AI ಪ್ರಾಬಲ್ಯದಿಂದ ಭಾರತ- ಅಮೆರಿಕಾ ಮೈತ್ರಿಯವರೆಗೆ; 2024ರ ಭವಿಷ್ಯ ನುಡಿದ ಜಾನ್ ಚೇಂಬರ್ಸ್​

|

Updated on: Dec 15, 2023 | 11:26 AM

ಯುಎಸ್-ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್‌ನರ್‌ಶಿಪ್ ಫೋರಂನ ಅಧ್ಯಕ್ಷ ಜಾನ್ ಚೇಂಬರ್ಸ್ ಭಾರತದ ಬಗ್ಗೆ ಭವಿಷ್ಯ ನುಡಿದಿದ್ದಾರೆ. 2024ರಲ್ಲಿಯೂ ಭಾರತ ವಿಶ್ವದ ನಂಬರ್ ಒನ್ ಆರ್ಥಿಕತೆಯತ್ತ ತನ್ನ ಓಟವನ್ನು ಮುಂದುವರೆಸುತ್ತದೆ ಎಂದು ಹೇಳಿದ್ದಾರೆ.

AI ಪ್ರಾಬಲ್ಯದಿಂದ ಭಾರತ- ಅಮೆರಿಕಾ ಮೈತ್ರಿಯವರೆಗೆ; 2024ರ ಭವಿಷ್ಯ ನುಡಿದ ಜಾನ್ ಚೇಂಬರ್ಸ್​
ಜಾನ್ ಚೇಂಬರ್ಸ್
Follow us on

2023 ಮುಗಿಯುವ ಹಂತದಲ್ಲಿದೆ. ಈ ವರ್ಷ ಅನೇಕರು ನಿರಾಶೆಗೊಂಡರೆ ಕೆಲವರು ತಮ್ಮ ನಿರೀಕ್ಷೆಗಿಂತ ಹೆಚ್ಚಿನದನ್ನು ಪಡೆದಿದ್ದಾರೆ. ಹಾಗಾದರೆ, 2024 ಹೇಗಿರಬಹುದು? ಎಂಬ ಕುತೂಹಲ ಎಲ್ಲರಲ್ಲೂ ಇರುವುದು ಸಹಜ. ಮುಂದಿನ ವರ್ಷದ ಭವಿಷ್ಯ ಹೇಗಿರುತ್ತದೆ? ಯಾವ ರೀತಿಯ ಬದಲಾವಣೆಗಳು ಆಗುತ್ತವೆ? ಎಂಬ ಬಗ್ಗೆ ಜಾನ್ ಚೇಂಬರ್ಸ್ ಅವರ ಭವಿಷ್ಯವಾಣಿ ನಿಮ್ಮ ಕುತೂಹಲವನ್ನು ಕೊಂಚ ಮಟ್ಟಿಗೆ ತಣಿಸಬಹುದು.

ಯುಎಸ್-ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್‌ನರ್‌ಶಿಪ್ ಫೋರಂನ ಅಧ್ಯಕ್ಷ ಜಾನ್ ಚೇಂಬರ್ಸ್ ಭಾರತದ ಬಗ್ಗೆ ಭವಿಷ್ಯ ನುಡಿದಿದ್ದಾರೆ. 2024ರಲ್ಲಿಯೂ ಭಾರತ ವಿಶ್ವದ ನಂಬರ್ ಒನ್ ಆರ್ಥಿಕತೆಯತ್ತ ತನ್ನ ಓಟವನ್ನು ಮುಂದುವರೆಸುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕ್ಯಾನ್ಸರ್ ರೋಗದ ಪತ್ತೆಗೆ ಕೃತಕ ಬುದ್ಧಿಮತ್ತೆ ಮೊರೆ ಹೋದ ಆರೋಗ್ಯ ಇಲಾಖೆ

