Gold Rates: ಭಾರತೀಯರಿಗೆ ಖುಷಿ ಸುದ್ದಿ; ಬೆಳ್ಳಿ ಜೊತೆ ಚಿನ್ನದ ಬೆಲೆಯೂ ಇಳಿಕೆ; ವಿದೇಶಗಳಲ್ಲೂ ಬೆಲೆ ಇಳಿಕೆ ಭರಾಟೆ; ಇಲ್ಲಿದೆ ಡೀಟೇಲ್ಸ್
Bullion Market 2023, May 13th: ಭಾರತದಲ್ಲಿ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 56,550 ರುಪಾಯಿಗೆ ಇಳಿದಿದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 61,690 ರುಪಾಯಿ ಇದೆ. ಬೆಳ್ಳಿ ಬೆಲೆ ಒಂದು ಗ್ರಾಮ್ಗೆ 75 ರು ಆಗಿದೆ. ಯಾವ್ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್ ನೋಡಿ.
ಬೆಂಗಳೂರು: ಚಿನ್ನದ ಬೆಲೆಯ ಹೊಯ್ದಾಟ ಶುರುವಾದಂತಿದೆ. ಈ ವಾರ ಸತತವಾಗಿ ಏರಿಕೆ ಕಂಡು ನಿನ್ನೆ ವಿರಮಿಸಿದ್ದ ಚಿನ್ನದ ಬೆಲೆ (Gold Rates) ಈಗ ಇಳಿಕೆ ಕಂಡಿದೆ. ಬೆಳ್ಳಿ ಬೆಲೆ ಇಳಿಕೆ ಯಥಾಪ್ರಕಾರ ಮುಂದುವರಿದಿದೆ. ಏಪ್ರಿಲ್ 9ಮತ್ತು 10ರಂದು ಸ್ತಬ್ಧಗೊಂಡಿತ್ತು. ಈಗ 10 ಗ್ರಾಮ್ಗೆ 26 ರೂನಷ್ಟು ಬೆಲೆ ಇಳಿಕೆ ಕಂಡಿದೆ ಬೆಳ್ಳಿ. ಬೇರೆ ದೇಶಗಳಲ್ಲೂ ಚಿನ್ನದ ಬೆಲೆ ಇಳಿಕೆಯಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 56,550 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 61,690 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 56,600 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,870 ರುಪಾಯಿಯಲ್ಲಿ ಇದೆ.
ಜಾಗತಿಕವಾಗಿ ಅತಂತ್ರ ಆರ್ಥಿಕ ಸ್ಥಿತಿ ಇರುವುದರಿಂದ ಹೂಡಿಕೆದಾರರಲ್ಲಿ ಗೊಂದಲ ಮನೆಮಾಡಿದೆ. ಇದೇ ಕಾರಣಕ್ಕೆ ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತ ಮಾರ್ಗ ಎನಿಸಿದೆ. ಮುಂದೆಯೂ ಆರ್ಥಿಕ ಗೊಂದಲಮಯ ಸ್ಥಿತಿ ಮುಂದುವರಿಯುವುದರಿಂದ ಚಿನ್ನಕ್ಕೆ ಬೇಡಿಕೆ ಕಡಿಮೆ ಆಗುವ ಸಾಧ್ಯತೆ ಬಹಳ ಕಡಿಮೆ.
ಚಿನ್ನದ ಬೆಲೆ ಏರಿಳಿತಕ್ಕೆ ಏನು ಕಾರಣ?
