Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ರಮ ಹಣ ವರ್ಗಾವಣೆ ಪ್ರಕರಣ: 538 ಕೋಟಿ ರೂ ಮೌಲ್ಯದ ಜೆಟ್ ಏರ್​ವೇಸ್ ಆಸ್ತಿ ಮುಟ್ಟುಗೋಲು

ED Seizes Jet Airways Properties: ಇಡಿ ಅಧಿಕಾರಿಗಳು ಜೆಟ್ ಏರ್​ವೇಸ್​ನ ಸಂಸ್ಥಾಪಕ ನರೇಶ್ ಗೋಲ್ ಹಾಗೂ ಅವರ ಕುಟುಂಬ ಸದಸ್ಯರು ಮತ್ತಿತರರಿಗೆ ಸೇರಿದ 538 ಕೋಟಿ ರೂಗೂ ಹೆಚ್ಚು ಮೌಲ್ಯದ ಆಸ್ತಿಗಳನ್ನು ಜಫ್ತಿ ಮಾಡಿದೆ ಎನ್ನಲಾಗಿದೆ. ಕೆನರಾ ಬ್ಯಾಂಕ್ ದಾಖಲಿಸಿದ ವಂಚನೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯವು ಗೋಯಲ್ ಹಾಗೂ ಐವರು ಇತರರ ವಿರುದ್ಧ ನಿನ್ನೆ ಮಂಗಳವಾರ ಚಾರ್ಜ್​ಶೀಟ್ ಸಲ್ಲಿಕೆ ಮಾಡಿತ್ತು. ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ (ಪಿಎಂಎಲ್​ಎ ಆ್ಯಕ್ಟ್) ಅಡಿಯಲ್ಲಿ ಇಡಿಯಿಂದ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣ: 538 ಕೋಟಿ ರೂ ಮೌಲ್ಯದ ಜೆಟ್ ಏರ್​ವೇಸ್ ಆಸ್ತಿ ಮುಟ್ಟುಗೋಲು
ನರೇಶ್ ಗೋಯಲ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 01, 2023 | 6:42 PM

ನವದೆಹಲಿ, ನವೆಂಬರ್ 1: ಜೆಟ್ ಏರ್ವೇಸ್ ಸಂಸ್ಥೆ ಭಾಗಿಯಾಗಿರುವ ಆರೋಪ ಇರುವ ಮನಿ ಲಾಂಡರಿಂಗ್ (money laundering) ಅಥವಾ ಅಕ್ರಮ ಹಣ ನಿರ್ವಹಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ಹಲವು ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿರುವುದು ಮಾಧ್ಯಮಗಳಿಗೆ ಮಾಹಿತಿ ಬಂದಿದೆ. ವರದಿ ಪ್ರಕಾರ ಇಡಿ ಅಧಿಕಾರಿಗಳು ಜೆಟ್ ಏರ್​ವೇಸ್​ನ ಸಂಸ್ಥಾಪಕ ನರೇಶ್ ಗೋಯಲ್ ಹಾಗೂ ಅವರ ಕುಟುಂಬ ಸದಸ್ಯರು ಮತ್ತಿತರರಿಗೆ ಸೇರಿದ 538 ಕೋಟಿ ರೂಗೂ ಹೆಚ್ಚು ಮೌಲ್ಯದ ಆಸ್ತಿಗಳನ್ನು ಜಫ್ತಿ ಮಾಡಿದೆ ಎನ್ನಲಾಗಿದೆ.

ಭಾರತದ ಕೆಲ ರಾಜ್ಯಗಳಲ್ಲಿ ಹಾಗೂ ಲಂಡನ್ ಮತ್ತು ದುಬೈನಲ್ಲಿರುವ 17 ಫ್ಲ್ಯಾಟ್, ಬಂಗಲೆ ಹಾಗೂ ಕಮರ್ಷಿಯಲ್ ಬಿಲ್ಡಿಂಗ್​ಗಳನ್ನು ಸೀಜ್ ಮಾಡಲಾಗಿದೆ. ಗೋಯಲ್ ಕುಟುಂಬದವರು ಹಾಗೂ ಜೆಟ್ ಏರ್ ಪ್ರೈ ಲಿ, ಜೆಟ್ ಎಂಟರ್ಪ್ರೈಸಸ್ ಹೆಸರುಗಳಲ್ಲಿ ಈ ಕಟ್ಟಡಗಳನ್ನು ನೊಂದಾಯಿಸಲಾಗಿದೆ.