ಈ ಬಗ್ಗೆ ಎಕ್ಸ್​ (ಟ್ವಿಟ್ಟರ್​)ನಲ್ಲಿ ಪೋಸ್ಟ್ ಮಾಡಿರುವ ಚೇಂಬರ್ಸ್ 2024ರ ಭವಿಷ್ಯವನ್ನು ಪಟ್ಟಿ ಮಾಡಿದ್ದಾರೆ. ಮುಂದಿನ ವರ್ಷವ ವೇಗದ ವರ್ಷವಾಗಿರುತ್ತದೆ, ಬದಲಾವಣೆಯ ಪ್ರಮಾಣ ಹೆಚ್ಚಾಗಿರುತ್ತದೆ ಮತ್ತು ಜನರ ಜೀವನದ ಮೇಲೆ ಕೃತಕ ಬುದ್ಧಿಮತ್ತೆ (AI), ಸೈಬರ್ ಬಹಳ ದೊಡ್ಡ ಪರಿಣಾಮ ಬೀರಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಅಮೆರಿಕಾ ಮತ್ತು ಭಾರತವು ವಿಶ್ವದ ಕಾರ್ಯತಂತ್ರದ ಪಾರ್ಟನರ್ ಆಗಲಿವೆ ಎಂದು ಅವರು ಹೇಳಿದ್ದಾರೆ. ಹಾಗೇ, ಜಾಗತಿಕ ಆವಿಷ್ಕಾರ ಮತ್ತು ಉದ್ಯೋಗ ಸೃಷ್ಟಿ ವೇಗ ಪಡೆದುಕೊಳ್ಳಲಿದೆ ಎಂದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಚೇಂಬರ್ಸ್​ ಭಾರತದ ಬಗ್ಗೆ ಸಾಕಷ್ಟು ಮಾತನಾಡುತ್ತಿದ್ದಾರೆ. ಈ ವರ್ಷ ಬ್ಲೂಮ್‌ಬರ್ಗ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಭಾರತವನ್ನು ‘ತಯಾರಿಕೆಯ ಶಕ್ತಿಕೇಂದ್ರ’ ಆಗುವುದನ್ನು ನೋಡಲು ಇಷ್ಟಪಡುತ್ತೇನೆ ಎಂದು ಹೇಳಿದ್ದರು. “ಇದುವರೆಗೂ ಆಗಿರುವುದು ಏನೂ ಅಲ್ಲ, ಜಾಗತಿಕ ಜಿಡಿಪಿಯಲ್ಲಿ ಭಾರತ 5ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಯಾವಾಗ ಬರುತ್ತದೆ ಎಂದು ಜನರು ನನ್ನನ್ನು ಕೇಳುತ್ತಾರೆ. ಅದು ತಪ್ಪು ಪ್ರಶ್ನೆ ಎಂದು ನಾನು ಹೇಳುತ್ತೇನೆ. ವಿಶ್ವ ಜಿಡಿಪಿಯಲ್ಲಿ ಭಾರತ ಯಾವಾಗ ಪ್ರಥಮ ಸ್ಥಾನ ಪಡೆಯುತ್ತದೆ ಎಂಬುದು ನಿಜವಾದ ಪ್ರಶ್ನೆ. ಭಾರತ ಉತ್ಪಾದನೆಯ ಪವರ್‌ಹೌಸ್ ಆಗಿರುವುದನ್ನು ನೋಡಲು ನಾನು ಇಷ್ಟಪಡುತ್ತೇನೆ ಎಂದು ಹೇಳಿದ್ದರು.

ಇದನ್ನೂ ಓದಿ: ಸಿಇಒ ಆಗಿ ಮಿಕವನ್ನು ತಂದು ಕೂರಿಸಿದ ಹೆಂಡದ ಕಂಪನಿ; ಈ ಮಿಕಾ ಅಂತಿಂಥದ್ದಲ್ಲ, ಕೃತಕ ಬುದ್ಧಿಮತ್ತೆಯ ಶಕ್ತಿ ಇರುವ ರೋಬೋ ಹೆಣ್ಣು

AI ಮುಖ್ಯವಾಹಿನಿಗೆ ಹೋಗುತ್ತದೆ:

ಕೃತಕ ಬುದ್ಧಿಮತ್ತೆ ಅಥವಾ AI ಮುಂದಿನ ಅತ್ಯಂತ ಮೂಲಭೂತವಾದ ತಾಂತ್ರಿಕ ಬದಲಾವಣೆಯಾಗಿದೆ ಎಂದು ಚೇಂಬರ್ ಹೇಳಿದರು. AI ಸಂಪೂರ್ಣವಾಗಿ ಮುಖ್ಯವಾಹಿನಿಗೆ ಹೋಗುತ್ತದೆ. ಕೃತಕ ಬುದ್ಧಿಮತ್ತೆ 2022ರಲ್ಲಿ ಮತ್ತೆ ಬರಲಿದೆ ಎಂದು ನಾನು ಮೊದಲೇ ಹೇಳಿದ್ದೆ. 2023ರಲ್ಲಿ ಇದು ಪ್ರಾರಂಭವಾಗಿರುವುದನ್ನು ನಾವು ನೋಡಿದ್ದೇವೆ. ಆದರೆ 2024ರಲ್ಲಿ ಆರ್ಟಿಫಿಷಿಯಲ್ ಇಂಟಲಿಜೆನ್ಸ್​ ಇನ್ನಷ್ಟು ಮುಂದಕ್ಕೆ ಹೋಗಲಿದೆ. ಇದು ಡಿಜಿಟಲ್ ಯುಗದಿಂದ AI ಯುಗಕ್ಕೆ ಶಿಫ್ಟ್ ಆಗುವ ಪ್ರಕ್ರಿಯೆಗೆ ಬುನಾದಿ ಹಾಕಲಿದೆ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 11:19 am, Fri, 15 December 23