ELSS: ತಿಂಗಳಿಗೆ 5,000 ರೂ ಕಟ್ಟಿ, 10 ವರ್ಷದಲ್ಲಿ 22 ಲಕ್ಷದವರೆಗೆ ರಿಟರ್ನ್; ತೆರಿಗೆ ಮತ್ತು ಲಾಭ ಎರಡೂ ಕೊಡುವ ಇಎಲ್​ಎಸ್​ಎಸ್ ಫಂಡ್​ಗಳು

Best Performing ELSS Plans: ಭಾರತೀಯ ಮ್ಯೂಚುವಲ್ ಫಂಡ್ ಸಂಸ್ಥೆ ಮೇ 24ರಂದು ಪ್ರಕಟಿಸಿರುವ ವರದಿಯೊಂದರ ಪ್ರಕಾರ ಕಳೆದ 10 ವರ್ಷದಲ್ಲಿ ಶೇ. 16ಕ್ಕಿಂತ ಹೆಚ್ಚು ಸಿಎಜಿಅರ್ ದರದಲ್ಲಿ ರಿಟರ್ನ್ ಕೊಟ್ಟಿರುವ 11 ಇಎಲ್​ಎಸ್​ಎಸ್ ಫಂಡ್​ಗಳಿವೆಯಂತೆ. ಇವುಗಳ ಪಟ್ಟಿ ಇಲ್ಲಿದೆ.

ELSS: ತಿಂಗಳಿಗೆ 5,000 ರೂ ಕಟ್ಟಿ, 10 ವರ್ಷದಲ್ಲಿ 22 ಲಕ್ಷದವರೆಗೆ ರಿಟರ್ನ್; ತೆರಿಗೆ ಮತ್ತು ಲಾಭ ಎರಡೂ ಕೊಡುವ ಇಎಲ್​ಎಸ್​ಎಸ್ ಫಂಡ್​ಗಳು
ಹೂಡಿಕೆ ಯೋಜನೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 24, 2023 | 3:45 PM

ಎಸ್​ಐಪಿ ಬಗ್ಗೆ ಟಿವಿ9 ಕನ್ನಡದಲ್ಲಿ ಹಿಂದೆಲ್ಲ ಹಲವು ಬಾರಿ ಬರೆದಿದ್ದೇವೆ. ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್​ಗಳು (SIP- Systematic Investment Plan) ಇತ್ತೀಚೆಗೆ ಹೆಚ್ಚೆಚ್ಚು ಜನಪ್ರಿಯವಾಗುತ್ತಿವೆ. ಇದಕ್ಕೆ ಕಾರಣ ಅವುಗಳು ಕೊಡುವ ಹೈ ರಿಟರ್ನ್. ಕೆಲವೊಂದಿಷ್ಟು ಎಸ್​ಐಪಿಗಳು ವರ್ಷಕ್ಕೆ ಶೇ. 30ರವರೆಗೂ ರಿಟರ್ನ್ ಕೊಟ್ಟಿರುವುದುಂಟು. ಮ್ಯೂಚುವಲ್ ಫಂಡ್ ಎಸ್​ಐಪಿಗಳ ಪೈಕಿ ಇಎಲ್​ಎಸ್​ಎಸ್ ಫಂಡ್​ಗಳು ಬಹಳ ಮಂದಿಯನ್ನು ಆಕರ್ಷಿಸುತ್ತಿವೆ. ಇಎಲ್​ಎಸ್​ಎಸ್ ಎಂಬುದು ಈಕ್ವಿಟಿ ಲಿಂಕ್ಡ್ ಇನ್ವೆಸ್ಟ್​ಮೆಂಟ್ ಸ್ಕೀಮ್. ಅಂದರೆ ಷೇರುಗಳಿಗೆ ಜೋಡಿತವಾದ ಹೂಡಿಕೆ ಯೋಜನೆಗಳು. ಬಿಎಸ್​ಇ, ನಿಫ್ಟಿ ಷೇರುಮಾರುಕಟ್ಟೆಗಳ ವಿವಿಧ ಇಂಡೆಕ್ಸ್​ಗಳೊಂದಿಗೆ ಜೋಡಿತವಾಗಿರುವ ಇಎಲ್​ಎಸ್​ಎಸ್ ಮ್ಯೂಚುವಲ್ ಫಂಡ್ ಎಸ್​ಐಪಿಗಳು ಐಟಿ ಕಾಯ್ದೆ ಪ್ರಕಾರ ತೆರಿಗೆ ರಿಯಾಯಿತಿ ಒದಗಿಸುತ್ತವೆ. ಜೊತೆಗೆ ಒಳ್ಳೆಯ ರಿಟರ್ನ್ಸ್ ಕೊಡುತ್ತವೆ.

