ಸ್ಟಾರ್ಟಪ್​ಗೆ ಪೂರಕ ವಾತಾವರಣ; ಜಾಗತಿಕ ರ‍್ಯಾಂಕಿಂಗ್​ನಲ್ಲಿ ಬೆಂಗಳೂರಿಗೆ 8ನೇ ಸ್ಥಾನ

|

Updated on: Aug 15, 2023 | 8:27 PM

Global Startup Ecosystem Ranking; ವಿಪರ್ಯಾಸವೆಂದರೆ ದಕ್ಷಿಣ ಏಷ್ಯಾದಲ್ಲಿಯೂ 2022 ಕ್ಕೆ ಹೋಲಿಸಿದರೆ ಈ ವರ್ಷ ಕೇವಲ 8 ಭಾರತೀಯ ನಗರಗಳು ಟಾಪ್ ಸ್ಟಾರ್ಟ್ಅಪ್ ನಗರಗಳಲ್ಲಿ ಸ್ಥಾನ ಪಡೆದಿವೆ. 2022ರಲ್ಲಿ 9 ನಗರಗಳು ಸ್ಥಾನ ಪಡೆದಿದ್ದವು. 2023 ರಲ್ಲಿ ಭಾರತವು ಹೆಚ್ಚಿನ ಒಪ್ಪಂದಗಳಿಗೆ ಸಾಕ್ಷಿಯಾಗದ ಕಾರಣ, ದೇಶವು ಅಗ್ರ 20 ರ ಪಟ್ಟಿಯಿಂದ ಹೊರಬಿದ್ದಿದೆ.

ಸ್ಟಾರ್ಟಪ್​ಗೆ ಪೂರಕ ವಾತಾವರಣ; ಜಾಗತಿಕ ರ‍್ಯಾಂಕಿಂಗ್​ನಲ್ಲಿ ಬೆಂಗಳೂರಿಗೆ 8ನೇ ಸ್ಥಾನ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಆಗಸ್ಟ್ 15: ಜಾಗತಿಕವಾಗಿ ಸ್ಟಾರ್ಟಪ್​ಗೆ ಪೂರಕ ವಾತಾವರಣ ಇರುವ ನಗರಗಳ ರ‍್ಯಾಂಕಿಂಗ್​ನಲ್ಲಿ (Global Startup Ecosystem Ranking) ಭಾರತದ ಸಿಲಿಕಾನ್ ಸಿಟಿ ಬೆಂಗಳೂರು (Bangalore) 8 ನೇ ಸ್ಥಾನ ಪಡೆದುಕೊಂಡಿದೆ. ಜತೆಗೆ, 2023 ರಲ್ಲಿ ಅಗ್ರ 10 ರೊಳಗೆ ಸ್ಥಾನ ಪಡೆದ ಏಕೈಕ ಭಾರತೀಯ ನಗರವಾಗಿ ಗುರುತಿಸಿಕೊಂಡಿದೆ. ರಾಷ್ಟ್ರ ರಾಜಧಾನಿ ದೆಹಲಿ (Delhi) 13 ನೇ ಸ್ಥಾನದಲ್ಲಿದ್ದರೆ ಸ್ಯಾನ್ ಫ್ರಾನ್ಸಿಸ್ಕೋ ಮತ್ತು ನ್ಯೂಯಾರ್ಕ್ 50 ನಗರಗಳ ಜಾಗತಿಕ ಪಟ್ಟಿಯಲ್ಲಿ ಕ್ರಮವಾಗಿ 1 ಮತ್ತು 2 ನೇ ಸ್ಥಾನದಲ್ಲಿವೆ. ಜಾಗತಿಕವಾಗಿ ಅಗ್ರ 50 ನಗರಗಳಲ್ಲಿ 6 ಚೀನಾದ ನಗರಗಳು (ಹಾಂಗ್​ಕಾಂಗ್ ಸೇರಿದಂತೆ) ಗುರುತಿಸಿಕೊಂಡಿವೆ. ಮುಂಬೈ 25 ನೇ ಸ್ಥಾನದಲ್ಲಿದೆ.

