ಕರ್ನಾಟಕದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಬಿಟ್ಕಾಯಿನ್ ಹಗರಣದ ಆರೋಪಿ ಆಗಿರುವ 26 ವರ್ಷದ ಆರೋಪಿ ಶ್ರೀಕೃಷ್ಣ ರಮೇಶ್ ಅಲಿಯಾಸ್ ಶ್ರೀಕಿ ಪೊಲೀಸರಿಗೆ ನೀಡಿರುವ ಮಾಹಿತಿಯಂತೆ, ನೆದರ್ಲೆಂಡ್ಸ್ನ ಬಿಟ್ಫಿನೆಕ್ಸ್ ವಿನಿಮಯ ಕೇಂದ್ರವನ್ನು ಎರಡು ಸಲ ಹ್ಯಾಕ್ ಮಾಡಿದ್ದಾನೆ. “ಬಿಟ್ಫಿನೆಕ್ಸ್ ನಾನು ಹ್ಯಾಕ್ ಮಾಡಿದ ದೊಡ್ಡ ಬಿಟ್ಕಾಯಿನ್ ವಿನಿಮಯ ಕೇಂದ್ರ. ಆ ಎಕ್ಸ್ಚೇಂಜ್ ಎರಡು ಸಲ ಹ್ಯಾಕ್ ಮಾಡಿದೆ. ಮತ್ತು ಹಾಗೆ ಮಾಡಿದ ಮೊದಲ ವ್ಯಕ್ತಿ ನಾನು. ಎರಡನೇ ಘಟನೆ ಸರಳವಾದ ಫೀಷಿಂಗ್ ದಾಳಿ. ಅದರ ಮೂಲಕ ಸೇನೆಗಾಗಿ ಕೆಲಸ ಮಾಡುವ ಇಬ್ಬರು ಇಸ್ರೇಲಿ ಹ್ಯಾಕರ್ಗಳಿಗೆ. ಉದ್ಯೋಗಿಯೊಬ್ಬರ ಕಂಪ್ಯೂಟರ್ಗೆ ಸಂಪರ್ಕ ಸಿಗುವಂತಾಯಿತು. ಅದರಿಂದ ಎಡಬ್ಲ್ಯುಎಸ್ ಕ್ಲೌಡ್ ಅಕೌಂಟ್ಗೆ ಸಂಪರ್ಕ ಸಿಕ್ಕಿತು,” ಎಂದು ಶ್ರೀಕಿ ತನ್ನ ಹೇಳಿಕೆಯಲ್ಲಿ ಪೊಲೀಸರಿಗೆ ತಿಳಿಸಿದ್ದಾನೆ.
ತಾನು ಹೇಗೆ ಬಿಟ್ಕಾಯಿನ್ ಎಕ್ಸ್ಚೇಂಜ್ ಹ್ಯಾಕ್ ಮಾಡಲು ಸಾಧ್ಯವಾಯಿತು ಎಂಬುದನ್ನು ಆತ ಪೊಲೀಸರಿಗೆ ವಿವರಿಸಿದ್ದಾನೆ. ಡೇಟಾ ಸೆಂಟರ್ನಲ್ಲಿ ಬಗ್ ಬಳಸಿಕೊಂಡೆ ಆ ಮೂಲಕ ಕರ್ನೆಲ್ ಬೇಸ್ಡ್ ವರ್ಚುವಲ್ ಮಶೀನ್ (KVM) ಸಂಪರ್ಕವು ಸರ್ವರ್ಗೆ ದೊರೆಯಿತು. ಆ ಸರ್ವರ್ ಅನ್ನು GRUB ಮೋಡ್ಗೆ ರೀಬೂಟ್ ಮಾಡಿ, ರೂಟ್ ಪಾಸ್ವರ್ಡ್ ರೀಸೆಟ್ ಮಾಡಿ, ಲಾಗ್ ಇನ್ ನಂತರ ವಿಥ್ಡ್ರಾವಲ್ ಸರ್ವರ್ ಪಾಸ್ವರ್ಡ್ಗಳನ್ನು ರೀಸೆಟ್ ಮಾಡಿದೆ. ಹಣವನ್ನು ಬಿಟ್ಕಾಯಿನ್ ಮೂಲಕವಾಗಿ ನನ್ನ ಬಿಟ್ಕಾಯಿನ್ ವಿಳಾಸಕ್ಕೆ ರೂಟ್ ಮಾಡಿದೆ ಎಂದಿದ್ದಾನೆ. ಆತ ಹೇಳಿರುವಂತೆ 20,008 ಬಿಟ್ಕಾಯಿನ್ ಲಾಭ ಮಾಡಿದ್ದಾನೆ.
