ಜಿಯೋಬ್ಲ್ಯಾಕ್​ರಾಕ್ ಮ್ಯುಚುವಲ್ ಫಂಡ್​ನ ಎನ್​​ಎಫ್​​ಒಗೆ ಭರ್ಜರಿ ಸ್ಪಂದನೆ; 17,800 ಕೋಟಿ ರೂ ಹೂಡಿಕೆ ಸಂಗ್ರಹ

JioBlackRock Mutual Fund gets good response for its NFO: ಜಿಯೋಬ್ಲ್ಯಾಕ್​ರಾಕ್ ಮ್ಯೂಚುವಲ್ ಫಂಡ್​​ನ ಚೊಚ್ಚಲ ಮೂರು ಸ್ಕೀಮ್​​ಗಳ ನ್ಯೂಫಂಡ್ ಆಫರ್​ಗನಲ್ಲಿ ಸಾರ್ವಜನಿಕವಾಗಿ 17,800 ಕೋಟಿ ರೂ ಹೂಡಿಕೆಯಾಗಿದೆ. ಜಿಯೋಬ್ಲ್ಯಾಕ್​ರಾಕ್ ಓವರ್​​ನೈಟ್ ಫಂಡ್, ಜಿಯೋಬ್ಲ್ಯಾಕ್​ರಾಕ್ ಲಿಕ್ವಿಡ್ ಫಂಡ್ ಮತ್ತು ಜಿಯೋಬ್ಲ್ಯಾಕ್​ರಾಕ್ ಮನಿ ಮಾರ್ಕೆಟ್ ಫಂಡ್​ನ ಎನ್​ಎಫ್​​ಒ ಬಿಡುಗಡೆ ಆಗಿದೆ. ಜೂನ್ 30ರಂದು ಆರಂಭವಾಗಿ ಜುಲೈ 2ಕ್ಕೆ ಈ ಆಫರ್ ಇತ್ತು.

ಜಿಯೋಬ್ಲ್ಯಾಕ್​ರಾಕ್ ಮ್ಯುಚುವಲ್ ಫಂಡ್​ನ ಎನ್​​ಎಫ್​​ಒಗೆ ಭರ್ಜರಿ ಸ್ಪಂದನೆ; 17,800 ಕೋಟಿ ರೂ ಹೂಡಿಕೆ ಸಂಗ್ರಹ
ಜಿಯೋಬ್ಲ್ಯಾಕ್​ರಾಕ್

Updated on: Jul 07, 2025 | 4:17 PM

ನವದೆಹಲಿ, ಜುಲೈ 7: ಜಿಯೋ ಬ್ಲ್ಯಾಕ್​ರಾಕ್ ಮ್ಯುಚುವಲ್ ಫಂಡ್​ನ ನ್ಯೂ ಫಂಡ್ ಆಫರ್ ಅಥವಾ ಎನ್​​ಎಫ್​​ಒಗೆ (JioBlackRock mutual fund NFO) ಒಳ್ಳೆಯ ಸ್ಪಂದನೆ ಸಿಕ್ಕಿದೆ. ಈ ಹೊಸ ಮ್ಯೂಚುವಲ್ ಫಂಡ್​​ನ ಚೊಚ್ಚಲ ಎನ್​​ಎಫ್​​ಒ ಮೂಲಕ ಒಟ್ಟಾರೆ 17,800 ಕೋಟಿ ರೂ ಹೂಡಿಕೆ ಬಂದಿದೆ. ಓವರ್​​ನೈಟ್ ಫಂಡ್, ಲಿಕ್ವಿಡ್ ಫಂಡ್ ಮತ್ತು ಮನಿ ಮಾರ್ಕೆಟ್ ಫಂಡ್ ಎನ್ನುವ ಮೂರು ಫಂಡ್ ಸ್ಕೀಮ್​​ಗಳಲ್ಲಿ ಈ ಬಂಡವಾಳ ಹರಿದು ಬಂದಿದೆ.

ಜೂನ್ 30ರಂದು ಆರಂಭವಾದ ಮೂರು ದಿನಗಳ ಜಿಯೋಬ್ಲ್ಯಾಕ್​ರಾಕ್ ಎನ್​ಎಫ್​​ಒ ಜುಲೈ 2ಕ್ಕೆ ಮುಗಿದಿತ್ತು. 90ಕ್ಕೂ ಅಧಿಕ ಸಾಂಸ್ಥಿಕ ಹೂಡಿಕೆದಾರರು ಈ ಮೂರು ಸ್ಕೀಮ್​​ಗಳಲ್ಲಿ ಹೂಡಿಕೆ ಮಾಡಿದ್ದಾರೆ. ರೀಟೇಲ್ ಹೂಡಿಕೆದಾರರಿಂದಲೂ ಉತ್ತಮ ಸ್ಪಂದನೆ ಸಿಕ್ಕಿದೆ. ವರದಿ ಪ್ರಕಾರ 67,000 ವ್ಯಕ್ತಿಗಳು ಈ ಮೂರು ಫಂಡ್​​ಗಳಲ್ಲಿ ಹೂಡಿಕೆ ಮಾಡಿದ್ದಾರೆ.

