ನವದೆಹಲಿ, ಜೂನ್ 9: ಚುನಾವಣೆಯ ಸಂದರ್ಭದ ಏರಿಳಿತದ ಬಳಿಕ ಸ್ಥಿರಗೊಂಡಂತಿರುವ ಷೇರು ಮಾರುಕಟ್ಟೆಯಲ್ಲಿ ಈ ವಾರ ಎರಡು ಐಪಿಒಗಳು ಪದಾರ್ಪಣೆ ಮಾಡುತ್ತಿವೆ. ಜೂನ್ 10, ಸೋಮವಾರ ಇಕ್ಸಿಗೋ ಅಥವಾ ಲೀ ಟ್ರಾವೆನ್ಯೂಸ್ ಟೆಕ್ನಾಲಜಿ ಲಿ ಸಂಸ್ಥೆಯ ಐಪಿಒ (Ixigo IPO) ಬಿಡುಗಡೆ ಆಗುತ್ತಿದೆ. ಜೂನ್ 13, ಗುರುವಾರ ಯುನೈಟೆಡ್ ಕಾಟ್ಫ್ಯಾಬ್ ಲಿ ಸಂಸ್ಥೆಯ ಐಪಿಒ (United Cotfab IPO) ಲಭ್ಯವಾಗಲಿದೆ. ಇಂಡಿಜೀನ್, ವಿನ್ಸೋಲ್, ಟಿಬಿಒ ಟೆಕ್ ಮೊದಲಾದ ಐಪಿಒಗಳು ಇತ್ತೀಚೆಗೆ ಭರ್ಜರಿ ಯಶಸ್ವಿ ಕಂಡಿವೆ. ಈ ಹಿನ್ನೆಲೆಯಲ್ಲಿ ಈ ವಾರ ಎರಡು ಐಪಿಒಗಳು ಎಷ್ಟು ಮಂದಿ ಹೂಡಿಕೆದಾರರನ್ನು ಆಕರ್ಷಿಸುತ್ತವೆ ಎಂಬುದು ಕುತೂಹಲದ ಸಂಗತಿ.
ಗುಜರಾತ್ ಮೂಲದ ಸಣ್ಣ ಕೈಗಾರಿಕೆಯಾದ ಯುನೈಟೆಡ್ ಕಾಟ್ಫ್ಯಾಬ್ ಲಿ ಸಂಸ್ಥೆ ಜವಳಿ ಕ್ಷೇತ್ರದ್ದಾಗಿದೆ. ಉಚ್ಚ ಗುಣಮಟ್ಟದ ಓಪನ್ ಎಂಡೆ ನೂಲುಗಳನ್ನು ತಯಾರಿಸುತ್ತದೆ. ಗಾರ್ಮೆಂಟ್ಸ್ ಕ್ಷೇತ್ರದ ಕಂಪನಿಗಳು ಇದರ ಗ್ರಾಹಕರು. 2015ರಲ್ಲಿ ಆರಂಭವಾದ ಈ ಸಂಸ್ಥೆ 2023ರ ಸೆಪ್ಟಂಬರ್ 30ರಲ್ಲಿ 2.95 ಕೋಟಿ ರೂ ನಿವ್ವಳ ಲಾಭ ತೋರಿಸಿತ್ತು.
ಸೋಮವಾರ ಐಪಿಒ ಬಿಡುಗಡೆ ಮಾಡುತ್ತಿರುವ ಇಕ್ಸಿಗೋ ಸಂಸ್ಥೆ ಆನ್ಲೈನ್ ಟ್ರಾವಲ್ ಬುಕಿಂಗ್ ಪ್ಲಾಟ್ಫಾರ್ಮ್ ಆಗಿದೆ. ವಿಮಾನ ಬುಕಿಂಗ್, ಟ್ರೈನ್ ಬುಕಿಂಗ್, ಬಸ್ ಬುಕಿಂಗ್, ಹೋಟೆಲ್ ಬುಕಿಂಗ್ ಹೀಗೆ ಪ್ರವಾಸಕ್ಕೆ ಅಗತ್ಯ ಇರುವ ಎಲ್ಲಾ ಸೇವೆಗಳ ಬುಕಿಂಗ್ ಅನ್ನು ಲಭ್ಯವಾಗಿಸುವ ಆನ್ಲೈನ್ ಟ್ರಾವಲ್ ಏಜೆನ್ಸಿ ಇದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