Jio Plans: ಜಿಯೋ ಫೈಬರ್ ಪ್ರೀಪೇಯ್ಡ್ ಬ್ರಾಡ್​ಬ್ಯಾಂಡ್ ಪ್ಲಾನ್; ತಿಂಗಳಿಗೆ 3,300 ಜಿಬಿ ಡಾಟಾ, ಭರ್ಜರಿ ಇಂಟರ್ನೆಟ್ ಸ್ಪೀಡ್

JioFiber Prepaid Broadband Plans: ಎಲ್ಲಾ ರೀತಿಯ ಗ್ರಾಹಕರಿಗೂ ಹೊಂದಿಕೆಯಾಗುವ ಪ್ಲಾನ್​ಗಳು ಜಿಯೋಫೈಬರ್​ನಲ್ಲಿವೆ. ತಿಂಗಳಿಗೆ 399 ರೂ ನಿಂದ ಆರಂಭವಾಗಿ ವರ್ಷಕ್ಕೆ 1 ಲಕ್ಷಕ್ಕೂ ಹೆಚ್ಚು ಮೊತ್ತದ ಪ್ಲಾನ್​ಗಳೂ ಜಿಯೋ ಫೈಬರ್​ನಲ್ಲಿವೆ.

Jio Plans: ಜಿಯೋ ಫೈಬರ್ ಪ್ರೀಪೇಯ್ಡ್ ಬ್ರಾಡ್​ಬ್ಯಾಂಡ್ ಪ್ಲಾನ್; ತಿಂಗಳಿಗೆ 3,300 ಜಿಬಿ ಡಾಟಾ, ಭರ್ಜರಿ ಇಂಟರ್ನೆಟ್ ಸ್ಪೀಡ್
ರಿಲಾಯನ್ಸ್ ಜಿಯೋ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 24, 2023 | 5:46 PM

ರಿಲಾಯನ್ಸ್ ಜಿಯೋ (Reliance Jio) ಎಂದರೆ ಅದರ ಕಡಿಮೆ ಬೆಲೆಯ ಡಾಟಾ ಮತ್ತು ಕಾಲ್ ಆಫರ್​ಗಳೇ ನೆನಪಾಗುತ್ತದೆ. ಟಿಲಿಕಾಂ ಕ್ಷೇತ್ರಕ್ಕೆ ಅಡಿ ಇಡುತ್ತಲೇ ಸಂಚಲನ ರೂಪಿಸಿದ್ದ ಜಿಯೋ ಇದೀಗ ಫೈಬರ್ ಇಂಟರ್ನೆಟ್ ಕ್ಷೇತ್ರದಲ್ಲಿ ಒಳ್ಳೆಯ ಪ್ಲಾನ್​​ಗಳ ಮೂಲಕ ಜನರನ್ನು ಆಕರ್ಷಿಸುತ್ತಿವೆ. ಎಲ್ಲಾ ರೀತಿಯ ಗ್ರಾಹಕರಿಗೂ ಹೊಂದಿಕೆಯಾಗುವ ಪ್ಲಾನ್​ಗಳು ಜಿಯೋಫೈಬರ್​ನಲ್ಲಿವೆ. ತಿಂಗಳಿಗೆ 399 ರೂ ನಿಂದ ಆರಂಭವಾಗಿ ವರ್ಷಕ್ಕೆ 1 ಲಕ್ಷಕ್ಕೂ ಹೆಚ್ಚು ಮೊತ್ತದ ಪ್ಲಾನ್​ಗಳೂ ಜಿಯೋ ಫೈಬರ್​ನಲ್ಲಿವೆ. ಇಲ್ಲಿ ಜಿಯೋದ ತ್ರೈಮಾಸಿಕ ಕಾಲಾವಧಿಯ ಕೆಲ ಪ್ರಮುಖ ಪ್ರೀಪೇಯ್ಡ್ ಪ್ಲಾನ್​ಗಳ (JioFiber Prepaid Plans) ವಿವರ ಇಲ್ಲಿದೆ.

ಜಿಯೋಫೈಬರ್ 1,197 ರೂ ಪ್ಲಾನ್

1,197 ರೂನ ಜಿಯೋಫೈಬರ್ ಪ್ರೀಪೇಯ್ಡ್ ಪ್ಲಾನ್ 90 ದಿನ ವ್ಯಾಲಿಟಿಡಿ ಹೊಂದಿದೆ. ಜಿಎಸ್​ಟಿ ಸೇರಿಸಿದರೆ ಪ್ಲಾನ್ ಬೆಲೆ 1,200 ರೂಗಿಂತ ತುಸು ಹೆಚ್ಚಾಗಬಹುದು. ಪ್ರತೀ ತಿಂಗಳು ನಿಮಗೆ 3.3 ಟಿಬಿ (ಟೆರಾಬೈಟ್) ಡಾಟಾ ಸಿಗುತ್ತದೆ. ಒಂದು ಟಿಬಿ ಎಂದರೆ 1,000 ಜಿಬಿ. ನಿಮಗೆ ತಿಂಗಳಿಗೆ 3,300 ಜಿಬಿಯಷ್ಟು ಡಾಟಾ ಸಿಗುತ್ತದೆ. ಅದೂ 30ಎಂಬಿಪಿಎಸ್ ಸ್ಪೀಡ್​ನಲ್ಲಿ. 4ಜಿಯಲ್ಲಿ ನಮಗೆ 2 ಎಂಬಿಪಿಎಸ್ ಸಿಕ್ಕರೆ ಹೆಚ್ಚು. 30 ಎಂಬಿಪಿಎಸ್ ಸ್ಪೀಡ್​ನಲ್ಲಿ ನಮಗೆ ತಿಂಗಳಿಗೆ 3,300 ಜಿಬಿ ಡಾಟಾ ಬಳಸುವ ಅವಕಾಶ ಸಿಕ್ಕರೆ ಹೇಗೆ? ಇಂಥದ್ದು 3 ತಿಂಗಳು ನಮಗೆ ಲಾಭ ಕೊಡುತ್ತದೆ ಜಿಯೋಫೈಬರ್​ನ 1,197 ರೂ ಪ್ಲಾನ್.