ಆತ ಹೇಳಿರುವಂತೆ, ನಾನು ಏನನ್ನೂ ಉಳಿಸಿಲ್ಲ. ಆಲ್ಕೋಹಾಲ್ಗಾಗಿ ಮತ್ತು ಹೋಟೆಲ್ ಬಿಲ್ಗಾಗಿ ಸರಾಸರಿ ದಿನಕ್ಕೆ 1ರಿಂದ 3 ಲಕ್ಷ ರೂಪಾಯಿ ಖರ್ಚು ಮಾಡುತ್ತಿದ್ದೆ. ಹ್ಯಾಕ್ ಮಾಡುವ ಸಂದರ್ಭದಲ್ಲಿ ಬಿಟ್ ಕಾಯಿನ್ ಬೆಲೆ 100ರಿಂದ 200 ಅಮೆರಿಕನ್ ಡಾಲರ್ ಇದ್ದವು. ಅವುಗಳನ್ನು ಯು.ಕೆ. ಸ್ನೇಹಿತ ಆ್ಯಂಡಿಗೆ ಹಂಚಿಕೊಳ್ಳುತ್ತಿದ್ದೆ ಎಂದಿದ್ದಾನೆ. ಜತೆಗೆ 2019ರಲ್ಲಿ ಕರ್ನಾಟಕ ಸರ್ಕಾರದ ಇ-ಪ್ರಕ್ಯೂರ್ಮೆಂಟ್ ಸೈಟ್ನ ಕೂಡ ಹ್ಯಾಕ್ ಮಾಡಿದ್ದಾಗಿ ಆತ ಹೇಳಿದ್ದಾನೆ.
ನಾವು 2019ರಲ್ಲಿ ಈ ಸೈಟ್ ಹ್ಯಾಕ್ ಮಾಡಿ, ಮೂರು ಪ್ರತ್ಯೇಕ ವರ್ಗಾವಣೆ ಮಾಡಿದೆವು. ಎರಡು ಖಾತೆಯನ್ನು ಹೇಮಂತ್ ಮುದ್ದಪ್ಪ ನನಗೆ ಕೊಟ್ಟ. ಒಂದು ಖಾತೆಯಲ್ಲಿ 18 ಕೋಟಿ, ಮತ್ತೊಂದರಲ್ಲಿ 28 ಕೋಟಿ ರೂಪಾಯಿ ಮಾಡಲಾಯಿತು. ಹೇಮಂತ್ ಹೇಳಿಕೊಂಡಂತೆ, ಅಯೂಬ್ ಎಂಬ ಸಂಸ್ಥೆಯಿಂದ ಆತ 2 ಕೋಟಿ ರೂಪಾಯಿ ಸಂಗ್ರಹಿಸಿದ. ನನಗೆ ಆತ ಯಾರು ಅಂತ ಗೊತ್ತಿಲ್ಲ. ಆದರೆ ಸಿಐಡಿ ಹೇಳುವಂತೆ, ಹೇಮಂತ್ ಮುದ್ದಪ್ಪ 11 ಕೋಟಿ ಸಂಗ್ರಹಿಸಿದ್ದಾನೆ ಎಂದಿದ್ದಾನೆ ಶ್ರೀಕಿ.
ನಾನು ಹಿಮಾಲಯದಲ್ಲಿದ್ದಾಗ ಎರಡನೇ ವರ್ಗಾವಣೆ 28 ಕೋಟಿ ವರ್ಗಾವಣೆ ಆರಂಭಿಸಿದೆ. ಈ ವಹಿವಾಟು ಮುಂಚಿತವಾಗಿಯೇ ರೀಫಂಡ್ ಆಯಿತು. ಏಕೆಂದರೆ, ಸರ್ಕಾರವು ಇದನ್ನು ವಂಚನೆಯ ವಹಿವಾಟು ಎಂಬುದನ್ನು ಕಂಡುಕೊಂಡಿತು. ಇದರಿಂದ ನನಗೆ ಏನೂ ಲಾಭ ಆಗಿತ್ತು. ಆದರೆ ಈ ಅಪರಾಧದಲ್ಲಿ ಸಕತ್ ಎಂಜಾಯ್ ಮಾಡಿದೆ. ಫೈವ್ ಸ್ಟಾರ್ ಹೋಟೆಲ್ಗಳಲ್ಲಿ ಉಳಿದುಕೊಂಡೆ ಮತ್ತು ವಿಲಾಸಿ ಜೀವನಶೈಲಿ ಅನುಭವಿಸಿದೆ ಎಂದಿದ್ದಾರೆ. ಅಂದಹಾಗೆ, ಕರ್ನಾಟಕ ಸರ್ಕಾರವು ಈ ಪ್ರಕರಣವನ್ನು ಜಾರಿ ನಿರ್ದೇಶನಾಲಯ ಮತ್ತು ಸಿಬಿಐಗೆ ವಹಿಸಿದೆ.
ಇದನ್ನೂ ಓದಿ: Hacker Shreeki: ಬರಿಗಾಲಲ್ಲಿ ಪರಪ್ಪನ ಅಗ್ರಹಾರ ಜೈಲಿನಿಂದ ಹೊರಗೆ ಬಂದ ಹ್ಯಾಕರ್ ಶ್ರೀಕಿ