AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SBI: ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ ಎರಡನೇ ತ್ರೈಮಾಸಿಕ ಲಾಭ ಶೇ 67ರಷ್ಟು ಹೆಚ್ಚಳವಾಗಿ 7627 ಕೋಟಿ ರೂಪಾಯಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ 2021ರ ಸೆಪ್ಟೆಂಬರ್ ತ್ರೈಮಾಸಿಕದ ಲಾಭವು ಶೇ 67ರಷ್ಟು ಹೆಚ್ಚಳವಾಗಿ ಏಕೀಕೃತ ಲಾಭವು ರೂ. 7627 ಕೋಟಿ ಬಂದಿದೆ.

SBI: ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ ಎರಡನೇ ತ್ರೈಮಾಸಿಕ ಲಾಭ ಶೇ 67ರಷ್ಟು ಹೆಚ್ಚಳವಾಗಿ 7627 ಕೋಟಿ ರೂಪಾಯಿ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಸಾಂದರ್ಭಿಕ ಚಿತ್ರ)
TV9 Web
| Updated By: Srinivas Mata|

Updated on: Nov 03, 2021 | 7:24 PM

Share

ದೇಶದ ಅತಿದೊಡ್ಡ ಬ್ಯಾಂಕ್​ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ನವೆಂಬರ್ 3ರಂದು 2021ರ ಜುಲೈನಿಂದ ಸೆಪ್ಟೆಂಬರ್​ ತ್ರೈಮಾಸಿಕದಲ್ಲಿ 7,627 ಕೋಟಿ ರೂಪಾಯಿಯ ಏಕೀಕೃತ ಲಾಭವನ್ನು ವರದಿ ಮಾಡಿದೆ. ವರ್ಷದಿಂದ ವರ್ಷಕ್ಕೆ ಶೇ 66.7ರಷ್ಟು ಬೆಳವಣಿಗೆಯಾಗಿದೆ. ಜೊತೆಗೆ ಆಸ್ತಿ ಗುಣಮಟ್ಟದ ಒತ್ತಡ ಮತ್ತು ಪ್ರಾವಿಷನ್ ಹಾಗೂ ಕ್ರೆಡಿಟ್ ವೆಚ್ಚದಲ್ಲಿನ ಕುಸಿತವನ್ನು ಕಡಿಮೆ ಮಾಡುತ್ತದೆ. ಆದರೆ ನೌಕರರಿಗೆ ಪಾವತಿಸಬೇಕಾದ ಕುಟುಂಬ ಪಿಂಚಣಿಯಲ್ಲಿನ ಪರಿಷ್ಕರಣೆಯು ಲಾಭದ ಮೇಲೆ ಅಸಾಧಾರಣ ಪರಿಣಾಮ ಬೀರಿದೆ. ಕಳೆದ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ ಏಕೀಕೃತ ಲಾಭ 4,574.16 ಕೋಟಿ ರೂ. ಬಂದಿತ್ತು. ಕುಟುಂಬ ಪಿಂಚಣಿ ನಿಯಮಗಳಲ್ಲಿನ ಬದಲಾವಣೆಯಿಂದಾಗಿ 7,418 ಕೋಟಿ ರೂಪಾಯಿಗಳನ್ನು ಸಂಪೂರ್ಣವಾಗಿ ಒದಗಿಸಿದೆ ಎಂದು ಎಸ್‌ಬಿಐ ಹೇಳಿದೆ. ನಿಯಂತ್ರಕವು 5 ವರ್ಷಗಳಲ್ಲಿ ಅಮಾರ್ಟೈಸ್ ವಿನಿಯೋಗ ನೀಡಿದ್ದು, ಇದು ಅಸಾಧಾರಣ ಐಟಂ ಎಂದು ಬಹಿರಂಗಪಡಿಸಲಾಗಿದೆ.