ಭಾರತೀಯ ಮ್ಯೂಚುವಲ್ ಫಂಡ್ ಸಂಸ್ಥೆ (AMFI) ಮೇ 24ರಂದು ಪ್ರಕಟಿಸಿರುವ ವರದಿಯೊಂದರ ಪ್ರಕಾರ ಕಳೆದ 10 ವರ್ಷದಲ್ಲಿ ಶೇ. 16ಕ್ಕಿಂತ ಹೆಚ್ಚು ಸಿಎಜಿಅರ್ ದರದಲ್ಲಿ ರಿಟರ್ನ್ ಕೊಟ್ಟಿರುವ 11 ಇಎಲ್​ಎಸ್​ಎಸ್ ಫಂಡ್​ಗಳಿವೆಯಂತೆ. ಸಿಎಜಿಆರ್ ಎಂಬುದು ಸರಾಸರಿ ವಾರ್ಷಿಕ ಬೆಳವಣಿಗೆ ದರ.

ಶೇ. 16 ಸಿಎಜಿಆರ್​ನಂತೆ ಪರಿಗಣಿಸಿದರೆ ನೀವು ಪ್ರತೀ ತಿಂಗಳು 5,000 ರೂ ಹೂಡಿಕೆ ಮಾಡುತ್ತಾ ಹೋದರೆ 10 ವರ್ಷದಲ್ಲಿ 15 ಲಕ್ಷ ರೂ ಸಂಪತ್ತು ನಿಮ್ಮದಾಗುತ್ತದೆ. ಅದೇ ಸಿಎಜಿಆರ್ ದರ ಶೇ. 22 ಆಗಿಬಿಟ್ಟರೆ ನಿಮ್ಮ ಕೈಸೇರುವ ಹಣ 22 ಲಕ್ಷ ರೂ ಆಗುತ್ತದೆ.

ಇದನ್ನೂ ಓದಿCrorepati: 10,000 ರೂ ಎಸ್​ಐಪಿಯಿಂದ ಎಷ್ಟು ದಿನದಲ್ಲಿ ಕೋಟ್ಯಾಧಿಪತಿಯಾಗಬಹುದು? ಇಲ್ಲಿದೆ ಲೆಕ್ಕಾಚಾರ

ಕ್ವಾಂಟ್ ಟ್ಯಾಕ್ಸ್ ಪ್ಲಾನ್

ಕ್ವಾಂಟ್ ಟ್ಯಾಕ್ಸ್ ಯೋಜನೆಯು ನಿಫ್ಟಿ 500 ಟೋಟಲ್ ರಿಟರ್ನ್ ಇಂಡೆಕ್ಸ್ ಅನ್ನು ಟ್ರ್ಯಾಕ್ ಮಾಡುತ್ತದೆ. ಈ ಪ್ಲಾನ್ 10 ವರ್ಷದಲ್ಲಿ ಶೇ. 22.90 ಸಿಎಜಿಆರ್ ದರದಲ್ಲಿ ರಿಟರ್ನ್ ಕೊಟ್ಟಿದೆ. ಅಂದರೆ ನೀವು 10 ವರ್ಷದಿಂದಲೂ ಈ ಎಸ್​ಐಪಿಯಲ್ಲಿ ಪ್ರತೀ ತಿಂಗಳು 5,000 ರೂ ಹೂಡಿಕೆ ಮಾಡುತ್ತಾ ಬರುತ್ತಿದ್ದರೆ ಇವತ್ತು ನಿಮಗೆ 23 ಲಕ್ಷ ರೂ ಹಣ ಕೈಸೇರುತ್ತಿತ್ತು.

ಬಂಧನ್ ಟ್ಯಾಕ್ಸ್ ಅಡ್ವಾಂಟೇಜ್ (ಇಎಲ್​ಎಸ್​ಎಸ್) ಫಂಡ್:

ಎಸ್ ಅಂಡ್ ಪಿ ಬಿಎಸ್​ಇ ಟೋಟಲ್ ರಿಟರ್ನ್ ಇಂಡೆಕ್ಸ್ ಅನ್ನು ಟ್ರ್ಯಾಕ್ ಮಾಡುವ ಬಂಧನ್ ಟ್ಯಾಕ್ಸ್ ಅಡ್ವಾಂಟೇಜ್ ಫಂಡ್ ಕಳೆದ 10 ವರ್ಷದಲ್ಲಿ ಶೇ. 18.39 ಸಿಎಜಿಆರ್​ನಲ್ಲಿ ಹೂಡಿಕೆ ಬೆಳೆದಿದೆ. ಈ ಸ್ಕೀಮ್​ನಲ್ಲಿ ನೀವು ತಿಂಗಳಿಗೆ 5,000 ರೂ ತೊಡಗಿಸಿದ್ದರೆ ಈಗ 10 ವರ್ಷದಲ್ಲಿ ಸುಮಾರು 17 ಲಕ್ಷ ರೂ ನಿಮ್ಮದಾಗುತ್ತಿತ್ತು.

ಇದನ್ನೂ ಓದಿTips: ನಿಮ್ಮ ವಯಸ್ಸಿನ್ನೂ 30 ದಾಟಿಲ್ಲವೇ? ಹಣ ಸಂಪಾದನೆ, ಹಣಭದ್ರತೆಗೆ ತಪ್ಪದೇ ಈ ಕ್ರಮ ಅನುಸರಿಸಿ

ಶೇ. 16ಕ್ಕಿಂತ ಹೆಚ್ಚು ಸಿಎಜಿಆರ್​ನಲ್ಲಿ ಬೆಳೆದಿರುವ ಇತರ ಪ್ರಮುಖ ಇಎಲ್​ಎಸ್​ಎಸ್ ಜೋಡಿತ ಫಂಡ್​ಗಳಿವು

  1. ಆ್ಯಕ್ಸಿಸ್ ಲಾಂಗ್ ಟರ್ಮ್ ಈಕ್ವಿಟಿ ಫಂಡ್: ಶೇ. 17.14 ಸಿಎಜಿಆರ್
  2. ಬ್ಯಾಂಕ್ ಆಫ್ ಇಂಡಿಯಾ ಟ್ಯಾಕ್ಸ್ ಅಡ್ವಾಂಟೇಜ್ ಫಂಡ್: ಶೇ. 17.70 ಸಿಎಜಿಆರ್
  3. ಟಾಟಾ ಇಂಡಿಯ ಟ್ಯಾಕ್ಸ್ ಸೇವಿಂಗ್ಸ್ ಫಂಡ್: ಶೇ. 17.31 ಸಿಎಜಿಆರ್
  4. ಡಿಎಸ್​ಪಿ ಟ್ಯಾಕ್ಸ್ ಸೇವರ್ ಫಂಡ್: ಶೇ. 17.55 ಸಿಎಜಿಆರ್
  5. ಜೆಎಂ ಟ್ಯಾಕ್ಸ್ ಗೇನ್ ಫಂಡ್: ಶೇ. 16.99
  6. ಕೆನರಾ ರೊಬೆಕಾ ಈಕ್ವಿಟಿ ಟ್ಯಾಕ್ಸ್ ಸೇವರ್ ಫಂಡ್: ಶೇ. 16.25 ಸಿಎಜಿಆರ್
  7. ಐಸಿಐಸಿಐ ಪ್ರೂಡೆನ್ಷಿಯಲ್ ಲಾಂಗ್ ಟರ್ಮ್ ಈಕ್ವಿಟಿ ಫಂಡ್: ಶೇ. 16.20 ಸಿಎಜಿಆರ್
  8. ಇನ್ವೆಸ್ಕೋ ಇಂಡಿಯಾ ಟ್ಯಾಕ್ಸ್ ಪ್ಲಾನ್ ಫಂಡ್: ಶೇ. 16.88 ಸಿಎಜಿಆರ್
  9. ಕೋಟಕ್ ಟ್ಯಾಕ್ಸ್ ಸೇವರ್ ಫಂಡ್: ಶೇ. 16.66 ಸಿಎಜಿಆರ್.

ಇಲ್ಲಿ ನೀಡಲಾಗಿರುವ ಸಿಎಜಿಆರ್ ದರ ಈ ಫಂಡ್​ಗಳ ಡೈರೆಕ್ಟ್ ಪ್ಲಾನ್​ಗಳಿಂದ ಸಿಕ್ಕಿದೆ. ನೀವು ಈ ಫಂಡ್​ನ ರೆಗ್ಯುಲರ್ ಪ್ಲಾನ್​ನಲ್ಲಿ ಹೂಡಿಕೆ ಮಾಡಿದ್ದರೆ ಸಿಎಜಿಆರ್ ದರ ತುಸು ಕಡಿಮೆ ಇರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