Petrol, diesel price: ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ 7 ರೂ. ಇಳಿಕೆ ಮಾಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ

| Updated By: Srinivas Mata

Updated on: Nov 04, 2021 | 1:44 AM

ನವೆಂಬರ್ 4, 2021ರ ಸಂಜೆಯಿಂದ ಅನ್ವಯ ಆಗುವಂತೆ ಪೆಟ್ರೋಲ್, ಡೀಸೆಲ್ ಲೀಟರ್​ಗೆ 7 ರೂಪಾಯಿ ವ್ಯಾಟ್ ಇಳಿಕೆ ಮಾಡಿ ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಎಸ್. ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

Petrol, diesel price: ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ 7 ರೂ. ಇಳಿಕೆ ಮಾಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡಿದ ಕೆಲವೇ ಗಂಟೆಗಳಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರದಂದು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಲ್ಯೂ ಆ್ಯಡೆಡ್ ಟ್ಯಾಕ್ಸ್ (VAT) ಇಳಿಕೆ ಮಾಡಿ, ಘೋಷಣೆ ಮಾಡಿದ್ದಾರೆ. ಕೇಂದ್ರ ಸರ್ಕಾರದ ಕ್ರಮವನ್ನು ಹೊಗಳಿರುವ ಮುಖ್ಯಮಂತ್ರಿ ಬೊಮ್ಮಾಯಿ, ರಾಜ್ಯ ಸರ್ಕಾರದ ತೀರ್ಮಾನವನ್ನು ಟ್ವಿಟರ್​ನಲ್ಲಿ ತಿಳಿಸಿದ್ದಾರೆ. ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂಧನದ ದರದ ಹೊರೆ ಇಳಿಸುವ ಮೂಲಕವಾಗಿ ದೀಪಾವಳಿಗೆ ಅದ್ಭುತವಾದ ಉಡುಗೊರೆ ನೀಡಿದ್ದಾರೆ. ಈ ಹಬ್ಬಕ್ಕೆ ಸ್ಫೂರ್ತಿ ತುಂಬುವುದಕ್ಕೆ ಕರ್ನಾಟಕ ಸರ್ಕಾರವು ನಾಳೆ ಸಂಜೆಯಿಂದ (ನವೆಂಬರ್ 4, 2021ರ ಸಂಜೆ) ಪೆಟ್ರೋಲ್ ಮತ್ತು ಡೀಸೆಲ್ ಎರಡರ ಮೇಲೂ ರೂ. 7 ಇಳಿಕೆ ಮಾಡಲಿದೆ ಎಂದು ಹೇಳಿದ್ದಾರೆ.

ಈ ನಿರ್ಧಾರದಿಂದ ನಮ್ಮ ಬೊಕ್ಕಸಕ್ಕೆ 2100 ಕೋಟಿ ರೂಪಾಯಿ ಹೊರೆಯಾದರೂ ನಮ್ಮ ನಾಗರಿಕರಿಗೆ 95.90 ಮತ್ತು 81.50 (ಅಂದಾಜು) ಪೆಟ್ರೋಲ್ ಮತ್ತು ಡೀಸೆಲ್​ಗೆ ಕ್ರಮವಾಗಿ ದರವಾಗಲಿದೆ. ಈ ಶುಭ ಸುದ್ದಿಯೊಂದಿಗೆ ಮತ್ತೊಮ್ಮೆ ಸಂಭ್ರಮದ ದೀಪಾವಳಿ ಎಂದು ಅವರು ಹೇಳಿದ್ದಾರೆ.

ಇಡೀ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರವು ದಾಖಲೆಯ ಮಟ್ಟದಲ್ಲಿ ಇರುವ ಸಂದರ್ಭದಲ್ಲಿ ಅಂತೂ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರವು ಪೆಟ್ರೋಲ್ ಮೇಲೆ ರೂ. 5 ಹಾಗೂ ಡೀಸೆಲ್​ ಮೇಲೆ ಪ್ರತಿ ಲೀಟರ್​ಗೆ 10 ರೂಪಾಯಿ ಅಬಕಾರಿ ಸುಂಕವನ್ನು ಇಳಿಕೆ ಮಾಡಿ ಬುಧವಾರ ಘೋಷಣೆ ಮಾಡಿದೆ.

ಇದನ್ನೂ ಓದಿ: Fuel Price: ದೀಪಾವಳಿ ಗಿಫ್ಟ್​ ಕೊಟ್ಟ ಸರ್ಕಾರ; ಪೆಟ್ರೋಲ್, ಡೀಸೆಲ್ ಬೆಲೆ ಮಧ್ಯರಾತ್ರಿಯಿಂದಲೇ ಇಳಿಕೆ!

Published On - 1:43 am, Thu, 4 November 21