Jet Airways: ಜೆಟ್​ ಏರ್​ವೇಸ್​ನಿಂದ 2022ರ ಮೊದಲ ತ್ರೈಮಾಸಿಕದಲ್ಲಿ ಮತ್ತೆ ದೇಶೀಯ ಕಾರ್ಯಾಚರಣೆ ಶುರು

| Updated By: Srinivas Mata

Updated on: Sep 13, 2021 | 2:11 PM

ಜೆಟ್​ ಏರ್​ವೇಸ್​ನಿಂದ 2022ರ ಮೊದಲ ತ್ರೈಮಾಸಿಕದಲ್ಲಿ ದೇಶೀಯ ಕಾರ್ಯಾಚರಣೆ ಶುರು ಆಗಲು ಎಲ್ಲ ಸಿದ್ಧತೆ ನಡೆಸಿದೆ. ಆ ಬಗ್ಗೆ ವಿವರ ಇಲ್ಲಿದೆ.

Jet Airways: ಜೆಟ್​ ಏರ್​ವೇಸ್​ನಿಂದ 2022ರ ಮೊದಲ ತ್ರೈಮಾಸಿಕದಲ್ಲಿ ಮತ್ತೆ ದೇಶೀಯ ಕಾರ್ಯಾಚರಣೆ ಶುರು
ಜೆಟ್​ ಏರ್​ವೇಸ್​ (ಸಾಂದರ್ಭಿಕ ಚಿತ್ರ)
Follow us on

ಎರಡು ವರ್ಷದಿಂದ ಚಟುವಟಿಕೆ ನಿಲ್ಲಿಸಿದ್ದ ಜೆಟ್​ ಏರ್​ವೇಸ್​ನಿಂದ 2022ರ ಮೊದಲ ತ್ರೈಮಾಸಿಕದಲ್ಲಿ ದೇಶೀಯ ಕಾರ್ಯಾಚರಣೆ ಆರಂಭಿಸಲಿದೆ. ಈ ಸಂಸ್ಥೆಯ ಯಶಸ್ವಿ ತೀರುವಳಿ ಅರ್ಜಿದಾರ ಆದ ಜಲನ್ ಕಾಲ್ರಾಕ್ ಒಕ್ಕೂಟವು ಸೋಮವಾರ ಹೇಳಿದೆ ಎಂದು ರಾಯಿಟರ್ಸ್​ ವರದಿ ಮಾಡಿದೆ. ಇದರ ಜತೆಗೆ ಹತ್ತಿರದ ಅಂತರರಾಷ್ಟ್ರೀಯ ವಿಮಾನ ಪ್ರಯಾಣವನ್ನು ಸಹ ಆರಂಭ ಮಾಡಲಿದೆ. ಅಧಿಕೃತವಾಗಿ ಈ ಬಗ್ಗೆ ಹೇಳಿಕೆ ನೀಡಲಾಗಿದೆ. ಕಾರ್ಯಾಚರಣೆ ನಿಲ್ಲಿಸಿದ ವಿಮಾನಯಾನ ಸಂಸ್ಥೆಯು ಈಗ ಇರುವ ಏರ್ ಆಪರೇಟರ್ ಸರ್ಟಿಫಿಕೇಟ್ (AOC) ಜತೆಗೆ ಮತ್ತೆ ಪುನಶ್ಚೇತನಗೊಳಿಸಲಿದೆ. ಇನ್ನೂ ಮುಂದುವರಿದು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ವಿಮಾನ ನಿಲ್ದಾಣ ಸಮನ್ವಯಕಾರರ ಜತೆಗೆ ಸ್ಥಳದ ಅಗತ್ಯಗಳಿಗಾಗಿ, ಮೂಲಸೌಕರ್ಯಗಳಿಗಾಗಿ, ರಾತ್ರಿ ನಿಲ್ದಾಣಕ್ಕಾಗಿ ಮಾತುಕತೆ ನಡೆಸುತ್ತಿರುವುದಾಗಿ ಹೇಳಿದೆ.

ಜಲನ್ ಮಾತನಾಡಿ, ಮುಂದಿನ 3 ವರ್ಷದಲ್ಲಿ ವಿಮಾನಯಾನ ಸಂಸ್ಥೆ ಬಳಿ 50ಕ್ಕೂ ಹೆಚ್ಚು ಹಾಗೂ 5 ವರ್ಷದಲ್ಲಿ 100ರ ಸಮೀಪ ವಿಮಾನಗಳು ಇರಲಿವೆ. ವಿಮಾನಗಳನ್ನು ಸ್ಪರ್ಧಾತ್ಮಕವಾಗಿ ದೀರ್ಘಾವಧಿ ಭೋಗ್ಯದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ ಎಂದು ಜಲನ್ ಕಡೆಯಿಂದ ಹೇಳಲಾಗಿದೆ. ಉತ್ತರದಾಯಿ ಮ್ಯಾನೇಜರ್ ಮತ್ತು ಹಂಗಾಮಿ ಸಿಇಒ ಆದ ಕ್ಯಾಪ್ಟನ್ ಸುಧೀರ್ ಗೌರ್ ಹೇಳಿದ್ದಾರೆ. ಪ್ರಮುಖ ಜಾಗತಿಕ ವಿಮಾನ ಲೀಸ್​ ಸಂಸ್ಥೆಯೊಂದಿಗೆ ದೇಶೀಯ ಕಾರ್ಯಾಚರಣೆ ಆರಂಭಿಸುವುದಾಗಿ ತಿಳಿಸಿದ್ದಾರೆ.

ಈ ಮಧ್ಯೆ, ವಿಮಾನಯಾನ ಸಂಸ್ಥೆಯಿಂದ ನೇಮಕಾತಿ ಚಟುವಟಿಕೆ ಸಹ ಶುರು ಆಗಿದೆ ಎಂದು ಟ್ವೀಟ್​ನಲ್ಲಿ ತಿಳಿಸಲಾಗಿದೆ. ಸದ್ಯದಲ್ಲೇ ವೃತ್ತಿಪರರು ಸಂಸ್ಥೆಗೆ ಸೇರ್ಪಡೆ ಆಗಲಿದ್ದಾರೆ ಎನ್ನಲಾಗಿದೆ. ಈ ವರ್ಷದ ಜೂನ್​ ತಿಂಗಳಲ್ಲಿ ಕಾರ್ಲಾಕ್​ ಕ್ಯಾಪಿಟಲ್ ಮತ್ತು ಮುರಾರಿ ಲಾಲ್ ಜಲನ್ ಒಕ್ಕೂಟದಿಂದ ಸಲ್ಲಿಸಲಾದ ತೀರುವಳಿ ಯೋಜನೆಗೆ ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಾಧೀಕರಣ (NCLT)ದ ಮುಂಬೈ ಪೀಠವು ಅನುಮತಿ ನೀಡಿತ್ತು.

ಹಣಕಾಸಿನ ಒತ್ತಡ ಹಾಗೂ ಸಾಲದ ಜವಾಬ್ದಾರಿ ಮತ್ತು ದಿವಾಳಿ ಕಾಯ್ದೆ (IBC) ಅಡಿಯಲ್ಲಿ ತೀರುವಳಿ ಪ್ರಕ್ರಿಯೆ ನಡೆಯುತ್ತಿದ್ದುದರಿಂದ ಜೆಟ್​ ಏರ್​ವೇಸ್​ನಿಂದ ಏಪ್ರಿಲ್​ 17, 2019ರಲ್ಲಿ ಕಾರ್ಯ ನಿರ್ವಹಣೆ ನಿಲ್ಲಿಸಲಾಯಿತು. ಈ ವಿಮಾನ ಯಾನ ಸಂಸ್ಥೆಯು 1995ರಲ್ಲಿ ಶೆಡ್ಯೂಲ್ಡ್ ಸ್ಥಾನಮಾನ ಪಡೆದಿತ್ತು.

ಇದನ್ನೂ ಓದಿ: ಕೇಂದ್ರದಿಂದ ಆರ್ಥಿಕ ಪ್ಯಾಕೇಜ್ ಘೋಷಣೆಗೆ ಸಿದ್ಧತೆ: ಪ್ರವಾಸೋದ್ಯಮ, ವಿಮಾನಯಾನ, ಎಂಎಸ್‌ಎಂಇ ಕ್ಷೇತ್ರಕ್ಕೆ ನೆರವು ಸಾಧ್ಯತೆ

(Jet Airways Flights Set To Operate Domestically From The First Quarter Of 2022)