ನಿವ್ವಳ ಬಡ್ಡಿ ಆದಾಯ, ಅಂದರೆ ಗಳಿಸಿದ ಬಡ್ಡಿ ಮತ್ತು ವೆಚ್ಚ ಮಾಡಿದ ಬಡ್ಡಿಯ ಮಧ್ಯದ ವ್ಯತ್ಯಾಸವು ವರ್ಷದಿಂದ ವರ್ಷಕ್ಕೆ ಶೇ 10.7ರಷ್ಟು ಬೆಳವಣಿಗೆ ಆಗಿದ್ದು, 2FY22ಕ್ಕೆ 31,183.90 ಕೋಟಿ ರೂಪಾಯಿಗೆ ತಲುಪಿದೆ. ಸಾಲದ ಬೆಳವಣಿಗೆಯು ಶೇ 6.17ರಷ್ಟು ಮತ್ತು ದೇಶೀಯ ನಿವ್ವಳ ಬಡ್ಡಿಯ ಮಾರ್ಜಿನ್ ವಿಸ್ತರಣೆಯು 16 ಬಿಪಿಎಸ್​ ಆಗಿದ್ದು, ಶೇ 3.5ರಷ್ಟಿದೆ (ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ 35 ಬಿಪಿಎಸ್​ ಹೆಚ್ಚಾಗಿದೆ). “ಇಡೀ ಬ್ಯಾಂಕ್ ಮುಂಗಡಗಳು ವರ್ಷದಿಂದ ವರ್ಷಕ್ಕೆ ಶೇ 6.17ರಷ್ಟು ಬೆಳವಣಿಗೆಯಾಗಿ, ವರ್ಷದಿಂದ ವರ್ಷಕ್ಕೆ 25.3 ಲಕ್ಷ ಕೋಟಿ ರೂಪಾಯಿಗೆ ಬೆಳೆದಿವೆ. ಮುಖ್ಯವಾಗಿ ವಯಕ್ತಿಕ ರೀಟೇಲ್ ಮುಂಗಡಗಳು (ವರ್ಷದಿಂದ ವರ್ಷಕ್ಕೆ ಶೇ 15.17 ಏರಿಕೆ) ಮತ್ತು ವಿದೇಶೀ ಕಚೇರಿ ಮುಂಗಡಗಳು (ವರ್ಷದಿಂದ ವರ್ಷಕ್ಕೆ ಶೇ 16.18 ಏರಿಕೆ), ದೇಶೀಯ ಮುಂಗಡಗಳ ಬೆಳವಣಿಗೆಯು ವರ್ಷಕ್ಕೆ ಶೇ 4.61ರಷ್ಟಿದೆ. ಆದರೆ ದೇಶೀಯ ಕಾರ್ಪೊರೇಟ್ ಮುಂಗಡಗಳು ಶೇಕಡಾ 3.91ರಷ್ಟು ಕುಸಿದು, 7.56 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ,” ಎಂದು ಎಸ್‌ಬಿಐ ತನ್ನ ಬಿಎಸ್‌ಇ ಫೈಲಿಂಗ್‌ನಲ್ಲಿ ತಿಳಿಸಿದೆ.

ಕಾರ್ಪೊರೇಟ್ ಬಾಂಡ್‌ಗಳು/ ಕಮರ್ಷಿಯಲ್ ಪೇಪರ್‌ಗಳ ಬೆಳವಣಿಗೆಯನ್ನು ಒಳಗೊಂಡಂತೆ, ಸಾಲದ ಪುಸ್ತಕವು ವರ್ಷಕ್ಕೆ ಶೇ 6.21ರಷ್ಟು ಬೆಳೆದಿದೆ ಎಂದು ಬ್ಯಾಂಕ್ ಹೇಳಿದೆ. “ಬ್ಯಾಂಕ್‌ನ ದೇಶೀಯ ಮುಂಗಡಗಳಲ್ಲಿ ಶೇ 24ರಷ್ಟು ಒಳಗೊಂಡಿರುವ ಗೃಹ ಸಾಲವು ವರ್ಷಕ್ಕೆ ಶೇ 10.74ರಷ್ಟು ಹೆಚ್ಚಾಗಿದೆ,” ಎಂದು ಅದು ಸೇರಿಸಿದೆ. ಈ ತ್ರೈಮಾಸಿಕದಲ್ಲಿ ಒಟ್ಟು ಠೇವಣಿಗಳು ಶೇ 9.77ರಷ್ಟು ಏರಿಕೆಯಾಗಿ, ವಾರ್ಷಿಕವಾಗಿ 38.09 ಲಕ್ಷ ಕೋಟಿ ರೂಪಾಯಿಯಿದೆ. “ಚಾಲ್ತಿ ಖಾತೆಯ ಠೇವಣಿಗಳು ವರ್ಷಕ್ಕೆ ಶೇ 19.20ರಷ್ಟು ಮತ್ತು ಉಳಿತಾಯ ಬ್ಯಾಂಕ್ ಠೇವಣಿಗಳು ವರ್ಷದಿಂದ ವರ್ಷಕ್ಕೆ ಶೇ 10.55ರಷ್ಟು ಹೆಚ್ಚಾಗಿದೆ,” ಎಂದು ಬ್ಯಾಂಕ್ ಹೇಳಿದೆ. ಈ ತ್ರೈಮಾಸಿಕದಲ್ಲಿ ಒಟ್ಟು ಅನುತ್ಪಾದಕ ಆಸ್ತಿಗಳೊಂದಿಗೆ (NPA) ಸ್ವತ್ತಿನ ಗುಣಮಟ್ಟವು ಸುಧಾರಿಸಿದೆ. ಸಗಟು ಮುಂಗಡವು 42 ಬಿಪಿಎಸ್​ ಕುಸಿದು ಅನುಕ್ರಮವಾಗಿ ಶೇ 4.9ರಷ್ಟು ಮತ್ತು ನಿವ್ವಳ ಎನ್​ಪಿಎ 25 ಬಿಪಿಎಸ್​ ಕುಸಿದು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇ 1.52 ಆಗಿದೆ.