2023 ರಲ್ಲಿ ಭಾರತವು ಹೆಚ್ಚಿನ ಒಪ್ಪಂದಗಳಿಗೆ ಸಾಕ್ಷಿಯಾಗದ ಕಾರಣ, ದೇಶವು ಅಗ್ರ 20 ರ ಪಟ್ಟಿಯಿಂದ ಹೊರಬಿದ್ದಿದೆ. ಜಪಾನ್ ಮತ್ತು ದಕ್ಷಿಣ ಕೊರಿಯಾದಂತಹ ಇತರ ಏಷ್ಯಾದ ರಾಷ್ಟ್ರಗಳು ಭಾರತಕ್ಕಿಂತ ಉತ್ತಮ ಸ್ಥಾನವನ್ನು ಪಡೆದಿವೆ.

ವಿಪರ್ಯಾಸವೆಂದರೆ ದಕ್ಷಿಣ ಏಷ್ಯಾದಲ್ಲಿಯೂ 2022 ಕ್ಕೆ ಹೋಲಿಸಿದರೆ ಈ ವರ್ಷ ಕೇವಲ 8 ಭಾರತೀಯ ನಗರಗಳು ಟಾಪ್ ಸ್ಟಾರ್ಟ್ಅಪ್ ನಗರಗಳಲ್ಲಿ ಸ್ಥಾನ ಪಡೆದಿವೆ. 2022ರಲ್ಲಿ 9 ನಗರಗಳು ಸ್ಥಾನ ಪಡೆದಿದ್ದವು.

ಈ ಮಧ್ಯೆ, 77ನೇ ಸ್ವಾತಂತ್ರ್ಯ ದಿನದಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸರ್ಕಾರದ ನೀತಿಗಳಿಂದ ಯುವಕರಿಗೆ ಸಹಾಯವಾಗುತ್ತಿದೆ. ಯುವಕರ ಶಕ್ತಿಯು ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟಪ್ ಪರಿಸರ ವ್ಯವಸ್ಥೆಯಾಗಲು ಸಹಾಯ ಮಾಡಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಹಣದುಬ್ಬರ ಭಾರೀ ಏರಿಕೆ; ಜುಲೈ ತಿಂಗಳ ಇನ್​ಫ್ಲೇಶನ್ ಶೇ. 7.44ಕ್ಕೆ ಜಿಗಿತ

ದೇಶದ ರಫ್ತು ಹೆಚ್ಚುತ್ತಿದೆ ಮತ್ತು ಭಾರತದ ಆರ್ಥಿಕತೆಯು ಅದರ ಬೆಳವಣಿಗೆಯ ವೇಗವನ್ನು ಮುಂದುವರೆಸುತ್ತದೆ ಎಂದು ವಿಶ್ವದಾದ್ಯಂತದ ತಜ್ಞರು ನಂಬಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ಈ ವರ್ಷದ ಏಪ್ರಿಲ್ 30 ರವರೆಗೆ ಸರ್ಕಾರವು 98,119 ಸಂಸ್ಥೆಗಳನ್ನು ಸ್ಟಾರ್ಟಪ್‌ಗಳನ್ನಾಗಿ ಗುರುತಿಸಿದೆ. ಇವರೆಲ್ಲರೂ ‘ಸ್ಟಾರ್ಟಪ್ ಇಂಡಿಯಾ’ ಯೋಜನೆಯಡಿ ತೆರಿಗೆ ಪ್ರಯೋಜನಗಳನ್ನು ಒಳಗೊಂಡಂತೆ ಪ್ರೋತ್ಸಾಹಕಗಳನ್ನು ಪಡೆಯಲು ಅರ್ಹರಾಗಿದ್ದಾರೆ. ಸ್ಟಾರ್ಟ್‌ಅಪ್‌ಗಳಿಗಾಗಿ ಫಂಡ್ ಆಫ್ ಫಂಡ್‌ಗಳು, ಸ್ಟಾರ್ಟ್‌ಅಪ್ ಇಂಡಿಯಾ ಸೀಡ್ ಫಂಡ್ ಸ್ಕೀಮ್ ಮತ್ತು ಕ್ರೆಡಿಟ್ ಗ್ಯಾರಂಟಿ ಸ್ಕೀಮ್‌ನಂತಹ ಯೋಜನೆಗಳು ಈ ಘಟಕಗಳಿಗೆ ತಮ್ಮ ವ್ಯವಹಾರ ಚಕ್ರದ ವಿವಿಧ ಹಂತಗಳಲ್ಲಿ ಸಹಾಯ ಮಾಡುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