Jio Prepaid Recharge Plan: ಜೇಬಿಗೆ ಹೊರೆಯಾಗದ ಜಿಯೋ ವ್ಯಾಲ್ಯೂ ಪ್ಯಾಕ್ಸ್; ತಿಂಗಳಿಗೆ ಕೇವಲ 158 ರೂ
Jio value packs: ರಿಲಾಯನ್ಸ್ ಜಿಯೋ ಮೂರು ವ್ಯಾಲ್ಯೂ ಪ್ಯಾಕ್ಗಳನ್ನು ಚಾಲನೆಯಲ್ಲಿ ಇಟ್ಟಿದೆ. 28 ದಿನ ವ್ಯಾಲಿಡಿಟಿ ಇರುವ ಪ್ಯಾಕ್ 189 ರೂಗೆ ಲಭ್ಯ ಇದೆ. 479 ರೂ ಮತ್ತು 1,899 ರೂ ಪ್ಲಾನ್ನಲ್ಲಿ ರೀಚಾರ್ಚ್ ಮಾಡಿದರೆ ತಿಂಗಳಿಗೆ ಆಗುವ ವೆಚ್ಚ ಸುಮಾರು 160 ರೂ ಇರುತ್ತದೆ.
ನವದೆಹಲಿ, ಸೆಪ್ಟೆಂಬರ್ 4: ಏರ್ಟೆಲ್, ಜಿಯೋ, ವೊಡಾಫೋನ್ ಐಡಿಯಾ ಸಂಸ್ಥೆಗಳು ರೀಚಾರ್ಜ್ ದರಗಳನ್ನು ಏರಿಸಿವೆ. ಇದೇ ವೇಳೆ ಬಿಎಸ್ಸೆನ್ನೆಲ್ ಅಗ್ಗದ ದರಗಳಲ್ಲಿ 3ಜಿ ಮತ್ತು 4ಜಿ ಬಿಡುಗಡೆ ಮಾಡಿದೆ. ಬಹಳಷ್ಟು ಜನರು ಬಿಎಸ್ಸೆನ್ನೆಲ್ ಕಡೆ ವಾಲುತ್ತಿದ್ದಾರೆ. ಜಿಯೋದಿಂದ ಗ್ರಾಹಕರು ಹೊರಹೋಗುವುದನ್ನು ತಡೆಯಲು ಮತ್ತು ಹೊಸ ಗ್ರಾಹಕರನ್ನು ಸೆಳೆಯಲು ಜಿಯೋ ಕಡಿಮೆ ದರದ ಕೆಲ ರೀಚಾರ್ಜ್ ಪ್ಲಾನ್ಸ್ ಹೊಂದಿದೆ. ಡಾಟಾ ಕಡಿಮೆ ಬಳಸುವ ಗ್ರಾಹಕರಿಗೆ ಜಿಯೋ ವ್ಯಾಲ್ಯೂ ಪ್ಯಾಕ್ಗಳಿವೆ.
ಜಿಯೋ 189 ರೂ ರೀಚಾರ್ಜ್ ಪ್ಲಾನ್
ರಿಲಾಯನ್ಸ್ ಜಿಯೋ ಮೂರು ವ್ಯಾಲ್ಯೂ ಪ್ಯಾಕ್ಗಳನ್ನು ಹೊಂದಿದೆ. ಇದರಲ್ಲಿ ಕನಿಷ್ಠ ದರದ್ದು 189 ರೂ. ಇದು 28 ದಿನ ವ್ಯಾಲಿಡಿಟಿ ಹೊಂದಿದೆ. 2ಜಿಬಿ ಡಾಟಾ ಸಿಗುತ್ತದೆ. ಏರ್ಟೆಲ್ನಲ್ಲಿ ಇಷ್ಟೇ ಡಾಟಾ ಮತ್ತು ವ್ಯಾಲಿಡಿಟಿಯ ಪ್ಯಾಕ್ 199 ರೂ ಇದೆ.
ಇದನ್ನೂ ಓದಿ: ಒಂದೊಮ್ಮೆ ಇಲಿ ಕಾರಿನ ವೈರಿಂಗ್ ಕತ್ತರಿಸಿದರೆ ಇನ್ಶೂರೆನ್ಸ್ ಸಿಗುತ್ತಾ?
ಜಿಯೋ 479 ರೂ ಪ್ಲಾನ್; ತಿಂಗಳಿಗೆ 159 ರೂ
ಇದು 84 ದಿನ ವ್ಯಾಲಿಡಿಟಿ ಹೊಂದಿದ್ದು, ಒಟ್ಟು 6ಜಿಬಿ ಡಾಟಾ ಸಿಗುತ್ತದೆ. ಹತ್ತಿರ ಹತ್ತಿರ ಮೂರು ತಿಂಗಳ ಅವಧಿಗೆ ಇದನ್ನು ಬಳಸಬಹುದು. ತಿಂಗಳಿಗೆ (28 ದಿನಕ್ಕೆ) ಕೇವಲ 159 ರೂ ಬೆಲೆ ಆಗುತ್ತದೆ.
ಜಿಯೋ 1899 ರೂ ಪ್ಲಾನ್; ತಿಂಗಳಿಗೆ 158 ರೂ
ಜಿಯೋ ವ್ಯಾಲ್ಯೂ ಪ್ಯಾಕ್ನಲ್ಲಿ 1,899 ರೂ ಪ್ಲಾನ್ ಒಂದು. ಇದು 336 ದಿನಗಳ ವ್ಯಾಲಿಡಿಟಿ ಹೊಂದಿರುತ್ತದೆ. ಒಟ್ಟು 24 ಜಿಬಿ ಡಾಟಾ ಲಭ್ಯ ಇರುತ್ತದೆ. ಇದು ತಿಂಗಳಿಗೆ (28 ದಿನಕ್ಕೆ) 158 ರೂ ದರ ಆದಂತಾಗುತ್ತದೆ.
ಇದನ್ನೂ ಓದಿ: Nvidia Share Price: 2 ವರ್ಷದಿಂದ ಡಾರ್ಲಿಂಗ್ ಆಗಿದ್ದ ನಿವಿಡಿಯಾದ ಷೇರುಬೆಲೆ ಸತತವಾಗಿ ಕುಸಿಯುತ್ತಿರುವುದು ಯಾಕೆ?
ಈ ಮೇಲಿನ ಮೂರು ರೀಚಾರ್ಜ್ ಪ್ಯಾಕ್ಗಳು ಕಡಿಮೆ ಡಾಟಾದ ಅಗತ್ಯ ಇರುವವರಿಗೆ ಅನುಕೂಲವಾಗುತ್ತದೆ. ಕೇವಲ ಕರೆ ಮಾಡಲು ಮಾತ್ರವೇ ಬಳಸುವ ಗ್ರಾಹಕರಿಗೆ ಇದು ಲಾಭಕರ.
ರಿಲಾಯನ್ಸ್ ಜಿಯೋ ಮುಂದಿನ ದಿನಗಳಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಕೈಗೊಳ್ಳುತ್ತಿದೆ. ಜಿಯೋದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವನ್ನು ಅಳವಡಿಸುತ್ತಿದೆ. ಇಲ್ಲಿ ಕರೆಗಳಲ್ಲಿ ಭಾಷಾಂತರ ಮಾಡುವುದು, ಧ್ವನಿಯಿಂದ ಪಠ್ಯಕ್ಕೆ ಪರಿವರ್ತಿಸುವುದು ಇತ್ಯಾದಿ ಫೀಚರ್ ಲಭ್ಯ ಇರಲಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