಾಂಕುಗಳಿಗೆ ರಜೆ ಇರುತ್ತದೆ. ಇದರಲ್ಲಿ ಪ್ರದೇಶವಾರು ರಜೆಗಳ ಸಂಖ್ಯೆ ವ್ಯತ್ಯಾಸ ಆಗುತ್ತದೆ. ಕರ್ನಾಟಕದಲ್ಲಿ ಒಟ್ಟಾರೆ 9 ರಜಾ ದಿನಗಳಿವೆ. ಇದರಲ್ಲಿ ಭಾನುವಾರ ಮತ್ತು ಶನಿವಾರ ರಜೆಗಳೂ ಒಳಗೊಂಡಿವೆ. ಈ ವರ್ಷಾಂತ್ಯದವರೆಗಿನ ರಜೆಗಳ ಪಟ್ಟಿಯೂ ಕೊನೆಯಲ್ಲಿದೆ.

ಆಗಸ್ಟ್ ತಿಂಗಳಲ್ಲಿ ಬ್ಯಾಂಕ್​ಗಳಿಗೆ 13 ರಜಾ ದಿನಗಳು; ಕರ್ನಾಟಕದಲ್ಲೆಷ್ಟಿದೆ ರಜೆ? ವರ್ಷಾಂತ್ಯದವರೆಗೆ ರಜೆಗಳೆಷ್ಟು, ಇಲ್ಲಿದೆ ಪಟ್ಟಿ
ಬ್ಯಾಂಕ್ ರಜೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 29, 2024 | 7:06 PM

Share

ನವದೆಹಲಿ, ಜುಲೈ 29: ಆರ್​ಬಿಐ ಪ್ರಕಟಿಸಿದ ಈ ವರ್ಷದ ಕ್ಯಾಲಂಡರ್ ಪ್ರಕಾರ ಆಗಸ್ಟ್ ತಿಂಗಳಲ್ಲಿ ಒಟ್ಟು 13 ರಜಾ ದಿನಗಳಿವೆ. ಇದರಲ್ಲಿ ನಾಲ್ಕು ಭಾನುವಾರ ಮತ್ತು ಎರಡು ಶನಿವಾರದ ರಜೆಗಳೂ ಇವೆ. ಆಗಸ್ಟ್ ತಿಂಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ, ಕೃಷ್ಣ ಜನ್ಮಾಷ್ಟಮಿ, ರಾಖಿ ಹಬ್ಬಗಳೂ ಇವೆ. ಹೆಚ್ಚಿನ ರಾಜ್ಯಗಳಲ್ಲಿ ಕೃಷ್ಣ ಜನ್ಮಾಷ್ಟಮಿ ಮತ್ತು ರಾಖಿ ಹಬ್ಬಕ್ಕೆ ರಜೆ ಇದೆ. ಕರ್ನಾಟಕದಲ್ಲಿ ಈ ಮೂರು ದಿನಗಳಲ್ಲೂ ಬ್ಯಾಂಕುಗಳಿಗೆ ರಜೆ ಇರುತ್ತದೆ. ಆಗಸ್ಟ್ 24ರಿಂದ 26ರವರೆಗೆ ಸತತ ಮೂರು ದಿನಗಳ ಕಾಲ ಬ್ಯಾಂಕ್ ಬಂದ್ ಆಗಿರುತ್ತದೆ. ಹೀಗಾಗಿ, ಬ್ಯಾಂಕ್​ನಲ್ಲಿ ಕೆಲಸ ಇರುವವರು ರಜಾ ದಿನಗಳ ಪಟ್ಟಿಯನ್ನು ಗಮನಿಸಿ, ತಮ್ಮ ಕೆಲಸ ಕಾರ್ಯಗಳ ವೇಳಾಪಟ್ಟಿ ಬದಲಿಸುವುದು ಉತ್ತಮ.