ಕೆನರಾ ಬ್ಯಾಂಕ್ ದಾಖಲಿಸಿದ ವಂಚನೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯವು ಗೋಯಲ್ ಹಾಗೂ ಐವರು ಇತರರ ವಿರುದ್ಧ ನಿನ್ನೆ ಮಂಗಳವಾರ ಚಾರ್ಜ್​ಶೀಟ್ ಸಲ್ಲಿಕೆ ಮಾಡಿತ್ತು. ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ (ಪಿಎಂಎಲ್​ಎ ಆ್ಯಕ್ಟ್) ಅಡಿಯಲ್ಲಿ ಇಡಿಯಿಂದ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: Bank Holidays: ನವೆಂಬರ್ ತಿಂಗಳಲ್ಲಿ ಭಾರತದಲ್ಲಿ ಬ್ಯಾಂಕುಗಳಿಗೆ 15 ದಿನ ರಜೆ; ಕರ್ನಾಟಕದಲ್ಲಿ ಎಷ್ಟು?; ಇಲ್ಲಿದೆ ಪಟ್ಟಿ

ಜೆಟ್ ಏರ್ವೇಸ್​ನ ಸಂಸ್ಥಾಪಕ ನರೇಶ್ ಗೋಯಲ್ ಅವರನ್ನು ಸೆಪ್ಟೆಂಬರ್ 1ರಂದು ಇಡಿ ಅಧಿಕಾರಿಗಳು ಬಂಧಿಸಿದ್ದರು. ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ ಸದ್ಯ ಅವರನ್ನು ಇರಿಸಲಾಗಿದೆ.

ಈ ಪ್ರಕರಣವನ್ನು ಮೊದಲು ಬಹಿರಂಪಡಿಸಿದ ಕೆನರಾ ಬ್ಯಾಂಕ್ ಸಲ್ಲಿಸಿದ ಎಫ್​ಐಆರ್​ನಲ್ಲಿ, ಬ್ಯಾಂಕ್​ನಿಂದ ನೀಡಲಾದ 848 ಕೋಟಿ ರೂ ಒಟ್ಟು ಸಾಲದ ಪೈಕಿ 538 ಕೋಟಿ ರೂ ಸಾಲ ಪಾವತಿಯಾಗದೇ ಬಾಕಿ ಉಳಿದಿದೆ ಎಂದು ಆರೋಪಿಸಲಾಗಿತ್ತು.

ಈ ವೇಳೆ ಜೆಟ್ ಏರ್ವೇಸ್ ಸಂಸ್ಥೆ ಬ್ಯಾಂಕ್​ನ ಸಾಲದ ಹಣವನ್ನು ಬೇರೆ ಬೇರೆ ಉದ್ದೇಶಗಳಿಗೆ ಬಳಸಿ ಅಕ್ರಮ ಎಸಗಿದೆ. ಬೇರೆ ದೇಶಗಳಲ್ಲಿ ಟ್ರಸ್ಟ್​​ಗಳನ್ನು ರಚಿಸಿ ಹಣವನ್ನು ಅಲ್ಲಿಗೆ ವರ್ಗಾಯಿಸಿದೆ. ಆ ಟ್ರಸ್ಟ್​ಗಳ ಮೂಲಕ ಚಿರಾಸ್ತಿಗಳನ್ನು ಖರೀದಿಸಲಾಗಿದೆ. ಆಸ್ತಿ ಮಾತ್ರವಲ್ಲ, ಈ ಸಾಲದ ಹಣವನ್ನೇ ಬಳಸಿ ಬಟ್ಟೆಬರೆ, ಪೀಠೋಪಕರಣ, ಒಡವೆ ಇತ್ಯಾದಿಗಳನ್ನು ಗೋಯಲ್ ಕುಟುಂಬ ಸದಸ್ಯರು ಖರೀದಿ ಮಾಡಿರುವುದು ಆಡಿಟಿಂಗ್ ವೇಳೆ ಬೆಳಕಿಗೆ ಬಂದಿತ್ತು.

ಇದನ್ನೂ ಓದಿ: ಎಲ್ ಅಂಡ್ ಟಿಯಿಂದ ಫ್ಯಾಬ್ಲೆಸ್ ಸೆಮಿಕಂಡಕ್ಟರ್ ಡಿಸೈನ್ ಘಟಕ; ಪ್ರತ್ಯೇಕ ಉಪಸಂಸ್ಥೆ ರಚನೆಗೆ ಅನುಮೋದನೆ

ಈ ಪ್ರಕರಣ ಕೋರ್ಟ್ ವಿಚಾರಣೆಯಲ್ಲಿದೆ. ಎರಡು ತಿಂಗಳ ಹಿಂದೆ ನಡೆದ ವಿಚಾರಣೆ ವೇಳೆ ನರೇಶ್ ಗೋಯಲ್ ಅವರು ತಮ್ಮ ಹಣ ಬಳಕೆಯ ರೀತಿಯನ್ನು ಸಮರ್ಥಿಸಿಕೊಂಡಿದ್ದರು. ವೈಮಾನಿಕ ವಲಯವು ಬ್ಯಾಂಕ್ ಸಾಲದ ಮೇಲೆ ನಿಂತಿರುತ್ತವೆ. ಸಾಲದ ಹಣದ ಬಳಕೆಯನ್ನು ಮನಿ ಲಾಂಡರಿಂಗ್ ಎನ್ನಲಾಗದು ಎಂಬುದು ಅವರ ವಾದ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು