ಭಾರತದ ಅತಿದೊಡ್ಡ ಟೆಲಿಕಾಂ ಮತ್ತು ಬ್ರಾಡ್‌ಬ್ಯಾಂಡ್ ಪೂರೈಕೆದಾರ ಆದ ಜಿಯೋದಿಂದ (Jio) ಮಂಗಳವಾರ ಜಿಯೋಫೈಬರ್ ಪೋಸ್ಟ್‌ಪೇಯ್ಡ್ ವರ್ಗದ ಅಡಿಯಲ್ಲಿ ಹೊಸ ಪೋಸ್ಟ್‌ಪೇಯ್ಡ್ ಮನರಂಜನಾ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಕಂಪೆನಿಯ ಪ್ರಕಾರ, ಹೊಸ ಯೋಜನೆಗಳು ಏಪ್ರಿಲ್ 22ರಿಂದ ಎಲ್ಲ ಬಳಕೆದಾರರಿಗೆ ಲಭ್ಯವಾಗಲಿವೆ. “ಬಳಕೆದಾರರು ಜಿಯೋಫೈಬರ್ ಪೋಸ್ಟ್‌ಪೇಯ್ಡ್ ಸಂಪರ್ಕವನ್ನು ಆರಿಸಿದಾಗ ಶೂನ್ಯ ವೆಚ್ಚದಲ್ಲಿ ರೂ. 10,000 ಮೌಲ್ಯದ ಇಂಟರ್ನೆಟ್ ಬಾಕ್ಸ್ (ಗೇಟ್‌ವೇ ರೂಟರ್), ಸೆಟ್-ಟಾಪ್ ಬಾಕ್ಸ್ ಮತ್ತು ಇನ್ಸ್ಟಾಲೇಷನ್ ಪಡೆಯುತ್ತಾರೆ,” ಎಂದು ಕಂಪೆನಿಯು ಹೇಳಿಕೆಯಲ್ಲಿ ತಿಳಿಸಿದೆ.
“ತಿಂಗಳಿಗೆ ರೂ. 399ರಿಂದ ಪ್ರಾರಂಭವಾಗುವ ಅನಿಯಮಿತ ಹೈ-ಸ್ಪೀಡ್ ಇಂಟರ್ನೆಟ್ ಅನ್ನು ಪಡೆಯುವುದನ್ನು ಬಳಕೆದಾರರು ಮುಂದುವರಿಸುತ್ತಾರೆ. ಹೆಚ್ಚುವರಿಯಾಗಿ ತಿಂಗಳಿಗೆ ಕೇವಲ 100 ಅಥವಾ 200 ರೂಪಾಯಿಗಳನ್ನು ಪಾವತಿಸುವ ಮೂಲಕ ಈಗ 14 OTT (ಓವರ್ ದ ಟಾಪ್) ಅಪ್ಲಿಕೇಷನ್‌ಗಳ ಸಂಗ್ರಹದ ಮೂಲಕ ತಮ್ಮ ಆಯ್ಕೆಯ ಕಂಟೆಂಟ್ಗಳ ಸಂಪರ್ಕ ಪಡೆಯಬಹುದು,” ಎಂದು ಅದು ಸೇರಿಸಿದೆ.
ಜಿಯೋ ಹೇಳಿಕೆ ಪ್ರಕಾರ, ಬಳಕೆದಾರರು ದೊಡ್ಡ ಪರದೆಯಲ್ಲಿ ಮತ್ತು ಸಣ್ಣ ಪರದೆಯಲ್ಲಿ 14 ಪ್ರಮುಖ ಮನರಂಜನಾ ಅಪ್ಲಿಕೇಷನ್‌ಗಳಿಗೆ ಸಂಪರ್ಕವನ್ನು ಪಡೆಯುತ್ತಾರೆ (ಬಹು ಸಾಧನಗಳು ಒಳಗೊಂಡಿರುತ್ತವೆ). “ಆ ಮೂಲಕ ಬಳಕೆದಾರರಿಗೆ ಅವರ ನೆಚ್ಚಿನ ಚಲನಚಿತ್ರಗಳು, ಟಿವಿ ಚಾನೆಲ್‌ಗಳು, ಮೂಲಗಳು, ಸುದ್ದಿ, ಪ್ರದರ್ಶನಗಳು, ಕ್ರೀಡೆಗಳು ಮತ್ತು ಹೆಚ್ಚಿನವುಗಳಿಗೆ ಸಂಪರ್ಕವನ್ನು ನೀಡುತ್ತದೆ.” 14 ಅಪ್ಲಿಕೇಷನ್‌ಗಳಲ್ಲಿ ಡಿಸ್ನಿ+ ಹಾಟ್‌ಸ್ಟಾರ್, ಝೀ5, Sonyliv, Voot, ಸನ್ನೆಕ್ಸ್ಟ್, ಡಿಸ್ಕವರಿ+, Hoichoi, ಆಲ್ಟ್ಬಾಲಾಜಿ, Eros Now, Lionsgate, ShemarooMe, Universal+, Voot Kids ಮತ್ತು ಜಿಯೋಸಿನಿಮಾ ಸೇರಿವೆ.
ಇದನ್ನೂ ಓದಿ: IPL 2022: ಐಪಿಎಲ್ 2022 ಆರಂಭಕ್ಕೆ ಕೆಲವೇ ಗಂಟೆಗಳಿರುವಾಗ ಜಿಯೋದಿಂದ ಬಂಪರ್ ಆಫರ್ ಘೋಷಣೆ