2024ರ ಆಗಸ್ಟ್ ತಿಂಗಳಲ್ಲಿ ಇರುವ ಬ್ಯಾಂಕ್ ರಜಾ ದಿನಗಳ ಪಟ್ಟಿ

  • ಆಗಸ್ಟ್ 4, ಭಾನುವಾರ: ಎಲ್ಲಾ ಬ್ಯಾಂಕ್​ಗಳಿಗೂ ರಜೆ
  • ಆಗಸ್ಟ್ 7, ಬುಧವಾರ: ಹರ್ಯಾಲಿ ತೀಜ್ ಹಬ್ಬ (ಹರ್ಯಾಣ ರಾಜ್ಯದಲ್ಲಿ ರಜೆ)
  • ಆಗಸ್ಟ್ 8, ಗುರುವಾರ: ತೆಂಡೋಂಗ್ ಲೋ ರುಮ್ ಫಾಟ್ – ಸಿಕ್ಕಿಂ ರಾಜ್ಯದಲ್ಲಿ ರಜೆ
  • ಆಗಸ್ಟ್ 10, ಎರಡನೇ ಶನಿವಾರ: ಎಲ್ಲಾ ಬ್ಯಾಂಕ್​ಗಳಿಗೂ ರಜೆ
  • ಆಗಸ್ಟ್ 11, ಭಾನುವಾರ: ಎಲ್ಲಾ ಬ್ಯಾಂಕ್​ಗಳಿಗೂ ರಜೆ
  • ಆಗಸ್ಟ್ 13, ಮಂಗಳವಾರ: ದೇಶಪ್ರೇಮಿಗಳ ದಿನ – ಮಣಿಪುರ ರಾಜ್ಯದಲ್ಲಿ ರಜೆ
  • ಆಗಸ್ಟ್ 15, ಗುರುವಾರ: ಸ್ವಾತಂತ್ರ್ಯ ದಿನೋತ್ಸವ – ಎಲ್ಲಾ ಬ್ಯಾಂಕ್​ಗಳಿಗೂ ರಜೆ
  • ಆಗಸ್ಟ್ 16, ಶುಕ್ರವಾರ: ಡೀ ಜೂರ್ ಟ್ರಾನ್ಸ್​ಫರ್ ಡೇ – ಪುದುಚೇರಿಯಲ್ಲಿ ರಜೆ
  • ಆಗಸ್ಟ್ 18, ಭಾನುವಾರ: ಎಲ್ಲಾ ಬ್ಯಾಂಕ್​ಗಳಿಗೂ ರಜೆ
  • ಆಗಸ್ಟ್ 19, ಸೋಮವಾರ: ರಾಖಿ ಹಬ್ಬ (ಉ. ಪ್ರ., ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಹರ್ಯಾಣ ರಾಜ್ಯಗಳಲ್ಲಿ ಬ್ಯಾಂಕ್ ರಜೆ)
  • ಆಗಸ್ಟ್ 24, ನಾಲ್ಕನೇ ಶನಿವಾರ: ಎಲ್ಲಾ ಬ್ಯಾಂಕ್​ಗಳಿಗೂ ರಜೆ
  • ಆಗಸ್ಟ್ 25, ಭಾನುವಾರ: ಎಲ್ಲಾ ಬ್ಯಾಂಕ್​ಗಳಿಗೂ ರಜೆ
  • ಆಗಸ್ಟ್ 26, ಸೋಮವಾರ: ಕೃಷ್ಣ ಜನ್ಮಾಷ್ಟಮಿ – ಹೆಚ್ಚಿನ ರಾಜ್ಯಗಳಲ್ಲಿ ರಜೆ

