ಪರ್ಮನೆಂಟ್ ಅಕೌಂಟ್ ನಂಬರ್ (PAN) ಈಗ ಭಾರತದಲ್ಲಿ ಮಹತ್ವದ ದಾಖಲೆಗಳಲ್ಲೊಂದಾಗಿದೆ. ಆದಾಯ ತೆರಿಗೆ ಪಾವತಿಸಲು ಇದು ಅತ್ಯಗತ್ಯ. ಇತರ ಹಣಕಾಸು ಚಟುವಟಿಕೆಗಳಿಗೆ ಪ್ಯಾನ್ ಅಗತ್ಯ ಇದೆ. ಇದರಲ್ಲಿರುವ ವಿವರಗಳೂ ಬಹಳ ಮುಖ್ಯ ಎನಿಸುತ್ತವೆ. ಹೀಗಾಗಿ, ಪ್ಯಾನ್ ಕಾರ್ಡ್ನಲ್ಲಿರುವ ವಿವರ ಸರಿ ಇಲ್ಲ ಎನಿಸಿದಲ್ಲಿ ಆದಷ್ಟೂ ಬೇಗ ಬದಲಾವಣೆ ಮಾಡುವುದು ಅಗತ್ಯ. ಪ್ಯಾನ್ ಕಾರ್ಡ್ನಲ್ಲಿ ಇರುವ ನಮ್ಮ ಹೆಸರು, ತಂದೆಯ ಫೋಟೋ, ಲಿಂಗ, ನಿವಾಸ, ಸಂಪರ್ಕ ವಿಳಾಸ, ಸಹಿ ಇತ್ಯಾದಿಯನ್ನು ಬದಲಾಯಿಸಬಹುದು. ಆನ್ಲೈನ್ನಲ್ಲೇ ಈ ಕೆಲ ಬದಲಾವಣೆ ಮಾಡಲು ಸಾಧ್ಯ. ಇದು ಹೇಗೆ ಮಾಡಬಹುದು, ಇಲ್ಲಿದೆ ವಿವರ:
ಇದನ್ನೂ ಓದಿ: Success: ಮಣಿಪಾಲದಲ್ಲಿ ಓದಿದ್ದೇ ಟರ್ನಿಂಗ್ ಪಾಯಿಂಟ್; ವಿಜ್ಞಾನಿ ಮುರಳಿ ದಿವಿ 1.3 ಲಕ್ಷ ಕೋಟಿ ಕಂಪನಿ ಒಡೆಯರಾದ ಕಥೆ
ಇದನ್ನೂ ಓದಿ: PM Kisan: ಪಿಎಂ ಕಿಸಾನ್ 14ನೇ ಕಂತು ಸದ್ಯದಲ್ಲೇ; ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ತಿಳಿಯಿರಿ
ಎಲ್ಲವೂ ಸಮರ್ಪಕವಾಗಿದ್ದಲ್ಲಿ ನಿಮ್ಮ ಇಮೇಲ್ ಐಡಿಗೆ ಪರಿಷ್ಕೃತ ಪ್ಯಾನ್ ಕಾರ್ಡ್ ಬರುತ್ತದೆ. ಇಲ್ಲಿ ಅಪ್ಲಿಕೇಶನ್ ಶುಲ್ಕಕ್ಕೆ ಸುಮಾರು 96 ರೂ ಆಗಿರುತ್ತದೆ.
ಎನ್ಎಸ್ಡಿಎಲ್ನ ಪೋರ್ಟಲ್ ಮಾತ್ರವಲ್ಲ ಯುಟಿಐಟಿಎಸ್ಎಲ್ ಪೋರ್ಟಲ್ ಮೂಲಕವೂ ಪ್ಯಾನ್ ಕಾರ್ಡ್ ವಿವರ ಬದಲಾಯಿಸಿಕೊಳ್ಳಬಹುದು. ಆನ್ಲೈನ್ನಲ್ಲಿ ಮಾಡುವುದು ಗೊಂದಲ ಎನಿಸಿದಲ್ಲಿ ಪ್ಯಾನ್ ಸೆಂಟರ್ಗಳಿಗೆ ಹೋಗಿ ಅರ್ಜಿ ಮತ್ತು ದಾಖಲೆಗಳನ್ನು ಕೊಟ್ಟು ಮಾಡಿಸಬಹುದು.