2021ರ ಜೂನ್​ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ 15,666 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ ಈ ತ್ರೈಮಾಸಿಕದಲ್ಲಿ 4,176 ಕೋಟಿ ರೂಪಾಯಿಗಳಿಗೆ ಕುಸಿದಿದೆ ಎಂದು ಬ್ಯಾಂಕ್ ಹೇಳಿದೆ. ಇದರ ಪರಿಣಾಮವಾಗಿ, Q2FY22ರ ಕುಸಿತದ ಅನುಪಾತವು ಶೇ 0.66ರಷ್ಟು ಇಳಿದಿದ್ದು, Q1FY22ರಲ್ಲಿ ಇದ್ದ ಶೇ 2.47ರಿಂದ ಗಮನಾರ್ಹವಾಗಿ ಕಡಿಮೆಯಾಗಿದೆ. ತ್ರೈಮಾಸಿಕದ ಕ್ರೆಡಿಟ್ ವೆಚ್ಚವು 51 ಬಿಪಿಎಸ್ ಇಳಿಕೆ ಆಗಿದ್ದು, ವರ್ಷದಿಂದ ವರ್ಷಕ್ಕೆ (36 ಬಿಪಿಎಸ್ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಕಡಿಮೆ) ಶೇಕಡಾ 0.43ಕ್ಕೆ ಇಳಿದಿದೆ ಎಂದು ಬ್ಯಾಂಕ್ ಹೇಳಿದೆ. 2021ರ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಆದಾಯದಿಂದ ವೆಚ್ಚದ ಅನುಪಾತಕ್ಕೆ ಶೇ 54.10 ಸೇರ್ಪಡೆ ಆಗಿದೆ. ವರ್ಷದಿಂದ ವರ್ಷಕ್ಕೆ 106 ಬಿಪಿಎಸ್ ಕಡಿಮೆಯಾಗಿದೆ.

ತ್ರೈಮಾಸಿಕದಲ್ಲಿ ರೂ 2,699 ಕೋಟಿಗಳ ಸಾಲದ ನಷ್ಟದ ಪ್ರಾವಿಷನ್​ಗಳು ಹಿಂದಿನ ವರ್ಷದ ಅವಧಿಗೆ ಹೋಲಿಸಿದರೆ ಶೇ 52ರಷ್ಟು ಕುಸಿದಿದೆ. ಅನುಕ್ರಮ ಆಧಾರದ ಮೇಲೆ ಶೇ 46.3 ಕಡಿಮೆಯಾಗಿದೆ ಎಂದು ಬ್ಯಾಂಕ್ ಹೇಳಿದೆ. Q2FY22ರಲ್ಲಿ ಪ್ರಾವಿಷನ್ ಕವರೇಜ್ ಅನುಪಾತ (PCR) ಶೇ 87.68ರಷ್ಟಿದ್ದು, ಈ ಹಿಂದಿನ ತ್ರೈಮಾಸಿಕದಲ್ಲಿ ಇದ್ದ ಶೇ 85.93ಕ್ಕೆ ಹೋಲಿಸಿದರೆ ಸುಧಾರಿಸಿದೆ. 2021ರ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಪ್ರಾವಿಷನ್​ಗಳು ಮತ್ತು ಕಂಟಿಂಜೆನ್ಸಿಗಳು (ನಿವ್ವಳ ರೈಟ್ ಬ್ಯಾಕ್) ರೂ. 188.75 ತೀವ್ರವಾಗಿ ಕುಸಿದವು. ಹಿಂದಿನ ತ್ರೈಮಾಸಿಕದಲ್ಲಿ ರೂ. 10,051.96 ಕೋಟಿ ಇತ್ತು. ಮತ್ತು ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ರೂ. 10,118.31 ಕೋಟಿ ಇತ್ತು. ಸೆಪ್ಟೆಂಬರ್ 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಪ್ರೀ-ಪ್ರಾವಿಷನ್ ಆಪರೇಟಿಂಗ್ ಲಾಭವು ಶೇಕಡಾ 9.84 ಹೆಚ್ಚಾಗಿ, 18,079 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಆದರೆ ಅದೇ ಅವಧಿಯಲ್ಲಿ ಬಡ್ಡಿಯೇತರ ಆದಾಯ (ಇತರ ಆದಾಯ) ಶೇಕಡಾ 3.8ರಷ್ಟು ಕುಸಿದು, 8,208 ಕೋಟಿ ರೂಪಾಯಿಗಳಿಗೆ ತಲುಪಿದೆ.

ಇದನ್ನೂ ಓದಿ:  SBI Two Wheeler Loan: ಎಸ್​ಬಿಐನಿಂದ ಪ್ರೀ ಅಪ್ರೂವ್ಡ್ ದ್ವಿಚಕ್ರ ವಾಹನ ಸಾಲ; ಗರಿಷ್ಠ 3 ಲಕ್ಷ ರೂ. ತನಕ ಲಭ್ಯ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!