ಇದನ್ನೂ ಓದಿPM Kisan: ಪಿಎಂ ಕಿಸಾನ್ ಯೋಜನೆ; ಒಂದೇ ಕುಟುಂಬದ ಇಬ್ಬರು ವರ್ಷಕ್ಕೆ 6,000 ರೂ ಪಡೆಯಬಹುದಾ?

ಉಚಿತ ಒಟಿಟಿ ಸಬ್​ಸ್ಕ್ರಿಪ್ಚನ್ ಕೊಡುವ ಜಿಯೋ ಬ್ರಾಡ್​ಬ್ಯಾಂಡ್ ಪ್ಲಾನ್​ಗಳು

ಜಿಯೋಫೈಬರ್​ನ 1,197 ರೂ ಪ್ಲಾನ್ ನಮಗೆ ಭರ್ಜರಿ ಕಾಲಿಂಗ್ ಮತ್ತು ಡಾಟಾ ಆಫರ್ ಕೊಡುತ್ತದೆ. ಆದರೆ, ಒಟಿಟಿ ಸಬ್​ಸ್ಕ್ರಿಪ್ಚನ್ ಸಿಗುವುದಿಲ್ಲ. ಹೆಚ್ಚುವರಿ ದುಡ್ಡು ಕೊಟ್ಟು ವಿವಿಧ ಒಟಿಟಿಗಳಿಗೆ ಚಂದಾದಾರಬೇಕಾಗುತ್ತದೆ. ಆದರೆ, ಮೇಲಿನ ಭರ್ಜರಿ ಡಾಟಾ ಜೊತೆಗೆ ಒಟಿಟಿ ಸಬ್​ಸ್ಕ್ರಿಪ್ಷನ್​ಗಳನ್ನೂ ಕೊಡುವ ಪ್ಲಾನ್​ಗಳಿವೆಯಾದರೂ ಅದಕ್ಕೆ ಹೆಚ್ಚು ಹಣ ಬೇಕು. ಅಂತಹ ಪ್ಲಾನ್​ಗಳು ಯಾವುವು?

ಜಿಯೋಫೈಬರ್ 2,997 ರೂ ಪ್ರೀಪೇಯ್ಡ್ ಪ್ಲಾನ್: ಇದರ ವ್ಯಾಲಿಡಿಟಿ 90 ದಿನ ಇದ್ದು ಪ್ರೈಮ್ ವಿಡಿಯೋ, ಡಿಸ್ನಿ ಹಾಟ್​ಸ್ಟಾರ್, ಜಿಯೋಸಿನಿಮಾ ಸೇರಿದಂತೆ 16 ಓಟಿಟಿಗಳನ್ನು ಉಚಿತವಾಗಿ ನೋಡಬಹುದು. ಇದರ ಡೇಟಾ ಸ್ಪೀಡ್ 150 ಎಂಬಿಪಿಎಸ್.

ಇದನ್ನೂ ಓದಿELSS: ತಿಂಗಳಿಗೆ 5,000 ರೂ ಕಟ್ಟಿ, 10 ವರ್ಷದಲ್ಲಿ 22 ಲಕ್ಷದವರೆಗೆ ರಿಟರ್ನ್; ತೆರಿಗೆ ಮತ್ತು ಲಾಭ ಎರಡೂ ಕೊಡುವ ಇಎಲ್​ಎಸ್​ಎಸ್ ಫಂಡ್​ಗಳು

ಜಿಯೋಫೈಬರ್ 4,497 ರೂ ಪ್ರೀಪೇಯ್ಡ್ ಪ್ಲಾನ್: ನಿಮಗೆ 150 ಎಂಬಿಪಿಎಸ್​ಗಿಂತಲೂ ಹೆಚ್ಚು ಡಾಟಾ ಸ್ಪೀಡ್ ಬೇಕೆಂದರೆ 4,497 ರೂ ಪ್ಲಾನ್ ಪಡೆಯಬಹುದು. ಇಂಟರ್ನೆಟ್ ಸ್ಪೀಡ್ 300 ಎಂಬಿಪಿಎಸ್ ಇರುತ್ತದೆ. ನೆಟ್​ಫ್ಲಿಕ್ಸ್ ಸೇರಿದಂತೆ 17 ಓಟಿಟಿ ಪ್ಲಾಟ್​ಫಾರ್ಮ್​ಗಳನ್ನು ಗ್ರಾಹಕರು ಉಚಿತವಾಗಿ ವೀಕ್ಷಿಸಬಹುದು.

ನಿಮಗೆ 1ಜಿಬಿಪಿಎಸ್ ಸ್ಪೀಡ್​ನಲ್ಲಿ ಇಂಟರ್ನೆಟ್ ಸೇವೆ ಒದಗಿಸುವ ಬ್ರಾಡ್​ಬ್ಯಾಂಡ್ ಪ್ಲಾನ್​ಗಳೂ ಜಿಯೋ ಫೈಬರ್​ನಲ್ಲಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