ಕರ್ನಾಟಕದಲ್ಲಿ ಆಗಸ್ಟ್ ತಿಂಗಳಲ್ಲಿ ಇರುವ ಬ್ಯಾಂಕ್ ರಜಾ ದಿನಗಳ ಪಟ್ಟಿ

  • ಆಗಸ್ಟ್ 4, ಭಾನುವಾರ
  • ಆಗಸ್ಟ್ 10, ಎರಡನೇ ಶನಿವಾರ
  • ಆಗಸ್ಟ್ 11, ಭಾನುವಾರ
  • ಆಗಸ್ಟ್ 15, ಗುರುವಾರ: ಸ್ವಾತಂತ್ರ್ಯ ದಿನೋತ್ಸವ
  • ಆಗಸ್ಟ್ 18, ಭಾನುವಾರ
  • ಆಗಸ್ಟ್ 19, ಸೋಮವಾರ: ರಾಖಿ ಹಬ್ಬ
  • ಆಗಸ್ಟ್ 24, ನಾಲ್ಕನೇ ಶನಿವಾರ
  • ಆಗಸ್ಟ್ 25, ಭಾನುವಾರ
  • ಆಗಸ್ಟ್ 26, ಸೋಮವಾರ: ಕೃಷ್ಣ ಜನ್ಮಾಷ್ಟಮಿ

ಇದನ್ನೂ ಓದಿ: ಆಗಸ್ಟ್ 1ರಿಂದ ಉತ್ತಮ ಗುಣಮಟ್ಟದ ಪಾದರಕ್ಷೆ; ಶೂ, ಚಪ್ಪಲಿ ಬೆಲೆಗಳಲ್ಲೂ ಏರಿಕೆ

ಸೆಪ್ಟಂಬರ್​ನಿಂದ ಡಿಸೆಂಬರ್​ವರೆಗೆ ಇರುವ ಬ್ಯಾಂಕ್ ರಜಾ ದಿನಗಳು

  • ಸೆಪ್ಟಂಬರ್ 7, ಶನಿವಾರ: ಗಣೇಶ ಚತುರ್ಥಿ
  • ಸೆಪ್ಟಂಬರ್ 15, ಭಾನುವಾರ: ಈದ್ ಮಿಲಾದ್
  • ಅಕ್ಟೋಬರ್ 2, ಬುಧವಾರ: ಗಾಂಧಿ ಜಯಂತ್, ಮಹಾಲಯ ಅಮಾವಾಸ್ಯೆ
  • ಅಕ್ಟೋಬರ್ 11, ಶುಕ್ರವಾರ: ಮಹಾನವಮಿ
  • ಅಕ್ಟೋಬರ್ 12, ಶನಿವಾರ: ದಸರಾ
  • ಅಕ್ಟೋಬರ್ 17, ಗುರುವಾರ: ವಾಲ್ಮೀಕಿ ಜಯಂತಿ
  • ನವೆಂಬರ್ 1, ಶುಕ್ರವಾರ: ದೀಪಾವಳಿ
  • ನವೆಂಬರ್ 18, ಸೋಮವಾರ: ಕನಕದಾಸ ಜಯಂತಿ
  • ಡಿಸೆಂಬರ್ 25, ಬುಧವಾರ: ಕ್ರಿಸ್ಮಸ್ ಹಬ್ಬ

ಗಮನಿಸಿ: ಈ ರಜಾ ದಿನಗಳಲ್ಲಿ ಬ್ಯಾಂಕ್​ನ ಕಚೇರಿಗಳು ಮಾತ್ರವೇ ಬಂದ್ ಆಗಿರುತ್ತವೆ. ಎಟಿಎಂ, ಡಿಜಿಟಲ್ ಮಾಧ್ಯಮಗಳಲ್ಲಿ ಬ್ಯಾಂಕ್ ಸೇವೆ ಅನಿರ್ಬಂಧಿತವಾಗಿರುತ್ತವೆ. ಎಟಿಎಂಗಳು ಎಂದಿನಂತೆ ತೆರೆದಿರುತ್ತವೆ. ನೆಟ್ ಬ್ಯಾಂಕಿಂಗ್, ಯುಪಿಐ ಮೂಲಕ ಬ್ಯಾಂಕಿಂಗ್ ವಹಿವಾಟು ನಡೆಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!