ಇದನ್ನೂ ಓದಿ: ಷೇರುಮಾರುಕಟ್ಟೆಯಲ್ಲಿ ಜೇನ್ ಸ್ಟ್ರೀಟ್​​ನಂತಹ ವಂಚಕರ ಮಧ್ಯೆ ಟ್ರೇಡಿಂಗ್ ಮತ್ತು ಹೂಡಿಕೆ ಮಾಡುವ ತಂತ್ರ ತಿಳಿದಿರಿ…

ಕ್ಯಾಷ್ ಮತ್ತು ಡೆಟ್ ಫಂಡ್ ಸೆಗ್ಮೆಂಟ್​ನಲ್ಲಿ ಜಿಯೋ ಬ್ಲ್ಯಾಕ್​ರಾಕ್ ಮ್ಯುಚುವಲ್ ಫಂಡ್​ನದ್ದು ಅತಿದೊಡ್ಡ ಎನ್​​ಎಫ್​​ಒ ಎನಿಸಿದೆ. ಡೆಟ್ ಫಂಡ್ ಸೆಗ್ಮೆಂಟ್​​ನಲ್ಲಿರುವ 47 ಮ್ಯೂಚುವಲ್ ಫಂಡ್ ಸಂಸ್ಥೆಗಳ ಪೈಕಿ ಜಿಯೋಬ್ಲ್ಯಾಕ್​ರಾಕ್ ಎಎಂಸಿ ಟಾಪ್-15 ಪಟ್ಟಿಗೆ ಸೇರಿಹೋಗಿದೆ.

ಏನಿದು ಎನ್​​ಎಫ್​​ಒ?

ಎನ್​​ಎಫ್​​ಒ ಎಂದರೆ ನ್ಯೂ ಫಂಡ್ ಆಫರ್. ಒಂದು ಮ್ಯೂಚುವಲ್ ಫಂಡ್ ಎಎಂಸಿ ಸಂಸ್ಥೆಯು ಹೊಸ ಸ್ಕೀಮ್ ಆರಂಭಿಸಿದಾಗ ಎನ್​​ಎಫ್​​ಒ ಆಫರ್ ಮಾಡುತ್ತದೆ. ಇದು ಮೊದಲ ಬಾರಿಗೆ ಸಾರ್ವಜನಿಕರಿಂದ ಬಂಡವಾಳ ಸಂಗ್ರಹಿಸಲು ಇರುವ ಯೋಜನೆ. ನಿರ್ದಿಷ್ಟ ಆರಂಭ ಬೆಲೆಗೆ ಸ್ಕೀಮ್​​ನ ಯುನಿಟ್​​ಗಳನ್ನು ಸಾರ್ವಜನಿಕರಿಗೆ ಮಾರಲಾಗುತ್ದೆ. ಸಾಮಾನ್ಯವಾಗಿ ಎನ್​ಎಫ್​​ಒದಲ್ಲಿ ಒಂದು ಯುನಿಟ್​​ಗೆ 10 ರೂ ಬೆಲೆ ಇರುತ್ತದೆ. ಜಿಯೋಬ್ಲ್ಯಾಕ್​ರಾಕ್ ಫಂಡ್​​ಗಳ ಒಂದು ಯುನಿಟ್ ಬೆಲೆ 1,000 ರೂ ನಿಗದಿಯಾಗಿದೆ.

ಇದನ್ನೂ ಓದಿ: ಷೇರುಮಾರುಕಟ್ಟೆಗೆ ಚಳ್ಳೆಹಣ್ಣು ತಿನ್ನಿಸಿ 36,500 ಕೋಟಿ ರೂ ಪಂಗನಾಮ ಹಾಕಿತಾ ಜೇನ್ ಸ್ಟ್ರೀಟ್; ಅದರ ಕುತಂತ್ರದ ಕಥೆ ಕೇಳಿ…

ಜಿಯೋಫೈನಾನ್ಸ್ ಆ್ಯಪ್ ಮೂಲಕ ಹೂಡಿಕೆ ಮಾಡಿ…

ನೀವು ಜಿಯೋಬ್ಲ್ಯಾಕ್​ರಾಕ್ ಎನ್​​ಎಫ್​ಒದಲ್ಲಿ ಪಾಲ್ಗೊಳ್ಳಲಿಲ್ಲವೆನ್ನುವ ನಿರಾಸೆಯಲ್ಲಿದ್ದರೆ ಯೋಚಿಸುವ ಅಗತ್ಯ ಇಲ್ಲ. ಯಾವಾಗ ಬೇಕಾದರೂ ಫಂಡ್​ನಲ್ಲಿ ಹೂಡಿಕೆ ಮಾಡಬಹುದು. ಬ್ರೋಕರ್ ಪ್ಲಾಟ್​​ಫಾರ್ಮ್​​ಗಳಲ್ಲಿ ಹೋಗಿ ಈ ಫಂಡ್​​ನ ಮೂರು ಪ್ಲಾನ್​​ಗಳಲ್ಲಿ ಯಾವುದರಲ್ಲಾದರೂ ಹೂಡಿಕೆ ಮಾಡಬಹುದು. ಕನಿಷ್ಠ ಹೂಡಿಕೆ 1,000 ರೂ ಇದೆ. ಜಿಯೋಫೈನಾನ್ಸ್ ಆ್ಯಪ್​​ಗೆ ಹೋಗಿ ಅಲ್ಲಿಂದಲೂ ಹೂಡಿಕೆ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