ಅಮೆರಿಕದಲ್ಲಿ ಅಲ್ಲಿನ ಫೆಡರಲ್ ಬ್ಯಾಂಕು ಈ ಬಾರಿ ಬಡ್ಡಿ ದರ ಏರಿಕೆ ಮಾಡುವ ಸಾಧ್ಯತೆ ಇಲ್ಲದಿರುವುದರಿಂದ ಚಿನ್ನದ ಮೇಲೆ ಹೂಡಿಕೆ ಹೆಚ್ಚುವ ಸಾಧ್ಯತೆ ಇದೆ. ಉದ್ಯೋಗ ಪ್ರಮಾಣ ಹೆಚ್ಚಿರುವ ಬಗ್ಗೆ ವರದಿಗಳು ಬಂದಿವೆ. ಇದರಿಂದ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನೂ ತುಟ್ಟಿಯಾಗುತ್ತಾ ಹೋಗಬಹುದು. ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.
ಇದನ್ನೂ ಓದಿ: PAN: ಆನ್ಲೈನ್ನಲ್ಲಿ ಪ್ಯಾನ್ ಕಾರ್ಡ್ ಹೆಸರು, ಜನ್ಮದಿನಾಂಕ ಬದಲಿಸುವುದು ಹೇಗೆ? ಇಲ್ಲಿದೆ ವಿಧಾನ
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ 13ಕ್ಕೆ):
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 56,550 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 61,690 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 750 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 56,600 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 61,740 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 787 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 56,600 ರೂ
- ಚೆನ್ನೈ: 57,050 ರೂ
- ಮುಂಬೈ: 56,550 ರೂ
- ದೆಹಲಿ: 56,650 ರೂ
- ಕೋಲ್ಕತಾ: 56,550 ರೂ
- ಕೇರಳ: 56,550 ರೂ
- ಅಹ್ಮದಾಬಾದ್: 56,600 ರೂ
- ಜೈಪುರ್: 56,550 ರೂ
- ಲಕ್ನೋ: 56,550 ರೂ
- ಭುವನೇಶ್ವರ್: 56,550 ರೂ
ಇದನ್ನೂ ಓದಿ: Success: ಮಣಿಪಾಲದಲ್ಲಿ ಓದಿದ್ದೇ ಟರ್ನಿಂಗ್ ಪಾಯಿಂಟ್; ವಿಜ್ಞಾನಿ ಮುರಳಿ ದಿವಿ 1.3 ಲಕ್ಷ ಕೋಟಿ ಕಂಪನಿ ಒಡೆಯರಾದ ಕಥೆ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
- ಮಲೇಷ್ಯಾ: 2,880 ರಿಂಗಿಟ್ (52,946 ರುಪಾಯಿ)
- ದುಬೈ: 2250 ಡಿರಾಮ್ (50,336 ರುಪಾಯಿ)
- ಅಮೆರಿಕ: 620 ಡಾಲರ್ (50,912 ರುಪಾಯಿ)
- ಸಿಂಗಾಪುರ: 833 ಸಿಂಗಾಪುರ್ ಡಾಲರ್ (51,277 ರುಪಾಯಿ)
- ಕತಾರ್: 2,315 ಕತಾರಿ ರಿಯಾಲ್ (52,233 ರೂ)
- ಓಮನ್: 244.50 ಒಮಾನಿ ರಿಯಾಲ್ (52,175 ರುಪಾಯಿ)
- ಕುವೇತ್: 191.50 ಕುವೇತಿ ದಿನಾರ್ (51,297 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 7,870 ರೂ
- ಚೆನ್ನೈ: 7,870 ರೂ
- ಮುಂಬೈ: 7,500 ರೂ
- ದೆಹಲಿ: 7,500 ರೂ
- ಕೋಲ್ಕತಾ: 7,500 ರೂ
- ಕೇರಳ: 7,870 ರೂ
- ಅಹ್ಮದಾಬಾದ್: 7,500 ರೂ
- ಜೈಪುರ್: 7,500 ರೂ
- ಲಕ್ನೋ: 7,500 ರೂ
- ಭುವನೇಶ್ವರ್: 7,870 ರೂ
(ಗಮನಿಸಿ: ಇಲ್ಲಿ ನೀಡಲಾಗಿರುವ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)